ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇನ್ನೇನು ಲೋಕಸಭಾ ಚುನಾವಣಾ ಹತ್ತಿರ ಆಗುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ.
ಇದೇ ಸಮಯದಲ್ಲಿ ದೇಶದ ಅತ್ಯಂತ ಜನಪ್ರಿಯ ರಾಜಕಾರಣಿ ಯಾರೆಂದು ಸಮೀಕ್ಷೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ರಾಜಕಾರಣಿ ಎಂದು ಜನರ ಅಭಿಪ್ರಾಯವಾಗಿದೆ.
ರಾಜಕೀಯ ತಂತ್ರರೂಪಕ ಪ್ರಶಾಂತ್ ಕಿಶೋರ್ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(ಐ-ಪ್ಯಾಕ್) ನಡೆಸಿದ ಸಮೀಕ್ಷೆಯಲ್ಲಿ ದೇಶದ 712 ಜಿಲ್ಲೆಗಳ 57 ಲಕ್ಷ ಮಂದಿ ಮತ ನೀಡಿದ್ದು ಪ್ರಧಾನಿ ಮೋದಿ ಅತಿ ಜನಪ್ರಿಯ ಮತ್ತು ಸಮರ್ಥ ರಾಜಕಾರಣಿ ಎಂದು ಶೇಕಡ 48 ಮಂದಿ ಹೇಳಿದ್ದಾರೆ.
ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುಲು ಮತ್ತು ದೂರದರ್ಶಿತ್ವ ಹೊಂದಿರುವ ನಾಯಕರಾಗಿ ನರೇಂದ್ರ ಮೋದಿ ಉತ್ತಮ ಆಯ್ಕೆ ಎಂದು ಸಮೀಕ್ಷೆಯಲ್ಲಿ ಪಾಲ್ಗೋಂಡ ಜನರು ಹೇಳಿದ್ದಾರೆ.
ಪ್ರಧಾನಿ ಮೋದಿ ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಥಾನ ಪಡೆದಿದ್ದಾರೆ. ರಾಹುಲ್ ಗಾಂಧಿ ಪರವಾಗಿ ಶೇ. 11 ಮಂದಿ ಮತ ನೀಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ 9.3 ಮತ. ಅಖಿಲೇಶ್ ಯಾದವ್ 7 ಮತ, ಮಮತಾ ಬ್ಯಾನರ್ಜಿ 4.2 ಮತ, ಮಾಯಾವತಿ 3.1 ಮತ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿರುವ ಮಧ್ಯೆ, ಜನರು ಆರ್ಥಿಕ ದ್ವಿಚಕ್ರ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರ ಒತ್ತು ನೀಡುತ್ತಿದೆ. ಜಪಾನ್ನ ದ್ವಿಚಕ್ರ ವಾಹನ ತಯಾರಕ ಒಕಿನಾವಾ ದ್ವಿಚಕ್ರ ವಾಹನಗಳು ಕೆಲವು ದಿನಗಳ ಹಿಂದೆ ಪ್ರೇಜ್ ಪ್ರೊ(Praise Pro) ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದವು. ಕಂಪನಿಯ ನವೀಕರಿಸಿದ ಪ್ರೇಜ್(Praise) ಆವೃತ್ತಿಯು ಈಗಾಗಲೇ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳಲಾಗುತ್ತಿದೆ. ‘ಪ್ರೇಜ್’ ನಲ್ಲಿದೆ 1000 ವ್ಯಾಟ್ ಸ್ಟ್ರಾಂಗ್ ಮೋಟರ್ : ‘ಪ್ರೇಜ್’ ಒಕಿನಾವಾ…
ಬೆಕ್ಕುಗಳೆಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಮುದ್ದು ಮುದ್ದಾಗಿ ಮಿಯಾಂವ್ ಮಿಯಾಂವ್ ಅನ್ಕೊಂಡು ಮನೆಯಲ್ಲಿ ಅತ್ತಿಂದಿತ್ತ ಓಡಾಡ್ತಾ, ಮನೆಗೆ ಬಂದ್ರೆ ತನ್ನ ಮೈ ಉಜ್ಕೊಂಡು, ಚೇಷ್ಟೆ ಮಾಡ್ಕೊಂಡಿರುತ್ತೆ. ಅದರ ಈ ಚೇಷ್ಟೆಗಳನ್ನ ನೋಡೋದೇ ಒಂಥರಾ ಖುಷಿ. ಆದ್ರೆ ಇಲ್ಲೊಬ್ರು ಅದೇ ರೀತಿ ಅರ್ಜೆಂಟಿನಾ ಲೋಬೊ ಎಂಬ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎರಡು ಪುಟ್ಟ ಪ್ರಾಣಿಗಳು ಮಲಗಿದ್ದನ್ನು ನೋಡಿದರು. ಅವು ತುಂಬ ದುರ್ಬಲವಾಗಿದ್ದವು. ಹತ್ತಿರ ಹೋಗಿ ನೋಡಿದ ಲೋಬೋ ಅವರಿಗೆ ಪುಟ್ಟಪುಟ್ಟ ಬೆಕ್ಕಿನಮರಿಗಳಂತೆ ಕಂಡುಬಂದವು. ಲೋಬೊ ಅವರಿಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ…
ಎಲ್ಪಿಜಿ ಗ್ಯಾಸ್ ಸಂಪರ್ಕಕ್ಕೆಅರ್ಜಿ ಸಲ್ಲಿಸಲು ಎಲ್ಪಿಜಿ ಡೀಲರ್ಬಳಿಯೇ ಹೋಗಬೇಕೆಂದೇನಿಲ್ಲ. ಆನ್ಲೈನ್ ಮೂಲಕವೂಅರ್ಜಿ ಸಲ್ಲಿಸಬಹುದು. ಜತೆಗೆ ಈ ಪ್ರಕ್ರಿಯೆಯನ್ನುಪೂರ್ತಿಯಾಗಿ ಡಿಜಿಟಲೀಕರಣ ಮಾಡಿರುವುದರಿಂದ, ಅಗತ್ಯವಿರುವವರು ಪ್ರಯೋಜನ ಪಡೆದುಕೊಳ್ಳಬಹುದು. ಅಲ್ಲದೆಡೀಲರ್ ಬಳಿ ಗ್ಯಾಸ್ ಸಂಪರ್ಕಕ್ಕೆಅರ್ಜಿ ಸಲ್ಲಿಸುವುದು ಕಿರಿಕಿರಿ ಪ್ರಕ್ರಿಯೆ ಎನ್ನಿಸಿದರೆ, ಆನ್ಲೈನ್ ಮೂಲಕವೂಅರ್ಜಿ ಸಲ್ಲಿಸಬಹುದು. ದೇಶದ ಪ್ರಮುಖ 3 ಎಲ್ಪಿಜಿ ಪೂರೈಕೆದಾರ ಕಂಪನಿಗಳ ವೆಬ್ಸೈಟ್ ಮೂಲಕ ಹೊಸ ಎಲ್ಪಿಜಿ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ. ಜತೆಗೆ ಪ್ರತಿ ಕಂಪನಿಗಳು ಕೂಡ ಪ್ರತ್ಯೇಕ ಆ್ಯಪ್ ಹೊಂದಿದ್ದು, ಅದರ…
ಶನಿವಾರದಂದು ವಿಧಿವಶರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಅಂಬರೀಶ್ ಅವರ ಅಂತ್ಯಕ್ರಿಯೆ, ಸೋಮವಾರದಂದು ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ.ಅಂಬರೀಶ್ ನಿಧನದ ಸಂದರ್ಭದಲ್ಲಿ ಸಂತಾಪ ಕೋರಿ ಟ್ವೀಟ್ ಮಾಡಿದ್ದ ನಟಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ರಮ್ಯಾ, ಅಂತ್ಯಕ್ರಿಯೆಗೆ ಬಾರದಿರುವುದು ಅಂಬರೀಶ್ ಅಭಿಮಾನಿಗಳನ್ನು ಕೆರಳಿಸಿತ್ತು. ಅಂಬರೀಶ್ ಸಾವಿಗೀಡಾದ ಸುದ್ದಿ ತಿಳಿದಾಗಿನಿಂದಲೂ ಇಡೀ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೆ ಹಲವು ಭಾಷೆಗಳ ಚಿತ್ರರಂಗದ ಖ್ಯಾತನಾಮರು, ಅಂತಿಮ ದರ್ಶನದಿಂದ ಅಂತ್ಯಸಂಸ್ಕಾರದವರೆಗೆ ಹಾಜರಾಗಿದ್ದರೂ ರಮ್ಯಾ…
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ಗೆ ಕೈ ಕೊಟ್ಟಿತ್ತಾ ಎಂಬ ಪ್ರಶ್ನೆಯೊಂದು ಜಿಲ್ಲೆಯ ಜನರಲ್ಲಿ ಮೂಡಿದೆ. ಯಾಕಂದ್ರೆ ದೋಸ್ತಿ ಅಭ್ಯರ್ಥಿಯನ್ನು ಕೆಡವಲು ದೋಸ್ತಿಗಳೇ ಪ್ಲಾನ್ ಮಾಡಿಕೊಂಡ್ರಾ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು. ಜೆಡಿಎಸ್ ಮುಖಂಡ ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಕರೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ಗೆ ವೋಟ್ ಹಾಕಬೇಡಿ, ಬಿಜೆಪಿಗೆ ವೋಟ್ ಹಾಕಿ ಎಂದು ಹೇಳುವ ಮೂಲಕ ಮಂಜುನಾಥ್ ಅವರು ಕಾಂಗ್ರೆಸ್ ಸೋಲಿಸಲು ಹಣ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ. ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ…
ಯಾರ್ಯಾರಿಗೋ ಏನೋ ಆಸೆಯಾದರೆ, ಈ ವೃದ್ಧನದ್ದು ಬಲು ವಿಚಿತ್ರ ಹಾಗೂ ವಿಲಕ್ಷಣ ಆಸೆ…! ತಮಿಳುನಾಡಿನ ರಾಮನಾಥಪುರ ಜಿಲ್ಲೆಯ ಮಲೈಸ್ವಾಮಿ ಎಂಬ 70 ವರ್ಷದ ಈ ವೃದ್ಧನಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ 24 ವರ್ಷದ ಪಿ.ವಿ. ಸಿಂಧುವನ್ನು ಮದುವೆಯಾಗಬೇಕಂತೆ..! ಒಂದು ವೇಳೆ ಸಿಂಧು ಮದುವೆಯಾಗಲು ಒಪ್ಪದಿದ್ದರೆ ಆಕೆಯನ್ನು ಕಿಡ್ನಾಪ್ ಮಾಡಿಕೊಂಡು ಹೋಗಿ ಮದುವೆಯಾಗುತ್ತಾನಂತೆ. ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆಂದು ಜಿಲ್ಲಾಧಿಕಾರಿಗಳು ನಡೆಸುವ ವಾರದ ಜನತಾದರ್ಶನದಲ್ಲಿ ಸಿಂಧು ಫೋಟೋ ಸಹಿತ ಪತ್ರವೊಂದನ್ನು ಜಿಲ್ಲಾಧಿಕಾರಿಗಳ ಕೈಗಿತ್ತು, ನನ್ನನ್ನು ಮದುವೆಯಾಗುವಂತೆ ಸಿಂಧು ಅವರಿಗೆ ಸೂಚಿಸಬೇಕೆಂದು…