ಆಟೋಮೊಬೈಲ್ಸ್

ಕೈಗಾರಿಕೆಗಳಿಂದಾಗಿ ಈ ಹಳ್ಳಿಯಲ್ಲಿ ಶವ ಸಂಸ್ಕಾರವನ್ನು ಮಾಡುವುದಕ್ಕು ಜಾಗವಿಲ್ಲ…..! ತಿಳಿಯಲು ಈ ಲೇಖನವನ್ನು ಓದಿ..

231

ಇದು ಒಂದೆಡೆ ಕೆಐಡಿಬಿ ಹುಚ್ಚಾಟಕ್ಕೆ ಹಿಡಿದ ಕೈಗನ್ನಡಿಯಾದರೆ ಮತ್ತೊಂದೆಡೆ ಇದು ಮನಬಂದಂತೆ ಭೂಮಿ ಕೊಟ್ಟವರು ಈಗ ಕೈ ಕೈ ಹಿಸುಕಿಕೊಳ್ಳುವಂತ ಪರಿಸ್ಥಿತಿ.
ನಂಜನಗೂಡು ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಒಂದು ಕಾಲದಲ್ಲಿ ಜಮೀನ್ದಾರರೆನಿಸಿಕೊಂಡವರಿಗೆ ಇಂದು ತಮ್ಮ ಕುಟುಂಬದವರ ಶವಸಂಸ್ಕಾರ ಮಾಡಲು ಯೋಚಿಸಬೇಕಾದ ದುರ್ಗತಿ ಒದಗಿಬಂದಿದೆ.

ಕೈಗಾರಿಕಾ ಅಭಿವೃಧ್ದಿಗೆ ಜಮೀನು ವಶಪಡಿಸಿಕೊಳ್ಳುವಾಗ ಸಾಮಾಜಿಕ ಅವಶ್ಯಕತೆಗಳಿಗೆ ಹಾಗೂ ಕನಿಷ್ಠ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡದಿದ್ದರೆ ಸಾಮಾನ್ಯ ಜನತೆ ಮೇಲೆ ಯಾವ ರೀತಿ ಆಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಕಲ್ಲಹಳ್ಳಿ ಇದೀಗ ಇಂತಹ ಸಮಸ್ಯೆಗೆ ಸಿಲುಕಿ ನರಳುತ್ತಿದಾರೆ.

ಈ ಭಾಗದಲ್ಲಿ ಕಾರ್ಖಾನೆಗಳು ಪ್ರಾರಂಭವಾದಗಿನಿಂದಲು ಗ್ರಾಮಸ್ಥರು ಹಾಗೂ ಕಾರ್ಖಾನೆಗಳ ಆಡಳಿತ ವರ್ಗದ ನಡುವೆ ಗಲಾಟೆಗಳು ನಡೆಯುತ್ತಲೇ ಇರುತ್ತದೆ. ತಮ್ಮ ಊರಿಗೆ ಕಂಪನಿ ಬರುವುದರಿಂದ ಅನುಕೂಲವಾಗುತ್ತದೆ ಎಂದು ಕಾದಿದ್ದ ಜನತೆ ಈಗ ನಿರಾಸೆಯಿಂದಿದ್ದಾರೆ.

ಅಂತಹ ಹಳ್ಳಿಗಳಲ್ಲಿ ಕಲ್ಲಹಳ್ಳಿಯೂ ಒಂದಾಗಿದ್ದು, ಕೇವಲ 250 ಕುಟುಂಬವಿರುವ ಗ್ರಾಮದಲ್ಲಿ ಹಿಂದುಳಿದ ವರ್ಗದ ಜನರೇ ಹೆಚ್ಚು. ಈ ಹಳ್ಳಿ ಇಂದು ಹಲವಾರು ಸಮಸ್ಯೆಗಳಿಂದ ನರಳುತ್ತಿದೆ. ಇದ್ದ ಭೂಮಿಯನ್ನು ಕೆಐಎಡಿಬಿ ವಶಕ್ಕೆ ತೆಗೆದುಕೊಂಡ ಪರಿಣಾಮ ಸ್ಮಶಾನ ಜಾಗಕ್ಕೂ ಪರದಾಡುವಂತಾಗಿದೆ. ಇರುವ 20 ಗುಂಟೆ ಜಾಗದಲ್ಲೇ ಶವಸಂಸ್ಕಾರ ಮಾಡಲಾಗುತ್ತಿದೆಯಾದರೂ, ಮಳೆಗಾಲದಲ್ಲಿ ಸ್ಮಶಾನಕ್ಕೆ ಹೋಗಲು ಸಮಸ್ಯೆಯಾಗುತ್ತಿದೆ.

ಈಗ ಇರುವ ಜಾಗ ಕಪಿಲಾ ನದಿ ದಡದಲ್ಲಿದ್ದು ಕೇವಲ 20 ಗುಂಟೆಯಷ್ಟಿದೆ. ಗ್ರಾಮದ ಎಲ್ಲ ಜನಾಂಗದವರು ಇಲ್ಲಿಯೇ ಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ಇದೆ. ಆದರೆ ನದಿ ನೀರು ಹೆಚ್ಚಾದಾಗ ಶವ ಸಂಸ್ಕಾರಕ್ಕೆ ತಡೆಯಾಗುತ್ತದೆ. ಆದ್ದರಿಂದ ನಾವು ನೀಡಿರುವ ಭೂಮಿಯಲ್ಲಿ ಸರಕಾರಿ ಖರಾಬ್ ಜಾಗವನ್ನು ಗ್ರಾಮಕ್ಕೆ ಬಿಟ್ಟುಕೊಡುವಂತೆ ಈವರೆಗೆ ಮಾಡಿದ್ದ ಮನವಿಗೆ ಯಾರೂ ಕೂಡ ಸ್ಪಂಧಿಸಿಲ್ಲ.

ಇದರ ನಡುವೆ ಈ ಭಾಗದಲ್ಲಿರುವ ಸುಮಾರು 50ಕ್ಕೂ ಹೆಚ್ಚು ವಿವಿಧ ಕಾರ್ಖಾನೆಗಳು ಸುತ್ತಲಿನ ಪರಿಸರವನ್ನು ಸಂಪೂರ್ಣ ಹಾಳುಮಾಡಿದೆ. ಕೆಲವರು ಕಾರ್ಖಾನೆಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ನೇಗಿಲು ಬಿಟ್ಟು ಯಂತ್ರಗಳ ಹಿಂದೆ ಸಾಗಿದ್ದಾರೆ. ಇನ್ನೂ ಕೆಲವರು ಅಂಗೈಯಗಲದ ಜಾಗದಲ್ಲೇ ಜೀವನ ನಡೆಸುತ್ತಿದ್ದಾರೆ.
ಕಾರ್ಖಾನೆಗಳಿಂದ ನಿತ್ಯ ರಾಸಾಯನಿಕ ಮಿಶ್ರಿತ ನೀರು ಸಣ್ಣ ಕಾಲುವೆಯಲ್ಲಿ ಬಿಡುವುದರಿಂದ ಜಾನುವಾರು ಗಳು ಕುಡಿದು ಸಾವನ್ನಪ್ಪಿವೆ. ಆದರೆ, ಈವರೆಗೆ ಇದಕ್ಕೆ ಪರಿಹಾರವೇ ದೊರೆತಿಲ್ಲ ಎಂಬುದು ಗ್ರಾಮಸ್ಥರ ಅಳಲು.ಹೀಗೆ ಖಾರ್ಕನೆಗಳು ಹಲ್ಲಿಗಲ್ಲನ್ನು ನಾಶ ಮಾಡುತ್ತಿದ್ದರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ರಜನಿಕಾಂತ್ ಅಭಿಮಾನಿಗಳು ಅರೆಸ್ಟ್ !!!

    ರಜನೀಕಾಂತ್ ರಾಜಕೀಯ ಪ್ರವೇಶ ವಿಚಾರದಲ್ಲಿ ತಮಿಳುನಾಡಲ್ಲಿ ಭಾರೀ ಜಟಾಪಟಿ ಸಾಗಿದೆ. ಅದೂ ಕೂಡಾ ರಜನಿ ವಿಚಾರದಲ್ಲಿ ತಮಿಳು ಭಾಷಿಗರ ನಡುವೆಯೇ ಜಟಾಪಟಿ ನಡೆಯುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವುದಕ್ಕೆ ತಮಿಳು ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಜನಿ ಅಭಿಮಾನಿಗಳು ತಲೈವಾ ಪರ ನಿಂತಿದ್ದಾರೆ. ಯಾರು ಏನೇ ಹೇಳಲಿ, ನೀವು ರಾಜಕೀಯಕ್ಕೆ ಎಂಟ್ರಿ ಕೊಡಿ ಅಂತ ಇದ್ದಾರೆ ಅವರ ಅಭಿಮಾನಿಗಳು.

  • ಸುದ್ದಿ

    ಅಹಮದಾಬಾದ್: ಬಿಸಿಲ ಬೇಗೆಯಿಂದ ಕಾರನ್ನು ತಂಪಾಗಿಸಲು ಮಹಿಳೆ ಮಾಡಿದ ಉಪಾಯವೇನು ಗೊತ್ತೆ?….ಇಲ್ಲಿದೆ ನೋಡಿ!

    ಹಮದಾಬಾದ್: ಕಾರಿನೊಳಗೆ ಧಗೆ ಹೆಚ್ಚಾದರೆ, ಕಾರು ಬಿಸಿಯಾದರೇ ಕಾರಿನಲ್ಲಿ ಎಸಿ ಹಾಕಿಕೊಳ್ಳುತ್ತೇವೆ, ಕಾರನ್ನು ನೆರಳಿಗೆ ನಿಲ್ಲಿಸುತ್ತೇವೆ, ಆದರೆ ಇಲ್ಲೊಬ್ಬ ಮಹಿಳೆ ತಮ್ಮ ಕಾರನ್ನು ತಂಪಾಗಿಸಲು ವಿಶೇಷ ಪ್ರಯೋಗ ಮಾಡಿದ್ದಾರೆ. ಅಹಮದಾಬಾದ್​ ನಗರದಲ್ಲಿ ಬಿಸಿಲ ಬೇಗೆ ಹೆಚ್ಚಳವಾಗಿದ್ದು ತಾಪಮಾನವು 45 ಡಿಗ್ರಿವರೆಗೂ ಏರಿಕೆಯಾಗಿದೆ. ಹೀಗಾಗಿ ಇಡೀ ಕಾರಿಗೆ ಸಗಣಿಯನ್ನು ಹಚ್ಚಿ ಕಾರನ್ನು ತಂಪಾಗಿರಿಸುವ ಜತೆಗೆ ಚಾಲನೆ ವೇಳೆ ತಂಪಾದ ಅನುಭವವನ್ನು ಪಡೆಯುವ ಪ್ರಯತ್ನವನ್ನು ಇಲ್ಲಿನ ಮಹಿಳೆಯೊಬ್ಬರು ಮಾಡಿದ್ದಾರೆ. ಸೆಜಲ್ ಶಾ ಎಂಬ ಮಹಿಳೆ ತಮ್ಮ ಟಯೋಟೋ ಆಲ್ಟೀಸ್ ಕಾರಿನ…

  • ದೇಗುಲ ದರ್ಶನ, ದೇವರು

    ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಸಂಪೂರ್ಣ ಮಾಹಿತಿ.!

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatಸಮಸ್ಯೆ ಏನೇ ಇರಲಿ ಎಷ್ಟೇ…

  • ಸುದ್ದಿ, ಸ್ಪೂರ್ತಿ

    3 ಕೋಟಿ ರೂಪಾಯಿ ಬೆಲೆ ಬಾಳುವ ಕಾರನ್ನ ಸಮಾಧಿ ಮಾಡಿದ, ಕಾರಣ ಮಾತ್ರ ಶಾಕಿಂಗ್.

    ಭೂಮಿಯ ಮೇಲೆ ಇರುವ ಅತ್ಯಮೂಲ್ಯ ಜೀವ ಅಂದರೆ ಅದೂ ಮಾನವ, ಇನ್ನು ಮನುಷ್ಯ ಸತ್ತು ಹೋದಾಗ ಆತನನ್ನ ಮಣ್ಣಿನಲ್ಲಿ ಸಮಾಧಿ ಮಾಡುತ್ತಾರೆ ಅಥವಾ ಆತನನ್ನ ಸುಟ್ಟು ಹಾಕುತ್ತಾರೆ. ಸ್ನೇಹಿತರೆ ಇಲ್ಲೊಬ್ಬ ದೊಡ್ಡ ಬಿಸಿನೆಸ್ ಮ್ಯಾನ್ ತನ್ನ ಮೂರೂ ಕೋಟಿ ಬೆಲೆ ಬಾಳುವ ಐಷಾರಾಮಿ ಕರಣ ಮಣ್ಣಿನಲ್ಲೂ ಹೂತು ಮುಂದಾಗಿದ್ದಾನೆ, ಹಾಗಾದರೆ ಆ ಕಾರನ್ನ ಹೂತು ಹಾಕಲು ನಿರ್ಧರಿಸಲು ಕಾರಣ ಏನು ಮತ್ತು ಅದನ್ನ ನೋಡಿದ ಅಲ್ಲಿನ ಜನರು ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ…

  • inspirational

    ಹವಾ ಮಹಲ್

      ಇದು ಭಾರತದ ಜೈಪುರ್‌ನಲ್ಲಿರುವ ಒಂದು ಅರಮನೆ. ಇದನ್ನು 1799ರಲ್ಲಿ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ಅವರು ಕಟ್ಟಿಸಿದ್ದರು, ಮತ್ತು ಲಾಲ್ ಛಂದ್ ಉಸ್ತಾರವರು ಹಿಂದೂ ದೇವರಾದ ಕೃಷ್ಣ ನ ಕಿರೀಟದ ಆಕಾರದಲ್ಲಿ ಇದರ ವಿನ್ಯಾಸಗೊಳಿಸಿದ್ದರು. ಜಟಿಲ ಜಾಲರಿ ಕಾಮಗಾರಿಯಿಂದ ಅಲಂಕೃತ ಝರೊಕಾ ಎಂದು ಕರೆಯಲಾದ 953 ಚಿಕ್ಕ ಕಿಟಕಿಗಳು ಒಳಗೊಂಡಇದರ ಅದ್ವಿತೀವಾದ ಐದು-ಅಂತಸ್ತಿನ ಹೊರರೂಪ ಜೇನುಗೂಡಿನ ಜೇನುಹಟ್ಟಿಗೆ ಕೂಡ ಸದೃಶ್ಯವಾಗಿದೆ. ಈ ಜಲರಿಯ ಮುಖ್ಯ ಉದ್ದೇಶವೆಂದರೆ ರಾಜ ಮನೆತನದ ಮಹಿಳೆಯರಿಗೆ ಅವರು ಕಾಣದಂತೆ ಕೆಳಗಿನ ರಸ್ತೆಯ ದಿನನಿತ್ಯದ ಜೀವನವನ್ನು ನೋಡಲು ಸಾಧ್ಯವಾಗಬೇಕೆಂದು,…