ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಂಡಕ್ಟರಿಲ್ಲದ ಕೆಎಸ್ಆರ್ಟಿಸಿ bus

ವಿರಾಜಪೇಟೆಯಿಂದ ಮೈಸೂರಿಗೆ ಪ್ರಯಾಣ ಹೊರಟೆ. ಸುಖಕರ ಹಾಗು ಸುರಕ್ಷಿತ ಪ್ರಯಾಣಕ್ಕೆ KSRTC ಬೆಸ್ಟ್. ಅಂದ ಮಾತ್ರಕ್ಕೆ ಬಸ್ ಹತ್ತಿ ಕಿಟಕಿಯ ಆಸನವನ್ನೇ ಆರಿಸಿ ಕುಳಿತುಕೊಂಡೆ. ನಾಲ್ಕೈದು ನಿಮಿಷದ ನಿಲುಗಡೆಯ ನಂತರ ಚಾಲಕ ಬಸ್ ಚಲಾಯಿಸಿದ. ಸಾಮಾನ್ಯವಾಗಿ ಬಸ್ ತಲುಪಿಸುವುದು ಚಾಲಕನಾದರೂ ಪ್ರಯಾಣಿಕರನ್ನು ನಿಭಾಯಿಸುವುದು ನಿರ್ವಾಹಕರು ತಾನೆ? ಅದೆ ನಮ್ಮ ಕಂಡಕ್ಟರ್.

ಬಸ್ 500 ಮೀಟರ್ ಮುಂದೆ ತಲುಪಿತು. ಪ್ರಯಾಣಿಕರೆಲ್ಲರೂ ಮೊಬೈಲ್, ಮಾತುಕತೆಗಳಲ್ಲಿ ನಿರತರಾಗಿದ್ದಾರೆ. ಆಸನಗಳು ಭರ್ತಿಯಾದ ಬಸ್ಸಿನಲ್ಲಿ ಕಂಡಕ್ಟರ್ ಇಲ್ಲವೆಂದು ಯಾರಿಗೂ ಭಾಸವಾಗಲಿಲ್ಲ.
ಸಾರ್ ಕಂಡಕ್ಟರ್ ಇಲ್ಲ ಎಂದು ಯುವಕನೊಬ್ಬ ಕೇಕೆ ಹಾಕಿದ. ಕೇಕೆ ಚಾಲಕನ ಕಿವಿಗೆ ಕೇಳದಿದ್ದರೂ ಕೇಳಿದ ಪ್ರಯಾಣಿಕರೆಲ್ಲರೂ ದಬ್ಬಿಬ್ಬಾಗಿ ಪರಸ್ಪರ ಮುಖ ನೋಡಿ ನಗು ಶುರುಮಾಡಿದರು. ಚಾಲಕನಿಗೆ ವಿಷಯದ ಪರಿವೇ ಇಲ್ಲ. ಪಟ್ಟಣದಲ್ಲಿ ವಾಹನಗಳ ದಟ್ಟಣೆ ಇರುವುದರಿಂದ ನಿಧಾನವಾಗಿ ಚಲಾಯುಸುತ್ತಿದ್ದಾನೆ. ಎಲ್ಲಿಯಾದರೂ ಸ್ಟೋಪ್ ಮಾಡಬೇಕಾದರೆ ಕಂಡಕ್ಟರ್ ನ ಪೀಪಿಯ ಪೀ….. ಶಬ್ಧ ಕೇಳಬೇಕಲ್ಲವೇ..!?
ಹಿಂದಿನಿಂದ ಬಂದ ಯುವಕನೊಬ್ಬ ಚಾಲಕನ ಬಳಿ ತೆರಳಿ ಕಂಡಕ್ಟರ್ ಇಲ್ಲ ಎಂದು ಜೋರಾಗಿ ಕೂಗಿದ. ತಟ್ಟನೆ ಹಿಂದೆ ತಿರುಗಿದೆ ಚಾಲಕ ನಗುತ್ತಾ ಬಸ್ ಬದಿಗೆ ನಿಲ್ಲಿಸಿದ. ಕತ್ತು ತಿರುಗಿಸಿ ಪ್ರಯಾಣಿಕರೊಂದಿಗೆ
ಎಲ್ಲಿ ಹೋದ ಇವ ? ಎಂದು ಕೇಳಿದ. ಹ್ನೇ…. ಕಾಲ್ ಮಾಡಿ ನೋಡು ಎಂದರು ಪ್ರಯಾಣಿಕರು. ನನ್ನತ್ರ ನಂಬರ್ ಇಲ್ಲ ಎಂದ. ಕೇಳಿದ ಪ್ರಯಾಣಿಕರಿಗೆ ಇದೇನೋ ಹಾಸ್ಯ ನಾಟಕದಂತೆ. ಹಾಗಾದ್ರೆ ಸ್ವಲ್ಪ ವೈಟ್ ಮಾಡಿ ಕಂಡಕ್ಟರ್ ಈಕಡೆ ಕಾಲ್ ಮಾಡ್ತಾನೆ ಎಂದರು ಪ್ರಯಾಣಿಕರು. ಇಲ್ಲ ಅವನತ್ರ ನನ್ನ ನಂಬರೂ ಇಲ್ಲಾರೀ ಎಂದನು ಚಾಲಕ.
ನಾವಿಬ್ಬರೂ ಈ ಬಸ್ಸಲ್ಲಿ ಹೊಸಬರು, ಇವತ್ತು ಬೆಳಿಗ್ಗೆ ನೇಮಕವಾಗಿದ್ದಷ್ಟೆ. ಪರಿಚಯವಾಗಲು ಬಿಡುವು ಸಿಗಲಿಲ್ಲ. ಪ್ರಯಾಣಿಕರಿಗೆ ಟಿಕೆಟ್ ಇಲ್ಲದೆ ಮೈಸೂರು ತಲುಪಬಹುದೆಂಬ ಆಸೆಯೇನೋ ಎಲ್ಲರೂ ಫುಲ್ ಖುಷಿಯಲ್ಲಿ.

ತಕ್ಷಣ ಹಿಂದಿನಿಂದ ಜೋರು ಹಾರ್ನ್ ಶಬ್ದ. ತಿರುಗಿ ನೋಡಿದಾಗ ಅತಿವೇಗದಿಂದ ಬಂದ ಆಟೋದಿಂದ ನಗುತ್ತಾ ಇಳಿದು ಬಸ್ಸತ್ತಿದ ಕಂಡಕ್ಟರ್ ಮಾಮ. ಏನಿದ್ದರೂ ಕಂಡಕ್ಟರ್ ಇಲ್ಲದ KSRTC ಒಡೆಯನಿಲ್ಲದ ಮನೆಯಂತಿತ್ತು.
Shafi Anvaari
Kodagarahalli
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಸ್ಸಾಂ ಸರ್ಕಾರ ಶನಿವಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್ಆರ್ಸಿ) ಅಂತಿಮ ಪಟ್ಟಿಯ ಪ್ರಕಾರ 19.06 ಲಕ್ಷ ಜನರು ಭಾರತೀಯ ಪೌರರಲ್ಲ ಎಂದು ಹೇಳಲಾಗಿದೆ. ಹಾಗೆಂದು ತಕ್ಷಣವೇ ಇವರನ್ನು ಬಂಧಿಸದಿರಲು ಹಾಗೂ ಅಕ್ರಮ ನಿವಾಸಿಗಳು ಎಂದು ಘೋಷಿಸದಿರಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ತಾವು ಭಾರತೀಯ ಪೌರರು ಎಂಬುದನ್ನು ಸಾಬೀತುಪಡಿಸಲು ತಮ್ಮ ಬಳಿ ದಾಖಲೆಗಳಿದ್ದರೆ, ಅವುಗಳನ್ನು ಒದಗಿಸಿ ತಮ್ಮ ಪೌರತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಲು ಇವರೆಲ್ಲರಿಗೂ ಅವಕಾಶ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ….
ನಟ ರಾಕಿಂಗ್ ಸ್ಟಾರ್ ಯಶ್ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಯಶ್ ಅವರು ಹೊಂದಿರುವ ಕೊಠಡಿಯನ್ನು ಕೂಡ ಪರಿಶೀಲಿಸಿದ್ದಾರೆ. ಯಶ್ ಸಿನಿಮಾ ಕೆಲಸಕ್ಕಾಗಿ ಮುಂಬೈಗೆ ತೆರಳಿದ್ದು, ಐಟಿ ದಾಳಿಯ ಮಾಹಿತಿ ತಿಳಿದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಯಶ್, ಅಲ್ಲಿಂದ ನೇರವಾಗಿ ಹೋಟೆಲ್ ಗೆ ತೆರಳಿದ್ದಾರೆ. ಯಶ್ ಅವರು…
ಗಡ್ಡ ಬಿಡುವುದು ಇಂದಿನ ಯುವಕರ ಫ್ಯಾಷನ್ ಆಗಿ ಹೋಗಿದೆ. ಹಿಗಂತೂ ಗಡ್ಡ ಬಿಡುವ ಸ್ಟೈಲ್ ಚೇಂಜ್ ಆಗಿದೆ.ವಿವಿದ ರೀತಿಯಲ್ಲಿ ಗಡ್ಡವನ್ನು ಬಿಡುತ್ತಾರೆ. ಅಂದ ಹಾಗೆ ಸಿನೆಮಾ ಸೆಲೆಬ್ರೆಟಿಗಳನ್ನು ಅನು ಕರಿಸುವುದು ಸಹ ಟ್ರೆಂಡ್ ಆಗಿದೆ.
ಅನ್ನಪೂರ್ಣೇಶ್ವರಿ ದೇವಿ ನಿತ್ಯಹರಿದ್ವರ್ಣ ಬೆಟ್ಟಗಳ ಮಧ್ಯೆ ನೆಲೆಸಿದ್ದಾಳೆ. ಕೈಲಾಸದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಈ ತಾಯಿ ವರ್ಷವಿಡೀ ಭಕ್ತರನ್ನು ಆಕರ್ಷಿಸುತ್ತಾಳೆ. ದೂರದಿಂದ ಬಂದವರಿಗೆ ರಾತ್ರಿ ನಿವಾಸದ ವಸತಿ ಮತ್ತು ಉಚಿತ ಆಹಾರವನ್ನು ಒದಗಿಸಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಈ ಹೊರನಾಡು ಅನ್ನಪೂರ್ಣೇಶ್ವರಿ ತಾಯಿಯ ಸನ್ನಿಧಿ ಹಿಂದೂಗಳಿಗೆ ಬಹಳ ಪವಿತ್ರವಾದ ಸ್ಥಳವಾಗಿದೆ. ದೇವಿಯ ಮುಖ್ಯ ದೇವತೆ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟಿದೆ. ತಾಯಿ ಅನ್ನಪೂರ್ಣೇಶ್ವರಿ ನೆಲೆಸಿರುವ ಈ ಹೊರನಾಡು 831 ಮೀ (2,726 ಅಡಿ) ಎತ್ತರದಲ್ಲಿದೆ.. ದೇವಾಲಯದಲ್ಲಿ ಯಾರ ಬಲ…
ಹಿಂದೂ ಧರ್ಮದಲ್ಲಿ ಶಿವನನ್ನು “ದೇವಾದಿದೇವ” ಮಹಾದೇವ ಎಂದು ಆರಾಧಿಸುತ್ತಾರೆ. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.
ಒಬ್ಬರಂತೆ ಮತ್ತೊಬ್ಬರು ಇರುತ್ತಾರೆ ಎಂದು ಕೇಳಿರುತ್ತೇವೆ ಅಲ್ಲಲ್ಲಿ ನೋಡಿರುತ್ತೇವೆ.ಆದ್ರೆ ಅಂತಹ ವ್ಯೆಕ್ತಿಗಳನ್ನು ಕಂಡಾಗ ನಮಗೆ ರೋಮಾಂಚನವಾಗುತ್ತದೆ.ಅಂತಹದರಲ್ಲಿ ಕೆಲವು ಪ್ರಸಿದ್ದ ರಾಜಕಾರಣಿಗಳಂತೆ ಕಾಣುವ ಬೇರೆ ವ್ಯೆಕ್ತಿಗಳ ಕೆಲವು ಚಿತ್ರಗಳು ಇಲ್ಲಿವೆ.