ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಮ್ಮು ವಾಸ್ತವವಾಗಿ ಒಂದು ಕಾಯಿಲೆಯಲ್ಲ, ಒಂದು ರೋಗ ನಿರೋಧಕ ವ್ಯವಸ್ಥೆ. ಗಂಟಲಿನ ತೇವದಲ್ಲಿ ವೈರಸ್ಸುಗಳು ಮನೆ ಮಾಡಿದಾಗ ಇದನ್ನು ಕೆರೆದು ಹೊರ ಹಾಕುವ ಕ್ರಿಯೆಯೇ ಕೆಮ್ಮು. ಈ ಕೆಮ್ಮನ್ನು ಎರಡೇ ದಿನದಲ್ಲಿ ನಿಯಂತ್ರಿಸುವ ಪವರ್ ಫುಲ್ ಮನೆಮದ್ದು ನೀವೆ ಸುಲಭವಾಗಿ ಮನೆಯಲ್ಲಿಯೇ ಸಿಗುವ ಸುಲಭ ಸಾಮಾಗ್ರಿಗಳಿಂದ ತಯಾರಿಸಬಹುದು.
ಕೆಮ್ಮು ಮತ್ತು ಸಾವು ಯಾರನ್ನೂ ಕೇಳಿ ಬರುವುದಿಲ್ಲ ವಂತೆ. ಯಾವುದೋ ಮುಖ್ಯ ಕಾರ್ಯದಲ್ಲಿದ್ದಾಗ ಕೆಮ್ಮು ಕಾಡಿದರೆ ಆಗ ಎದು ರಾಗುವ ತಾಪತ್ರಯ ಒಂದೆರ ಡಲ್ಲ. ಅದರಲ್ಲೂ ಕೆಮ್ಮು ಸತತವಾದರೆ ಮುಖ್ಯ ಕಾರ್ಯದ ನಡುವೆ ಎದ್ದು ಹೊರ ಹೋಗಲೇ ಬೇಕಾದ ಅನಿವಾರ್ಯತೆ ಉಂಟಾಗು ತ್ತದೆ. ಇದು ತೀವ್ರ ಮುಜುಗರ ತರಿಸುವ ವಿಷಯವೂ ಹೌದು. ನೋವುಕಾರಕವೂ ಹೌದು. ಈ ಕೆಮ್ಮು ಹಲವಾರು ದಿನಗಳವರೆಗೆ ಕಾಡಿದರೆ ಕಾಯಿಲೆ ಅಂಟಿದೆ ಎಂದೇ ಅರ್ಥ. ಕೆಮ್ಮು ಎರಡೇ ದಿನದಲ್ಲಿ ಕೆಮ್ಮನ್ನು ನಿಯಂತ್ರಿಸುವ ಪವರ್ ಫುಲ್ ಮನೆಮದ್ದು ಎಂದು ಸುಮ್ಮನೇ ಇರುವ ಹಾಗಿಲ್ಲ, ಇದು ದೇಹದ ಶಕ್ತಿಯನ್ನೆಲ್ಲಾ ಹೀರಿ ನಿತ್ರಾಣವಾಗಿಸುತ್ತದೆ.
ಕೆಮ್ಮು ವಾಸ್ತವವಾಗಿ ಒಂದು ಕಾಯಿಲೆಯಲ್ಲ, ಒಂದು ರೋಗ ನಿರೋಧಕ ವ್ಯವಸ್ಥೆ. ಗಂಟಲಿನ ತೇವದಲ್ಲಿ ವೈರಸ್ಸುಗಳು ಮನೆ ಮಾಡಿದಾಗ ಇದನ್ನು ಕೆರೆದು ಹೊರ ಹಾಕುವ ಕ್ರಿಯೆಯೇ ಕೆಮ್ಮು. ಇದಕ್ಕೆ ವೈರಸ್ಸಿನ ಸೋಂಕು, ಅಲರ್ಜಿ, ಅಸ್ಥಮಾ ಮತ್ತು ಕೆಲವು ವಿಪರೀತ ಸಂದರ್ಭ ಗಳಲ್ಲಿ ಕ್ಷಯ ಹಾಗೂ ಶ್ವಾಸ ಸಂಬಂಧಿ ತೊಂದರೆಗಳು ಕಾರಣವಾಗುತ್ತವೆ. ಕೆಲವೊಮ್ಮೆ ತಣ್ಣೀರು ಕುಡಿ ದಾಗಲೂ ಕೆಮ್ಮು ಆವರಿಸಿ ನಮ್ಮ ಚಟುವಟಿಕೆಗಳಿಗೆ ಬಾಧೆ ತರುವುದುಂಟು.
ಸಾಮಾನ್ಯವಾಗಿ ಕೆಮ್ಮು ಕಾಡಿದಾಗ ವೈದ್ಯರು ಕೆಲವು ಕೆಮ್ಮಿ ಸಿರಪ್‌ಗಳನ್ನು ಶಿಫಾ ರಸ್ಸು ಮಾಡುತ್ತಾರೆ. ಆದರೆ ವಾಸ್ತವವಾಗಿ ಈ ಸಿರಪ್ಗಳಲ್ಲಿ ಕೊಂಚ ಪ್ರಮಾಣದ ಆಲ್ಕೋಹಾಲ್ ಇದ್ದು ನಿಜ ವಾಗಿಯೂ ಕೆಮ್ಮನ್ನು ಕಡಿಮೆ ಮಾಡುವ ಬದಲು ಕೊಂಚ ನಿದ್ದೆ ಬರಿಸಿ ಮನಸ್ಸನ್ನು ಕೆಮ್ಮಿ ನಿಂದ ಕೊಂಚ ಹೊರಳಿಸುವಂತೆ ಮಾಡಿ ಬಳಿಕ ನಿಧಾನ ವಾಗಿ ಕೆಮ್ಮಿಗೆ ಕಾರಣವಾದ ವೈರಸ್ಸಿನ ಮೇಲೆ ದೇಹದ ರೋಗ ನಿರೋಧಕ ಶಕ್ತಿ ಆಕ್ರಮಣ ಮಾಡಲು ಅನುವು ಮಾಡಿಕೊಡುತ್ತದೆ.
ಇದನ್ನೇ ನೆಪವಾಗಿಸಿ ಕೆಲ ವರು ಆಲ್ಕೋಹಾಲ್ ಬದಲಿಗೆ ಇಡಿಯ ಬಾಟಲಿ ಕೆಮ್ಮಿನ ಸಿರಪ್ ಕುಡಿಯುವುದುಂಟು. ಆದರೆ ಇದರ ಸೇವನೆಯಿಂ ದಲೂ ಕೆಲವು ಅಡ್ಡ ಪರಿಣಾಮಗಳಿವೆ. ಸುಸ್ತು, ತಲೆ ಭಾರ ವಾಗುವುದು, ಮಲಬದ್ಧತೆ, ಹಸಿವು ಹೆಚ್ಚುವುದು, ಹೊಟ್ಟೆ ಯಲ್ಲಿ ಉರಿ, ಹುಳಿತೇಗು ಇತ್ಯಾದಿ. ಆದ್ದರಿಂದ ಕೆಮ್ಮಿನ ಸಿರಪ್‌ಗಳು ತಾತ್ಕಾಲಿಕವಾಗಿ ಕೆಮ್ಮನ್ನು ಕಡಿಮೆ ಮಾಡಿದಂತೆ ಅನ್ನಿಸಿದರೂ ಪೂರ್ಣವಾಗಿ ಕೆಮ್ಮು ನಿವಾರಣೆಯಾಗುವುದಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಮನೆಯಲ್ಲಿಯೇ ಸಿಗುವ ಸುಲಭ ಸಾಮಾಗ್ರಿಗಳಿಂದ ತಯಾರಾದ ಈ ಪೇಯವೇ ಉತ್ತಮ.
* ಬಿಸಿಹಾಲು – ಒಂದು ಲೋಟ * ಕಾಳುಮೆಣಸಿನ ಪುಡಿ – 1/4 ಚಿಕ್ಕ ಚಮಚ (ತಾಜಾ ಕಾಳುಮೆಣಸನ್ನು ಕುಟ್ಟಿ ಪುಡಿ ಮಾಡಿದರೆ ಉತ್ತಮ) * ಜೇನು – ಎರಡು ದೊಡ್ಡ ಚಮಚ .
* ಈ ಮನೆಮದ್ದು ತುಂಬಾ ಸುಲಭವಾಗಿದ್ದು, ಕೇವಲ ಹಾಲು, ಕಾಳು ಮೆಣಸಿನ ಪುಡಿ ಮತ್ತು ಜೇನನ್ನು ಬಳಸಲಾಗಿದೆ. ಈ ಪೇಯದ ಸೇವನೆಯ ಬಳಿಕ ಒಂದೇ ರಾತ್ರಿಯಲ್ಲಿ ಕೆಮ್ಮು ಹತೋಟಿಗೆ ಬಂದಿರುವುದು ಕಂಡು ಬಂದಿದೆ. ಅಲ್ಲದೇ ಕೆಮ್ಮಿಗೆ ಕಾರಣವಾದ ಕಫವೂ ಸುಲಭವಾಗಿ ಮರುದಿನ ನಿವಾರಣೆಯಾಗುತ್ತದೆ.
* ಬಿಸಿಹಾಲು ಗಂಟಲಿನ ಕೆರೆತ, ಉರಿಯನ್ನು ನಿವಾರಿಸಿ ಕೆಮ್ಮನ್ನು ಕಡಿಮೆಗೊಳಿಸಲು ನೆರವಾದರೆ ಜೇನಿನಲ್ಲಿರುವ ಬ್ಯಾಕ್ಟೀ ರಿಯಾ ನಿರೋಧಕ ಗುಣದಿಂದಾಗಿ ಗಂಟಲಲ್ಲಿ ಆಶ್ರಯ ಪಡೆದಿರು ಸೋಂಕು ಹರಡುವ ಕ್ರಿಮಿಗಳನ್ನು ಹೊರ ಹಾಕಲು ನೆರವಾಗುತ್ತದೆ. ಕಾಳುಮೆಣಸು ಕೊಂಚ ಪ್ರಚೋದನೆ ನೀಡಿ ಕಫ ಸಡಿಲಗೊಳ್ಳಲು ಮತ್ತು ಜೇನಿನ ಪ್ರಭಾವ ಹೆಚ್ಚಿಸಲು ನೆರವಾಗುತ್ತದೆ.
* ಈ ಮೂರೂ ಘಟಕ ಗಳ ಮಿಶ್ರಣದಿಂದ ಗಂಟಲಿಗೆ ಆರಾಮ ದೊರಕುತ್ತದೆ. ಅಲ್ಲದೇ ಈ ಸೋಂಕಿನಿಂದ ಉಂಟಾಗಿದ್ದ ಗಂಟಲಬೇನೆ, ಊದಿಕೊಂಡಿರುವುದು, ಊದಿಕೊಂಡ ದುಗ್ಧ ಗ್ರಂಥಿ ಗಳು ಇತ್ಯಾದಿಗಳೂ ಬೇಗನೇ ಗುಣವಾಗುತ್ತದೆ.
1) ಹಾಲನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಕುದಿಸಿ ಒಂದು ಲೋಟಕ್ಕೆ ಸುರುವಿಕೊಳ್ಳಿ 2) ಕಾಳುಮೆಣಸಿನ ಪುಡಿ ಮತ್ತು ಜೇನು ಸೇರಿಸಿ ಚೆನ್ನಾಗಿ ಕಲಕಿ. ಕೆಮ್ಮಿನ ಸಿದ್ಧೌಷಧ ಈಗ ತಯಾರಾಗಿದೆ. ರಾತ್ರಿ ಮಲಗುವ ಮುನ್ನ ಈ ಪೇಯವನ್ನು ಕುಡಿದು ಮಲಗಿ, ಬೆಳಗಾಗುವಷ್ಟರಲ್ಲಿ ಕೆಮ್ಮು ಬಹುತೇಕ ಇಲ್ಲವಾಗಿರುತ್ತದೆ. ಉತ್ತಮ ಪರಿಣಾಮಕ್ಕಾಗಿ ಸತತವಾಗಿ ಎರಡು ದಿನ ಕುಡಿಯಿರಿ. ಕೆಮ್ಮು ಎಲ್ಲೋ ಒಂದು ಸ್ವಲ್ಪ ಇದೆ ಎಂದು ಅನ್ನಿಸಿದರೂ ಮುಂದಿನ ಒಂದು ವಾರದ ಕಾಲ ಅರ್ಧಲೋಟದಷ್ಟು ಸೇವಿಸುತ್ತಾ ಬನ್ನಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದೊಂದು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ರಚನೆಗಳ ಸಂಗ್ರಹವಾಗಿದೆ. ಪ್ರಸ್ತುತ, ರಾಜಸ್ಥಾನದ ಜೈಪುರ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿ ಜಂತರ್ ಮಂತರ್ ಗಳನ್ನು ಕಾಣಬಹುದಾಗಿದ್ದು, ಜೈಪುರದಲ್ಲಿರುವ ಜಂತರ್ ಮಂತರ್ ದೊಡ್ಡ ಹಾಗೂ ಹೆಚ್ಚು ಹೆಸರುವಾಸಿಯಾಗಿದೆ. ರಜಪೂತ್ ದೊರೆ ಸವಾಯ್ ಜೈಸಿಂಗ್ ಈ ರಚನೆಗಳ ನಿರ್ಮಾಣಕಾರ. ದೇಶದ ಒಟ್ಟು ಐದು ಸ್ಥಳಗಳಲ್ಲಿ ಇಂತಹ ರಚನೆಗಳನ್ನು ಈತ ನಿರ್ಮಿಸಿದ್ದಾನೆ. ದೆಹಲಿ ಹಾಗೂ ಜೈಪುರ ಹೊರತುಪಡಿಸಿ ಮಥುರಾ, ವಾರಣಾಸಿ ಹಾಗೂ ಉಜ್ಜಯಿನಿಗಳಲ್ಲಿ ಈ ರಚನೆಗಳನ್ನು ಜೈಸಿಂಗನು ನಿರ್ಮಿಸಿದ್ದು ಸುಮಾರು 1724 ರಿಂದ 1735…
ಹಿಂದೂ ರಾಷ್ರ ಭಾರತದಲ್ಲಿ ದೇವಾಲಯಗಳು, ಭಾರತದ ಜನರ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿವೆ.ಭಾರತದಲ್ಲಿ ಎಲ್ಲಿ ಹೋದರು ದೇವಾಲಯಗಳ ಕಾಣಸಿಗುತ್ತವೆ. ಜನ ಎಷ್ಟೇ ಕಷ್ಟ ಸುಖಗಳಿದ್ದರೂ ಮನಸ್ಸಿನ ನೆಮ್ಮದಿಗಾಗಿ ದೇವಾಲಯಗಳಿಗೆ ಹೋಗುತ್ತಾರೆ.
Why did India fight for freedom from British?
ಕರಬೂಜ ಹಣ್ಣಿಗೆ ತನ್ನದೇ ಆದ ಸುಗಂಧವಿದೆ. ತನ್ನದೇ ರುಚಿಯೆದೆ. ಕಳಿತ ಹಣ್ಣು ಮೃದುವಾಗಿರುತ್ತದೆ. ಈ ಹಣ್ಣಿಗೆ ಇಂಗ್ಲಿಷ್ ಹೆಸರು ಮಸ್ಕ್ ಮಿಲನ್, ಸಸ್ಯಶಾಸ್ತ್ರೀಯವಾಗಿ ‘ ಕುಕ್ಕುಮೀಸ್ ಮೆಲೊ’ ಎನ್ನುತ್ತಾರೆ.
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮವು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕ್ರೇಜ್ ಜಾಸ್ತಿ ಮಾಡುತ್ತಿದ್ದು,ಶೋ ಮುಗಿಯೋದಕ್ಕೆ ಕೇವಲ 5 ದಿನಗಳು ಬಾಕಿ ಉಳಿದಿವೆ. ನೆನ್ನೆ ಮಧ್ಯರಾತ್ರಿ ಬಿಗ್ ಬಾಸ್ ಸ್ಪರ್ಧಿಗಳಿಗೆ ರಾತ್ರೋ ರಾತ್ರಿ ಒಬ್ಬರನ್ನು ಎಲಿಮಿನೇಟ್ ಮಾಡುವ ಮುಖಾಂತರ ಶಾಕ್ ಕೊಟ್ಟಿದ್ದಲ್ಲದೆ, ವೀಕ್ಷಕರಲ್ಲಿ ಬಾರಿ ಕುತೂಹಲವನ್ನು ಉಂಟುಮಾಡಿದೆ.
ಇತಿಹಾಸ ಸೃಷ್ಟಿಸಿದ RRR ಚಿತ್ರ ದಕ್ಷಿಣ ಭಾರತ ಚಲನಚಿತ್ರ ಒಂದಕ್ಕೆ ಮೊದಲ ಆಸ್ಕರ್ ಪ್ರಶಸ್ತಿಯ ಗೌರವ ನಾಟು ನಾಟು..’, ‘ಲಿಫ್ಟ್ ಮಿ ಅಪ್’, ‘ದಿಸ್ ಈಸ್ ಲೈಫ್’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಹಾಡುಗಳು ರೇಸ್ನಲ್ಲಿದ್ದವು. ಈ ಪೈಕಿ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ದಾಖಲೆ ಬರೆದಿದೆ. 95ನೇ ಸಾಲಿನ ಅಕಾಡೆಮಿ ಅವಾರ್ಡ್ ಕರ್ಯಕ್ರಮದಲ್ಲಿ ಈ ಹಾಡು ‘ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಆಸ್ಕರ್ ಬಾಚಿಕೊಂಡಿದೆ. ಎಂ.ಎಂ. ಕೀರವಾಣಿ…