ಸುದ್ದಿ

ಕೇವಲ 13 ವಯಸ್ಸಿನಲ್ಲೆ 135 ಪುಸ್ತಕ ಬರೆದು 4 ವಿಶ್ವದಾಖಲೆ ನಿರ್ಮಿಸಿದ ಪೋರ…..!

43

ಉತ್ತರ ಪ್ರದೇಶದ 13 ವರ್ಷದ ಬಾಲಕನೊಬ್ಬ ಧರ್ಮ ಹಾಗೂ ಗಣ್ಯರ ಜೀವನಚರಿತ್ರೆ ಕುರಿತು ಸುಮಾರು 135 ಪುಸ್ತಕಗಳನ್ನು ಬರೆದು, 4 ವಿಶ್ವದಾಖಲೆಗಳನ್ನು ಮಾಡಿ ಚಿಕ್ಕ ವಯಸ್ಸಿನಲ್ಲೇ ಅದ್ವಿತೀಯ ಸಾಧನೆಗೈದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಈ ಅಪರೂಪದ ಸಾಧನೆಗೈದ ಬಾಲಕನ ಹೆಸರು ಮೃಗೇಂದ್ರ ರಾಜ್. ಈತ ತನ್ನ 6ನೇ ವಯಸ್ಸಿನಲ್ಲೇ ಪುಸ್ತಕ ಬರೆಯುವ ಹವ್ಯಾಸ ಆರಂಭಿಸಿದ್ದ ಈತ ಮೊದಲು ಕವನ ಸಂಕಲನವನ್ನು ಬರೆದಿದ್ದನು. ಆ ನಂತರ ಕಾಲ ಕಳೆಯುತ್ತಿದ್ದಂತೆ ಬಾಲಕನ ಜೊತೆ ಆತನ ಪುಸ್ತಕ ಬರೆಯುವ ಆಸಕ್ತಿ ಕೂಡ ಹೆಚ್ಚಾಗುತ್ತಾ ಬಂತು. ಈವರೆಗೆ ಮೃಗೇಂದ್ರ ಬರೋಬ್ಬರಿ 135 ಪುಸ್ತಕಗಳನ್ನು ಬರೆದಿದ್ದಾನೆ. `ಆಜ್ ಕಾ ಅಭಿಮನ್ಯು’ ಎಂಬ ಕಾವ್ಯನಾಮದಲ್ಲಿ ಮೃಗೇಂದ್ರ ಪುಸ್ತಕಗಳನ್ನು ಬರೆಯುತ್ತಿದ್ದಾನೆ.

ಮೃಗೇಂದ್ರನ ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತಮ್ಮ ಮಗ ಪುಸ್ತಕಗಳನ್ನು ಬರೆಯುವ ಬಗ್ಗೆ ತೋರಿಸುತ್ತಿದ್ದ ಆಸಕ್ತಿಯನ್ನು ಗುರುತಿಸಿ ಆತನನ್ನು ಬೆಂಬಲಿಸಿದ್ದಾರೆ. ಜೊತೆಗೆ ಆತನ ತಂದೆ ರಾಜ್ಯ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.ಈ ಬಗ್ಗೆ ಮಾತನಾಡಿದ ಬಾಲಕ, ನಾನು ರಾಮಾಯಣದಲ್ಲಿರುವ 51 ಪಾತ್ರಗಳ ಬಗ್ಗೆ ವಿಶ್ಲೇಷಿಸಿ ಪುಸ್ತಕಗಳನ್ನು ಬರೆದಿದ್ದೇನೆ. ನಾನು ಬರೆದ ಎಲ್ಲಾ ಪುಸ್ತಕಗಳು 25 ರಿಂದ 100 ಪುಟಗಳನ್ನು ಹೊಂದಿದೆ. ನನ್ನ ಈ ಪ್ರತಿಭೆಯನ್ನು ಮೆಚ್ಚಿ ಡಾಕ್ಟರೇಟ್ ಪದವಿ ನೀಡುವುದಾಗಿ ಲಂಡನ್ ವರ್ಲ್ಡ್ ಯೂನಿವರ್ಸಿಟಿ ಆಫ್ ರೆಕಾರ್ಡ್ಸ್ ಆಫರ್ ನೀಡಿತ್ತು ಎಂದು ತಿಳಿಸಿದ್ದಾನೆ.

ದೊಡ್ಡವನಾದ ಮೇಲೆ ನಾನು ಬರಹಗಾರನಾಗಲು ಇಷ್ಟಪಡುತ್ತೇನೆ. ವಿವಿಧ ವಿಷಯಗಳ ಬಗ್ಗೆ, ಬೇರೆ ಬೇರೆ ಆಯಾಮದಲ್ಲಿ ಇನ್ನೂ ಹಲವಾರು ಪುಸ್ತಕಗಳನ್ನು ಬರೆಯಲು ಬಯಸುತ್ತೇನೆ ಎಂದಿದ್ದಾನೆ.ಉತ್ತರ ಪ್ರದೇಶ ಸಿಎಂ ಯೋಗಿ ಆಧಿತ್ಯನಾಥ್ ಸೇರಿದಂತೆ ಹಲವು ಗಣ್ಯರ ಬಗ್ಗೆ ಈ ಪೋರ ಪುಸ್ತಕ ಬರೆದಿದ್ದು, ಚಿಕ್ಕವಯಸ್ಸಿನಲ್ಲೇ ಈ ಮಟ್ಟಿಗೆ ಸಾಧನೆ ಮಾಡಿರುವುದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಹೆಚ್ಚು ಸಮಯ ಕಲಸಿಟ್ಟ ಹಿಟ್ಟನ್ನು ಬಳಸುವುದರಿಂದ ಏನಾಗುತ್ತೆ ಗೊತ್ತಾ? ನೋಡಿ.

    ಬೆಳಗ್ಗೆ ಸಮಯದ ಅಭಾವವಿರುವುದರಿಂದ ರಾತ್ರಿಯೇ ಚಪಾತಿ ಹಿಟ್ಟು ಕಲಸಿಟ್ಟುಕೊಳ್ಳುವುದು ಈಗ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿದೆ. ಕೆಲವರು ಚಪಾತಿ ಹಿಟ್ಟು ಕಲಸಿದರೆ, ಇನ್ನು ಕೆಲವರು ಅಕ್ಕಿ, ಗೋಧಿ, ಜೋಳದ ಹಿಟ್ಟನ್ನು ಕಲಸಿಡುತ್ತಾರೆ. ಆದರೆ ಹೀಗೆ ಕಲಸಿಟ್ಟ ಹಿಟ್ಟನ್ನು ಉಪಯೋಗಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಕೆಲವು ಅಡ್ಡಪರಿಣಾಮಗಳು ಬೀರುತ್ತವೆ, ಅದೇನೆಂದು ನೀವೇ ಓದಿ ನೋಡಿ… ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳು  ಮೃದುವಾದ, ಹಸಿ ಹಿಟ್ಟಿನಲ್ಲಿ ಹುದುಗುವಿಕೆ ಪ್ರಕ್ರಿಯೆಯು ಸಾಮಾನ್ಯ ಹಿಟ್ಟಿಗಿಂತ ಬೇಗನೆ ಪ್ರಾರಂಭವಾಗುತ್ತದೆ. ಇದರಿಂದಾಗಿ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಈ ಹಿಟ್ಟು…

  • ಸಿನಿಮಾ

    ನಮ್ಮ ಸರ್ಕಾರ ಇದೆ ಎಂದು ಧಮಕಿ ಹಾಕಿದ ಶಾಸಕನಿಗೆ ತಿರುಗೇಟು ನೀಡಿದ ದರ್ಶನ್…

    ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಸಾಥ್ ನೀಡಿದ್ದಾರೆ. ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಕೆಯ ವೇಳೆ ಜನಸಾಗರವೇ ಹರಿದು ಬಂದಿದ್ದು, ಶಕ್ತಿ ಪ್ರದರ್ಶನದ ಮೂಲಕ ಸುಮಲತಾ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ದರ್ಶನ್, ನಾನು ಇಲ್ಲಿ ನಿಂತಿದ್ದಕ್ಕೆ ಹಳೆ ಮ್ಯಾಟರ್ ಓಪನ್ ಆಗುತ್ತಿದೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ, ಅದೂ ಆಗಲಿ, ಅದರಿಂದ ಖುಷಿ,…

  • ಜ್ಯೋತಿಷ್ಯ

    ದಿನ‌ ಭವಿಷ್ಯ ಗುರುವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಕಾರ್ಯಕ್ರಮಗಳ ಸಫಲತೆಗೆ ಅನಿರೀಕ್ಷಿತ ವಲಯದಿಂದ ಭಾರೀ ಸಹಾಯ ದೊರೆಯುವುದು. ಇದರಿಂದ ಮನಸ್ಸಿಗೆ ಆನಂದ ಉಂಟಾಗುವುದು. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಗೌರವ ಆದರಗಳು ದೊರೆಯುವುದು.ಕಾರ್ಯಕ್ಷೇತ್ರದಲ್ಲಿನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ…

  • ಆರೋಗ್ಯ

    ಹಲ್ಲು ಹಳದಿಗಟ್ಟಿದೆಯೇ? ಬಾಯ್ತುಂಬಾ ನಗಲೂ ನಾಚಿಕೆಯಾಗುತ್ತಿದೆಯೇ? ಹಾಗಾದ್ರೆ ಕೆಲವು ಸಿಂಪಲ್ ಮನೆ ಮದ್ದು ಮಾಡೊದು ಹೇಗೆ ಎಂದು ತಿಳಿಯಲು ಈ ಲೇಖನ ಓದಿ…

    ಹಲ್ಲುಜ್ಜಲು ಬಳಸುವ ಪೇಸ್ಟ್ ಜತೆಗೆ ಸ್ವಲ್ಪ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ಹಲ್ಲುಜ್ಜಿ ನೋಡಿ. ಈ ರೀತಿ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಹಲ್ಲು ಹಳದಿಗಟ್ಟುವಿಕೆ ತಡೆಯಬಹುದು.

  • ಮನರಂಜನೆ

    ಬಿಗ್ ಬಾಸ್’ನಿಂದ ಮಧ್ಯರಾತ್ರಿ ಶಾಕಿಂಗ್ ಎಲಿಮನೇಷನ್..!ರಾತ್ರೋರಾತ್ರಿ ಮನೆಯಿಂದ ಹೊರಹೋದವರು ಯಾರು?ತಿಳಿಯಲು ಮುಂದೆ ಓದಿ…

    ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮವು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕ್ರೇಜ್ ಜಾಸ್ತಿ‌ ಮಾಡುತ್ತಿದ್ದು,ಶೋ ಮುಗಿಯೋದಕ್ಕೆ ಕೇವಲ 6 ದಿನಗಳು ಬಾಕಿ ಉಳಿದಿವೆ. ಕೆಲ ವೀಕ್ಷಕರಿಂದ ‘ಡ್ರಾಮಾ ಕ್ವೀನ್’ ಅಂತಲೇ ಕರೆಯಿಸಿಕೊಂಡಿದ್ದ ಅನುಪಮಾ ಗೌಡ ಭಾನುವಾರ ನಡೆದ ಎಲಿಮಿನೇಷನ್ ಪಂಚಾಯ್ತಿಯಲ್ಲಿ ಮನೆಗೆ ಕಳುಹಿಸಲಾಗಿತ್ತು.

  • ಜ್ಯೋತಿಷ್ಯ

    ನಿಮ್ಮ ಹೆಸರು A ಅಕ್ಷರದಿಂದ ಆರಂಭ ವಾಗಿದ್ದರೆ ನಿಮ್ಮ ಗುಣ ನಡೆತೆ ಹೇಗಿರುತ್ತೆ ನೋಡಿ…

    ಹೆಸರು ಹಾಗೂ ವ್ಯಕ್ತಿ ಮಧ್ಯೆ ಒಂದು ಬಂಧವಿದೆ. ಅನೇಕ ಗಣ್ಯರು, ಸೆಲೆಬ್ರಿಟಿಗಳು ಯಶಸ್ಸಿಗಾಗಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಹೆಸ್ರು ಪ್ರತಿಯೊಬ್ಬ ವ್ಯಕ್ತಿ ಮೇಲೂ ಪರಿಣಾಮ ಬೀರುತ್ತದೆ. ಪ್ರತಿಯೊಂದು ಅಕ್ಷರಕ್ಕೂ ತನ್ನದೇ ಆದ ಶಕ್ತಿ ಹಾಗೂ ಗುಣಲಕ್ಷಣವಿದೆ. ನಿಮ್ಮ ಹೆಸ್ರು ಯಾವ ಅಕ್ಷರದಿಂದ ಶುರುವಾಗ್ತಿದೆ ಎಂಬುದರ ಮೇಲೆ ನಿಮ್ಮ ಸ್ವಭಾವವನ್ನು ಹೇಳಬಹುದು. ಕೆಲ ಅಕ್ಷರಗಳನ್ನು ಪ್ರಭಾವಶಾಲಿ ಎನ್ನಲಾಗುತ್ತದೆ. ಎ, ಜೆ, ಒ ಮತ್ತು ಎಸ್ ಅಕ್ಷರಗಳು ಪ್ರಭಾವಶಾಲಿಯಾಗಿರುತ್ತವೆ. ನಿಮ್ಮ ಅಕ್ಷರ ಎ ನಿಂದ ಶುರುವಾಗ್ತಿದ್ದರೆ ನಿಮ್ಮ ಸ್ವಭಾವದ ಬಗ್ಗೆ…