ಸುದ್ದಿ

ಕರ್ನಾಟಕಕ್ಕೆ ಮೊಟ್ಟ ಮೊದಲ ಬಾರಿಗೆ ಸಿಗಲಿದೆ ಎಲೆಕ್ಟ್ರಿಕ್ ಲೋಕೋ ಶೆಡ್: ಕೆ ಆರ್ ಪುರಂ ರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆ….!

71

ಸೌತ್ ವೆಸ್ಟ್ರನ್ ರೈಲ್ವೆ ವಲಯದಲ್ಲಿ ರೈಲು ಹಳಿಗಳ ವಿದ್ಯುತೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಇಂಜಿನ್ ಗಳನ್ನು ನಿರ್ವಹಣೆ ಮಾಡುವ ವ್ಯವಸ್ಥೆ ಪ್ರಾಮುಖ್ಯತೆ ಪಡೆಯಲಿದೆ.

ಪ್ರಸ್ತುತ ಕೆ.ಆರ್ ಪುರಂ ನಲ್ಲಿರುವ ಡೀಸೆಲ್ ಲೋಕೋ ಶೆಡ್ ನ್ನು ಎಲೆಕ್ಟ್ರಿಕ್ ಲೋಕೋ ಶೆಡ್ ನ್ನಾಗಿ ಮಾರ್ಪಾಡು ಮಾಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಲೋಕೋ ಶೆಡ್ ಸ್ಥಾಪನೆಯಾಗಲಿದೆ.
ಬೆಂಗಳೂರು ಮೂಲದ ಬಾಲಾಜಿ ಬಿಲ್ಡರ್ಸ್ ಗೆ ಈ ಗುತ್ತಿಗೆ ಲಭ್ಯವಾಗಿದ್ದು, ವರ್ಷಾಂತ್ಯ ಅಥವಾ 2020 ರ ಜನವರಿಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

1983 ರಲ್ಲಿ ಜಾಫರ್ ಶರೀಫ್ ರೈಲ್ವೆ ಸಚಿವರಾಗಿದ್ದಾಗ ಕೆಆರ್ ಪುರಂ ಗೆ ಡೀಸೆಲ್ ಲೊಕೋ ಶೆಡ್ ಸ್ಥಾಪನೆಯಾಗಿತ್ತು. ಡಿಸೆಲ್ ಶೆಡ್ ಗೆ ಲಭ್ಯವಿರುವ ಮೂಲಸೌಕರ್ಯದ ಶೇ.80 ರಷ್ಟನ್ನು ಎಲೆಕ್ಟ್ರಿಕ್ ಶೆಡ್ ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್ ಬಿ.ಮುರಳಿ ಕೃಷ್ಣ ಅವರು ಡಿಸೆಲ್ ಲೋಕೋ ಶೆಡ್ ಗೆ ಭೇಟಿ ನೀಡಿದ್ದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಎಲೆಟ್ರಿಕ್ ಲೋಕೋ ಶೆಡ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಶೇ.20 ರಷ್ಟು ಮೂಲಸೌಲರ್ಯವನ್ನು ಹೊಸದಾಗಿ ನಿರ್ಮಿಸಬೇಕಿದ್ದು, ಇದಕ್ಕಾಗಿ ಒಟ್ತಾರೆ 10 ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಮುರಳಿ ಕೃಷ್ಣ ಹೇಳಿದ್ದಾರೆ. ಎರಡು ಹೊಸ ಶೆಡ್ ಗಳು ನಿರ್ಮಾಣವಾಗಲಿದೆ. ಓವರ್ ಹೆಡ್ ಲೈಟ್, ಓವರ್ ಹೆಡ್ ಲೈನ್, ಟ್ರಾಕ್ಷನ್ ಮೋಟಾರ್, ಟ್ರಾನ್ಸ್ಫಾರ್ಮರ್, ಇಂಜಿನ್ ಗಳನ್ನು ಮೇಲೆತ್ತುವ 5 ಟನ್ ಕ್ರೇನ್ ವಿಭಾಗಗಳು ಸ್ಥಾಪನೆಯಾಗಲಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ನೆಹರೂ, ಇಂದಿರಾಗಾಂಧಿ ನಂತರ ಸ್ಪಷ್ಟ ಬಹುಮತ ಪಡೆದ ಮೊದಲ ಪ್ರಧಾನಿ ನರೇಂದ್ರ ಮೋದಿ…!

    ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 302 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮಾಜಿ ಪ್ರಧಾನಿಗಳಾದ ದಿವಂಗತ ಜವಹರ್ ಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಬಳಿಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಪಡೆಯುತ್ತಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ. ಹೌದು. 48 ವರ್ಷಗಳ ಬಳಿಕ ಸ್ಪಷ್ಟ ಬಹುಮತದ ಬಳಿಕ ಮೋದಿ ಅವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ದೇಶದೆಲ್ಲೆಡೆ ಎದ್ದಿದ್ದ ಮೋದಿ ಸುನಾಮಿಗೆ…

  • ಸುದ್ದಿ

    ನಂದಿ ಬೆಟ್ಟಕ್ಕೆ ರೋಪ್ ವೇ ,ಬೆಂಗಳೂರಿಗೆ ಮೆಟ್ರೋ ನಕ್ಷೆ ರೆಡಿ ಮಾಡಿದ್ದ ಶಂಕರ್ ನಾಗ್. ಈ ಸ್ಟೋರಿ ನೋಡಿ.

    ನವೆಂಬರ್, 1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಹುಟ್ಟಿದರು. ನಕ್ಷತ್ರ ನಾಮ’ಅವಿನಾಶ’.ಹೀಗೆಂದರೆ ವಿನಾಶವಿಲ್ಲದವನು ಎಂದರ್ಥ.ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಶಂಕರ್ ನಾಗ್ ತನ್ನ ವಿದ್ಯಾಬ್ಯಾಸದ ನಂತರ ಮುಂಬೈಗೆ ತೆರಳಿದರು. ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕಷಿ೯ತರಾದ ಶಂಕರ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ…

  • ಸೌಂದರ್ಯ

    ನೀವು ನಿಜವೆಂದು ನಂಬಿರುವ ಸೌಂದರ್ಯದ 5 ಟಿಪ್ಸ್ ಶುದ್ಧ ಸುಳ್ಳು,..ಅದೇನೆಂದು ತಿಳಿಯಿರಿ ..?

    ಸುಂದರವಾಗಿ ಕಾಣಲು ಎಲ್ಲರು ಇಷ್ಟಪಡ್ತಾರೆ. ಅದಕ್ಕಾಗಿ ಎಲ್ಲರೂ ಒಂದಲ್ಲಾ ಒಂದು ಟಿಪ್ಸ್ ಫಾಲೋ ಮಾಡ್ತಾರೆ. ಆದರೆ ಸರಿಯಾದ ಜ್ಞಾನವಿಲ್ಲದೇ ಜನರು ಈ 5 ಟಿಪ್ಸ್ ಅನ್ನು ನಂಬಿ ಇದನ್ನು ಅನುಸರಿಸುತ್ತಾರೆ. ಆದರೆ ಈ 5 ಟಿಪ್ಸ್ ಈಗ ಶುದ್ಧ ಸುಳ್ಳು ಎಂದು ತಿಳಿದುಬಂದಿದೆ. 1.ನಿಮ್ಮಸ್ಕಿನ್ ನನ್ನು ನಿಂಬೆಹಣ್ಣಿನಿಂದ ಉಜ್ಜುವುದು:  ಜನರು ಪಿಂಪಲ್ ಫ್ರೀ ತ್ವಚೆ ಪಡೆಯಲು ನಿಂಬೆಹಣ್ಣಿನಿಂದ ಸ್ಕ್ರಬ್ಬಿಂಗ್ ಮಾಡಿಕೊಳ್ಳುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ನಿಮ್ಮ ತ್ವಚೆಗೆ ಹಾನಿಯಾಗುತ್ತದೆ. ಏಕೆಂದರೆ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆ್ಯಸಿಡ್ ಇರುತ್ತದೆ….

  • ಜೀವನಶೈಲಿ

    ನಿಮ್ಮ ‘ಬಾತ್ ರೂಂ’ ಸ್ವಚ್ಛವಾಗಿದ್ದರೆ ದೂರವಾಗುತ್ತೆ ನಿಮ್ಮ ಬಡತನ ..!ತಿಳಿಯಲು ಈ ಲೇಖನ ಓದಿ …

    ವಾಸ್ತುಪ್ರಕಾರ ಮನೆಯ ಸಭಾಂಗಣ, ಕೋಣೆ, ಅಡುಗೆ ಮನೆ, ಶೌಚಾಲಯ ಎಲ್ಲವೂ ನಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೊಠಡಿ ಹಾಗೂ ಮನೆಯಲ್ಲಿರುವ ಪ್ರತಿಯೊಂದು ವಸ್ತು ಮನೆಯ ಸುಖ-ಶಾಂತಿ, ಆರ್ಥಿಕ ಪರಿಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ.

  • ವಿಶೇಷ ಲೇಖನ

    ಸಣ್ಣ ಸಣ್ಣ ವಿಚಾರಕ್ಕೆ ಹೆಚ್ಚು ಕಣ್ಣೀರು ಹಾಕುವವರು ಇದನ್ನೊಮ್ಮೆ ಓದಿ…!

    ನಮ್ಮ ಜನರು ಅಳುವವರನ್ನ ದುರ್ಬಲರು ಕೈಲಾಗದವರು ಎಂದು ತಿಳಿಯುತ್ತಾರೆ ಅದು ತಪ್ಪು ಎಂಬುದು ಕೆಲವರಿಗೆ ಮಾತ್ರ ಗೊತ್ತು. ಇನ್ನು ಕೆಲವರು ಆಳುವವರಿಗೆ ಯಾವಾಗಲು ಬೈಯುತ್ತಾರೆ, ಸಣ್ಣ ಸಣ್ಣ ವಿಚಾರಕ್ಕೆ ಆಳುವವರಿಗೆ ಕಣ್ಣಿನ ತುದಿಯಲ್ಲೇ ಇರತ್ತೆ ನೀರು, ನಿನ್ನ ಕಣ್ಣಲ್ಲಿ ಕಾವೇರಿನೇ ಇದಾಳೆ. ಅಳುಮುಂಜಿ ನೀನು, ಹುಡುಗರು ಅತ್ತರೆ ನೀನೇನು ಹೆಂಗುಸ್ರುತರ ಅಳ್ತಿಯಲ ಅಂತ ಹೇಳುತ್ತಾರೆ ಹೀಗೆ ವಿವಿಧ ಬಗೆಯ ನಾಮಕರಣ ಮಾಡಿ ಆಳುವವರಿಗೆ ಮುಜುಗರವಾಗುವಂತೆ ಮಾಡುತ್ತಾರೆ.

  • ಸುದ್ದಿ

    ‘ನಿಜವಾದ ಗಂಡಸು ಎಂದು ಪ್ರೂವ್ ಮಾಡಲು ಮದ್ಯ ಬೇಕಿಲ್ಲ’ : ಕಿಚ್ಚ ಸುದೀಪ್ ಟಾಂಗ್…..!

    ಸ್ಯಾಂಡಲ್ ವುಡ್ ನ ಮಾಣಿಕ್ಯ ಅಭಿನಯ ಚಕ್ರವರ್ತಿ ಸೋಷಿಯಲ್​​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​​. ಅಲ್ಲಿ ಫ್ಯಾನ್ಸ್​​ ಜೊತೆ ನಿರಂತ ಟಚ್​​ನಲ್ಲಿರುತ್ತಾರೆ. ಸುದೀಪ್ ತಮ್ಮ ಸಿನಿಮಾಗಳ ಮಾಹಿತಿಗಳ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡೋದೆ ಎಲ್ಲಾ ಅಲ್ಲೆ. ಇದೀಗ ಕಿಚ್ಚ ಪೋಸ್ಟ್ ಮಾಡಿರುವ ಎರಡು ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.ಯಾಕಂದ್ರೆ ಈ ಟ್ವೀಟ್​​​ನಲ್ಲಿ ಖಡಕ್ ಆಗಿ ಒಂದು ಸಾಲನ್ನು ಪೋಸ್ಟ್ ಮಾಡುವ ಮೂಲಕ ಯಾರಿಗೋ ಸರಿಯಾಗಿ ಟಾಂಗ್ ಕೊಟ್ಟಹಾಗೆ ಇದೆ. ಸಾಮಾನ್ಯವಾಗಿ ಸಿನಿಮಾಗಳ ವಿಚಾರವನ್ನು ಮಾತ್ರ ಟ್ವೀಟ್ ಮಾಡೋ ಕಿಚ್ಚನ…