ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲವಾರು ಮದುವೆ ಸಮಾರಂಭಗಳಲ್ಲಿ ತಲೆದೋರುವ ನಾನಾರೀತಿಯ ಸಮಸ್ಯೆಗಳಿಂದ ವಿವಾದಗಳುಂಟಾಗಿ ಮದುವೆ ಮಂಟಪಗಳಲ್ಲಿಯೇ ವಧು, ವರರು ಮತ್ತು ಅವರ ಕಡೆಯವರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುವುದೂ ಇದೆ. ಇಂತಹುದೇ ಘಟನೆ ಇದೀಗ ರಾಜಸ್ಥಾನದಲ್ಲೂ ನಡೆದಿದೆ. ಸಪ್ತಪದಿಯ ಸಂದರ್ಭದಲ್ಲಿ ಗಂಡು ತಾನು ಮದುವೆಯಾಗವ ಮದುಮಗಳೆದುರು ಇಟ್ಟ ಬೇಡಿಕೆಯಿಂದಾಗಿ ಜಗಳವೇರ್ಪಟ್ಟಿದ್ದಲ್ಲದೇ ಮದುವೆಯೇ ಮುರಿದು ಬಿದ್ದಿದೆ.
ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳನ್ವಯ ಭಂವರ್’ಲಾಲ್ ಬಂಗ್ ಎಂಬಾತನ ಮಗಳ ಮದುವೆ ದಿನೇಶ್ ಎಂಬಾತನ ಮಗ ವಿವೇಕ್’ನೊಂದಿಗೆ ನಿಶ್ಚಯವಾಗಿತ್ತು. ವರ ಯುವಕ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದರೆ, ಮಧುಮಗಳೂ ಎಲ್’ಎಲ್’ಬಿ ಮುಗಿಸಿದ್ದಳು. ಹೀಗಿರುವಾಗ ಇವರಿಬ್ಬರ ಮದುವೆ ದಿನದಂದು ಮದುಮಗಳ ಮನೆಗೆ ವರ ಹಾಗೂ ದಿಬ್ಬಣವನ್ನು ಅದ್ಧೂರಿಯಾಗಿಯೇ ಸ್ವಾಗತಿಸಲಾಯಿತು.
ಮದುವೆಯ ಸಂಪ್ರದಾಯಗಳನ್ನು ಒಂದಾದ ಬಳಿಕ ಒಂದರಂತೆ ನಡೆಯುತ್ತಿದ್ದವು ಹೀಗಿರುವಾಗ ಮದುವೆಯ ಪ್ರಮುಖ ಭಾಗವೆಂದೇ ಪರಿಗಣಿಸುವ ಸಪ್ತಪದಿಯೂ ನಡೆದಿತ್ತು. ಆದರೆ ಅಷ್ಟರಲ್ಲೇ ವರ ಮಧುಮಗಳ ಕಿವಿಯಲ್ಲಿ ತನ್ನದೊಂದು ಬೇಡಿಕೆ ಇದೆ ಎಂದು ಹೇಳಿಕೊಂಡಿದ್ದಾರೆ. ಈತನ ಆ ಬೇಡಿಕೆ ಕೇಳಿ ಕೆರಳಿದ ವಧು ಬೇಡಿಕೆ ಪೂರೈಸಲು ಸಾಧ್ಯವೇ ಇಲ್ಲ ಎಂದಿದ್ದಾಳೆ. ವಾಸ್ತವವಾಗಿ ವರ ತನಗೆ ಇಷ್ಟವಾಗುವಂತೆ ಫೋಟೋಗೆ ಫೋಸ್ ನೀಡಬೇಕೆಂದು ಕೇಳಿಕೊಂಡಿದ್ದಾನೆ. ಈ ವೇಳೆ ವಧು ಎಲ್ಲರೆದುರು ಅಂತಹ ಭಂಗಿಯಲ್ಲಿ ಫೋಟೋ ತೆಗೆಸುವುದು ಸರಿಯಲ್ಲ ಎಂದು ನಿರಾಕರಿಸಿದ್ದಾಳೆ.
ಮದುಮಗಳ ಈ ಪ್ರತಿಕ್ರಿಯೆ ಕೇಳಿ ಯುವಕ ಕೋಪಗೊಂಡಿದ್ದಾನೆ. ವಧು ಕೂಡಾ ತಾನೂ ಕಮ್ಮಿ ಇಲ್ಲ ಎನ್ನುವಂತೆ ತನ್ನ ನಿರ್ಧಾರದಿಂದ ಅವರು ಕೂಡ ಹಿಂದೆ ಸರಿದಿಲ್ಲ. ನಿಧಾನವಾಗಿ ಈ ವಿವಾದ ಹೆಚ್ಚಾಗಿದ್ದು, ಎರಡೂ ಕಡೆಯ ಸಂಬಂಧಿಕರ ನಡುವೆ ಜಗಳವೇರ್ಪಟ್ಟಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ವರ ವಧು ಕೂಡಾ ಹೊಡೆದಾಡಿಕೊಂಡಿದ್ದಾರೆ. ಮದುವೆ ಮಂಟಪದಲ್ಲಿ ನಡೆದ ಈ ಜಗಳದಲ್ಲಿ ವರನ ಸಹೋದರನ ತಲೆಗೆ ಗಂಭೀರ ಗಾಯವೂ ಆಗಿದೆ ಎಂದು ವರದಿಯಾಗಿದೆ. ಆದರೆ ಈ ಜಗಳ ನೋಡಿದ ವ್ಯಕ್ತಿಯೊಬ್ಬ ಆ ಕೂಡಲೇ ಪೊಲೀಸರಿಗೆ ಕರೆ ಮಾಡಿ ಸೂಚನೆ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಈ ಜಗಳವನ್ನು ಮಾತುಕತೆಯಲ್ಲೇ ಕೊನೆಗೊಳಿಸಲು ಯತ್ನಿಸಿದ್ದಾರೆ.
ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಗಿ ಬೇರೆ ವಿಧಿ ಇಲ್ಲದೇ ವರ ಹಾಗೂ ಕೆಲ ಸಂಬಂಧಿಗಳನ್ನು ಬಂಧಿಸಿದ ಪೊಲೀಸರು ಠಾಣೆಗೊಯ್ದಿದ್ದು, ಅಲ್ಲಿ ಅವರನ್ನು ಸಮಾಧಾನಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಅಷ್ಟರಲ್ಲೇ ವಧುವಿನ ತಂದೆಯೂ ಇಂತಹ ಜಗಳಕಾಯುವ ಕುಟುಂಬಕ್ಕೆ ನನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಎಂದು ಈ ಸಂಬಂಧವನ್ನೇ ಮುರಿದಿದ್ದಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೆಚ್ಚಿನ ನಟ ನಟಿಯರನ್ನ ನೋಡುವ, ಭೇಟಿ ಮಾಡುವ ಆಸೆ ಪ್ರತಿಯೊಬ್ಬ ಅಭಿಮಾನಿಗೂ ಇರುತ್ತೆ. ಆದ್ರೆ ಹುಚ್ಚು ಅಭಿಮಾನಕ್ಕೆ ಸಿಲುಕಿ ಅದೆಷ್ಟೋ ಅಭಿಮಾನಿಗಳು, ಹಣ, ಪ್ರಾಣ ಹಾನಿ ಮಾಡಿಕೊಂಡಿದ್ದನ್ನ ಕೂಡ ನಾವು ಹಿಂದೆ ಅನೇಕ ಭಾರಿ ನೋಡಿದ್ದೇವೆ. ಇದೀಗ ಇಂಥಹದ್ದೇ ಮತ್ತೊಂದು ಘಟನೆ ನಡೆದಿದ್ದು, ದಕ್ಷಿಣ ಭಾರತದ ಪ್ರಖ್ಯಾತ ನಟಿಯನ್ನು ನೋಡುವ ಆಸೆಯಿಂದ ಅಭಿಮಾನಿಯೋರ್ವ 60 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ತಮಿಳುನಾಡಿನ ರಾಮನಾಥಪುರಂ ನಿವಾಸಿಯಾಗಿರುವ ಅಭಿಮಾನಿ ಕಾಜಲ್ ಅಗರ್‌ವಾಲ್ ನ ಅಪ್ಪಟ ಅಭಿಮಾನಿ. ಕಾಜಲ್ ಅವರನ್ನು ಜೀವನದಲ್ಲಿ ಒಮ್ಮೆಯಾದರೂ…
ಪ್ರತಿ ವರ್ಷವೂ ಮಾನ್ಸೂನ್‌ನ್ನು ಕಾಯಲಾಗುತ್ತದೆ. ಯಾಕೆಂದರೆ ಆಕಾಶದಿಂದ ಸುರಿಯು ಮಳೆಯಿಂದ ಹಸಿರು ಹರಡುತ್ತದೆ.ಆದರೆ ಜನರು ಆಕಾಶದಿಂದ ಮಳೆ ಸುರಿಯುವುದನ್ನು ಕಾಯದಂತಹ ಸ್ಥಳದ ಬಗ್ಗೆ ನಿಮಗೆ ಗೊತ್ತಿರಲಾರದು.
ಉಡುಪಿ: ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲಾಗದೆ ತಂದೆ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ದಿನೇಶ್ ಆತ್ಮಹತ್ಯೆಗೆ ಶರಣಾದ ತಂದೆ. ಇವರು ಮಣಿಪಾಲದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ ದಿನೇಶ್ ಇತ್ತೀಚೆಗಷ್ಟೇ ಸಾಲ ಮಾಡಿ, ಮಗಳ ಮದುವೆ ಮಾಡಿಸಿದ್ದರು. ಈ ಮದುವೆ ಸಾಲದ ಜೊತೆಗೆ ಟ್ಯಾಕ್ಸಿ ಕೂಡಾ ಅಪಘಾತಕ್ಕೀಡಾಗಿತ್ತು. ಇದರಿಂದ ಚಿಂತೆಗೀಡಾಗಿದ್ದ ದಿನೇಶ್, ಉಡುಪಿಯ ಇಂದ್ರಾಳಿ ಬಳಿಯ ರೈಲ್ವೆ ಟ್ರ್ಯಾಕ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟ್ಯಾಕ್ಸಿಯಲ್ಲಿ ದುಡಿದು ಮನೆ ನಿಭಾಯಿಸುವ ಜೊತೆಗೆ ಮದುವೆಗೆ ಮಾಡಿದ್ದ ಸಾಲ…
ಒಂದು ಸಲ ಹಾವು ಕಚ್ಚಿದರೂ ಇಹ ಲೋಕ ಸೇರುವವರ ಮಧ್ಯೆ ಇಲ್ಲೊಬ್ಬಳು ಹುಡುಗಿ 34 ಬಾರಿ ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದಿದ್ದಾಳೆ. ಅದೆಷ್ಟು ಬಾರಿ ಹಾವು ಕಚ್ಚಿದ್ದರೂ ಈಕೆ ಸಾವನ್ನಪ್ಪಿಲ್ಲ. ಹಿಮಾಚಲ ಪ್ರದೇಶದ 18ರ ಕಿಶೋರಿ ಮನೀಷಾ 3 ವರ್ಷದ ಅಂತರದಲ್ಲಿ ವಿಷಕಾರಿ ಹಾವುಗಳಿಂದ 34 ಬಾರಿ ಕಚ್ಚಿಸಿಕೊಂಡಿದ್ದರೂ ಈಕೆಗೆ ಏನೂ ಆಗಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮನೀಷಾ ಅಪ್ಪ ಸುಮೀರ್ ವರ್ಮಾ ಇದೆಲ್ಲಾ ಆಕೆಗೆ ಮಾಮೂಲಿ ಎನ್ನುತ್ತಾರೆ.
ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಗುರುವಾರ ನರೇಂದ್ರ ಮೋದಿಯವರು ಸಾಯಂಕಾಲ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಇದಕ್ಕೂ ಮುನ್ನ ಇಂದು ಮುಂಜಾನೆ ದೆಹಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಸ್ವಾತಂತ್ರ್ಯ ನಂತರ ಹುತಾತ್ಮರಾದ ಯೋಧರಿಗೆ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು. ನರೇಂದ್ರ ಮೋದಿಯವರ ಜೊತೆ ನಿರ್ಗಮಿತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಂಬಾ ಮತ್ತು ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಆರ್…
ಕನ್ನಡ ಪಿಡಿಎಫ್ ಪುಸ್ತಕಗಳನ್ನು ಕೆಟಲಾಗ್ ಮಾಡಿ ಗೂಗಲ್ ಡ್ರೈವಿನಲ್ಲಿ save ಮಾಡಲಾಗಿದೆ. ಆಸಕ್ತರು ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ಬೇಕಾದ ಪಿಡಿಎಫ್ ಡೌನ್ ಲೋಡ್ ಮಾಡಿಕೊಳ್ಳಬಹುದು…