ವ್ಯಕ್ತಿ ವಿಶೇಷಣ

ಕನ್ನಡ ಭಾಷೆಯಲ್ಲೇ2 ಸಾವಿರ ತೀರ್ಪು ನೀಡಿದ ‘ಮಿಟ್ಟಲಕೋಡ ‘ ಭಾಷಾ ಪ್ರೇಮದ ಬಗ್ಗೆ ನಿಮಗೆಷ್ಟು ಗೊತ್ತು..?ತಿಳಿಯಲು ಈ ಲೇಖನ ಓದಿ…

137

ನ್ಯಾಯಾಲಯಗಳು ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವ ನಿಟ್ಟಿನಲ್ಲಿ ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲೇ ಪ್ರಕರಣಗಳ ತೀರ್ಪು ನೀಡಬೇಕು ಎಂದು ಇತ್ತೀಚೆಗಷ್ಟೇ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಹೇಳಿದ್ದರು.

ರಾಷ್ಟ್ರಪತಿಗಳ ಈ ಹೇಳಿಕೆಗೆ ಪೂರಕ ಎನ್ನುವಂತೆ ತಾವು ನ್ಯಾಯಾಧೀಶರಾಗಿದ್ದ 28 ವರ್ಷಗಳಲ್ಲಿ 2000ಕ್ಕೂ ಅಧಿಕ ಪ್ರಕರಣಗಳ
ತೀರ್ಪುಗಳನ್ನು ಕನ್ನಡ ಭಾಷೆಯಲ್ಲೇ ನೀಡಿ, ನ್ಯಾಯಾಂಗ ಕ್ಷೇತ್ರದಲ್ಲೂ ತಮ್ಮ ಕನ್ನಡ ಪ್ರೀತಿ ಮೆರೆದಿ ದ್ದಾರೆ ನಿವೃತ್ತ ನ್ಯಾ.ಎಸ್‌.ಎಚ್‌. ಮಿಟ್ಟಲಕೋಡ ಅವರು… ಮೂಲತಃ ಧಾರವಾಡದವರೇ ಆದ ನ್ಯಾ.ಮಿಟ್ಟಲಕೋಡ ಅವರು ಪ್ರಾಥಮಿಕ ಶಾಲೆಯಲ್ಲಿದ್ದಾಗಿನಿಂದಲೂ ತಮ್ಮ ಕನ್ನಡ ಪ್ರೀತಿಯನ್ನು ಆಯ್ಕೆ ಮಾಡಿಕೊಂಡ ವಕೀಲ ವೃತ್ತಿ, ನಂತರ ನ್ಯಾಯಾಧೀಶರಾಗಿ ನೀಡುವ ತೀರ್ಪುಗಳಲ್ಲೂ ತುಂಬಿ “ಕನ್ನಡ ಕಾನೂನು ಸಾಹಿತ್ಯ’ ಎನ್ನುವ ಹೊಸ ಪ್ರಕಾರವೊಂದರ ಹುಟ್ಟಿಗೂ ಕಾರಣರಾಗಿದ್ದಾರೆ.
ದಾವಣಗೆರೆಯಲ್ಲಿ ಸಾವಿರ:-

 ಶಿವಮೊಗ್ಗ, ಕಾರವಾರ, ಚಿತ್ರದುರ್ಗ, ಕೊಪ್ಪಳ ಸೇರಿದಂತೆ ಅನೇಕ ಕಡೆ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲೂ ಕನ್ನಡ ತೀರ್ಪು ನೀಡುತ್ತಿದ್ದ ಅವರಿಗೆ ನ್ಯಾಯಾಲಯಗಳಲ್ಲಿನ ಶೀಘ್ರ ಲಿಪಿಕಾರರು ಮತ್ತು ಬೆರಳಚ್ಚುಗಾರರಾಗಿ ಸೇವೆ ಸಲ್ಲಿಸುತ್ತಿದ್ದ ನೌಕರರ ಕೊರತೆ ಇತ್ತು. ಹೀಗಾಗಿ ಕನ್ನಡದಲ್ಲಿ ತೀರ್ಪು ಪ್ರಕಟಿಸಲು ತಡಕಾಡಬೇಕಿತ್ತು.

ಕೊನೆಗೆ ಒಂದೊಂದು ತೀರ್ಪುಗಳನ್ನು ಸುದೀರ್ಘ‌ವಾಗಿ ಬರೆಯಬೇಕಿದ್ದರಿಂದ ಕಚೇರಿ ಅವಧಿ ಮುಗಿಸಿ ಟೈಪ್‌ವೈಟರ್‌ನ್ನು ತಮ್ಮ ಮನೆಗೆ ತರಿಸಿಕೊಂಡು ತಡರಾತ್ರಿವರೆಗೂ ಕುಳಿತು ಕಷ್ಟವಾದರೂ ತೀರ್ಪಿನ ಪ್ರತಿ ಕನ್ನಡದಲ್ಲೇ ಪೂರ್ಣಗೊಳಿಸುತ್ತಿದ್ದರು.

ಹೈಕೋರ್ಟ್‌ನಲ್ಲೂ ಬರಲಿ:-

ಜೆಎಂಎಫ್‌ಸಿ ಮತ್ತು ಜಿಲ್ಲಾ ಕೋರ್ಟ್‌ಗಳಲ್ಲಿ ಕರ್ನಾಟಕ ಏಕೀಕರಣದ ನಂತರ ಕನ್ನಡ ಭಾಷೆಯಲ್ಲಿ ತೀರ್ಪು ನೀಡಲು ಸರ್ಕಾರ ಅನುಮತಿ ನೀಡಿತು.

ಆದರೆ ಇಂದಿಗೂ ಪರಿಪೂರ್ಣವಾಗಿ ಇದು ಜಾರಿಯಾಗಿಲ್ಲ. ಇನ್ನು ಹೈಕೋರ್ಟ್‌ನಲ್ಲಿ ಸದ್ಯಕ್ಕೆ ಕನ್ನಡದಲ್ಲಿ ಪ್ರಕರಣಗಳ ದಾಖಲೆಗಳನ್ನು ಸಲ್ಲಿಸಲು ಅವಕಾಶವಿಲ್ಲ. ಆದರೆ ಇಂಗ್ಲಿಷ್‌ ಮೂಲ ದಾಖಲೆ ಜೊತೆಗೆ ಕನ್ನಡದ ದಾಖಲೆ ಪ್ರತಿಯೊಂದನ್ನು ಸಲ್ಲಿಸಬಹುದು ಅಷ್ಟೇ. ಹೈಕೋರ್ಟ್‌ ನ್ಯಾಯಾಧೀಶರು ಹೊರ ರಾಜ್ಯಗಳಿಂದ ಬಂದವರಾಗಿರುವುದರಿಂದ ಇದು ಇಂಗ್ಲಿಷ್‌ನಲ್ಲೇ ಇರಬೇಕು ಎನ್ನುವ ನಿಯಮವಿದೆ.
ಕನ್ನಡದಲ್ಲೇ ಮೊದಲ ತೀರ್ಪು:-
1977ರಲ್ಲಿ ಧಾರವಾಡದ ಸರ್‌ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಮುಗಿಸಿ ವಕೀಲಿ ವೃತ್ತಿ ಆರಂಭಿಸಿದ ಅವರು, 1985ರಲ್ಲಿ ಚಿಕ್ಕನಾಯಕನಹಳ್ಳಿ ಮುನ್ಸಿಫ್‌-ಮ್ಯಾಜಿಸ್ಟ್ರೇಟ್‌ ಆದರು. ನ್ಯಾಯಾಧೀಶರಾಗಿ ತಮ್ಮ ಎದುರಿಗೆ ಬಂದ ಮೊದಲ ಪ್ರಕರಣದ ತೀರ್ಪನ್ನು ಕನ್ನಡದಲ್ಲೇ ಪ್ರಕಟಿಸಿದರು. ನಂತರ ಅಥಣಿ, ಸೊರಬ, ಬಂಟ್ವಾಳ, ಸಾಗರದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾಗಲೂ ಕನ್ನಡ ಪ್ರೀತಿ ಮುಂದುವರಿಯಿತು.

ಕ್ರಿಮಿನಲ್‌, ಕಂದಾಯ, ಸಿವಿಲ್‌, ತೆರಿಗೆ ಇಲಾಖೆ, ಸಹಕಾರ ಇಲಾಖೆಗೆ  ಸಂಬಂಧಿಸಿದ ಎಲ್ಲಾ ಬಗೆಯ ಪ್ರಕರಣಗಳ ತೀರ್ಪು ಕನ್ನಡದಲ್ಲಿ ನೀಡಿದ್ದು ಇವರ ಕನ್ನಡ ಪ್ರೀತಿಗೆ ಸಾಕ್ಷಿ ಕಾನೂನು ಕ್ಷೇತ್ರದ ತೀರ್ಪು ಗಳು ಸ್ಥಳೀಯ ಭಾಷೆಯಲ್ಲೇ ಬಂದರೆ ನ್ಯಾಯ ಕೇಳಲು ಬಂದ ವರಿಗೂ ತಮ್ಮ ಪ್ರಕರಣದ ಸಮಗ್ರ ಮಾಹಿತಿ ಲಭಿಸುತ್ತದೆ. ಜೊತೆಗೆ ಕನ್ನಡ ಕಾನೂನು ಸಾಹಿತ್ಯವೂ ವೃದ್ಧಿಯಾಗುತ್ತದೆ. 
 ನ್ಯಾ.ಎಸ್‌.ಎಚ್‌. ಮಿಟ್ಟಲಕೋಡ ನಿವೃತ್ತ ನ್ಯಾಯಾಧೀಶರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹೆಣ್ಣು ಮಗು ಭವಿಷ್ಯಕ್ಕೆ ಕಂಟಕವೆಂದ ಜ್ಯೋತಿಷಿ; ಮಗುವನ್ನೇ ಕೊಂದ ಅಪ್ಪ…!

    ಚಿಕ್ಕಮಗಳೂರು: ಹೆಣ್ಣು ಮಗು ಭವಿಷ್ಯಕ್ಕೆ ಕಂಟಕ ಎಂದು ಹೇಳಿದ್ದ ಜ್ಯೋತಿಷಿಯೊಬ್ಬನ ಮಾತು ಕೇಳಿ 1.5 ತಿಂಗಳ ಹೆಣ್ಣು ಹಸುಗೂಸನ್ನು ಸ್ವತಃ ತಂದೆಯೇ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಬೂಚೇನಹಳ್ಳಿ ಕಾವಲ್ನಲ್ಲಿ ನವಜಾತ ಹೆಣ್ಣು ಶಿಶುವನ್ನು ಹತ್ಯೆ ಮಾಡಿದ ಘಟ‌ನೆ ನಡೆದಿದೆ. 27 ವರ್ಷದ ಮಂಜುನಾಥ್‌ ನವಜಾತ ಕಂದಮ್ಮನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಹೆಣ್ಣು ಮಗು ಭವಿಷ್ಯಕ್ಕೆ ಕಂಟಕ ಎಂದು ಜ್ಯೋತಿಷಿ ಹೇಳಿದ್ದರಿಂದ ಅದನ್ನು ಕುರುಡಾಗಿ ನಂಬಿದ ತಂದೆ ಮಗುವನ್ನು ಕತ್ತು…

  • baby
    inspirational, Motivation

    ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ತಿಳಿದು ಕೊಳ್ಳಿ

    ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ತಿಳಿದು ಕೊಳ್ಳಿ
    ನಿಮ್ಮ ಮಗಳು ಅಥವಾ ಮಗ ಚಿಕ್ಕಪ್ಪ ಸೇರಿದಂತೆ ಯಾವುದೇ ಪರಿಸ್ಥಿತಿಯಲ್ಲಿ ಯಾರ ಮಡಿಲಲ್ಲೂ ಕುಳಿತುಕೊಳ್ಳಬೇಡಿ ಎಂದು ಎಚ್ಚರಿಸಿ

  • ಆಧ್ಯಾತ್ಮ, ಜ್ಯೋತಿಷ್ಯ

    ಮನೆಯಲ್ಲಿ ಶಿವಲಿಂಗ ಅಥ್ವಾ ಫೋಟೋವನ್ನು ಇಡಬಹುದಾ?

    ಸನಾತನ ಧರ್ಮದಲ್ಲಿ 33 ಕೋಟಿ ದೇವಾನುದೇವತೆಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವಾನುದೇವತೆಗಳ ಫೋಟೋ ಹಾಕುವ ಮೊದಲು ಕೆಲವೊಂದು ವಿಷ್ಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಶಿವನ ಮೂರ್ತಿ ಅಥವಾ ಚಿತ್ರವನ್ನು ಮನೆಯಲ್ಲಿ ಸ್ಥಾಪನೆ ಮಾಡುವಾಗ ವಿಶೇಷ ಗಮನ ನೀಡಬೇಕಾಗುತ್ತದೆ. ಯಾವುದೇ ಹೊಸ ಫೋಟೋ ಅಥವಾ ಮೂರ್ತಿಯನ್ನಿಡುವಾಗ ಕೂಡ ದಿಕ್ಕು, ನಿಯಮವನ್ನು ಪಾಲನೆ ಮಾಡಬೇಕು. ಇಲ್ಲವಾದ್ರೆ ಲಾಭದ ಬದಲು ನಷ್ಟ ಅನುಭವಿಸಬೇಕಾಗುತ್ತದೆ. ಮನೆ ಅಥವಾ ಕಚೇರಿಯಲ್ಲಿ ಎಲ್ಲರ ಕಣ್ಣಿಗೆ ಬೀಳುವಂತೆ ಶಿವನ ಮೂರ್ತಿಯನ್ನು ಸ್ಥಾಪನೆ ಮಾಡಿ. ಭಗವಂತ ಶಿವನ…

  • ಉಪಯುಕ್ತ ಮಾಹಿತಿ

    ಕಾಲಿನ ಬೆರಳುಗಳು ನೋಡಿ ವ್ಯಕ್ತಿತ್ವ ತಿಳಿದುಕೊಳ್ಳುವುದು ಹೇಗೆ ಎಂದು ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ …

    ನಮ್ಮ ದೇಹದ ಆಕಾರವನ್ನು ನೋಡಿ ಒಬ್ಬರ ವ್ಯಕ್ತಿತ್ವವನ್ನು ಅಳೆಯಬಹುದು. ಯಾರೇ ಆಗಲಿ ನಮ್ಮನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಎಂತಹ ವ್ಯಕ್ತಿ ಎಂಬುದನ್ನು ಹಾಗೆಯೇ ತಿಳಿಯಬಹುದು.

  • ಸುದ್ದಿ, ಸ್ಪೂರ್ತಿ

    ರತನ್ ಟಾಟಾ ಕಾಲಿಗೆ ಬಿದ್ದು ನಮಸ್ಕರಿಸಿದ ಇನ್ಫೋಸಿಸ್ ನಾರಾಯಣ ಮೂರ್ತಿ.

    72 ವರ್ಷದ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು 82 ವರ್ಷದ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾರಾಯಣ ಮೂರ್ತಿ ಅವರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮುಂಬೈನಲ್ಲಿ ಮಂಗಳವಾರ ನಡೆದ ಟೈಕಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರತನ್ ಟಾಟಾ ಅವರಿಗೆ ಟೈಕಾನ್ ಮುಂಬೈ 2020 ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ…