ಉಪಯುಕ್ತ ಮಾಹಿತಿ

‘ಉಪ್ಪಿನ ಕಾಯಿ’ ಪ್ರಿಯರೇ ಜಾಸ್ತಿ ಉಪ್ಪಿನ ಕಾಯಿ ತಿಂದ್ರೆ, ಏನಾಗುತ್ತೆ ಗೊತ್ತಾ..?

1316

ಉಪ್ಪಿನ ಕಾಯಿ ಎಂದರೆ ಸಾಕು ಬಾಯಲ್ಲಿ ನೀರೂರಿ ಬಿಡುತ್ತೆ ,ಅದರಲ್ಲೂ ಉಟಕ್ಕೆ  ಉಪ್ಪಿನ ಕಾಯಿ ಬೇಕೆ ಬೇಕು , ಊಟಕ್ಕೆ ತಕ್ಕ ಉಪ್ಪಿನಕಾಯಿ ಇದ್ದರೆ ಊಟ ರುಚಿಕರವಾಗಿರುತ್ತದೆ. ಯಾವುದೇ ಸಮಾರಂಭ  ಔತಣಕೂಟದ ಎಲೆಯಲ್ಲಿ ಊಟಕ್ಕೆ  ಉಪ್ಪಿನ ಕಾಯಿ ಇಲ್ಲ ಅಂದ್ರೆ  ಅ ಭೋಜನ ಅಸಂಪೂರ್ಣ  ಎನ್ನಿಸುತ್ತದೆ.

ಉಪ್ಪಿನಕಾಯಿಯಲ್ಲಿ ಹಲವು ಬಗೆಗಳಿವೆ:-  

ಮಾವಿನಕಾಯಿ, ಶುಂಠಿ, ನೆಲ್ಲಿಕಾಯಿ, ನಿಂಬೆಕಾಯಿ, ಎರಳಿಕಾಯಿ, ಬೆಳ್ಳುಳ್ಳಿ, ಹಾಗಲಕಾಯಿ, ಟೊಮೊಟೊ, ಮುಂತಾದವುಗಳಿಂದ ತಯಾರಿಸುವ ಉಪ್ಪಿನಕಾಯಿ ರುಚಿ ಅನುಭವಿಸಿದವರಿಗಷ್ಟೆ ತಿಳಿಯುತ್ತದೆ. ಯಾವುದೇ ಉಪ್ಪಿನಕಾಯಿ ತಿಂದರೂ ಪರವಾಗಿಲ್ಲ. ಆದರೆ ಹಿತಮಿತವಾಗಿರಬೇಕು. ಅತಿಯಾಗಿ ತಿಂದ್ರೆ  ಆರೋಗ್ಯಕ್ಕೆ ಹಾನಿಯುಂಟಾಗಲಿದೆ.

ಭಾರತೀಯರು ಉಪ್ಪಿನಕಾಯಿ ಪ್ರಿಯರು:-

ದೇಶದ ಎಲ್ಲಾ ಭಾಗಗಳಲ್ಲೂ ಬಗೆಬಗೆಯ ಉಪ್ಪಿನಕಾಯಿಗಳು ಬಳಕೆಯಲ್ಲಿವೆ. ಅವರವರ ರುಚಿಗೆ ತಕ್ಕಂತೆ ತಯಾರಾಗುತ್ತವೆ. ಊಟಕ್ಕೆ ಮಾತ್ರ ಉಪ್ಪಿನಕಾಯಿ ಬಳಸುವುದಷ್ಟೆ ಅಲ್ಲ. ಯಾವುದೇ ತಿಂಡಿ ಜತೆಯಲ್ಲೂ ಬಳಸಬಹುದಾಗಿದೆ. ಇಡ್ಲಿ, ರೊಟ್ಟಿ, ದೋಸೆ, ಮುಂತಾದ ತಿಂಡಿಗಳ ಜತೆಯಲ್ಲೂ ತಿನ್ನಬಹುದು. ಎಷ್ಟೋ ಬಾರಿ ಚಟ್ನಿ ಬದಲಿಗೆ ಉಪ್ಪಿನಕಾಯಿ ತಿಂದರೆ ಒಳ್ಳೆಯದು. ಅದಕ್ಕಿಂತ ಹೆಚ್ಚು ತಿಂದರೆ ಅನಾಹುತಗಳಿಗೆ ಆಹ್ವಾನ ನೀಡಿದಂತೆಯೇ.

 

ಉಪ್ಪಿನಕಾಯಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಉಪ್ಪು, ಮಸಾಲೆಗಳಿರುತ್ತವೆ. ಉಪ್ಪಿನಕಾಯಿ ತಯಾರಿಸುವಾಗ ಅದು ಬಹಳ ದಿನ ಕೆಡದಂತಿರಲು ಹೆಚ್ಚಿನ ಪ್ರಮಣದಲ್ಲಿ ಎಣ್ಣೆ ಬಳಸುವುದುಂಟು. ಉಪ್ಪಿನಕಾಯಿ ಹೋಳುಗಳು ಎಣ್ಣೆಯನ್ನು ಹೀರಿಕೊಳ್ಳುತ್ತವೆ.  ಪರಿಸ್ಥಿತಿ ಹೀಗಿರುವಾಗ ನಾವೇನಾದರೂ ಅತಿಯಾಗಿ ಉಪ್ಪಿನಕಾಯಿ ಸೇವಿಸಿದರೆ,  ಎಣ್ಣೆಯಲ್ಲಿರುವ ಕೊಲೆಸ್ಟ್ರಾಲ್ ಅಂಶಗಳು ದೇಹವನ್ನು ಸೇರಿ ಹೃದಯ ಮತ್ತು ರಕ್ತನಾಳಗಳ ಮೇಲಿನ ಒತ್ತಡ ಹೆಚ್ಚಾಗಲು ಕಾರಣವಾಗುತ್ತವೆ. ಉಪ್ಪಿನಕಾಯಿಯಲ್ಲಿ ಉಪ್ಪಿನಾಂಶವೂ ಅಧಿಕವಾಗಿರುತ್ತದೆ. ಇದೂ ಕೂಡ ಹೃದಯದೊತ್ತಡಕ್ಕೆ ಕಾರಣವಾಗುತ್ತದೆ.

ಹೆಚ್ಚು ಉಪ್ಪು ದೇಹಕ್ಕೆ ಸೇರಿದಲ್ಲಿ ಉರಿಯೂತ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳಲು ಆಸ್ಪದವಾಗಿ ಹಲವು ತೊಂದರೆಗಳಿಗೀಡು ಮಾಡುತ್ತದೆ. ಹೃದಯ ಸಂಬಂಧಿ ಖಾಯಿಲೆ ಗಳಿದ್ದವರು,  ಉಪ್ಪಿನಕಾಯಿ ಸೇವನೆ ಕುರಿತು ಎಚ್ಚರದಿಂದಿರಬೇಕು. ಹೃದಯದ ಒತ್ತಡದ ಸಮಸ್ಯೆಗಳಿರುವವರು ಇದರ ಬಳಕೆಯಿಂದ ದೂರ ಉಳಿದರೂ ಒಳ್ಳೆಯ ದಾಗುತ್ತದೆ. ಉಪ್ಪಿನಕಾಯಿಯಲ್ಲಿರುವ ಸೋಡಿಯಂ ಲವಣ, ಹೊಟ್ಟೆಯುಬ್ಬರಿಕೆಗೂ ದಾರಿ ಮಾಡಿಕೊಡುತ್ತದೆ. ಈ ಲವಣಾಂಶದಿಂದ ಹೊಟ್ಟೆಯಲ್ಲಿ ನೀರು ಉಳಿದು ಕೊಳ್ಳಲು ಸಾಧ್ಯವಾಗಿ ಕೆಲವು ಆಮ್ಲೀಯ ವಾಯುಗಳು ಉತ್ಪತ್ತಿಯಾಗುತ್ತವೆ.

ಉಪ್ಪಿನಕಾಯಿಯನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಮೂತ್ರಪಿಂಡಗಳ ಕಾರ್ಯದ ಮೇಲೂ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಉಪ್ಪಿನ ಕಾಯಿಯಲ್ಲಿರುವ ಕೆಲವು ಲವಣಗಳು ಮೂತ್ರಪಿಂಡಗಳ ಕೆಲಸ ಹೆಚ್ಚುವಂತೆ ಮಾಡುವುದರಿಂದ ಅಡ್ಡ ಪರಿಣಾಮಗಳಾಗುತ್ತವೆ.  ಆದ್ದರಿಂದ ಉಪ್ಪಿನಕಾಯಿಯನ್ನು ಮಿತವಾಗಿ ಸೇವಿಸಿ, ಆರೋಗ್ಯದ ಸುಧಾರಣೆಗೆ ಗಮನ ಹರಿಸಿ. ಊಟಕ್ಕೆ ತಕ್ಕ ಉಪ್ಪಿನಕಾಯಿಯಷ್ಟೆ ಇರಲಿ.ಹಾಗಿದ್ದಾಗ ಊಟದ ರುಚಿ, ದೈಹಿಕ ಆರೋಗ್ಯವೂ ಚೆಂದವಾಗಿರುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಪಾಲಕ್ ಸೊಪ್ಪಿನಲ್ಲಿರುವ ಆರೋಗ್ಯಕಾರಿ ಉಪಯೋಗಗಳ ಬಗ್ಗೆ ನಿಮ್ಗೆ ಗೊತ್ತಾ.?ತಿಳಿಯಲು ಈ ಲೇಕನ ಓದಿ ಶೇರ್ ಮಾಡಿ..

    ಸೊಪ್ಪು ತರಕಾರಿಗಳನ್ನ ಸೇವಿಸಿದರೆ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ ಹಾಗೂ ನಮ್ಮ ಅರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂಬುದು ಹಲವರ ನಂಬಿಕೆ. ಆದರೆ ಯಾವ ಸೊಪ್ಪು ತರಕಾರಿ ಯಾವ ರೋಗಕ್ಕೆ ಹಾಗೂ ಯಾವುದರಿಂದ ಲಾಭ ಹೆಚ್ಚು ಎಂಬುದು ತಿಳಿದಿಲ್ಲ. ಪಾಲಕ್ ಸೊಪ್ಪಿನಲ್ಲಿ ಅಧಿಕವಾದ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಬಹಳ ಉತ್ತಮವಾದದ್ದು.

  • ಪ್ರೇಮ, ಸಂಬಂಧ, ಸ್ಪೂರ್ತಿ

    ಸಾವು ಬದುಕಿನ ಮಧ್ಯೆ ಹೋರಾಟ, ತಂದೆಗೆ ಲಿವರ್ ದಾನ ಮಾಡಿ ಪಿತೃಪ್ರೇಮ ಮೆರೆದ ಯುವತಿ.

    ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ತಂದೆಗೆ ಲಿವರ್ ಸಿಗುತ್ತಾ ಅಂತ ಮಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಆದರೆ ಕಾದಿದ್ದೆ ಬಂತು. ಲಿವರ್ ಮಾತ್ರ ಸಿಗಲೇ ಇಲ್ಲ. ಲಿವರ್ ಸಿಗದೇ ಇದ್ದರೆ ತಂದೆ ಮೃತ್ಯು ಕಟ್ಟಿಟ್ಟ ಬುತ್ತಿ ಎಂದು ತಿಳಿದ ಮಗಳು ಈಗ ಕೊನೆಗೆ ತನ್ನ ಪಿತ್ತಜನಕಾಂಗವನ್ನೇ ನೀಡುವ ಮೂಲಕ ಜನ್ಮ ನೀಡಿದ ತಂದೆಗೆ ಮರುಜನ್ಮ ನೀಡಿದ್ದಾಳೆ. ಹೌದು. ಐಸಿಯುನಲ್ಲಿ ಹೋರಾಡುತ್ತಿದ್ದ ತನ್ನ ತಂದೆಗಾಗಿ ಮಗಳೊಬ್ಬಳು ಲಿವರ್ ನ ಒಂದು ಭಾಗವನ್ನು ದಾನ ಮಾಡಿರುವ ಘಟನೆ ತಮಿಳುನಾಡಿನ…

  • inspirational, ಸುದ್ದಿ

    ಕ್ವಾರಂಟೈನ್‌ ಸಮಯವನ್ನು ವ್ಯರ್ಥ ಮಾಡದೇ, ಗಣೇಶ ವಿಗ್ರಹ ರಚಿಸಿದ ಕಲೆಗಾರ. ಸಿಕ್ಕ ಬೆಲೆಯೆಷ್ಟು ಗೊತ್ತಾ?

    ಈ ಕೊರೊನ ಸಮಯದ ಲಾಕ್ ಡೌನ್ ನಲ್ಲಿ ಈ ಕಲಾವಿದ ಕಲ್ಲಿನಲ್ಲಿ ರಚಿಸಿದ ಕಲಾಕೃತಿಗೆ ಒಳ್ಳೆಯ ಬೆಲೆ ದೊರಿತಿದೆ ಈ ಲಾಕ್ ಡೌನ್ ನಲ್ಲಿಇದ್ದರು ಸಮಯವನ್ನು ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಂಡಿದ್ದಾರೆ. ಹೌದು ಈ ಕಲಾಕೃತಿಯನ್ನು ಮಾಡಿದ ಮಲ್ಲಪ್ಪ ಬಡಿಗೇರ ಅವರು ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದವರು . ಈ ಕ್ವಾರಂಟೈನ್‌ನ 14 ಅವಧಿಯಲ್ಲಿ ಕಲ್ಲಿನಿಂದ ಕೆತ್ತನೆ ಮಾಡಿದ ಗಣೇಶನ ವಿಗ್ರಹವನ್ನು 10 ಸಾವಿರ ರೂ ಗೆ ಮಾರಾಟ ಮಾಡಿದ್ದಾರೆ. ಕ್ವಾರಂಟೈನ್‌ನಲ್ಲೂ ಕೂಡ ತಮ್ಮ ಕಾಯಕವನ್ನು ಬಿಡದ ಮಲ್ಲಪ್ಪನವರಿಗೆ…

  • ಜೀವನಶೈಲಿ, ಜ್ಯೋತಿಷ್ಯ

    ಊಟದ ನಂತರ ಹೀಗೆ ಮಾಡಿದರೆ ದಾರಿದ್ಯ ಆವರಿಸಿ ಒಂದು ಹೊತ್ತು ಊಟಕ್ಕೂ ಕಷ್ಟ ಪಡುವಂತಹ ಸ್ಥಿತಿ ಬರುತ್ತದೆ..!

    ನಮ್ಮ ಹಿಂದೂ ಧರ್ಮದಲ್ಲಿ ಎಲ್ಲಾ ಶಾಸ್ತ್ರ ಸಂಪ್ರದಾಯಗಳ ಹಿಂದಿಯು ಒಂದು ವೈಜ್ಞಾನಿಕ ಕಾರಣ ಅಥವಾ ಒಂದು ಮಹತ್ತರವಾದ ಉದ್ದೇಶ ಇರುತ್ತದೆ.  ಹಾಗೆಯೇ ನಾವು ಊಟ ಮಾಡುವುದಕ್ಕೂ ಒಂದಷ್ಟು ವಿಧಿ-ವಿಧಾನ  ಪದ್ಧತಿಗಳಿವೆ. ನಮ್ಮ ಸಂಪ್ರದಾಯದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವುದು ರೂಢಿ. ಊಟಕ್ಕಾಗಿ ಬಾಳೆ ಎಲೆ ಇಲ್ಲವೇ ಬೆಳ್ಳಿಯ ಅಥವಾ ಚಿನ್ನದ ತಟ್ಟೆಯನ್ನು ಬಳಸುತ್ತಾರೆ. ಇದರ ಹಿಂದೆಲ್ಲ ಒಂದು ಮಹತ್ವವಿದೆ. ಹಾಗೆಯೇ, ನಾವು ಊಟ ಮಾಡಿದ ಬಳಿಕ ಕೆಲವೊಂದು ತಪ್ಪುಗಳನ್ನು ಮಾಡ ಬಾರದು. ಹೀಗೆ ಮಾಡಿದಲ್ಲಿ ನಮಗೆ ಕೆಡುಕು…

  • corona

    ಕೋಲಾರ ಜಿಲ್ಲೆ ಯಲ್ಲಿ ಕೊರೋನ ಹೆಚ್ಚಳ

    ಕೊರೋನ ದೇಶದಲ್ಲಿ ರಾಜ್ಯದಲ್ಲಿ ಹೆಚ್ಚಳದಿಂದಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಕರ್ನಾಟಕದ ಆರೋಗ್ಯ ಸಚಿವ ಸುಧಾಕರ್ ಅವರು ತಿಳಿಸಿದ್ದಾರೆ. ಸಕ್ರೀಯ ಪ್ರಕರಣಗಳು ಹೆಚ್ಚುತ್ತಿವೆ.ದಿನದಿಂದ ದಿನಕ್ಕೆ ಸರಾಸರಿ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ರಾಜ್ಯವ್ಯಾಪಿ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿದೆ.ಆದರಂತೆ ಜಿಲ್ಲಾವಾರು ಪ್ರಕರಣಗಳು ಹೆಚ್ಚುತ್ತಿವೆ.ಕೋಲಾರ ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣ ಏರುಮುಖವಾಗಿದೆ.ಇಪ್ಪತ್ತರ ಆಸುಪಾಸಿನಲ್ಲಿದ್ದ ಪ್ರಕರಣಗಳು ಈಗ 75 ಸಕ್ರಿಯ ಪ್ರಕರಣ ದಾಖಲಾಗಿದೆ. ತಾಲ್ಲೂಕುವಾರು ಸಕ್ರಿಯ ಪ್ರಕರಣಗಳು ಇಂತಿದೆ. ಕೋಲಾರ 5, ಮಾಲೂರು 13, ಬಂಗಾರಪೇಟೆ 13, ಕೆಜಿಎಫ್…

    Loading