ಜ್ಯೋತಿಷ್ಯ

ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ಆ ಜಾಗದಲ್ಲಿ ಇಟ್ಟರೆ ಏನಾಗುತ್ತೆ ಗೊತ್ತಾ..?

2309

ಶ್ರೀಮಂತನಾಗುವುದು ಪ್ರತಿಯೊಬ್ಬನ ಬಯಕೆ. ಹಗಲು-ರಾತ್ರಿ ದುಡಿದು ಹಣ ಸಂಪಾದನೆ ಮಾಡ್ತಾರೆ ಅನೇಕರು. ಆದ್ರೆ ಶ್ರೀಮಂತರಾಗಲು ದುಡಿಮೆ ಜೊತೆ ಅದೃಷ್ಟ ಜೊತೆಗಿರಬೇಕು.

ಅಡುಗೆ ಮನೆಯಲ್ಲಿರುವ ಉಪ್ಪು, ನಿಮ್ಮ ಅಭಿವೃದ್ಧಿಗೆ ಕಾರಣವಾಗುತ್ತದೆ. ಅಡುಗೆ ರುಚಿ ಹೆಚ್ಚಿಸುವ ಉಪ್ಪಿನಿಂದ ಅನೇಕ ಲಾಭಗಳಿವೆ. ಮನೆಯ ಮುಖ್ಯ ದ್ವಾರದ ಬಳಿ, ಕೆಂಪು ಬಟ್ಟೆಯಲ್ಲಿ ಸ್ವಲ್ಪ ಉಪ್ಪನ್ನು ಕಟ್ಟಿ ನೇತುಹಾಕಿ. ಇದು ನಿಮ್ಮ ಅದೃಷ್ಟ ಬದಲಿಸುತ್ತದೆ.

ಯಾವುದೇ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. ಹಾಗೆ ಯಶಸ್ಸು ನಿಮ್ಮದಾಗುತ್ತದೆ. ವ್ಯಾಪಾರ ಸ್ಥಳದ ಮುಖ್ಯ ದ್ವಾರದ ಬಳಿ ಕೂಡ ಕೆಂಪು ಬಟ್ಟೆಯಲ್ಲಿ ಉಪ್ಪು ಕಟ್ಟಿಡಬಹುದು.

ರಾತ್ರಿ ಚಿಟಕಿ ಉಪ್ಪನ್ನು ನೀರಿಗೆ ಹಾಕಿ, ಕಾಲು, ಕೈ ತೊಳೆಯುವುದ್ರಿಂದ ಸುಸ್ತು ಕಡಿಮೆಯಾಗುತ್ತದೆ. ನಿದ್ರೆ ಸರಿಯಾಗಿ ಬರುವ ಜೊತೆಗೆ ರಾಹು-ಕೇತುವಿನ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವುದಿಲ್ಲ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಈ ವಿಧಾನದಿಂದ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆಯಂತೆ.

ಮನೆಯ ಮಕ್ಕಳು ಆರೋಗ್ಯವಾಗಿದ್ರೆ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ಮಕ್ಕಳ ಆರೋಗ್ಯ ಹದಗೆಟ್ರೆ ಎಲ್ಲರೂ ನೆಮ್ಮದಿ ಕಳೆದುಕೊಳ್ತಾರೆ. ಕೆಟ್ಟ ದೃಷ್ಟಿ ಕೂಡ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಾರಕ್ಕೊಮ್ಮೆ ನೀರಿಗೆ ಉಪ್ಪನ್ನು ಹಾಕಿ ಮಕ್ಕಳಿಗೆ ಸ್ನಾನ ಮಾಡಿಸಿದ್ರೆ ಕೆಟ್ಟ ದೃಷ್ಟಿ ಮಕ್ಕಳ ಮೇಲೆ ಬೀಳುವುದಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ