karnataka

ಕರ್ನಾಟಕದ ಮೊದಲ ಕನ್ನಡ ಖಾಸಗಿ ಸುದ್ದಿ ವಾಹಿನಿ ಬಂದ್ ಆಗಲಿದೆ..!ತಿಳಿಯಲು ಈ ಲೇಖನಿ ಓದಿ…

1307

ಕರ್ನಾಟಕದ ಸುದ್ದಿ ಮಾಧ್ಯಮಗಳಲ್ಲಿ ‘ಉದಯ ನ್ಯೂಸ್’ ವಾಹಿನಿಯು ಒಂದು ಕಾಲದಲ್ಲಿ ತುಂಬಾ ಹೆಸರು ಮಾಡಿತ್ತು.ಆದರೆ ಈಗ ಬಂದಿರುವ ಸುದ್ದಿವಾಹಿನಿಗಳಿಗೆ ಪೈಪೋಟಿ ಕೊಡಲಾಗದೆ ಈ ವಾಹಿನಿಯು ಈಗ ಮುಚ್ಚುವ ಸ್ಥಿತಿಗೆ ತಲುಪಿದೆ.

ಉದಯ ನ್ಯೂಸ್ ಸಿಬ್ಬಂದಿಗಳಿಗೆ ಸಂಚಕಾರ..!

ಕಳೆದ ಐದು ವರ್ಷಗಳಲ್ಲಿ 3,834.95 ಕೋಟಿ ನಿವ್ವಳ ಲಾಭ ಗಳಿಸಿದ ಸನ್ ನೆಟ್ವರ್ಕ್ ತನ್ನ ಅಂಗ ಸಂಸ್ಥೆ ‘ಉದಯ ನ್ಯೂಸ್’ನ್ನು ಮುಚ್ಚಲು ತೀರ್ಮಾನಿಸಿದೆ. ನಷ್ಟದ ಕಾರಣವನ್ನು ಮುಂದಿಟ್ಟ ಸಂಸ್ಥೆಯ ಮಾಲೀಕ ಕಲಾನಿಧಿ ಮಾರನ್ 73 ಸಿಬ್ಬಂದಿಗಳ ಉದ್ಯೋಗ ಖಾತ್ರಿಯನ್ನು ಕಿತ್ತುಕೊಳ್ಳಲು ಮೂರು ತಿಂಗಳ ಕಾಲಾವಕಾಶ ನಿಗದಿ ಮಾಡಿದ್ದಾರೆ. ಕಾರ್ಪೊರೇಟ್ ಭ್ರಮೆಯಲ್ಲಿ ಮಿಂದೇಳುತ್ತಿರುವ ದೇಶದಲ್ಲಿ, ಬೃಹತ್ ಕಾರ್ಪೊರೇಟ್ ಮಾಧ್ಯಮ ಸಂಸ್ಥೆಯೊಂದು ಹೇಗೆ ತನ್ನ ಸಿಬ್ಬಂದಿಗಳನ್ನು ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಸಾಕ್ಷಿಯಾಗಿದೆ.

ಕರ್ನಾಟಕದ ಮೊದಲ ಖಾಸಗಿ ಚಾನೆಲ್…

ಕರ್ನಾಟಕದ ಖಾಸಗಿ ಟಿವಿ ವಲಯಕ್ಕೆ ಮೊದಲು ಕಾಲಿಟ್ಟಿದ್ದು ಉದಯ ಟಿವಿ. ಸುಮಾರು 19 ವರ್ಷಗಳ ಹಿಂದೆ ರಾಜ್ಯದಲ್ಲಿ ಡಿಡಿ 1 ಹಾಗೂ ಚಂದನ ವಾಹಿನಿಗಳು ನೀಡುತ್ತಿದ್ದ ಮನೋರಂಜನೆಯನ್ನು ಸ್ಥಿತ್ಯಂತರಗೊಳಿಸಿದ್ದು ತಮಿಳುನಾಡು ಮೂಲದ ‘ಸನ್ ನೆಟ್ವರ್ಕ್’ ಮಾಧ್ಯಮ ಸಂಸ್ಥೆ. ಉದಯ ಟಿವಿ ಹೆಸರಿನಲ್ಲಿ ಅದು ಮೊದಲು ತನ್ನ ಕಾರ್ಯಾಚರಣೆ ಶುರು ಮಾಡುತ್ತಿದ್ದಂತೆ ಜನ ಕೂಡ ಹೊಸ ಮಾದರಿಯ ಮನೋರಂಜನೆಗೆ ಒಗ್ಗಿಕೊಂಡರು. ಅಲ್ಲಿಂದ ಸುಮಾರು ಒಂದೂವರೆ ದಶಕಗಳ ಕಾಲ ಕರ್ನಾಟಕದ ಮನೋರಂಜನಾ ಲೋಕದ ಅನಭಿಷಕ್ತ ದೊರೆಯಾಗಿ ಉದಯ ಟಿವಿ ಆಳ್ವಿಕೆ ನಡೆಸಿತು.

ಹೀಗಿರುವಾಗಲೇ, 2000ನೇ ಇಸವಿಯಲ್ಲಿ ನಟ ರಾಜ್ ಕುಮಾರ್ ಅಪಹರಣ ಪ್ರಕರಣ ನಡೆಯಿತು. ತನ್ನ ಬಳಿ ಇದ್ದ ಸುದ್ದಿ ವಾಹಿನಿಯ ಪರವಾನಗಿಯನ್ನು ಅನುಷ್ಠಾನಕ್ಕೆ ಇಳಿಸಲು ‘ಸನ್ ನೆಟ್ವರ್ಕ್’ ಮುಂದಾಯಿತು. ಹಾಗೆ ತರಾತುರಿಯಲ್ಲಿ ಆರಂಭಗೊಂಡಿದ್ದು ‘ಉದಯ ನ್ಯೂಸ್’. “ಅವತ್ತು ಹೆಚ್ಚಿನ ಸಿದ್ದತೆಗಳೂ ಇರಲಿಲ್ಲ.

ಉದಯ ಮನೋರಂಜನಾ ವಾಹಿನಿಯಲ್ಲಿದ್ದ ಸಿಬ್ಬಂದಿಗಳನ್ನೇ ಹೊಸ ನ್ಯೂಸ್ ಚಾನಲ್ಗೆ ವರ್ಗಾವಣೆ ಮಾಡಲಾಯಿತು. ತಾಂತ್ರಿಕ ಉಪಕರಣಗಳನ್ನು ಎರವಲು ಪಡೆಯಲಾಯಿತು. ಮೊನ್ನೆ ಮೊನ್ನೆವರೆಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಮಾಡಲು ಒದ್ದಾಡುತ್ತಿದ್ದೆವು. ಈಗಿರುವುದು 3 ವಿಡಿಯೋ ಎಡಿಟರ್ಗಳು, ಡೆಸ್ಕ್ನಲ್ಲಿ ಐವರು ಸಿಬ್ಬಂದಿ. ಕಳಪೆ ಮಟ್ಟದ ಸೌಕರ್ಯ ನೀಡಿ ರೇಟಿಂಗ್ ತನ್ನಿ ಎಂದರೆ ಹೇಗೆ ಸಾಧ್ಯ?” ಎನ್ನುತ್ತಾರೆ ಉದಯ ನ್ಯೂಸ್ ಹಿರಿಯ ಸಿಬ್ಬಂದಿಯೊಬ್ಬರು.

ಇವತ್ತಿಗೂ ಕಡಿಮೆ ಖರ್ಚಿನಲ್ಲಿ ನಡೆಯುತ್ತಿರುವ ಸುದ್ದಿವಾಹಿನಿ…

ಇವತ್ತಿಗೆ ಡಜನ್ ಸಂಖ್ಯೆ ಮುಟ್ಟಿರುವ ಕನ್ನಡದ ಸುದ್ದಿ ವಾಹಿನಿಗಳ ಪೈಕಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಕಾರ್ಯಚರಣೆ ನಡೆಸುತ್ತಿರುವುದು ‘ಉದಯ ನ್ಯೂಸ್’. ಇಲ್ಲಿನ ಆಂತರಿಕ ಮೂಲಗಳ ನೀಡಿರುವ ಮಾಹಿತಿ ಪ್ರಕಾರ, “ಪ್ರತಿ ತಿಂಗಳು ಸುದ್ದಿ ವಾಹಿನಿಗೆ ಖರ್ಚಾಗುತ್ತಿರುವುದು 25 ಲಕ್ಷ ರೂಪಾಯಿಗಳು. ಇದರಲ್ಲಿ ಸಂಸ್ಥೆಯಲ್ಲಿರುವ 73 ಸಿಬ್ಬಂದಿಗಳಿಗೆ ಸಂಬಳ ರೂಪದಲ್ಲಿ ವೆಚ್ಚ ಮಾಡುತ್ತಿದ್ದದ್ದು 13 ಲಕ್ಷ. ಜತೆಗೆ ಇದಕ್ಕೆ ಪ್ರತ್ಯೇಕವಾದ ಮಾರ್ಕೆಟಿಂಗ್ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ.”

ಚಾನಲ್ ಮುಚ್ಚುವ ಬಗ್ಗೆ ಸಂಸ್ಥೆ ಲೇಬರ್ ಕಮಿಷನರ್ ಗೆ ಬರೆದ ಪತ್ರ:-

ಕಳೆದ ನಾಲ್ಕು ವರ್ಷಗಳಿಂದ ‘ಉದಯ ನ್ಯೂಸ್’ ಮುಚ್ಚಲಾಗುತ್ತಂತೆ ಅನ್ನುವ ವರ್ತಮಾನ ಇಲ್ಲಿನ ಸಿಬ್ಬಂದಿಗಳಿಗೆ ಸಾಮಾನ್ಯ ಸಂಗತಿಯಾಗಿ ಬದಲಾಗಿತ್ತು. ಮೊದಲು ಬಾಯ್ಮಾತಿನಲ್ಲಿ, ಗಾಳಿ ಸುದ್ದಿ ರೂಪದಲ್ಲಿದ್ದ ಈ ಸುದ್ದಿ ಇತ್ತೀಚೆಗೆ ‘ಸನ್ ನೆಟ್ವರ್ಕ್’ ಕಡೆಯಿಂದ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮತ್ತು ಕಾರ್ಮಿಕ ಸಚಿವಾಲಯಕ್ಕೆ ಸಲ್ಲಿಸಿದ ‘ಫಾರ್ಮ್ ಕ್ಯೂ’ ರೂಪದಲ್ಲಿ ವಾಸ್ತವದ ಸ್ವರೂಪ ಪಡೆದುಕೊಂಡಿದೆ.

ಕಾರ್ಮಿಕ ವಿವಾದಗಳ ಕಾಯ್ದೆ ಪ್ರಕಾರ 50 ಜನ ಮೀರಿರುವ ಸಂಸ್ಥೆಯನ್ನು ಮುಚ್ಚುವ ಮುನ್ನ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕಿದೆ. ಇದನ್ನೀಗ ‘ಸನ್ ನೆಟ್ವರ್ಕ್’ ಪಾಲಿಸಿದೆ. ಜತೆಗೆ, ‘ಸಾಕಷ್ಟು ಬಂಡವಾಳ ಹೂಡಿಕೆ ಮಾಡಿದರೂ, ನಷ್ಟದಲ್ಲಿರುವ ಸಂಸ್ಥೆ’ಯನ್ನು ಮುಚ್ಚುವುದಾಗಿ ಕಾರಣವನ್ನೂ ನೀಡಿದೆ.

 “ಮಾರನ್ ದಂಪತಿ ಸಂಸ್ಥೆಯಿಂದ ಪಡೆದ ಸಂಬಳ, ಭತ್ಯೆಗಳಿಗೆ ಹೋಲಿಸಿದರೆ ಉದಯ ನ್ಯೂಸ್ ಕಾರ್ಯಾಚರಣೆಗೆ ಖರ್ಚಾಗುತ್ತಿರುವುದು ಅತ್ಯಂತ ಕಡಿಮೆ ಹಣ.

ಮಾರನ್ ಮಗಳ ಪಾಕೆಟ್ ಮನಿಯಲ್ಲಿ ಈ ವಾಹಿನಿಯನ್ನು ಮುನ್ನಡೆಸಬಹುದು,” ಎನ್ನುತ್ತಾರೆ ವಾಹಿನಿಯ ಜತೆ ಹಲವು ವರ್ಷಗಳ ಒಡನಾಟ ಹೊಂದಿರುವ ಪತ್ರಕರ್ತರೊಬ್ಬರು.

ಮುಂದೆ ಏನಾಗಬಹುದು…

2010ರಲ್ಲಿ ಕರ್ನಾಟಕದಲ್ಲಿಯೂ ಉದಯ ಟಿವಿ ಸಿಬ್ಬಂದಿ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದಿದ್ದರು. “ಆ ದಿನಗಳಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದೆವು. ನಮ್ಮ ನಾಯಕತ್ವವಹಿಸಿಕೊಂಡ ಕೆಲವರು ಕೊನೆಗೆ ಆಡಳಿತ ಮಂಡಳಿ ಜತೆ ಒಳ ಒಪ್ಪಂದ ಮಾಡಿಕೊಂಡು ಉದ್ಯೋಗಿಗಳನ್ನು ನಡು ನೀರಿನಲ್ಲಿ ಕೈಬಿಟ್ಟರು. ಹೀಗಾಗಿ ಈ ಬಾರಿ ಏನಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ.

ಈಗ ನೋಟಿಸ್ ನೀಡಿರುವುದನ್ನು ನೋಡಿದರೆ, ಆಡಳಿತ ಮಂಡಳಿ ಉದ್ಯೋಗಿಗಳ ಮುಂದಿನ ನಡೆ ಏನು ಎಂಬುದನ್ನು ಗಮನಿಸುವ ತಂತ್ರವೂ ಆಗಿರಬಹುದು. ಇಲ್ಲಿ 73 ಸಿಬ್ಬಂದಿಗಳಿದ್ದರೂ ಪೂರ್ಣ ಪ್ರಮಾಣದ ಸಿಬ್ಬಂದಿಗಳ ಸಂಖ್ಯೆ 20 ದಾಟುವುದಿಲ್ಲ,” ಎನ್ನುತ್ತಾರೆ ಉಯದ ನ್ಯೂಸ್ ನ ಮತ್ತೊಬ್ಬ ಹಿರಿಯ ಉದ್ಯೋಗಿ ಒಬ್ಬರು.

ಒಂದು ಬೃಹತ್ ಕಾರ್ಪೊರೇಟ್ ಸಂಸ್ಥೆ, ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭವನ್ನು ಘೋಷಿಸಿಕೊಂಡು ಬರುತ್ತಿರುವ ಸಾಮ್ರಾಜ್ಯ, ಕೋಟಿ ಲೆಕ್ಕದಲ್ಲಿ ಸಂಬಳ, ಭತ್ಯೆಗಳನ್ನು ಪಡೆಯುವ ಅದರ ಮಾಲೀಕರು ಹೀಗೆ ಕೆಳಹಂತದ ವಿಚಾರದಲ್ಲಿ ಹೀನಾಯವಾಗಿ ನಡೆದುಕೊಳ್ಳುತ್ತಾರೆ ಎಂಬುದನ್ನು ಈ ಬೆಳವಣಿಗೆ ಸ್ಪಷ್ಟವಾಗಿ ಬಿಡಿಸಿಡುತ್ತಿದೆ.

ಸುದ್ದಿವಲಯದ ಸಹೋದ್ಯೋಗಿಗಳ ಸಂಕಷ್ಟಕ್ಕೆ ಸ್ಪಂದಿಸುವವರು ಯಾರು..?

ಊರ ತುಂಬಾ ಅನ್ಯಾಯಗಳು ನಡೆದಾಗ ಧ್ವನಿ ಎತ್ತುತ್ತೀವಿ ಎನ್ನುವ ಮಾಧ್ಯಮಗಳು, ತಮ್ಮದೇ ವಲಯದ ಸಹೋದ್ಯೋಗಿಗಳು ಸಂಕಷ್ಟಕ್ಕೆ ಸಿಕ್ಕಾಗ ಮೌನಕ್ಕೆ ಶರಣಾಗುತ್ತವೆ. ಇದಕ್ಕಿಂತ ಕ್ರೂರವಾದುದ್ದು ಏನೆಂದರೆ, ಒಂದು ವೇಳೆ ಅನ್ಯಾಯವನ್ನು ಪ್ರಶ್ನಿಸಿದರೆ, ಅಂತಹ ಪತ್ರಕರ್ತರನ್ನು ಹಣಿಯುವ ಮಟ್ಟಕ್ಕೂ ಇಳಿದು ಬಿಡುತ್ತಾರೆ. ಇಂತಹ ಅಸಹ್ಯಕರ ಇತಿಹಾಸಗಳನ್ನು ಹೊಂದಿರುವ ಕನ್ನಡ ಸುದ್ದಿ ವಾಹಿನಿಗಳ ಲೋಕದಲ್ಲಿ ಈಗ ಅಭದ್ರತೆಯ ಭಾವಗಳನ್ನು ‘ಉದಯ ನ್ಯೂಸ್’ ಸಿಬ್ಬಂದಿಗಳು ಎದುರಿಸುತ್ತಿದ್ದಾರೆ.

ಮೂಲ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ, ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(20 ಏಪ್ರಿಲ್, 2019) ಜೀವನದಲ್ಲಿ ಒತ್ತಡದ ಮನೋಭಾವವನ್ನು ತಪ್ಪಿಸಿ ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ….

  • ಜೀವನಶೈಲಿ

    ಊಟದ ನಂತರ ತಾಂಬೂಲ ಸೇವನೆಯು ನಿಮ್ಮ ಆರೋಗ್ಯಕ್ಕೆ ಒಳೆಯದಾ.?. ಕೆಟ್ಟದಾ..? ತಿಳಿಯಲು ಈ ಲೇಖನ ಓದಿ …

    ಊಟದ ನಂತರ ತಾಂಬೂಲ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಏನು ಲಾಭ: ವೀಳ್ಯದೆಲೆ ಅಥವಾ ವೀಳ್ಯೆಲೆ ಅನೇಕ ಔಷಧಿ ಗುಣಗಳಿಂದ ಕೂಡಿದ್ದು, ಆಯುರ್ವೇದ ವೈದ್ಯರು ಇದನ್ನು ಅಮೃತ ಸಮಾನವಾದ ವನಸ್ಪತಿ ಎಂದು ಗುರುತಿಸಿದ್ದಾರೆ.

  • ಸುದ್ದಿ

    ನಿಮ್ಮ ಅಂಗೈನಲ್ಲಿ M ರೀತಿಯ ಚಿಹ್ನೆ ಇದ್ದರೆ ನೀಮ್ಮ ವ್ಯಕ್ತಿತ್ವ ಎಂತಹದ್ದು ಗೊತ್ತಾ? ಹೇಗಿರುತ್ತೆ ಜೀವನ ನೋಡಿ…!

    ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಗುರುತಿಸುವ, ಭವಿಷ್ಯ ನುಡಿಯುವ ಕಲೆ, ಇದನ್ನು ಹಸ್ತದ ಓದು ಅಥವಾ ಕೈರೋಲಜಿ ಎಂದು ಕೂಡಾ ಕರೆಯಲಾಗುತ್ತದೆ. ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ, ಭಾರತದಲ್ಲಿ ಕೂಡ ಇದೆ ತರಹದ ಹಲವಾರು ಪದ್ದತಿಗಳು ವಿವಿಧ ಪ್ರದೇಶಗಳಲ್ಲಿ ಲಭ್ಯವಿದೆ. ಇಷ್ಟಕ್ಕೂ ಈ ಹಸ್ತದ ರೇಖೆಗಳನ್ನು ಗುರುತಿಸಿ ಹೇಳುವ ಪದ್ದತಿಯನ್ನು ಹಲವರು ನಂಬುತ್ತಾರೆ, ಇನ್ನು ಕೆಲವರು ಬೊಗಳೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ, ಆದರೆ ಇದು ಅವರವರ ಅನುಭವ ಹಾಗು…

  • ಸುದ್ದಿ

    ರೇಸಿಂಗ್ ಪ್ರಿಯರಿಗೆ ‘ಅಪಾಚಿ RR 310’ 2.27 ಲಕ್ಷ ರೂ. ಮೌಲ್ಯದ ಟಿವಿಎಸ್ ಬೈಕ್ ಬಿಡುಗಡೆ…!

    ಹೊಸೂರು: ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್ ರೇಸಿಂಗ್ ಸ್ಪರ್ಧೆಗೆ ಅನುಕೂಲಕರವಾದ ರೇಸ್ ಟ್ಯೂನ್ಡ್(ಆರ್ ಟಿ) ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡ ನೂತನ ಟಿವಿಎಸ್ ಅಪಾಚಿ ಆರ್ ಆರ್ 310 ಅನ್ನು ಬಿಡುಗಡೆಗೊಳಿಸಿದೆ. ಇದರ ಬೆಲೆ 2.27 ಲಕ್ಷ ರೂ.ಗಳಾಗಿದ್ದು, ಇದು ಸುಧಾರಿತ ಹಾಗೂ ಟಿವಿಎಸ್ ರೇಸಿಂಗ್‍ ವಾಹನಗಳ ಶ್ರೀಮಂತ ಪರಂಪರೆಯಿಂದ ತಯಾರಾದ ವಾಹನವಾಗಿದೆ. ಇದು ಗ್ರಾಹಕರ ದ್ವಿಚಕ್ರ ವಾಹನ ಚಲಾವಣೆಯ ಅನುಭವವನ್ನು ಹೆಚ್ಚಿಸುತ್ತದೆ. ಹಾಗೂ, ಅತಿಯಾದ ವೇಗದಲ್ಲಿ ಚಲಿಸುವಾಗ, ಮುಖ್ಯವಾಗಿ ತಿರುವುಗಳಲ್ಲಿ ವಾಹನದ ಸ್ಥಿರತೆಯನ್ನು…

  • ಆರೋಗ್ಯ

    ಬೆಳಿಗ್ಗೆದ್ದ ತಕ್ಷಣ ಟೀ ಕುಡಿಯುವ ಅಭ್ಯಾಸವಿದ್ರೆ ಇವತ್ತೇ ಬಿಟ್ಬಿಡಿ..!ಯಾಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ಬೆಳಿಗ್ಗೆದ್ದ ತಕ್ಷಣ ಟೀ ಕುಡಿಯುವ ಅಭ್ಯಾಸವಿದೆಯೇ? ಅದೂ ಖಾಲಿಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ?ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ಭಾರತದ ಹಲವು ಕಡೆಗಳಲ್ಲಿ ಒಂದು ಸಂಪ್ರದಾಯವೇ ಆಗಿದೆ. ಹಿಂದೆ ಬ್ರಿಟಿಷರು ಭಾರತದಲ್ಲಿದ್ದಾಗ ಬೆಡ್ ಟೀ ಎಂದು ಟೀ ಹೀರುತ್ತಿದ್ದರು. ಟೀ ಸೇವನೆಯೂ ಒಂದು ವ್ಯಸನವಾಗಿದ್ದು ಹೀಗೇ ಮುಂಜಾನೆಯ ಪ್ರಥಮ ಆಹಾರವಾಗಿ ಟೀ ಸೇವಿಸುವ ಅಭ್ಯಾಸವಿರುವವರಿಗೆ ಇದು ವ್ಯಸನವೇ ಆಗಿ ಹೋಗಿರುತ್ತದೆ. ಟೀ ಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಟ್ಯಾನಿನ್ ಎಂಬ ಪೋಷಕಾಂಶಗಳು ಅಥವಾ ಕ್ಯಾಟೆಚಿನ್ ಎಂಬ ಕಣಗಳು ಜೀವರಾಸಾಯನಿಕ ಕ್ರಿಯೆಯನ್ನು…

  • ಸುದ್ದಿ

    ಅಳಿಯ ಚಿರು ಸರ್ಜಾ ಕುರಿತು ಅರ್ಜುನ್ ಸರ್ಜಾ ಅವರ ನೋವಿನ ಮಾತು.

    ನಟ ಚಿರಂಜೀವಿ ಸರ್ಜಾ ಅವರ ಹಠಾತ್‌ ನಿಧನದಿಂದ ಇಡೀ ಚಿತ್ರರಂಗವೇ ಕಂಬನಿಗರೆದಿದೆ. ಚಿಕ್ಕ ವಯಸ್ಸಿನಲ್ಲೇ ಅವರು ನಿಧನರಾಗಿದ್ದು ನಿಜಕ್ಕೂ ದುರದೃಷ್ಟಕರ. ಸರ್ಜಾ ಕುಟುಂಬದ ಮುದ್ದಿನ ಮಗನಾಗಿದ್ದ ಚಿರು ಅವರನ್ನು ಕಂಡರೆ ಅವರ ಮಾವ, ನಟ ಅರ್ಜುನ್ ಸರ್ಜಾ ಅವರಿಗೆ ಅಪಾರ ಪ್ರೀತಿ. ಇದೀಗ ತಮ್ಮ ಪ್ರೀತಿಯ ಅಳಿಯನ ಕುರಿತು ನೋವಿನ ಮಾತೊಂದನ್ನು ಹೇಳಿಕೊಂಡಿದ್ದಾರೆ ಅರ್ಜುನ್. ಜೂನ್‌ 7ರ ಭಾನುವಾರ ಮಧ್ಯಾಹ್ನ ಚಿರು ನಿಧನರಾದಾಗ ಅರ್ಜುನ್‌ ಚೆನ್ನೈನಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಅವರು, ಕುಟುಂಬದೊಂದಿಗೆ ಹೊರಟು ಬಂದಿದ್ದರು. ತಮ್ಮ ಕಣ್ಣ ಮುಂದೆ ಬೆಳೆದಿದ್ದ…