ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಿನಬೆಳಗಾದ್ರೆ ನಾವು ಕನ್ನಡಿಗರು ನಮ್ಮ ಕರ್ನಾಟಕ, ಭಾಷೆ ಕನ್ನಡದ ಬಗ್ಗೆ ಹಾಗೆ ಹೀಗೆ ಅಂತ ಮಾತನಾಡುತ್ತೇವೆ. ಆದ್ರೆ ಕನ್ನಡಿಗರಾಗಿ ನಮ್ಮ ಕನ್ನಡದ ಬಗ್ಗೆ ನಮಗೆಷ್ಟು ಗೊತ್ತಿದೆ.
ಕನ್ನಡ ಭಾಷೆಯು ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು ಇದಕ್ಕೆ ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ದೇಶದ ಭಾಷೆಗಳಲ್ಲಿ ಕನ್ನಡ ಭಾಷೆಯೂ ಪ್ರಮುಖವಾಗಿದ್ದು ಇತ್ತೀಚೆಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಂತಹ ಭಾಷೆ ನಮ್ಮ ಕನ್ನಡ.
ಆದರೆ ಪ್ರಸ್ತುತ ಕನ್ನಡ ಭಾಷೆಯ ಸ್ಥಿತಿಗತಿಯನ್ನು ಗಮನಿಸುತ್ತಿದ್ದರೆ ಎಲ್ಲೋ ಒಂದು ಕಡೆ ನಮ್ಮ ಪರಭಾಷೆಯ ಮೇಲಿರುವ ವ್ಯಾಮೋಹದಿಂದ ನಮ್ಮ ತಾಯಿಯ ಸಮಾನದ ಕನ್ನಡ ಭಾಷೆಯು ಅಪಾಯದಂಚಿನಲ್ಲಿ ಸಿಕ್ಕಿ ಕೊಂಡಿದೆ. ಇಂದು ಯಾವುದೇ ಕ್ಷೇತ್ರದಲ್ಲಿ ನೋಡಿದರೂ ಅಲ್ಲಿ ಇಂಗ್ಲಿಷಿಗೆ ದೊರೆಯುವ ಪ್ರಾಮುಖ್ಯತೆ ಕನ್ನಡಕ್ಕೆ ದೊರೆತಿಲ್ಲ.
ಅನ್ಯ ರಾಜ್ಯಗಳಲ್ಲಿ ಅವರು ತಮ್ಮ ಮಾತೃಭಾಷೆಗೆ ಕೊಡುವ ಪ್ರಾಮುಖ್ಯತೆ ನಮ್ಮ ಕನ್ನಡಿಗರಿಗೆ ಇಲ್ಲ. ಹೊರ ರಾಜ್ಯದಿಂದ ಬಂದ ಕೆಲವರು ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುವಂತಹ ಅನೇಕ ಕಹಿ ಪ್ರಸಂಗಗಳು ದಿನ ಬೆಳಗಾದರೆ ನಮ್ಮ ಕಣ್ಣೆದುರು ನಡೆಯುತ್ತಲೇ ಇವೆ.
ಕನ್ನಡಿಗರು ಎಷ್ಟರ ಮಟ್ಟಿಗೆ ಭಾಷೆಯನ್ನು ದೂರ ಸರಿಸುತ್ತಿದ್ದಾರೆ, ಬೇರೆ ರಾಜ್ಯದವರು ಇಲ್ಲಿ ಬಂದು ನೆಲಸಿಯೂ ಕನ್ನಡ ಕಲಿಯುವ ಶ್ರಮ ನಿಮಗೆ ಬೇಡವೆಂದು ಕನ್ನಡಿಗರೇ ಅವರ ಭಾಷೆಯನ್ನು ಕಲಿತು ಅವರಿಗೆ ಸಹಕಾರ ಮಾಡುವಷ್ಟು ಪರ ಭಾಷಾಭಿಮಾನವುಳ್ಳವರು.
ಇಂದು ಕರ್ನಾಟಕದಲ್ಲಿ ಇತರೆ ಭಾಷೆಗಳಾದ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗೆ ದೊರೆಯುತ್ತಿರುವ ಮಹತ್ವ ಕನ್ನಡಕ್ಕಿಲ್ಲ. ದಾರಿಯಲ್ಲಿ ಯಾರಾದರೂ ಅನ್ಯ ಭಾಷೆಯಲ್ಲಿ ಕೇಳಿದರೆ ಅವರಿಗೆ ಭಾಷೆ ತಿಳಿದಿದ್ದರೂ ಅವರು ತಮ್ಮ ಭಾಷೆಯಲ್ಲೇ ಉತ್ತರಿಸುವ ಭಾಷಾಭಿಮಾನಿಗಳು.
ಭಾರತದಲ್ಲಿ ಜಾತ್ಯತೀತ, ಭಾಷಾತೀತ, ರಾಷ್ಟ್ರದಂತೆ ಬದುಕಬೇಕು ನಿಜ. ಆದರೆ ಎಲ್ಲರಿಗೂ ಭಾಷಾಭಿಮಾನ ಮುಖ್ಯವಾಗಿ ಇರಬೇಕು. ಅನೇಕ ವರ್ಷಗಳ ಹಿಂದೆ ಸಾಮನ್ಯ ಭಾಷೆಗಳಲ್ಲಿ ಒಂದಾಗಿದ್ದ ಇಂಗ್ಲಿಷ್ ಇಂದು ಪ್ರಪಂಚದ ಪ್ರಮುಖ ಭಾಷೆಯಾಗಲು ಸಾಧ್ಯವಾಗುತ್ತಿರಲಿಲ್ಲ.
ಅಲ್ಲಿನ ದಾರ್ಶನಿಕರು ಸಾಹಿತಿಗಳು ಮತ್ತು ಇತರರ ಶ್ರಮದಿಂದ ಮಾತ್ರ ಇದು ಇಂದು ಪ್ರಮುಖ ಭಾಷೆಯಾಗಿದೆ. ಚೀನಾದಂತಹ ಶ್ರೀಮಂತ ದೇಶದಲ್ಲಿ ಇಂಗ್ಲಿಷ್ ತಿಳಿಯದವರೇ ಹೆಚ್ಚು. ಅಲ್ಲಿನ ಅನೇಕರಿಗೆ ಇಂಗ್ಲಿಷ್ ಭಾಷೆಯ ಗಂಧವೇ ತಿಳಿದಿಲ್ಲ. ಆದರೂ ಅದು ಅಭಿವೃದ್ಧಿ ಹೊಂದಿದ ರಾಷ್ಟ್ರ. ಇಂಗ್ಲಿಷ್ ಬೇಕು ಆದರೆ, ಅಗತ್ಯವಿದ್ದಲ್ಲಿ ಮಾತ್ರ.
ಅನಾವಶ್ಯಕವಾಗಿ ಇಂಗ್ಲಿಷ್ ಮಾತನಾಡುವುದರಿಂದ ಕೀರ್ತಿ ಹಚ್ಚುತ್ತದೆಂದು ಭಾವನೆಯಿಂದ ಇಂದು ಕನ್ನಡವನ್ನು ಕೀಳರಿಮೆಯ ದೃಷ್ಟಿಯಿಂದ ನೋಡುತ್ತಿರುವವರೆ ಹೆಚ್ಚು. ಇದರ ಉದ್ದೇಶ ಅನ್ಯ ಭಾಷೆಯಭಾಷೆಯನ್ನು ಸಹ ಪ್ರೀತಿಸಿ, ಗೌರವಿಸಿ, ಆದರೆ ಕನ್ನಡವನ್ನು ಬೆಳೆಸಬೇಕೆಂಬುದು.
ಕುವೆಂಪು ಅವರ ನುಡಿಯಂತೆ ‘ಎಲ್ಲಾದರು ಇರು ನೀ ಕನ್ನಡವಾಗಿರು’ ಎಂಬಂತೆ ಕನ್ನಡವನ್ನು ಪ್ರೀತಿಸೊಣ….ಕನ್ನಡವನ್ನು ಬೆಳೆಸೋಣ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವೆಲ್ಲಾ ಬ್ಯಾಟರಿ ಚಾಲಿತ ಬೈಕ್ಗಳನ್ನು ಹಾಗೂ ಕಾರುಗಳನ್ನು ನೋಡಿದ್ದೇವೆ. ಆದ್ರೆ, ಬ್ಯಾಟರಿ ಚಾಲಿತ ಹೃದಯ ಇದೆ ಅಂದ್ರೆ ನೀವು ನಂಬತೀರಾ..? ಹೌದು ಇದು ನಿಜಕ್ಕೂ ಹೌಹಾರುವಂತಹ ವಿಷಯ. 4 ವರ್ಷದ ಬಾಲಕನಿಗೆ ಬ್ಯಾಟರಿ ಮೂಲಕ ಹೃದಯದ ಬಡಿತ ನಡೆಯುತ್ತಿರುವ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ. ನಿಜಕ್ಕೂ ಇದೊಂದು ರೀತಿಯಲ್ಲಿ ವಿಚಿತ್ರ ಅನಿಸಿದ್ರೂ ಸತ್ಯ. ದಾಂಡೇಲಿ ಮೂಲದ ಪ್ರಕಾಶ ಹಾಗೂ ಅಶ್ವಿನಿ ದಂಪತಿಯ 4 ವರ್ಷದ ಬಾಲಕನಿಗೆ ಇಂತಹದೊಂದು ಆಪರೇಷನ್ ಮಾಡಲಾಗಿದೆ. ನಾಲ್ಕು ವರ್ಷದ ಈ ಬಾಲಕ ಹೃದಯ ಸಂಬಂದಿ…
ಕನ್ನಡ ಚಿತ್ರ ರಂಗದ ನಟ ಉಪೇಂದ್ರರವರ ರಾಜಕೀಯ ಸುದ್ದಿಗಳು ದಿನಕ್ಕೊಂದಂತೆ ತಿರುವು ಪಡೆದುಕೊಳ್ಳುತ್ತಿವೆ.ಈಗ ಬಂದಿರುವ ಹೊಸ ಸುದ್ದಿ ಏನಪ್ಪಾ ಅಂದ್ರೆ, ನಿಮಗೆಲ್ಲ ಗೊತ್ತಿರುವಂತೆ ಅವರು ಸ್ಥಾಪಸಲು ಹೊರಟಿರುವ ಪಕ್ಷದ ಹೆಸರು ಪ್ರಜಾಕೀಯ ಎಂದು. ಆದ್ರೆ ಮೂಲಗಳ ಪ್ರಕಾರ ಅವರ ಪಕ್ಷದ ಹೆಸರು ಪ್ರಜಾಕೀಯ ಅಲ್ಲ..!
ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿರುವರು. ಇವರು ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ. ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದಾರೆ.
ಗರ್ಭಿಣಿ ಮಹಿಳೆಯರಿಗೆ ಈ ಆಹಾರ ತಿನ್ನು, ಇದನ್ನು ತಿನ್ನಬೇಡ ಎಂದು ಮನೆಯವರು, ಸ್ನೇಹಿತರು ಸಲಹೆ ನೀಡುತ್ತಾರೆ. ವೈದ್ಯರು ಕೂಡ ಯಾವ ಆಹಾರಗಳನ್ನು ತೆಗೆದುಕೊಳ್ಳಬೇಕು, ಯಾವುದನ್ನು ತಿನ್ನದಿರುವುದು ಸೂಕ್ತ ಎಂಬ ಮಾಹಿತಿ ನೀಡುತ್ತಾರೆ. ಏಕೆಂದರೆ ಗರ್ಭಿಣಿ ಮಹಿಳೆಯರ ಆಹಾರಕ್ರಮ ಗರ್ಭದಲ್ಲಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಗರ್ಭಿಣಿಯರು ಪೌಷ್ಟಿಕಾಂಶಗಳಿರುವ ಆಹಾರವನ್ನು ತೆಗೆದುಕೊಳ್ಳುವುದರಿಂದ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ಆದ್ದರಿಂದ ಕಾಳುಗಳನ್ನು ತಿನ್ನುವಂತೆ ಹೇಳುತ್ತಾರೆ. ಕಾಳುಗಳಲ್ಲಿ ಒಂದು ಬಗೆಯಾದ ಚೆನ್ನಾ ಕೂಡ ಗರ್ಭಿಣಿಯರಿಗೆ ಸೇವಿಸಲು ಸೂಕ್ತವಾದ ಆಹಾರವಾಗಿದ್ದು…
ಥ್ಯಾಂಕ್ಯೂ ಟೀಮ್ ಇಂಡಿಯಾ.. ಗೆಲ್ತಾನೆ ಇರೋಣ.. ಬೀಗ್ತಾನೇ ಇರೋಣ
ಸಿನಿಮಾದಲ್ಲಿ ಸೂಪರ್ ಸ್ಟಾರ್ ಎನಿಸಿಕೊಳ್ಳುವುದು ನಿಜವಾಲೂ ಕಷ್ಟದ ವಿಚಾರ. ಪರಿಶ್ರಮ, ಟ್ಯಾಲೆಂಟ್, ಲುಕ್ ಎಲ್ಲದರ ಜೊತೆ ಲಕ್ ಕೂಡಾ ಅಷ್ಟೇ ಮುಖ್ಯ.ಬಿಹಾರ ರಾಜಧಾನಿ ಪಾಟ್ನಾದಲ್ಲಿ ಹುಟ್ಟಿ ಬೆಳೆದ ಪ್ರಭಾಕರ್ ಶರಣ್ಗೆ ಬಾಲಿವುಡ್ನಲ್ಲಿ ವಿಲನ್ ಪಾತ್ರದಲ್ಲಿ ಹೆಸರು ಮಾಡಬೇಕೆಂದು ಮೊದಲಿನಿಂದಲೂ ಆಸೆ ಇತ್ತು.