ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೋಟ್ ಬ್ಯಾನ್ ಬಳಿಕ ಬಿಡುಗಡೆಯಾದ 2000 ರೂ ಮುಖಬೆಲೆಯ ನೋಟುಗಳನ್ನು ಸ್ವಲ್ಪ ದಿನಗಳಲ್ಲೇ ಬ್ಯಾನ್ ಮಾಡುತ್ತಾರೆಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದನ್ನು ಆರ್ಬಿಐ ಅಲ್ಲಗಳೆದಿತ್ತು. ಆದರೆ ಈದೀಗ ಕೆಲವು ವರದಿಗಳ ಪ್ರಕಾರ, 2000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಆರ್ಬಿಐ ನಿಲ್ಲಿಸಿದೆ ಎಂದು ವರದಿಯಾಗಿದೆ.
ಆರ್ಬಿಐ ಮೂಲಗಳನ್ನು ಆಧಾರಿಸಿ ವರದಿ ಪ್ರಕಟವಾಗಿದ್ದು, 2000 ರೂ. ನೋಟು ಬದಲಿಗೆ 200 ರೂ. ನೋಟ್ ಗಳನ್ನು ಬಿಡುಗಡೆ ಮಾಡಲು ಆರ್ಬಿಐ ಮುಂದಾಗುತ್ತಿದ್ದು, ಈ ನೋಟುಗಳು ಆಗಸ್ಟ್ ತಿಂಗಳಲ್ಲಿ ಚಲಾವಣೆಗೆ ಬರುವ ಸಾಧ್ಯತೆಯಿದೆ.
ಮೈಸೂರಿನಲ್ಲಿರುವ ಆರ್ ಬಿಐ ಮುದ್ರಣ ಸಂಸ್ಥೆಯಲ್ಲಿ ಈಗಾಗಲೇ 200 ರೂ. ನೋಟುಗಳ ಮುದ್ರಣ ಪ್ರಾರಂಭವಾಗಿದ್ದು, ಮುಂದಿನ ತಿಂಗಳಿನಿಂದ ಚಲಾವಣೆಗೆ ಬರಬಹುದೆಂದು ಮೂಲಗಳು ಹೇಳಿವೆ.
2 ಸಾವಿರ ರೂ. ನೋಟುಗಳ ಚಲಾವಣೆ ಹಂತ ಹಂತವಾಗಿ ಕಡಿಮೆ ಮಾಡುತ್ತಿರುವುದರಿಂದ ಜನರ ವ್ಯವಹಾರದ ಸಮಸ್ಯೆ ಆಗದೇ ಇರಲು ಮತ್ತು ಚಿಲ್ಲರೆ ಸಮಸ್ಯೆಯನ್ನು ಕಡಿಮೆ ಮಾಡಲು 200 ರೂ. ನೋಟುಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಇದಕ್ಕೆ ನಿದರ್ಶನ ಎಂಬಂತೆ, ಎಟಿಎಂಗಳಲ್ಲಿ 2000ರೂ ಮುಖಬೆಲೆಯ ನೋಟುಗಳಿಗಿಂತ ಹೆಚ್ಚಾಗಿ, ನಮಗೆ 500ರೂ ಮುಖಬೆಲೆಯ ನೋಟುಗಳು ಸಿಗುತ್ತಿವೆ. ಈ ಅನುಭವ ನಿಮಗೂ ಆಗಿರಬೇಕು.
ವರದಿಗಳ ಪ್ರಕಾರ ಆರ್ಬಿಐ ಈಗ ಹೆಚ್ಚಾಗಿ 500ರೂ ನೋಟುಗಳನ್ನು ಬ್ಯಾಂಕ್ ಗಳಿಗೆ ಪೊರೈಕೆ ಮಾಡುತ್ತಿದ್ದು, 2 ಸಾವಿರ ರೂ. ನೋಟುಗಳನ್ನು ಕೌಂಟರ್ ಗಳಲ್ಲಿ ಮಾತ್ರ ವಿತರಣೆಯಾಗುತ್ತಿವೆ.
ಮೂಲ:
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೈ ನವಿರೇಳಿಸುವ ಅತ್ಯದ್ಭುತ ಆಲ್ಬಂ ಒಂದನ್ನು ರೋರಿಂಗ್ ಸ್ಟಾರ್ ಶ್ರೀ ಮುರುಳಿ ರವರು ಬಿಡುಗಡೆ ಮಾಡಿದ್ದಾರೆ.. ಅದೇ “ತಾಯಿ ಕನ್ನಡ”.. ಹೆಣ್ಣನ್ನು ಪ್ರಧಾನವಾಗಿಟ್ಟುಕೊಂಡು ಮಾಡಿರುವ ಈ ಕನ್ನಡದ ಆಲ್ಬಂಗೆ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ..
ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಲಿದೆ ಎಂಬ ಸುದ್ದಿಯೊಂದು ಹರಿದಾಡಿ ಸಂಚಲನ ಮೂಡಿಸಿತ್ತು. ಆದರೆ ಕೇಂದ್ರ ಸರ್ಕಾರ ಈ ಕುರಿತು ಯಾವುದೇ ಚಿಂತನೆ ನಡೆಸಿಲ್ಲವೆಂದು ಹೇಳಲಾಗಿದೆ. ಇದೇ ವೇಳೆ ಸಾಲಮನ್ನಾ ಹೊರತಾಗಿ ರೈತರಿಗೆ ನೆರವಾಗುವ ಉದ್ದೇಶದಿಂದ ಪ್ರಧಾನಿ ಮೋದಿ ವಿವಿಧ ಸುತ್ತಿನ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕೃಷಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವ ಮೋದಿ, ಕೃಷಿ ಕ್ಷೇತ್ರದಲ್ಲಿ ಜನಪ್ರಿಯ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ ಎನ್ನಲಾಗಿದೆ. ಫಸಲ್…
ಸ್ಮಾರ್ಟ್ಫೋನ್ಸ್ ಇಂದು ನಮ್ಮ ಜೀವನವನ್ನು ಯಾವುದೋ ಒಂದು ವಿಧದಲ್ಲಿ ಪ್ರಭಾವಿಸುತ್ತಿದೆ ಎಂದು ಎಲ್ಲರಿಗೂ ಗೊತ್ತಿರುವುದೇ. ಅಂಗೈಯಲ್ಲಿ ಜಗತ್ತನ್ನು ತೋರಿಸುವ ಹೈಸ್ಪೀಡ್ ಇಂಟರ್ನೆಟ್, ಸಾಮಾಜಿಕ ನೆಟ್ವರ್ಕಿಂಗ್, ಮ್ಯಾಪ್ಸ್, ಗೇಮ್ಸ್, ಎಂಟರ್ ಟೇನ್ಮೆಂಟ್…. ಹೀಗೆ ಸಾಕಷ್ಟು ರೀತಿಯಲ್ಲಿ ಸ್ಮಾರ್ಟ್ಫೋನ್ಸ್ನ್ನು ನಾವು ಬಳಸುತ್ತಿದ್ದೇವೆ. ಅತ್ಯಂತ ಕಡಿಮೆ ಬೆಲೆಗೆ ಇವು ಈಗ ನಮಗೆ ಲಭ್ಯವಾಗುತ್ತಿವೆ
ನಟ ಉಪೇಂದ್ರ ರಾಜಕೀಯಕ್ಕೆ ಬರುವ ವಿಷಯ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕರು ಉಪ್ಪಿ ರಾಜಕೀಯಕ್ಕೆ ಬರಲಿ ಎಂದು ಸ್ವಾಗತಿಸುತ್ತಿದ್ದರೇ, ಇನ್ನೂ ಕೆಲವರು ಇದು ಸಿನಿಮಾದಷ್ಟು ಸುಲಭವಲ್ಲ ಎಂದು ಹೇಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹೊಸತೊಂದು ಚಾಲೆಂಜ್ ಬಂದಿದೆ; ಅದೇ ಬಾಟಲ್ ಕ್ಯಾಪ್ ಚ್ಯಾಲೆಂಜ್. ಇದರಲ್ಲಿ ಚಾಲೆಂಜ್ ತಗೊಂಡವರು ರೌಂಡ್ ಹೌಸ್ ಕಿಕ್ ಹೊಡೆದು ಬಾಟಲ್ಗೆ ಹಾಕಿದ ಮುಚ್ಚಳವನ್ನು ತೆಗೆಯಬೇಕು. ಜೇಸನ್ ಸ್ಟ್ಯಾಥಮ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ರಂತಹ ನಟರು ಹಾಗೂ ಹಲವು ಫೈಟರ್ಗಳು ಇದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಲ್ಲೊಬ್ಬ ಗಾಯಕಿ ಕೇವಲ ತನ್ನ ಧ್ವನಿಯಿಂದಲೇ ಬಾಟಲ್ ಕ್ಯಾಪ್ ಎಗರಿಸಿರುವಂತೆ ಕಾಣುತ್ತದೆ. ಮರಿಯಾ ಕ್ಯಾರಿ ಎನ್ನುವ ಅಮೆರಿಕಾದ ಗಾಯಕಿ ಟ್ವೀಟರ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅವರು ಹೈ ಪಿಚ್ನಲ್ಲಿ ರಾಗ ಎಳೆಯುತ್ತಿದ್ದಂತೆ…
ನಕಲಿ ಸಿಮ್ ಕಾರ್ಡ್ ಬಳಸಿ ಕೆಲವರು ಪಾತಕ ಕೃತ್ಯಗಳನ್ನು ನಡೆಸುತ್ತಿರುವುದು ಅಗಾಗ ವರದಿಯಾಗುತ್ತಲೇ ಇದೆ. ಮೊಬೈಲ್ ಸಿಮ್ ಕಾರ್ಡ್ ಗಳ ದುರ್ಬಳಕೆ ತಪ್ಪಿಸಲು ಆಧಾರ್ ಲಿಂಕ್ ಮಾಡುವುದನ್ನು ಸರ್ಕಾರ ಈಗಾಗಲೇ ಕಡ್ಡಾಯಗೊಳಿಸಿದೆ.