ಸುದ್ದಿ

100 ಕೋಟಿ ಮೀರಿದ ಕುರುಕ್ಷೇತ್ರ ಸಂಭ್ರಮದಲ್ಲಿ ಕೇಕ್‌ ಕತ್ತರಿಸಿ ಆಚರಣೆ ಮಾಡಿದ ದರ್ಶನ್‌..!

62

ದರ್ಶನ್‌ ಅಭಿಮಾನಿಗಳ ಬಳಗ ಇದನ್ನು ಅಧಿಕೃವಾಗಿ ಘೋಷಿಸಿಕೊಂಡಿದೆ. ‘ಕುರುಕ್ಷೇತ್ರ’ ಚಿತ್ರ ಬರೊಬ್ಬರಿ . 100 ಕೋಟಿ ಕಲೆಕ್ಷನ್‌ ಮಾಡಿದೆ ಎಂದು ಕೇಕ್‌ ಕತ್ತರಿಸಿ ಸಂಭ್ರಮ ಆಚರಿಸಿದೆ. ಆ ಸಂಭ್ರಮಾಚರಣೆಯಲ್ಲಿ ಚಿತ್ರದ ಪ್ರಮುಖ ಪಾತ್ರಧಾರಿ ದರ್ಶನ್‌ ಕೂಡ ಭಾಗಿಯಾಗಿದ್ದಾರೆ.

ಇದೊಂದು ಖುಷಿ ವಿಚಾರ. ಅಧಿಕೃತವಾಗಿ ಇದರ ಗಳಿಕೆ ಎಷ್ಟು, ಏನು ಎನ್ನುವುದು ಗೊತ್ತಿಲ್ಲ. ಆದರೆ ಆರಂಭದಿಂದಲೇ ದಾಖಲೆ ಕಲೆಕ್ಷನ್ಆಗುತ್ತಿರುವ ಬಗ್ಗೆ ಮಾಹಿತಿ ಇತ್ತು. ಆಗಾಗ ನಿರ್ಮಾಪಕರು ಸಿಕ್ಕಾಗಲೂ ಹೇಳುತ್ತಿದ್ದರು. ಈಗ ನಮ್ಮ ಚಿತ್ರ 100 ಕೋಟಿ ರೂ. ಗಳಿಕೆ ಕಂಡು ದಾಖಲೆ ಸೃಷ್ಟಿಸಿದೆ ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ಅದರ ಜತೆಗೆ ಕನ್ನಡ ಚಿತ್ರರಂಗಕ್ಕೂ ಖುಷಿ ಕೊಡುವಂತಹ ಸಂಗತಿ.– ನಾಗಣ್ಣ, ನಿರ್ದೇಶಕ

ದರ್ಶನ್‌ ಪಾಲಿಗೆ ಇದೊಂದು ವಿಶೇಷವಾದ ಸಿನಿಮಾ. ಅವರ ಸಿನಿ ಕರಿಯರ್‌ನಲ್ಲಿ ಇದು ನಾಯಕನಟರಾಗಿ 50ನೇ ಚಿತ್ರ. ಅದ್ಧೂರಿ ವೆಚ್ಚದ ಪೌರಾಣಿಕ ಚಿತ್ರವೆಂದೇ ಕರೆಸಿಕೊಂಡಿದ್ದ ಈ ಚಿತ್ರ ಬಿಡುಗಡೆ ಆಗಿ 3ನೇ ವಾರ ಪೂರೈಸುತ್ತಿದೆ. ಆರಂಭದಿಂದಲೂ ಈ ಚಿತ್ರಕ್ಕೆ ಎಲ್ಲಾ ಕಡೆಗಳಲ್ಲೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನದ ಗಳಿಕೆಯೇ 13 ಕೋಟಿ ರೂ. ಎನ್ನುವ ಸುದ್ದಿ ಇತ್ತು.

ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆ ಗಳಿಕೆಯೂ ಹೌದು. ಎರಡನೇ ದಿನ 10 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ಅಲ್ಲಿಂದ ಸದ್ದಿಲ್ಲದೆ ನೂರಾರು ಚಿತ್ರಮಂದಿರಗಳಲ್ಲಿ ಯಶಸ್ವಿ 3 ವಾರದ ಪ್ರದರ್ಶನ ಕಾಣುತ್ತಿರುವ ಕುರುಕ್ಷೇತ್ರದ ಇದುವರೆಗಿನ ಒಟ್ಟು ಕಲೆಕ್ಷನ್‌ 100 ಕೋಟಿ ರೂ. ಎನ್ನುವುದು ದರ್ಶನ್‌ ಅಭಿಮಾನಿ ಬಳಗದ ಘೋಷಣೆ. ಅದಕ್ಕೆ ಸಾಕ್ಷಿ ಸಾಮಾಜಿಕ ಜಾಲದಲ್ಲಿ ವೈರಲ್‌ ಆದ ‘ಕುರುಕ್ಷೇತ್ರ’ದ 100 ಕೋಟಿ ಗಳಿಕೆಯ ಸಂಭ್ರಮಾಚರಣೆಯ ಫೋಟೋಗಳು.

ನಿಜ ನಾನು ಸಿನಿಮಾದ ವಿತರಕ. ಆದರೆ ನಾನು ಯಾವುದೇ ಸಿನಿಮಾ ಬಜೆಟ್ಆಗಲಿ, ಇಲ್ಲವೇ ಅದರ ಕಲೆಕ್ಷನ್ವಿಚಾರದಲ್ಲಾಗಲಿ ಮಾತನಾಡಿಲ್ಲ. ಅದು ನನ್ನ ಅಭ್ಯಾಸ. ಈಗಲೂ ಅಷ್ಟೇ. ಅಧಿಕೃತವಾಗಿ ಎಲ್ಲವನ್ನು ನೋಡಿ, ಪರಿಶೀಲಿಸಿದ ನಂತರ ಎಷ್ಟು, ಏನು ಅನ್ನೋದು ಗೊತ್ತಾಗುತ್ತೆ. ಅದು ಬಿಟ್ಟರೆ, ಈಗಿನ ಯಾವುದೇ ಸುದ್ದಿ ಬಗ್ಗೆ ನಾನು ಕಮೆಂಟ್ಮಾಡುವುದಿಲ್ಲ.- ರಾಕ್ಲೈನ್ವೆಂಕಟೇಶ್‌, ಕುರುಕ್ಷೇತ್ರ ಚಿತ್ರದ ವಿತರಕಕುರುಕ್ಷೇತ್ರ ದ 100 ಕೋಟಿ ರೂ. ಗಳಿಕೆಯ ಸಂಭ್ರಮಾಚರಣೆ ಮಾಡಿದ್ದು ದರ್ಶನ್‌ ಅಭಿಮಾನಿ ಬಳಗ. ಅಲ್ಲಿ ದರ್ಶನ್‌ ಮಾತ್ರವೇ ಇದ್ದು ವಿಶೇಷ ಕೇಕ್‌ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘ನಿಯಮ ಉಲ್ಲಂಗಿಸಲಿಲ್ಲ’ ‘ಯಾವುದೆ ವಿದೇಶೀಯ ಫಂಡ್ಸ್ ಪಡೆದಿಲ್ಲ’ ; ಇನ್ಫೋಸಿಸ್

    ಬೆಂಗಳೂರು, ಮೇ 14: ಎಫ್ಸಿ ಆರ್ ಎ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಬೆಂಗಳೂರು ಮೂಲದ ಇನ್ಫೋಸಿಸ್ ಪ್ರತಿಷ್ಠಾನವು ಪ್ರತಿಕ್ರಿಯೆ ನೀಡಿದೆ. ವಿದೇಶದಿಂದ ಯಾವುದೇ ‘ಫಂಡಿಂಗ್’ ಪಡೆದಿಲ್ಲ, ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಪ್ರತಿಕಾ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಮೂಲದ ಎನ್ ಜಿಒ ಇನ್ಫೋಸಿಸ್ ಫೌಂಡೇಷನ್, ವಿದೇಶದಿಂದ ಪಡೆದ ದೇಣಿಗೆ ಮೊತ್ತಕ್ಕೆ ಸೂಕ್ತ ದಾಖಲೆ ಒದಗಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ ಎಂದು ಪಿಟಿಐ ವರದಿ ಮಾಡಿತ್ತು. ಈ…

  • ಸುದ್ದಿ

    ಕೇವಲ ಎರಡು ಸಾವಿರಕ್ಕಾಗಿ 50 ಮೊಟ್ಟೆ ತಿನ್ನಲು ಸ್ನೇಹಿತರೊಡನೆ ಪಂದ್ಯ ; 41 ಮೊಟ್ಟೆ ತಿಂದ ಬಳಿಕ ವ್ಯಕ್ತಿಗೆ ಏನಾಯ್ತು ಗೊತ್ತಾ ?ತಿಳಿದರೆ ಶಾಕ್….

    ವ್ಯಕ್ತಿಯೊಬ್ಬ 2 ಸಾವಿರ ರೂ. ಹಣಕ್ಕಾಗಿ 41 ಮೊಟ್ಟೆ ತಿಂದು ಮೃತಪಟ್ಟ ಘಟನೆ ಸೋಮವಾರ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸುಭಾಷ್ ಯಾದವ್(42) ಮೃತಪಟ್ಟ ವ್ಯಕ್ತಿ. ಸುಭಾಷ್ ಮೊಟ್ಟೆ ತಿನ್ನಲು ತನ್ನ ಸ್ನೇಹಿತನ ಜೊತೆ ಜೌನ್‌ಪುರದ ಬಿಬಿಗಂಜ್ ಮಾರ್ಕೆಟ್‌ಗೆ ಹೋಗಿದ್ದನು. ಈ ವೇಳೆ ಸುಭಾಷ್ ಹಾಗೂ ಆತನ ಸ್ನೇಹಿತನ ನಡುವೆ ಹಣಕ್ಕಾಗಿ ಜಗಳ ನಡೆದಿದೆ. ಸುಭಾಷ್  ಸ್ನೆಹಿತ 50 ಮೊಟ್ಟೆ ತಿಂದರೆ 2 ಸಾವಿರ ರೂ. ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಸುಭಾಷ್ ಕೂಡ ಒಪ್ಪಿಕೊಳ್ಳುತ್ತಾನೆ. ಬಳಿಕ…

  • ಸ್ಪೂರ್ತಿ

    ವಯಾಗ್ರಾಕ್ಕಾಗಿ ಎರಡು ಗ್ರಾಮಗಳ ನಡುವೆ ಜಗಳ- ಹಿಮಾಲಯದ ಪರ್ವತದಲ್ಲಿ ನಿಷೇಧಾಜ್ಞೆ ಜಾರಿ….!

    ಅತ್ಯಮೂಲ್ಯ ನೈಸರ್ಗಿಕವಾಗಿ ದೊರೆಯುವ ‘ಕೀಡಾ ಜಾಡಿ’ ಅಥವಾ ಹಿಮಾಲಯನ್ ವಯಾಗ್ರಾಕ್ಕಾಗಿ ಉತ್ತರಾಖಂಡದ ಎರಡು ಗ್ರಾಮಗಳ ಜನರು ಕಿತ್ತಾಡಿದ್ದು ನಿಷೇಧಾಜ್ಞೆ ಜಾರಿಯಾಗಿದೆ.ನೈಸರ್ಗಿಕ ವಯಾಗ್ರಾ ಸಂಗ್ರಹಿಸುವ ವಿಚಾರವಾಗಿ ಪಿತೋರ್‍ಗಢ ಜಿಲ್ಲೆಯ ಬುಯಿ ಮತ್ತು ಪಾಟೋ ಗ್ರಾಮಗಳ ಜನರು ಜಗಳ ಮಾಡಿಕೊಂಡಿದ್ದಾರೆ. ವಯಾಗ್ರಾ ಬೆಳೆಯುವ ಪ್ರದೇಶ ನಮಗೆ ಸೇರಿದ್ದು ಎಂದು ಎರಡೂ ಗ್ರಾಮದವರು ಶಸ್ತ್ರಾಸ್ತ್ರ ಹಿಡಿದು ನಿಂತಿದ್ದಾರೆ. ಪಿತೋರ್‌ಗಢ ಜಿಲ್ಲೆಯ ಹಿಮಾಲಯ ಪ್ರದೇಶ ರಾಲಂ ಮತ್ತು ರಾಜರಾಂಘ ಬಗ್ಯಾಲ್ಸ್ ಹುಲ್ಲುಗಾವಲಿನಲ್ಲಿ ವಯಾಗ್ರಾ ಬೆಳೆಯುತ್ತಿದೆ. ಪರ್ವತದ ಎತ್ತರದಲ್ಲಿ ಬೆಳೆಯುವ ವಯಾಗ್ರಾವನ್ನು ಧಾರ್ಚುಲಾ ಮತ್ತು…

  • ಸುದ್ದಿ

    ಭಾರತದ ಮೋಸ್ಟ್ ವಂಡರ್, ಈ 10 ಸೂರ್ಯೋದಯ-ಸೂರ್ಯಾಸ್ತದ ಸ್ಥಳಗಳು…

    ಪ್ರಕೃತಿಯ ಅನೇಕ ಸುಂದರವಾದ ಉಡುಗೊರೆಗಳಲ್ಲಿ ಸೂರ್ಯೋದಯ-ಸೂರ್ಯಾಸ್ತದ ಸೊಬಗು ತುಂಬಾ ಅದ್ಭುತ.ಈ ಸೂರ್ಯೋದಯ-ಸೂರ್ಯಾಸ್ತವನ್ನು ನೋಡುವುದರಿಂದ ಮನಸ್ಸು ಪ್ರಪುಲ್ಲಗೊಳ್ಳುತ್ತದೆ.ಈ ಸೌಂದರ್ಯ

  • ಸುದ್ದಿ

    ಮುಂಬೈನಲ್ಲಿ ಮೆಟ್ರೋ ಸಂಚಾರಕ್ಕೆ ನದಿ ಕೆಳಗಡೆ ಹೊಸ ಸಂಚಾರ ಮಾರ್ಗ….!

    ಮುಂಬೈನಲ್ಲಿ ನದಿ ಕೆಳಗೆ ಮೆಟ್ರೋ ಮಾರ್ಗ ನಿರ್ಮಿಸಲು ಮುಂಬೈ ಮೆಟ್ರೋ ನಿಗಮ ನಿರ್ಧರಿಸಿದೆ, ಕಾಮಗಾರಿಯೂ ಆರಂಭಗೊಂಡಿದೆ. ಗ್ಯಾಲರಿ ಧಾರಾವಿ ಹಾಗೂ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಡುವೆ ಮೀಠಿ ನದಿ ಆಳದಲ್ಲಿ ಅಂದಾಜು 170 ಮೀಟರ್ ಉದ್ದದ ಮೆಟ್ರೋ ಸಾಗಲಿದೆ. ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್ ಈ ಯೋಜನೆಗೆ ಸುಮಾರು 54 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ನದಿ ಕೆಳಗೆ ಸುರಂಗ ಕೊರೆಯುವ ಮೊದಲು ಸುರಕ್ಷಿತ ಪರದೆ…