ಸಿನಿಮಾ

ಉಪ್ಪಿ ರಾಜಕೀಯ ಎಂಟ್ರಿ?ಯಾವ ರಾಜಕೀಯ ಪಕ್ಷ ಸೇರ್ತಾರೆ ಗೊತ್ತಾ?ಮುಂದೆ ಓದಿ…

457

ದೇಶದ ರಾಜಕಾರಣದಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್‍ಗಳಾದ ರಜನಿಕಾಂತ್ ಹಾಗೂ ಕಮಲಹಾಸನ್ ಅವರು ರಾಜಕೀಯಕ್ಕೆ ಬರುತ್ತಿರುವ ಬೆನ್ನಲ್ಲೇ ನಮ್ಮ ನಾಡಿನ ರಿಯಲ್‍ಸ್ಟಾರ್ ಉಪೇಂದ್ರ ಸಹ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಉಪೇಂದ್ರ ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಅಂಗಳಕ್ಕೂ ಇಳಿಯಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಹಾಗೂ ಅಭಿಮಾನಿಗಳು ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದಾರಾದರೂ ಈ ಬಗ್ಗೆ ಉಪ್ಪಿ ಎಲ್ಲೂ ಅಧಿಕೃತ ಮಾಹಿತಿ ನೀಡಿಲ್ಲ.

ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಆರಂಭವಾಗಿದ್ದು, ಉಪೇಂದ್ರ ರಾಜಕೀಯ ಪ್ರವೇಶ ಸುದ್ದಿ ದಟ್ಟವಾಗಿದೆ. ಈ ಕುರಿತು ನಾಳೆ ಉಪ್ಪಿ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆಯೂ ಉಪೇಂದ್ರ ರಾಜಕೀಯ ಬರುತ್ತಾರೆ ಎಂದು ಹೇಳಲಾಗುತ್ತಿತ್ತಾದರೂ ಈ ಬಗ್ಗೆ ಅವರು ಅಲ್ಲಗಳೆದಿದ್ದರು. ತಮ್ಮ ಚಿತ್ರಗಳಲ್ಲಿ ಸಮಾಜದಲ್ಲಾಗುತ್ತಿರುವ ಭ್ರಷ್ಟಾಚಾರ ಹಾಗೂ ರಾಜಕಾರಣದ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸಿದ್ದರು.

ಉಪೇಂದ್ರರವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದು, ಈ ಮೂಲಕ ಉಪೇಂದ್ರ ಅವರು ರಾಜಕೀಯಕ್ಕೆ ಎಂಟ್ರ ಕೊಟ್ಟರೇ ಬಿಜೆಪಿ ಸೇರಲಿದ್ದಾರೆಯೇ ಅಥವಾ ತಾವೇ ಸ್ವತಂತ್ರ ಪಕ್ಷ ಕಟ್ಟಲಿದ್ದಾರೆಯೇ ಎಂಬ ಪ್ರಶ್ನೆ ಮೂಡತೊಡಗಿದೆ.

ತಮ್ಮ ರಾಜಕೀಯ ಪ್ರವೇಶದ ಕುರಿತಾಗಿ ಅಭಿಮಾನಿಗಳು, ಆತ್ಮೀಯರೊಂದಿಗೆ ಉಪೇಂದ್ರ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಬೆಳವಣಿಗೆಗಳ ಕುರಿತಾಗಿ ಇತ್ತೀಚೆಗೆ ಟ್ವಿಟರ್ ನಲ್ಲಿ ಅವರು ನೀಡುತ್ತಿದ್ದ ಅಭಿಪ್ರಾಯಗಳು ಹೆಚ್ಚಿನ ಗಮನಸೆಳೆದಿದ್ದವು.

ಆದರೆ ಉಪ್ಪಿ ಅವರ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದಾದರೂ ಪಕ್ಷದ ಚಿಹ್ನೆಯಿಂದಲೋ ಅಥವಾ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೋ ಅಥವಾ ತಾವೇ ಹೊಸ ಪಕ್ಷವನ್ನು ಹುಟ್ಟಿ ಹಾಕುತ್ತಾರೋ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು.

ಅಪಾರ ಅಭಿಮಾನಿಗಳನ್ನು ಹೊಂದಿರುವ ಉಪೇಂದ್ರ ಅವರು ರಾಜಕೀಯಕ್ಕೆ ಪ್ರವೇಶ ಪಡೆಯುತ್ತಿರುವುದಕ್ಕೆ ಅವರ ಅಪಾರ ಅಭಿಮಾನಿಗಳು ಸಹಮತ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

ಉಪೇಂದ್ರ ಅವರು ತಮ್ಮ ಸೂಪರ್, ಟೋಪಿವಾಲ, ಓಂಕಾರ ಚಿತ್ರಗಳಲ್ಲಿ ನಮ್ಮ ರಾಜಕಾರಣಿಗಳು ವಿದೇಶಗಳಲ್ಲಿ ಇಟ್ಟಿರುವ ಕಪ್ಪು ಹಣದ ಬಗ್ಗೆ ವಿಷಯದ ಬಗ್ಗೆ ಹಾಗೂ ಎಚ್‍ಟುಒ ಚಿತ್ರದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ನೀರಿನ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಮೂಲಕ ಗಮನ ಸೆಳೆದಿದ್ದರು.  ದೇಶದ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿರುವ ಉಪೇಂದ್ರ ಅವರು ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.

ಸಿಕ್ಕಿಂ ಗಡಿಯಲ್ಲಿ ಚೀನಾ ಉದ್ವಿಗ್ನತೆ ಸೃಷ್ಟಿಸಿ ಯುದ್ಧದ ಭೀತಿ ಆವರಿಸಿರೋ ಈ ಹೊತ್ತಿನಲ್ಲಿ ದೇಶದಲ್ಲಿರೋ ನಾವು ಚಿಕ್ಕ ಚಿಕ್ಕ ವಿಷಯಗಳಿಗೆ ಕಚ್ಚಾಡುತ್ತಿದ್ದೇವೆ ಎಂದು, ಉಪೇಂದ್ರರವರು ಇತ್ತೀಚೆಗೆ ಒಂದು ಟ್ವೀಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದರು.

ಭಾರತೀಯರು ಹೇಗಿದ್ದರೂ ಬಂದ್‌ಗಳಿಗೆ ಹೆಸರು ಮಾಡಿದವರು, ಯಾವುದೋ ಸಣ್ಣ ಪುಟ್ಟ ವಿಷಯಕ್ಕೆ ಬಂದ್‌ ಮಾಡಿ ಬೀದಿಗಿಳಿಯುವ ನಾವು ಯಾಕೆ ಭಾರತ್ ಬಂದ್ ಮಾಡಿ ನಮ್ಮ ಯೋಧರನ್ನು ಬೆಂಬಲಿಸಬಾರದು? ಆ ಮೂಲಕ ಯಾಕೆ ಚೀನಾಗೆ ಎಚ್ಚರಿಕೆ ನೀಡಬಾರದು ಎಂದು ಉಪೇಂದ್ರ ಇತ್ತೀಚೆಗಷ್ಟೇ ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ..ಈ ರಾಶಿಗಳಿಗೆ ವಿಪರೀತ ಧನಲಾಭ..ನಿಮ್ಮ ರಾಶಿಯೂ ಇದೆಯಾ ನೋಡ..

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(14 ಏಪ್ರಿಲ್, 2019) ನಿಮ್ಮ ನಿರಾಶಾದಾಯಕ ನಡವಳಿಕೆಯಂದಾಗಿ ನೀವು ಯಾವುದೇ ಪ್ರಗತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಚಿಂತೆ ನಿಮ್ಮ ಚಿಂತನಾ…

  • ಆಧ್ಯಾತ್ಮ

    ವಿಜ್ಞಾನಿಯಾಗಿ ಆಯ್ಕೆಆಗಿದ್ದ ಇವರು, ಆಧ್ಯಾತ್ಮಿಕ ಗುರುಗಳಾಗಿದ್ದರ ಹಿಂದೆ ಇದೆ ಒಂದು ರೋಚಕ ಕತೆ..!ತಿಳಿಯಲು ಈ ಲೇಖನ ಓದಿ…

    ಇದು ಬಾಲಗಂಗಾಧರನಾಥ ಸ್ವಾಮೀಜಿ ಮಹಾ ಸಮಾಧಿಯಾದ ಬಳಿಕ ಆದಿ ಚುಂಚನಗಿರಿ ಮಠದ 72ನೇ ಪೀಠಾಧಿಕಾರಿಯಾದ ನಿರ್ಮಲಾನಂದನಾಥ ಸ್ವಾಮೀಜಿ ಪೂರ್ವಾಶ್ರಮದ ವೃತ್ತಾಂತ.

  • ಸಿನಿಮಾ, ಸುದ್ದಿ

    ಮಜಾಟಾಕೀಸ್ ಅಂತೂ ಬೇಡವೇ ಬೇಡ, ಕಾಮಿಡಿ ಚಿತ್ರಗಳಿಂದ ಬಹುದೂರ ಉಳಿದ ಅಪರ್ಣಾ.

    ದಶಕಗಳ ಹಿಂದೆ ಅಪರ್ಣಾ ಎಂದರೇ ನೆನಪಾಗುವುದು ಅಚ್ಚ ಕನ್ನಡದಲ್ಲಿ ಮಾತನಾಡುವ ಹೆಮ್ಮೆಯ ಕನ್ನಡತಿ. 90ರ ದಶದಲ್ಲಿ ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಲವು ಕಾರ್ಯಕ್ರಮಗಳ ನಿರೂಪಕರಾಗಿ ಕೆಲಸ ಮಾಡಿ ತಮ್ಮನ್ನು ತಾವು ಸ್ಥಾಪಿಸಿಕೊಂಡ್ಡಿದ್ದರು. ಅವರ ಅಚ್ಛ ಕನ್ನಡದ ನಿರೂಪಣೆ ಎಲ್ಲರಿಗೂ ಬಹಳ ಇಷ್ಟುವಾಗುತ್ತಿತ್ತು. ಅದೆಷ್ಟೋ ಜನರಿಗೆ ತಿಳಿದಿಲ್ಲ ಬೆಂಗಳೂರು ಮೆಟ್ರೊದಲ್ಲಿ ಮಾಡಿದ ಪ್ರಯಾಣಿಕರ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್‌ನ ದಾಖಲೆಯ ಪ್ರಕಟಣೆಗಳಿಗಾಗಿ ಅಪರ್ಣಾ ಧ್ವನಿ ನೀಡಿದ್ದಾರೆ ಎಂಬುದು. ಕನ್ನಡದ ದಿಗ್ಗಜ ನಟರಾದ  ಡಾ.ವಿಷ್ಣುವರ್ಧನ್, ಅಂಬರೀಶ್, ಆರತಿ, ಜೈಜಗದೀಶ್, ವಜ್ರಮುನಿ,…

  • ಸುದ್ದಿ

    ನಿಶ್ಚಿತಾರ್ಥ ಮಾಡಿಕೊಂಡ ಕಾಮಿಡಿ ಕಿಲಾಡಿ ಜೋಡಿಗಳು…

    ಬೆಂಗಳೂರು ಮುದ್ದಿನಪಾಳ್ಯ ದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಇಂದು ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಸ್ಪರ್ಧಿಗಳಾದ ಗೋವಿಂದೇಗೌಡ ಮತ್ತು ದಿವ್ಯಾ ಅವರ ನಿಶ್ಚಿತಾರ್ಥ ನೆರವೇರಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನ ಕ್ಯೂಟ್ ಕಪಲ್ ಗೋವಿಂದೇ ಗೌಡ ಹಾಗೂ ದಿವ್ಯಾಶ್ರೀ ಭಾನುವಾರ ಒಬ್ಬರನೊಬ್ಬರು ತಮ್ಮ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಸರಳವಾಗಿ ನಡೆದಿದ್ದು, ಕುಟುಂಬಸ್ಥರು ಹಾಗೂ ಆಪ್ತ ಸಂಬಂಧಿಕರು ಮಾತ್ರ ಆಗಮಿಸಿದ್ದರು. ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಸ್ಪರ್ಧಿಗಳಾಗಿದ್ದ ಗೋವಿಂದೇಗೌಡ ಮತ್ತು ದಿವ್ಯಾ ಸ್ನೇಹಿತರಾಗಿದ್ದರು….

  • ಆರೋಗ್ಯ

    ಹಣೆಗೆ ತಿಲಕವಿಡುವುದರಿಂದ ಆಗುವ ಉಪಯೋಗಗಳ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಹಿಂದೂ ಧರ್ಮದಲ್ಲಿ ಹಣೆಗೆ ತಿಲಕವಿಟ್ಟುಕೊಳ್ಳುವ ಸಂಪ್ರದಾಯವಿದೆ. ಯಾವುದೇ ಶುಭ ಕಾರ್ಯ, ಪೂಜೆ ವೇಳೆ ತಿಲಕವಿಟ್ಟುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಹೋದ ಭಕ್ತರು ತಿಲಕವಿಟ್ಟುಕೊಳ್ಳುವ ಪದ್ಧತಿಯಿದೆ.

  • ಉಪಯುಕ್ತ ಮಾಹಿತಿ

    ನೀವೂ ಪ್ರತೀ ದಿವಸ ತಪ್ಪದೆ ಸ್ನಾನ ಮಾಡುತ್ತೀರಾ.!

    ಕೊರೆಯುವ, ಥರಗುಟ್ಟುವ ಚಳಿಯಲ್ಲಿ ಕೆಲವರು ಪ್ರತಿದಿನ ಸ್ನಾನ ಮಾಡಲು ಇಷ್ಟ ಪಡುವುದಿಲ್ಲ. ಅನೇಕರು ಪ್ರತಿದಿನ ಸ್ನಾನ ಮಾಡ್ತಾರೆ. ಪ್ರತಿದಿನ ಸ್ನಾನ ಮಾಡೋರು ಬೆಸ್ಟ್ ಅಂತಾ ನೀವು ಹೇಳಬಹುದು. ಆದ್ರೆ ಸಂಶೋಧನೆಯೊಂದು ನಿಮಗೆ ಆಶ್ಚರ್ಯವಾಗುವಂತಹ ಸಂಗತಿ ಹೇಳಿದೆ. ಪ್ರತಿದಿನ ಸ್ನಾನ ಮಾಡೋರು ಗಮನ ಇಟ್ಟು ಓದಿ. ಪ್ರತಿದಿನ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಹಾಗೆ ಮಾಡುವವರು ಹೆಚ್ಚಿನ ಬಾರಿ ಅನಾರೋಗ್ಯಕ್ಕೆ ತುತ್ತಾಗ್ತಾರಂತೆ. ಯಸ್, ಸಂಶೋಧನೆಯೊಂದು ಈ ವಿಷಯವನ್ನು ಹೇಳಿದೆ. ನಮ್ಮ ದೇಹಕ್ಕೆ ಎಣ್ಣೆಯ ಅವಶ್ಯಕತೆ ಇದೆ. ದೇಹದಲ್ಲಿರುವ ತೈಲದ ಅಂಶ…