ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆಧಾರ್ ಕಾರ್ಡ್ ಎಂಬ ಸಾರ್ವತ್ರಿಕ ಗುರುತಿನ ಚೀಟಿ, ಒಂದೆಡೆ ಅಕ್ರಮ ನುಸುಳುಕೋರರನ್ನು ತಡೆಗಟ್ಟಲು, ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಸಹಕಾರಿಯಾಗುತ್ತಿರುವ ಹೊತ್ತಲ್ಲೇ, ಇನ್ನೊಂದೆಡೆ ಹಲವು ಬಡವರ ಪಾಲಿಗೆ ಆಧಾರ್ ಕಾರ್ಡ್ ಒಂದು ಶಾಪವಾಗಿ ಪರಿಣಮಿಸಿದೆ! ಕುಷ್ಟರೋಗದ ಕಾರಣ ಕಣ್ಣಿನ ದೃಷ್ಟಿ ಹಾಗೂ ಬೆರಳುಗಳನ್ನು ಕಳೆದುಕೊಂಡಿರುವುದರಿಂದ ಆಧಾರ್ ಕಾರ್ಡ್ ಪಡೆಯಲು ಸಾಧ್ಯವಾಗುತ್ತಿಲ್ಲ.
ಮಾಗಡಿ ರಸ್ತೆಯಲ್ಲಿ ವಾಸಿಸುತ್ತಿರುವ 65 ವರ್ಷದ ಸಾಜಿದಾ ಬೇಗಂ ಅಡ್ಡಿ ಆತಂಕಗಳಿಲ್ಲದೆ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಏಕೆಂದರೆ, ಅವರ ಬಳಿ ಎಲ್ಲ ಕೆಲಸ ಕಾರ್ಯಗಳಿಗೆ ಲಿಂಕ್ ಆಗಿರುವ ಆಧಾರ್ ಕಾರ್ಡ್ ಇಲ್ಲ!ಕುಷ್ಟರೋಗ ದಿಂದ ತಮ್ಮ ಕೈಬೆರಳುಗಳನ್ನೂ, ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡ ಅವರಿಗೆ ಬೆರಳಚ್ಚು ನೀಡುವುದಕ್ಕೆ, ಕಣ್ಣಿನ ರೆಟಿನಾ ಅಚ್ಚು ನೀಡುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಆಧಾರ್ ಕಾರ್ಡ್ ಇಲ್ಲ!
ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ಅವರಿಗೆ ಪ್ರತಿ ತಿಂಗಳು ಬರುತ್ತಿದ್ದ 1೦೦೦ ರೂ. ಪಿಂಚಣಿಯೂ ನಿಂತು ಬಿಟ್ಟಿದೆ! ಕೈ ಬೆರಳು ಇಲ್ಲದವರು, ಕುಷ್ಟ ರೋಗಿಗಳು ಆಧಾರ್ ಕಾರ್ಡ್ ಮಾಡಿಸುವುದು ಹೇಗೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.
ಈ ಕುರಿತು ಮಾತನಾಡಿದ ಮಾಗಡಿ ರಸ್ತೆಯಲ್ಲಿರುವ ಕುಷ್ಟ ರೋಗಿಗಳ ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ ಡಾ.ಅಯುಬ್ ಅಲಿ ಜೈ, 1೦೦ ಹಾಸಿಗೆಯ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 57 ಜನರಲ್ಲಿ 1೦ ಜನರ ಬಳಿ ಆಧಾರ್ ಕಾರ್ಡ್ ಇಲ್ಲ. ರೋಗಿಗಳು ಹೇಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟನೆ ಇಲ್ಲ ಎಂದಿದ್ದಾರೆ.
ಸಾಜಿದಾ ಬೇಗಂರಂತೆಯೇ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೊಬ್ಬ ಕುಷ್ಟ ರೋಗಿ ಆಧಾರ್ ಕಾರ್ಡ್ ಮಾಡಿಸುವುದಕ್ಕಾಗಿ ಬಹಳಷ್ಟು ಬಾರಿ ಬೆಂಗಳೂರು ಒನ್ ಕೇಂದ್ರಕ್ಕೆ ಅಲೆದಿದ್ದಾರೆ. ಅಲ್ಲಿನ ಸಿಬ್ಬಂದಿಗಳು, ನಿಮಗೆ ಆಧಾರ್ ಕಾರ್ಡ್ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ವಾಪಸ್ ಕಳಿಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿದ UIDAI (Unique Identification Authority of India ಮೊದಲು ಅವರು ಎನ್ ರೋಲ್ ಮಾಡಿಸಿಕೊಳ್ಳಬೇಕು. ಅಕಸ್ಮಾತ್ ಏನಾದರೂ ದೋಷವಿದ್ದರೆ ಅದಕ್ಕೂ ಒಂದು ಪತ್ರ ಬರುತ್ತದೆ ಎಂದಿದೆ. ಆದರೂ ಆಧಾರ್ ಕಾರ್ಡ್‌ಗೆ ಅತ್ಯಗತ್ಯವಾದ ಬೆರಳಚ್ಚು ನೀಡುವುದಕ್ಕೆ ಸಾಧ್ಯವಿಲ್ಲದವರು ಏನು ಮಾಡಬೇಕೆಂಬ ಬಗ್ಗೆ ಸ್ಪಷ್ಟನೆ ಇಲ್ಲ .
ಆಧಾರ್ ನೋಂದಣಿಗೆ ತೊಡಕುಂಟಾಗಿ ಪಿಂಚಣಿ ವಂಚಿತರಾಗಿದ್ದ ಕುಷ್ಟರೋಗ ಎದುರಿಸುತ್ತಿರುವ ಸಜೀದಾ ಬೇಗಂ (65) ಅವರಿಗೆ ಹಲವರು ನೆರವಿನ ಹಸ್ತ ಚಾಚಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದಿರುವ ಕಂದಾಯ ಇಲಾಖೆ ಕಾರ್ಯದರ್ಶಿ ಹಾಗೂ ಯುಐಡಿಎಐ ಈ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಷ್ಟ್ರೀಯ ಹೆಲ್ತ್ ಮಿಷನ್ ನ ನಿರ್ದೇಶಕ ರಥನ್ ಕೇಲ್ಕರ್, ಈ ವಿಷಯವನ್ನು ಸೆಂಟರ್ ಫಾರ್ ಇ-ಕಾಮರ್ಸ್ ನ ಗಮನಕ್ಕೆ ತಂದಿದ್ದೇನೆ, ಇದೇ ಮಾದರಿಯ ಪ್ರಕರಣಗಳು ಚಾಮರಾಜನಗರದಲ್ಲಿಯೂ ಕಂಡುಬಂದಿದೆ. ಈ ರೀತಿಯ ಪ್ರಕರಣಗಳಿಗೆ ಪರಿಹಾರ ಇನ್ನಷ್ಟೇ ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಒಂದೆಡೆ ಸರ್ಕಾರಿ ಸಂಸ್ಥೆಗಳು ಸಜೀದಾ ಬೇಗಂ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದ್ದರೆ, ಮತ್ತೊಂದೆಡೆ ನೆಟಿಜನ್ ಗಳೂ ಸಹ ನೆರವಿಗೆ ಧಾವಿಸುತ್ತಿದ್ದಾರೆ. ಸಜೀದಾ ಬೇಗಂ ಕುರಿತ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನವದೆಹಲಿಯ ಡೀ ಶರ್ಮಾ, ನೇಹಾ ಬಾರ್ವೆ ವ್ಯಾಸ್, ಬಜಾಜ್ ಕ್ಯಾಪಿಟಲ್ ಲಿಮಿಟೆಡ್ ನ ಹಿರಿಯ ಫೈನಾನ್ಶಿಯಲ್ ಅಡ್ವೈಸರ್ ಆದ ಫಲಕ್ ರಬ್ನವಾಜ್, ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರು ಸಜೀದಾ ಬೇಗಂ ಗೆ ನೆರವು ನೀಡಲು ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮ್ಮ ಮನೆಗೆ ಧಿಡೀರ್ ಅಂತ ಅತಿಥಿಗಳು ಬಂದರೆ ಇಲ್ಲಿದೆ ನೋಡಿ ಬಿಸಿ ಬಿಸಿ ತುಪ್ಪಾನ್ನ ಮಾಡುವ ವಿಧಾನ
ಮೆಟ್ರೋ ರೈಲು ಪ್ರಯಾಣಿಕರು ಇನ್ನು ಮುಂದೆ 25 ಕೆಜಿವರೆಗೂ ಲಗೇಜ್ ಕೊಂಡೊಯ್ಯಬಹುದಾಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಲಗೇಜ್ ತೂಕ ಮಿತಿಯನ್ನು 25 ಕೆಜಿ ಗೆ ಹೆಚ್ಚಳ ಮಾಡಿದೆ. ಪ್ರಸ್ತುತ ಮೆಟ್ರೋ ರೈಲುಗಳಲ್ಲಿ 15 ಕೆಜಿ ತೂಕದ ಲಗೇಜ್ ಕೊಂಡೊಯ್ಯಲು ಅವಕಾಶವಿದೆ. ಅದನ್ನು 25 ಕೆಜಿಗೆ ಹೆಚ್ಚಿಸಲಾಗಿದೆ. ಆದರೆ ಇಷ್ಟು ತೂಕದ ಒಂದು ಬ್ಯಾಗ್ ಗೆ ಮಾತ್ರ ಅನುಮತಿ ಇರುತ್ತದೆ. ಮೊದಲಿಗೆ ಮೆಟ್ರೋ ರೈಲ್ವೆ ಅಧಿಕಾರಿಗಳಿಂದಲೂ ಪೂರ್ವ ಅನುಮತಿ ಪಡೆಯಬೇಕಿದೆ. ವಿಮಾನ ನಿಲ್ದಾಣಗಳಿಗೆ ಸಂಪರ್ಕ…
ಸಿಹಿ ಬೂಂದಿ ಮಾಡಲು ಬೇಕಾದ ಪದಾರ್ಥಗಳು : ಕಡ್ಲೆ ಹಿಟ್ಟು 2 ಕಪ್, ಅಡುಗೆ ಸೋಡ 1/4 ಚಮಚ, ಉಪ್ಪು ಚಿಟಿಕೆ, ದ್ರಾಕ್ಷಿ 2 ಚಮಚ, ಗೋಡಂಬಿ 2 ಚಮಚ, ತುಪ್ಪ 2 ಚಮಚ, ಸಕ್ಕರೆ 1/2ಕಪ್, ಏಲಕ್ಕಿ ಪುಡಿ 1/2 ಚಮಚ, ಅಡುಗೆ ಎಣ್ಣೆ 2 ಕಪ್. ಮಾಡುವ ವಿಧಾನ : ಕಡ್ಲೆಹಿಟ್ಟು , ಉಪ್ಪುಚಿಟಿಕೆ , ಅಡುಗೆ ಸೋಡ ಚೆನ್ನಾಗಿ ಮಿಶ್ರ ಮಾಡಿ. ಸ್ವಲ್ಪ ಸ್ವಲ್ಪ ನೀರು ಚಿಮುಕಿಸಿ ,ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ…
ಬೇಸರವಾಗುತ್ತಿದ್ದಾರೆ ನಿಜವಾಗಿಯೂ ಆಸಕ್ತಿರಹಿತವಾಗಿರುತ್ತದೆ, ಆದರೆ ನೀವು ಅದನ್ನು ಉತ್ತಮ ಸಮಯಕ್ಕೆ ಬದಲಾಯಿಸಬಹುದು.
ಹಲ್ಲು ಮನುಷ್ಯನ ದೇಹದ ಪ್ರಮುಖ ಅಂಗವಾಗಿದ್ದು, ಕೇವಲ ತಿನ್ನುವುದಕ್ಕೆ ಮಾತ್ರವಲ್ಲ, ನಮ್ಮ ಮುಖದ ಸೌಂದರ್ಯದಲ್ಲಿ ಹಲ್ಲು ವಹಿಸುವ ಪಾತ್ರವನ್ನು ನಾವು ಕೇರ್ಲೆಸ್ ಮಾಡೋ ಅಂಗಿಲ್ಲ. ಯಾಕಂದ್ರೆ ಬಿಳಿ ಬಿಳಿಯಾಗಿ ಪಳ ಪಳ ಅಂತ ಹೊಳೆಯುವ ಹಲ್ಲು ನಮ್ಮ ಮುಖದ ಚಂದವನ್ನು ಜಾಸ್ತಿ ಮಾಡುತ್ತೆ.
ಹಮದಾಬಾದ್: ಕಾರಿನೊಳಗೆ ಧಗೆ ಹೆಚ್ಚಾದರೆ, ಕಾರು ಬಿಸಿಯಾದರೇ ಕಾರಿನಲ್ಲಿ ಎಸಿ ಹಾಕಿಕೊಳ್ಳುತ್ತೇವೆ, ಕಾರನ್ನು ನೆರಳಿಗೆ ನಿಲ್ಲಿಸುತ್ತೇವೆ, ಆದರೆ ಇಲ್ಲೊಬ್ಬ ಮಹಿಳೆ ತಮ್ಮ ಕಾರನ್ನು ತಂಪಾಗಿಸಲು ವಿಶೇಷ ಪ್ರಯೋಗ ಮಾಡಿದ್ದಾರೆ. ಅಹಮದಾಬಾದ್ ನಗರದಲ್ಲಿ ಬಿಸಿಲ ಬೇಗೆ ಹೆಚ್ಚಳವಾಗಿದ್ದು ತಾಪಮಾನವು 45 ಡಿಗ್ರಿವರೆಗೂ ಏರಿಕೆಯಾಗಿದೆ. ಹೀಗಾಗಿ ಇಡೀ ಕಾರಿಗೆ ಸಗಣಿಯನ್ನು ಹಚ್ಚಿ ಕಾರನ್ನು ತಂಪಾಗಿರಿಸುವ ಜತೆಗೆ ಚಾಲನೆ ವೇಳೆ ತಂಪಾದ ಅನುಭವವನ್ನು ಪಡೆಯುವ ಪ್ರಯತ್ನವನ್ನು ಇಲ್ಲಿನ ಮಹಿಳೆಯೊಬ್ಬರು ಮಾಡಿದ್ದಾರೆ. ಸೆಜಲ್ ಶಾ ಎಂಬ ಮಹಿಳೆ ತಮ್ಮ ಟಯೋಟೋ ಆಲ್ಟೀಸ್ ಕಾರಿನ…