ಸುದ್ದಿ

ಶೀಘ್ರದಲ್ಲೇ ಇನ್ಮುಂದೆ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕುಡಿಕೆಗಳಲ್ಲಿ ಬಿಸಿ ಬಿಸಿ ಟೀ ಲಭ್ಯ…!

91

ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ಏರ್ಪೋರ್ಟ್ಗಳು ಮತ್ತು ಮಾಲ್ಗಳಲ್ಲಿ ನೀವು ‘ಟೀ’ಯನ್ನು ಮಣ್ಣಿನ ಲೋಟಗಳಲ್ಲಿ(ಕುಲ್ಹಾದ್) ಕುಡಿಯುವ ಅವಕಾಶ ಸದ್ಯದಲ್ಲೇ ಸಿಗಲಿದೆ. ಇಂಥದ್ದೊಂದು ವ್ಯವಸ್ಥೆ ಜಾರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಲವು ತೋರಿಸಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಲೋಟಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುವಂತೆ ಖಾದಿ ಮತ್ತು ಗ್ರಾಮೋದ್ಯಮ ಆಯೋಗಕ್ಕೂ ನಿರ್ದೇಶನ ನೀಡಿದ್ದಾರೆ

ಮಣ್ಣಿನ ಲೋಟಗಳನ್ನು ಬಳಸುವ ಪರಿಸರಸ್ನೇಹಿ ವ್ಯವಸ್ಥೆಯನ್ನು ದೇಶದ ಪ್ರಮುಖ100 ರೈಲ್ವೆ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ಗೆ ಪತ್ರ ಬರೆದಿದ್ದೇನೆ,”ಎಂದು ಗಡ್ಕರಿ ಹೇಳಿದ್ದಾರೆ.  ಪ್ರಸ್ತುತ ವಾರಾಣಸಿ ಮತ್ತು ರಾಯ್‌ ಬರೇಲಿಯ ಎರಡು ರೈಲ್ವೆ ನಿಲ್ದಾಣಗಳಲ್ಲಿ ಜೇಡಿ ಮಣ್ಣಿನಿಂದ ಮಾಡಿದ ಲೋಟಗಳು, ಕುಡಿಕೆಗಳು ಮತ್ತು ತಟ್ಟೆಗಳನ್ನು ಬಳಸಲಾಗುತ್ತಿದೆ. ಇದನ್ನು ದೇಶದ ಇತರೆ ರೈಲ್ವೆ ನಿಲ್ದಾಣಗಳಿಗೂ ವಿಸ್ತರಿಸಬೇಕು ಎನ್ನುವುದು ಗಡ್ಕರಿ ಅವರ ಸಲಹೆ. 

”ಏರ್‌ಪೋರ್ಟ್‌ಗಳು ಮತ್ತು ರಾಜ್ಯ ಸಾರಿಗೆ ಸಂಸ್ಥೆಗಳ ಅಧೀನದಲ್ಲಿ ಬರುವ ಬಸ್‌ ಡಿಪೋಗಳಲ್ಲಿನ ಟೀ ಸ್ಟಾಲ್‌ಗಳಲ್ಲಿ ಮಣ್ಣಿನ ಲೋಟಗಳ ಬಳಕೆಯನ್ನು ಕಡ್ಡಾಯಗೊಳಿಸಬೇಕು. ನಾವು ಮಾಲ್‌ಗಳಲ್ಲೂ ಇಂಥ ವ್ಯವಸ್ಥೆಗೆ ಉತ್ತೇಜನ ನೀಡಬೇಕು,”ಎಂದು ಗಡ್ಕರಿ ಹೇಳಿದ್ದಾರೆ. ಇದೇ ವೇಳೆ, ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಲೋಟಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುವಂತೆ ಖಾದಿ ಮತ್ತು ಗ್ರಾಮೋದ್ಯಮ ಆಯೋಗಕ್ಕೂ(ಕೆವಿಐಸಿ) ನಿರ್ದೇಶನ ನೀಡಿದ್ದಾರೆ. 

ಉತ್ಪಾದಕತೆ ಹೆಚ್ಚಿಸುವ ಸಲುವಾಗಿ ಸರಕಾರವು ಸಶಕ್ತಿಕರಣ್‌ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್‌ ಚಕ್ರಗಳನ್ನು ವಿತರಿಸುತ್ತಿದೆ. ಮಡಿಕೆ ಉತ್ಪಾದಕರನ್ನು ಉತ್ತೇಜಿಸಲು2004ರಲ್ಲಿಯೇ ರೈಲ್ವೆ ಸಚಿವರು ಮಣ್ಣಿನ ಲೋಟಗಳನ್ನು ಬಳಸುವ ಪದ್ಧತಿಗೆ ಚಾಲನೆ ನೀಡಿದ್ದರು. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನೀವು ಬಳಸುವ ಮಾತ್ರೆಗಳ ಪ್ಯಾಕ್ ನಲ್ಲಿ ಈ ಕೆಂಪು ಗೆರೆ ಏಕಿರುತ್ತದೆ ಗೊತ್ತಾ. ಯಾರಿಗೂ ತಿಳಿದಿಲ್ಲ.

    ಔಷಧಿಗಳನ್ನು ಹತ್ತಿರದ ಮೆಡಿಕಲ್ ಸ್ಟೋರ್ ಗಳಲ್ಲಿ ಚೀಟಿ ತೋರಿಸಿ ಔಷಧಿಗಳನ್ನು ಪಡೆದುಕೊಳ್ಳುತ್ತೇವೆ. ಇದುಯ್ ಒಂದು ಸಾಮಾನ್ಯದ ಸಂಗತಿ ಆದರೆ ಬಹುಷಃ ನಿಮಗೆ ಗೊತ್ತಿರುವುದಿಲ್ಲ ಈ ದೇಶದಲ್ಲಿ ಅದೆಷ್ಟೋ ಮಂದಿ ಅವಿದ್ಯಾವಂತರೋ ಅಥವಾ ತಿಳುವಳಿಕೆ ಇಲ್ಲದ ಜನರು ಒಮ್ಮೊಮ್ಮೆ ಜ್ವರ ಹಾಗು ತಲೆನೋವು ಇತ್ಯಾದಿ ಕಾರಣಕ್ಕಾಗಿ ಯಾವುದೇ ವೈದ್ಯರ ಬಳಿ ತೋರಿಸದೆ ಮೆಡಿಕಲ್ ಗಳಿಂದ ಮಾತ್ರೆಗಳನ್ನು ತಗೆದುಕೊಳ್ಳುತ್ತಾರೆ. ಈ ರೀತಿ ಮಾಡುವುದು ಎಷ್ಟೊಂದು ದೊಡ್ಡ ತಪ್ಪು ಎನ್ನುವುದು ಅವರಿಗೆ ತಿಳಿದಿರುವುದಿಲ್ಲ, ಹೌದು ಕೆಲವೊಮ್ಮೆ ನಾವು ತಗೆದುಕೊಳ್ಳುವ ಮಾತ್ರೆಗಳು ನಮ್ಮ…

  • ಜ್ಯೋತಿಷ್ಯ

    ನಿಮ್ಮ ಗುರುವಾರದ ರಾಶಿ ಭವಿಷ್ಯ ಶುಭವೋ ಅಶುಭವೋ ಈ ಲೇಖನ ನೋಡಿ ತಿಳಿಯಿರಿ

    ಮೇಷ ರಾಶಿ ಭವಿಷ್ಯ (Thursday, December 2, 2021) ಅತಿಯಾಗಿ ತಿನ್ನುವುದನ್ನು ತಪ್ಪಿಸಿ ಮತ್ತು ಫಿಟ್ ಆಗಿ ಉಳಿಯಲು ನಿಯಮಿತವಾಗಿ ಹೆಲ್ತ್ ಕ್ಲಬ್‌ಗೆ ಭೇಟಿ ನೀಡಿ. ಇಂದು ಹಣದ ಆಗಮನವು ನಿಮ್ಮನ್ನು ಯಾವುದೇ ಸಮಸ್ಯೆಗಳಿಂದ ಮುಕ್ತಗೊಳಿಸಬಹುದು ನಿಮ್ಮ ಜ್ಞಾನ ಮತ್ತು ಒಳ್ಳೆಯ ಹಾಸ್ಯ ನಿಮ್ಮ ಬಳಿಯಿರುವ ಜನರನ್ನು ಆಕರ್ಷಿಸಬಹುದು. ಇದು ಪ್ರೀತಿಯಲ್ಲಿ ನಿಮ್ಮ ಅದೃಷ್ಟದ ದಿನ. ನಿಮ್ಮ ಸಂಗಾತಿ ನಿಮ್ಮ ಬಹುನಿರೀಕ್ಷಿತ ಕಲ್ಪನೆಗಳನ್ನು ಸಾಕ್ಷಾತ್ಕಾರ ಮಾಡುವ ಮೂಲಕ ನಿಮ್ಮನ್ನು ಅಚ್ಚರಿಗೊಳಿಸುತ್ತಾರೆ. ಇಂದು ನಿಮಗೆಲ್ಲರಿಗೂ ತುಂಬ ಸಕ್ರಿಯವಾದ ಮತ್ತು…

  • ಕ್ರೀಡೆ

    ಖ್ಯಾತ ಬ್ಯಾಡ್ಮಿಂಟನ್ ತಾರೆ,ಈಗ ಜಿಲ್ಲಾಧಿಕಾರಿ!ಇದಕ್ಕೆ ನಿಮ್ಮ ಸಹಮತವೇನು?ಈ ಲೇಖನಿ ಓದಿ,ಕಾಮೆಂಟ್ ಮಾಡಿ ತಿಳಿಸಿ…

    ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರನ್ನು ಆಂಧ್ರಪ್ರದೇಶ ಸರ್ಕಾರ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿತ್ತು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅಪಾಯಿಂಟ್ಮೆಂಟ್ ಲೆಟರ್ ಅನ್ನು ಸಿಂಧುಗೆ ಹಸ್ತಾಂತರಿಸಿದ್ದರು. 30 ದಿನಗಳೊಳಗೆ ಡೆಪ್ಯೂಟಿ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸುವಂತೆ ಆಂಧ್ರ ಸರ್ಕಾರ ಸಿಂಧುಗೆ ಸೂಚಿಸಿತ್ತು.

  • ಸುದ್ದಿ

    BPL ಕಾರ್ಡ್ ಇದ್ದವರು ರೆಷೆನ್ ಬೇಕೆಂದರೆ ಜುಲೈ 31 ಒಳಗೆ ಈ ಕೆಲಸ ಮಾಡಬೇಕು…..!

    ಪಡಿತರ ಸೋರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಇದನ್ನು ತಡೆಯಲು ಆಹಾರ ನಾಗರಿಕ ಸರಬರಾಜು ಇಲಾಖೆ ಕ್ರಮ ಕೈಗೊಂಡಿದ್ದು ನೈಜ ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಿಸಲು ಮುಂದಾಗಿದೆ. ಹೀಗಾಗಿ ನೀವು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದ್ದು ನಿಮಗೆ ಪಡಿತರ ಕೂಡ ಸಿಗುವುದಿಲ್ಲ. ಹೌದು, ಜುಲೈ 31ರ ಒಳಗೆ ನೀವು ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಬೇಕು. ಒಂದು ವೇಳೆ ನೀವು ಇ-ಕೆವೈಸಿ ಮಾಡಿಸದಿದ್ದಲ್ಲಿ ನಿಮ್ಮ ಕಾರ್ಡ್ ರದ್ದಾಗಲಿದ್ದು, ಆಗಸ್ಟ್ ನಿಂದ ನಿಮಗೆ ರೇಷನ್ ಕೂಡ…

  • ಮನರಂಜನೆ

    ಮಜಾಭಾರತಕ್ಕೆ ಬಂದ ಜೂನಿಯರ್ ದರ್ಶನ್ ನೋಡಿ ಶಾಕ್ ಆದ ರಚಿತಾ ರಾಮ್!ಜೂನಿಯರ್ ದರ್ಶನ್ ನಲ್ಲಿ ಇಟ್ಟ ಬೇಡಿಕೆ ಏನು ಗೊತ್ತಾ..?

    ಪ್ರತಿಯೊಬ್ಬ ಸ್ಟಾರ್ ನಟರಂತೆ ಕಾಣುವ ಒಬ್ಬೊಬ್ಬ ಜೂನಿಯರ್ ನಟ ಇರುತ್ತಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಹಾವ-ಭಾವ ನೋಡಿ ಅವರಂತಯೇ ಮಾತನಾಡುವುದು, ಲುಕ್ ಹಾಗೂ ವಾಕಿಂಗ್ ಸ್ಟೈಲ್ ಅನ್ನು ಅನುಸರಿಸುತ್ತಾರೆ. ಈಗ ಅದೇ ರೀತಿ ಜೂನಿಯರ್ ದರ್ಶನ್ ನೋಡಿ ನಟಿ ರಚಿತಾ ರಾಮ್ ಶಾಕ್ ಆಗಿದ್ದರು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಮುಗಿದ ನಂತರ ಇದೀಗ ಮಜಾಭಾರತ ಸೀಸನ್ ಮೂರು ಶುರುವಾಗಿದೆ.. ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರಂತೆಯೇ ಕಾಣುವ ಜೂನಿಯರ್ ದರ್ಶನ್ ಬಂದಿದ್ದರು. ಅಲ್ಲಿ…