ಆಟೋಮೊಬೈಲ್ಸ್

ಕೇವಲ 1 ರೂ. ನೀಡುವ ಮೂಲಕ ಟಾಟಾ ಕಾರನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ..!ತಿಳಿಯಲು ಈ ಲೇಖನ ಓದಿ ..

1024

ಈ ವರ್ಷ ಹೊಸ ಕಾರು ಖರೀದಿಸಲು ಯೋಜನೆ ರೂಪಿಸಿರುವಿರಾ ? ಹಾಗಾದ್ರೆ, ಟಾಟಾ ಮೋಟಾರ್ಸ್ ಕಂಪನಿಯು ಭಾರತದ ಕಾರು ಖರೀದಿದಾರರಿಗೆ ವರ್ಷಾಂತ್ಯದ ಆಫರ್ ನೀಡಲು ಮುಂದಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ತನ್ನ ‘ಮೆಗಾ ಆಫರ್ ಮ್ಯಾಕ್ಸ್ ಸೆಲೆಬ್ರೇಷನ್ ಕ್ಯಾಂಪೇನ್’ ಅಡಿಯಲ್ಲಿ, ಖರೀದಿದಾರರು ಕೇವಲ ರೂ.1 ನೀಡುವ ಮೂಲಕ ಟಾಟಾ ಕಾರನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ. ಹೌದು, ಕೇವಲ ಒಂದು ರೂಪಾಯಿ ಡೌನ್‌ಪೇಮೆಂಟ್ ಮಾಡುವ ಮೂಲಕ ಟಾಟಾ ಕಾರಿನ ಮೇಲೆ ರೂ.1 ಲಕ್ಷ ಉಳಿತಾಯ ಮಾಡುವ ಅವಕಾಶವನ್ನು ಪಡೆಯಬಹುದು.

ಭಾರತದ ಪ್ರಮುಖ ಹಣಕಾಸು ಮತ್ತು ಬ್ಯಾಂಕುಗಳೊಂದಿಗೆ ಕೈಜೋಡಿಸುವ ಮೂಲಕ ಟಾಟಾ ಮೋಟರ್ಸ್ ಕಂಪನಿಯು ಪ್ರಯಾಣಿಕರ ವಾಹನಗಳ ಮೇಲೆ ಶೇಕಡಾ 100% ರಷ್ಟು ಹಣಕಾಸು ಯೋಜನೆಗಳನ್ನು ನೀಡಲು ಮುಂದಾಗಿದೆ.

“ಟಾಟಾ ಮೋಟರ್ಸ್ ಕಂಪನಿಯು ಗ್ರಾಹಕರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದೆ ಮತ್ತು ಸಂತೋಷಕರ ಅನುಭವವನ್ನು ಒದಗಿಸುತ್ತದೆ. ಹಬ್ಬದ ಅವಧಿಯಲ್ಲಿಯೂ ಸಹ ನಮ್ಮ ಎಲ್ಲಾ ಕಾರುಗಳಿಗೆ ಗ್ರಾಹಕರು ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ” ಎಂದು ಪ್ಯಾಸೆಂಜರ್ ವೆಹಿಕಲ್ ವಿಭಾಗದ ಮಾರ್ಕೆಟಿಂಗ್ ಹೆಡ್ ಶ್ರೀ ವಿವೇಕ್ ಶ್ರೀವತ್ಸ ತಿಳಿಸಿದ್ದಾರೆ.

ಟಾಟಾ ಮೋಟರ್ಸ್ ಭಾರತದಲ್ಲಿ ತನ್ನ ಉತ್ಪನ್ನ ಶ್ರೇಣಿಯ ಕಾರುಗಳ ಮೂಲಕ ವ್ಯಾಪಕ ಜನಪ್ರಿಯತೆ ಹೊಂದಿದೆ. ಕಂಪನಿ ಈಗ ವರ್ಷಾಂತ್ಯದ ಮಾರಾಟದ ಲಾಭ ಪಡೆಯಲು ಟಾಟಾ ಮೋಟರ್ಸ್ ಮುಂದಾಗಿದೆ. ಆಫರ್ಸ್ ಮೇಲೆ ಆಫರ್ಸ್ ನೀಡಲು ಶುರು ಮಾಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ