ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಮ್ಮನ್ನು ಸಾಕಿದವರನ್ನು ಹಾಗೂ ತಮ್ಮ ಬಗ್ಗೆ ಕಾಳಜಿ ವಹಿಸಿದವರನ್ನು ಪ್ರಾಣಿಗಳು ಎಂದಿಗೂ ಮರೆಯುವುದಿಲ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ, ಇದಕ್ಕೆ ಜೀವಂತ ನಿದರ್ಶನ ಬಳ್ಳಾರಿಯ ಜಿಂಕೆ ಮರಿ ಯಾಗಿದೆ.

ಬಳ್ಳಾರಿ ಮೃಗಾಲಯದಲ್ಲಿ 7 ವರ್ಷದ ಹಿಂದೆ ಸುಂದರಿ ಎಂಬ ಜಿಂಕೆಮರಿ ಜನ್ಮ ತಾಳಿತ್ತು, ಬಳ್ಳಾರಿ ಮೃಗಾಲಯದಲ್ಲಿದ್ದ 6೦ ಬ್ಲಾಕ್ ಬಕ್ಸ್ ಪೈಕಿ ಸುಂದರಿ ಕೂಡ ಒಬ್ಬಳಾಗಿದ್ದಳು. ಈಗ ಅವುಗಳನ್ನು ಸದ್ಯ ಹಂಪಿ ಬಳಿಯಿರುವ ಬಿಳಿಕ್ಕಲ್ ಮೃಗಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಬಳ್ಳಾರಿ ಮೃಗಾಲಯದಲ್ಲಿ ಬಸವರಾಜ್ ಪ್ರಾಣಿಗಳಿಗೆ ಆಹಾರ ನೀಡುವ ಹಾಗೂ ಊಟ ತಿನ್ನಿಸುವ ಮೇಲ್ವಿಚಾರಕರಾಗಿದ್ದರು. ಅರಣ್ಯ ಇಲಾಖೆಯ ವಾರ್ಷಿಕ ವರ್ಗಾವಣೆ ನಿಯಮದಂತೆ ಬಸವರಾಜ್ ಅವರನ್ನು ಕಮಲಪುರ ಪ್ರದೇಶಕ್ಕೆ ವರ್ಗಾವಣೆ ಮಾಡಲಾಯಿತು. ಸದ್ಯ ಬಸವರಾಜ್ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದ ಪ್ರಾಣಿಗಳಿಗೆ ಆಹಾರ ತಿನ್ನಿಸುವ ಮೇಲ್ವಿಚಾರಕರಾಗಿ ವರ್ಗಾವಣೆ ಗೊಂಡಿದ್ದಾರೆ.

ನವೆಂಬರ್ 3 ರಿಂದ ಈ ಮೃಗಾಲಯ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ, ಇಲ್ಲಿಯೇ ವಾಸವಿರುವ ಸುಂದರಿ ಆಕಸ್ಮಿಕವಾಗಿ ತನ್ನ ಕೇರ್ ಟೇಕರ್ ನೋಡಿ, ಅವರನ್ನು ಗುರುತಿಸಿ ಆತನ ಹಿಂದೆ ಹಿಂದೆಯೇ ಸುತ್ತುತ್ತಿದ್ದಾಳೆ. 7 ವರ್ಷಗಳ ಹಿಂದೆ ಸುಂದರಿ ಹುಟ್ಟಿದಾಗ ತನಗೆ ಹಾಲು ಕುಡಿಸಿ ಬೆಳೆಸಿದ್ದ ಬಸವರಾಜ್ ನನ್ನು ಆಕೆ ಮರೆತಿಲ್ಲ, ಬಸವರಾಜ್ ಆಹಾರ ನೋಡಲು ಹೋದರೆ ಉಳಿದೆಲ್ಲಾ ಜಿಂಕೆಗಳು ಹೆದರಿ ದೂರ ಓಡುತ್ತಿದ್ದವು. ಆದರೆ ಸುಂದರಿ ಮಾತ್ರ ಬಸವರಾಜ್ ಹಿಂದಿಂದೆಯೇ ಸುತ್ತುತ್ತಿದ್ದಳು.

ಈ ಸುಂದರಿ ಜಿಂಕೆ ಯಾವಾಗಲು ನನ್ನ ಹಿಂದೆಯೇ ಇರುತಾ ಇತ್ತು , ನಾನು ಗೇಟ್ ಬಾಗಿಲು ಮುಚ್ಚಿದರೇ, ಸುಮಾರು ಅರ್ಧ ಗಂಟೆಗಳ ಕಾಲ ಕಾದು ನಂತರ ಬೇರೆ ಜಿಂಕೆಗಳ ಜೊತೆ ಹೋಗುತಿತ್ತು . ಪ್ರಾಣಿಗಳ ಈ ವರ್ತನೆ ನನಗೆ ತುಂಬಾ ಭಿನ್ನವೆನಿಸುತ್ತಿದೆ.ಈ ಜಿಂಕೆ ಮರಿ ನನ್ನನ್ನು ಇಷ್ಟೋಂದು ನೆನಪಿನಲ್ಲಿಟ್ಟುಕೊಂಡಿರುವುದು ನನಗೆ ಆಶ್ಚರ್ಯ ತರಿಸಿದೆ ಎಂದು ಬಸವರಾಜ್ ಹೇಳಿದ್ದಾರೆ. ಬಳ್ಳಾರಿಯ ಗುದ್ದೂರು ಮೂಲದ ಬಸವರಾಜ್ ಅರಣ್ಯ ಇಲಾಖೆಯ ನೌಕರರಾಗಿದ್ದಾರೆ, ಬಸವರಾಜ್ ಸದ್ಯ ಕಾವಲುಗಾರನಾಗಿ
ನೇಮಕಗೊಂಡಿದ್ದಾರೆ.

ಪ್ರಾಣಿಗಳನ್ನು ಪ್ರೀತಿಸುವ ಅವರು ಅವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ, ಈಗ ಸುಂದರಿ ಜೊತೆ ಅವರಿಗೆ ವಿಶೇಷ ಪ್ರೀತಿ ವಾತ್ಸಲ್ಯ ಬೆಳೆದಿದೆ. ಸುಂದರಿಯನ್ನು ಬಸವರಾಜ್ ಸುಂದರಿ ಎಂದು ಕರೆಯುತ್ತಾರೆ, ಸುಂದರಿ ಎಂದು ಕರೆದ ಕೂಡಲೇ ಜಿಂಕೆ ಮರಿ ಪ್ರತಿಕ್ರಿಯಿಸುತ್ತದೆ. ಸುಂದರಿ ನನ್ನ ಮಗಳಿದ್ದಂತೆ ಎಂದು ಬಸವರಾಜ್ ಹೇಳಿದ್ದಾರೆ. ಬ್ಲ್ಯಾಕ್ ಬಕ್ಸ್ ಗುಜರಾತ್, ರಾಜಸ್ತಾನ, ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಒಣ ಭೂಮಿಯಲ್ಲಿ ಕಂಡುಬರುವ ಪ್ರಾಣಿಯಾಗಿದೆ ಅಳಿವಿನಂಚಿನಲ್ಲಿರುವ ಪ್ರಬೇಧದ
ಜಿಂಕೆಗಳನ್ನ ವನ್ಯ ಜೀವಿ ಕಾಯಿದೆ ಪ್ರಕಾರ ರಕ್ಷಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೈಸೂರು ಸ್ಯಾಂಡಲ್ ಸೋಪ್ ಎಂಬುದು ಕರ್ನಾಟಕದ ಸರ್ಕಾರಿ ಒಡೆತನದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್ಡಿಎಲ್) ಕಂಪನಿಯಿಂದ ಉತ್ಪಾದಿಸಲ್ಪಟ್ಟ ಸಾಬೂರಿನ ಬ್ರಾಂಡ್ ಆಗಿದೆ. 100% ಶುದ್ಧ ಶ್ರೀಗಂಧದ ಎಣ್ಣೆಯಿಂದ ತಯಾರಿಸಿದ ವಿಶ್ವದ ಏಕೈಕ ಸೋಪ್ .
ಯಶ್ ಅಭಿನಯದ ಕೆಜಿಎಫ್ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿ ಬಿರುಗಾಳಿಯಂತೆ ಮುನ್ನುಗ್ಗುತ್ತಿದೆ. ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಕನ್ನಡ ಚಿತ್ರರಂಗವನ್ನು ಮತ್ತೊಂದು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡುಹೋಗಿರುವುದು ಸುಳ್ಳಲ್ಲ. ಈಗ ಕನ್ನಡ ಚಿತ್ರರಂಗದ ಸುದೀಪ್ ಅಭಿನಯದ ಮತ್ತೊಂದು ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ನೂತನ ದಾಖಲೆ ಬರೆಯಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಐದು ಭಾಷೆಗಳಲ್ಲಿ ತೆರೆಕಂಡು ಧೂಳೆಬ್ಬಿಸುತ್ತಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರಕ್ಕೆ ಹೊಸ ಮಾರುಕಟ್ಟೆಯನ್ನು ಕೆಜಿಎಫ್ ಚಿತ್ರ ತೋರಿಸಿಕೊಟ್ಟಿದೆ….
ನಾವು ಮನೆಗಳಲ್ಲಿ ಕೆಲಸ ಮಾಡದ, ಉದ್ಯೋಗ ಮಾಡದೆ ತಿಂದು ಕೆಲಸವಿಲ್ಲದೇ ತಿರುಗುವವರನ್ನು, ಸೋಮಾರಿ ಎಂದು ಮನೆಗಳಲ್ಲಿ ಹಾಸ್ಯ ಮಾಡುವುದುಂಟು. ಹೀಗೆ ಸೋಮಾರಿತನದಿಂದ ಇರುವವರು ಎಲ್ಲಾ ಕಡೆ ಸಿಗುತ್ತಾರೆ. ಅದಕ್ಕಾಗಿಯೇ ವಿಶ್ವವಿದ್ಯಾನಿಲಯವೊಂದು ವಿಶ್ವದ ಸೋಮಾರಿಗಳ ಬಗ್ಗೆ ಅಧ್ಯಯನ ನಡೆಸಿದ್ದು ಅದರ ವಿವರಣೆಯನ್ನು ಕೊಟ್ಟಿದೆ.
ಮಂಗಳೂರು: ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ಸೂಕ್ತವಾದ ಸಮಿತಿಗಳ ರಚನೆ ಆಗಬೇಕು ಎಂದು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಗಳ ಆಶ್ರಯದಲ್ಲಿ ನಡೆದ ಮಂಗಳಮುಖಿಯರ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಕೋಶ/ಸಮಿತಿ: ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಕೋಶ/ಸಮಿತಿಯು 17 ಮಂದಿ ಸದಸ್ಯರನ್ನು ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ…
ಹೆಣ್ಣನ್ನ ಅರ್ಥ ಮಾಡಿಕೊಳ್ಳಲು ಯಾರಿಂದಲೂ ಕೂಡ ಸಾಧ್ಯವಿಲ್ಲ, ಪ್ರಪಂಚದ ಸೃಷ್ಟಿಕರ್ತ ಬ್ರಹ್ಮ ದೇವನಿಗೂ ಕೂಡ ಹೆಣ್ಣನ್ನ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಹೆಣ್ಣು ಚಂಚಲೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಬ್ರಹ್ಮ ದೇವಾ ಹೆಣ್ಣನ್ನ ಸೃಷ್ಟಿ ಮಾಡಿದ್ದು ಯಾಕೆ ಮತ್ತು ಹೆಣ್ಣನ್ನ ಸೃಷ್ಟಿ ಮಾಡಲು ಬ್ರಹ್ಮ ದೇವನು ತುಂಬಾ ಸಮಯವನ್ನ ತೆಗೆದುಕೊಳ್ಳಲು ಕಾರಣ ಏನು ಮತ್ತು ಸ್ತ್ರೀ ರಚನೆಯ ವೇಳೆಯಲ್ಲಿ ಬ್ರಹ್ಮ ದೇವಾ ಮತ್ತು ದೇವದೂತರ ನಡುವೆ ನಡೆದ ಮಾತುಕತೆ ಏನು ಎಂದು ತಿಳಿದರೆ ನೀವು ಕೂಡ ಶಾಕ್…
ಹಣ್ಣು, ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ಇವು ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತವೆ. ತರಕಾರಿ ಹಾಗೂ ಹಣ್ಣನ್ನು ತಿಂದು ಅದ್ರ ಬೀಜವನ್ನು ನಾವು ಕಸದ ಬುಟ್ಟಿಗೆ ಹಾಕ್ತೇವೆ. ನೆನಪಿರಲಿ ಈ ಬೀಜದಲ್ಲಿಯೂ ಸಾಕಷ್ಟು ಔಷಧಿ ಗುಣವಿದೆ. ಕೆಲವೊಂದು ಬೀಜಗಳು ನಮ್ಮ ತೂಕ ಕಡಿಮೆ ಮಾಡಲು ನೆರವಾಗುತ್ತವೆ. *ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ಬೀಜ ಕಸದ ಬುಟ್ಟಿ ಸೇರುತ್ತೆ. ಆದ್ರೆ ಕಲ್ಲಂಗಡಿ ಬೀಜ ಬಹಳ ಒಳ್ಳೆಯದು. ಹಾಲು ಅಥವಾ ನೀರಿನ ಜೊತೆ ಸೇವನೆ ಮಾಡಬಹುದು. ಇದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ. *ಕಲ್ಲಂಗಡಿ…