ಆರೋಗ್ಯ

ಊಟ ಮಾಡಿದ ಕೂಡಲೆ ಈ 7 ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು..! ಯಾಕೆ ಗೊತ್ತಾ.? ತಿಳಿಯಲು ಈ ಲೇಖನ ಓದಿ …

1576

ಇಂದು ನಮ್ಮ ಜೀವನ ವಿಧಾನದಲ್ಲಿ ನಾವು ಅನುಸರಿಸುತ್ತಿರುವ ಅಭ್ಯಾಸಗಳು, ಮಾಡುತ್ತಿರುವ ತಪ್ಪುಗಳಿಂದ ನಮಗೆ ಅನೇಕ ವಿಧದ ದೀರ್ಘಕಾಲಿಕ ಅನಾರೋಗ್ಯ ಸಮಸ್ಯೆಗಳು ಬರುತ್ತಿವೆ. ಅವುಗಳಲ್ಲಿ ಸ್ಥೂಲಕಾಯ, ಹೃದ್ರೋಗಗಳು, ಮಧುಮೇಹ ತುಂಬಾ ಮುಖ್ಯವಾದದ್ದ.ಅದು ಮುಖ್ಯವಾಗಿ ಊಟ ಮಾಡಿದ ಬಳಿಕ ನಾವು ಪಾಲಿಸುತ್ತಿರುವ ಕೆಲವು ಅಭ್ಯಾಸಗಳು ನಮಗೆ ಕೇಡುಂಟು ಮಾಡುತ್ತಿವೆ. ಅವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

1.ಊಟ ಮಾಡಿದ ಮೇಲೆ ತಕ್ಷಣವೇ ಹಣ್ಣನ್ನು ತಿನ್ನುವುದರಿಂದ ಆಹಾರ ಬೇಗ ಜೀರ್ಣವಾಗಿವುದಿಲ್ಲ. ಹೊಟ್ಟೆಯಲ್ಲ ಗಾಳಿಯಿಂದ ತುಂಬಿಕೊಳ್ಳುತ್ತದೆ. ಇದರಿಂದ ಅಜೀರ್ಣವಾಗುವ ಅವಕಾಶವಿರುತ್ತದೆ.

 

ಕೆಲವು ಸಂಧರ್ಭಗಳಲ್ಲದರೆ, ಫುಡ್ ಪಾಯಿಜನ್ ಆಗುವ ಅವಕಾಶ ಇದೆ. ಒಂದು ವೇಳೆ ಪ್ರತೀದಿನ ಹಣ್ಣು ಸೇವಿಸುವ  ಅಭ್ಯಾಸವಿದ್ದರೆ, ಮಾತ್ರ ಒಂದು ಗಂಟೆಯ ಮುಂಚಿತವಾಗಿ ಅಥವಾ ಗಂಟೆಯ ನಂತರ ತಿನ್ನುವುದು ಒಳ್ಳೆಯದು.

2.ಬೆಳಿಗ್ಗೆಯಾದರೂ, ಸಂಜೆಯಾದರೂ ಊಟ ಮಾಡಿದ ತಕ್ಷಣ ಸ್ನಾನ ಮಾಡ ಬಾರದು. ಹಾಗೆ ಮಾಡಿದರೆ, ರಕ್ತವೆಲ್ಲವೂ ಕಾಲುಗಳಿಗೆ, ಕೈಗಳಿಗೆ ಒಟ್ಟು ದೇಹಕ್ಕೆಲ್ಲ ಹರಿದು, ಹೊಟ್ಟೆ ಹತ್ತಿರ ರಕ್ತವು ಕಡಿಮೆಯಾಗಿ, ಜೀರ್ಣ ಪ್ರಕ್ರಿಯೆಯು ನಿಧಾನವಾಗುತ್ತದೆ.

ಇದರಿಂದ ಜೀರ್ಣ ವ್ಯವಸ್ಥೆಯ ಸಾಮರ್ಥ್ಯ ಕಡಿಮೆಯಾಗುತ್ತದೆ.

3.ನಮ್ಮ ದೇಶದಲ್ಲಿ ಹೆಚ್ಚಿನ ಜನರು ಈ ತಪ್ಪನ್ನು ಮಾಡುತ್ತಿರುತ್ತಾರೆ. ಅನ್ನವನ್ನು ತಿಂದ ತಕ್ಷಣ ಟೀ ಕುಡಿಯುವುದರಿಂದ ಅಧಿಕ ಪ್ರಮಾಣದಲ್ಲಿ ಯಾಸಿಡ್ ಬಿಡುಗಡೆ ಯಾಗುತ್ತದೆ. ಜೀರ್ಣಕ್ರಿಯೆಯು ನಿಧಾನವಾಗಿ ಜೀರ್ಣ ವಾಗುತ್ತದೆ.

4.ಊಟ ಮಾಡಿದ ತಕ್ಷಣ ಮಾಡಿದರೆ ಆಹಾರವು ಸರಿಯಾಗಿ ಜೀರ್ಣ ವಾಗದೆ ಗ್ಯಾಸ್ಟ್ರಿಕ್, ಇನ್ ಫೆಕ್ಷನ್ ಬರುವ ಅವಕಾಶಗಳು ಹೆಚ್ಚಾಗಿರುತ್ತವೆ. ಸಾಮಾನ್ಯವಾಗಿ ಊಟ ಮಾಡಿದ ನಂತರ ಯಾರಿಗಾದ್ರೂ, ನಿದ್ದೆ ಬಂದರೆ ಒಂದು 10 ನಿಮಿಷಗಳು ಮಲಗಿ ಎದ್ದೇಳುವುದು ಒಳ್ಳೆಯದು. ಹಾಗೆ ನಿದ್ದೆಯನ್ನು ಮುಂದುವರಿಸಿದರೆ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ.

5.ತಿಂದತಕ್ಷಣ ಈಜಾಡುವುದು ಅಪಾಯವೆಂದು ಆಯುರ್ವೇದ ಹೇಳುತ್ತದೆ. ರಕ್ತ ಪ್ರಸರಣದ ವೇಗ ಅಧಿಕವಾಗಿ ಶರೀರದ ಮಾಂಸ ಕಂಡಗಳು ಸ್ಥಗಿತಗೊಳ್ಳುತ್ತವೆಂದು ಹೇಳುತ್ತದೆ. ವ್ಯಾಯಾಮ, ಜಿಮ್, ಆಟಗಳೂ ಸಹ ಆಡಬಾರದು. ಕನಿಷ್ಠ 30 ರಿಂದ 60 ನಿಮಿಷಗಳ ಬಳಿಕವಷ್ಟೇ ಆ ಕೆಲಸಗಳನ್ನು ಮಾಡಬೇಕು.

6.ತುಂಬಾ ಜನರು ಹೆಚ್ಚಾಗಿ ತಿಂದಿದ್ದೇವೆಂಬ ಉದ್ದೇಶದಿಂದ ಬೆಲ್ಟನ್ನು ಲೂಸ್ ಮಾಡಿಕೊಳ್ಳುತ್ತಾರೆ. ಹಾಗೆ ಮಾಡಬಾರದು.. ಇದರಿಂದ ಎಲ್ಲಾದರು ಸ್ಥಗಿತಗೊಂಡಿರುವ ಆಹಾರವು ಕೆಳಗೆ ಬರುವುದಿಲ್ಲ .. ಇದರಿಂದ ಸರಿಯಾಗಿ ಜೀರ್ಣವಾಗುವುದಿಲ್ಲ.

7.ಧೂಮಪಾನ ಯಾವಾಗ ಮಾಡಿದರೂ ಹಾನಿಕರವೇ. ಆದರೆ ತಿಂದನಂತರ ಧೂಮಪಾನ ಮಾಡಲೇಬಾರದು. ಹಾಗೆ ಮಾಡುವುದರಿಂದ, ಒಂದೇಸಾರಿ 10 ಸಿಗೆರೆಟ್’ಗಳನ್ನು ಕುಡಿದ ಪರಿಣಾಮ ಪಿತ್ತಕೋಶದ ಮೇಲೆ ಬೀರುತ್ತದೆ. ಇದರಿಂದ ಶ್ವಾಸಕೋಶಗಳ ಮೇಲಿನ ಭಾರ ಅಧಿಕ ವಾಗುತ್ತದೆಂದು ಆಯುರ್ವೇದ ಹೇಳುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ