ರಾಜಕೀಯ

ಉತ್ತರ ಪ್ರದೇಶ,ಬಿಹಾರ್ನಲ್ಲಿ ಇವಿಎಂ ಹ್ಯಾಕ್ – ಬೆಂಗ್ಳೂರಲ್ಲಿ ಸ್ಟ್ರಾಂಗ್ ರೂಂಗಳಿಗೆ ಸರ್ಪಗಾವಲು….!

230

ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಇವಿಎಂ ಹ್ಯಾಕ್ ಸುದ್ದಿ ಪಸರಿಸಿರೋ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತಪೆಟ್ಟಿಗೆ ಇರುವ ಕೇಂದ್ರಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.

ಕೇಂದ್ರ ವಿಭಾಗದ ಮತಪೆಟ್ಟಿಗೆ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ, ದಕ್ಷಿಣ ವಿಭಾಗದ ಜಯನಗರ ಎನ್‍ಎಂಕೆಆರ್ ವಿ ಕಾಲೇಜಿನಲ್ಲಿ ಕಡೆಯದಾಗಿ ಉತ್ತರ ವಿಭಾಗದ ಮತಪೆಟ್ಟಿಗೆ ಮಹಾರಾಣಿ ಕಾಲೇಜಿನಲ್ಲಿ ಭದ್ರವಾಗಿದೆ. ಈ ಮತಪೆಟ್ಟಿಗೆ ಸ್ಟ್ರಾಂಗ್ ರೂಂ ಒಳಗೆ ಓಡಾಡಲು ನಿಯೋಜಿತ ಸಿಬ್ಬಂದಿ, ಗುರುತಿನ ಚೀಟಿ ಇರುವ ಅಭ್ಯರ್ಥಿ, ಅಭ್ಯರ್ಥಿಯ ಏಜೆಂಟ್‍ಗೆ ಮಾತ್ರ ಪ್ರವೇಶವಿದೆ. ಉಳಿದಂತೆ ಯಾರಿಗೂ ಸಹ ಒಳಗೆ ಪ್ರವೇಶಿಸಲು ಅವಕಾಶ ಇಲ್ಲ ಎಂದು ಆಯೋಗ ಸೂಚನೆ ನೀಡಿದೆ.


ಬೆಂಗಳೂರಿನ ಲೋಕಸಭಾ ಚುನಾವಣೆಯ ಮತಪೆಟ್ಟಿಗೆ ಭದ್ರವಾಗಿರಿಸಲು ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮ ತೆಗೆದುಕೊಂಡಿದೆ. ಇವಿಎಂ ಮಿಷನ್ ಇರುವ ಕೊಠಡಿ ಕರೆಂಟ್ ಕನೆಕ್ಷನ್ ಕಟ್ ಮಾಡಲಾಗಿದೆ. ಶಾರ್ಟ್ ಸಕ್ರ್ಯೂಟ್, ವಿದ್ಯುತ್ ಸಂಬಂಧಿತ ಸಮಸ್ಯೆ ಆಗದಿರಲು ಈ ಕ್ರಮ ಕೈಗೊಳ್ಳಲಾಗಿದೆ. ಕೊಠಡಿ ಬಾಗಿಲು ಮೇ23 ಕ್ಕೆ ಚುನಾವಣಾ ಆಯೋಗ ನೇಮಕ ಮಾಡಿರುವ ಮೇಲ್ವಿಚಾರಕರ ಸಮ್ಮುಖದಲ್ಲೇ ತೆರೆಯಲಾಗುತ್ತದೆ. ಯಾವುದೇ ಆರೋಪ ಬರಬಾರದೆಂದು ರೂಂ ಕಿಟಕಿ, ಬಾಗಿಲು ಸೀಲ್ ಹಾಕಲಾಗಿದ್ದು, ರೂಂನ ಹೊರಭಾಗ ಸಿಸಿಟಿವಿ ಕಡ್ಡಾಯ ಮಾಡಲಾಗಿದೆ.


ಸ್ಟ್ರಾಂಗ್ ರೂಂಗೆ ಸರ್ಪಗಾವಲು:
ಇಡೀ ಕಟ್ಟಡದ ಮೂರು ಸುತ್ತಿನಲ್ಲೂ ಸೆಂಟ್ರಲ್ ಪ್ಯಾರಮಿಲಿಟರಿ ಫೋರ್ಸ್ ಸೆಕ್ಯೂರಿಟಿಯಿಂದ ಭದ್ರತೆ ಒದಗಿಸಲಾಗಿದೆ. ರಾಜ್ಯ ಪೊಲೀಸರಿಂದ ಕಟ್ಟಡ ಹೊರಭಾಗದಲ್ಲಿ, ಜಿಲ್ಲಾ ಪೊಲೀಸರಿಂದ ಕಟ್ಟಡ ಹೊರಗೆ ಭದ್ರತೆ ಒದಗಿಸಲಾಗಿದ್ದು ಇಡೀ ಕಟ್ಟಡ ಸಿಸಿಟಿವಿ ಕಣ್ಗಾವಲಿನಲ್ಲಿರಲಿದೆ. ಸ್ಟ್ರಾಂಗ್ ಒಂದಕ್ಕೆ ಕನಿಷ್ಠ 300 ಜನ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಅಭ್ಯರ್ಥಿಗಳ ಏಜೆಂಟ್ ಗಳು ಬೇಕಾದ್ರೂ ಸ್ಟ್ರಾಂಗ್ ರೂಂ ಕಾವಲು ಕಾಯಬಹುದು ಎಂದು ಆಯೋಗ ತಿಳಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ