ಸರ್ಕಾರದ ಯೋಜನೆಗಳು

ಈ ವರ್ಷದ ಕೊನೆಯೊಳಗೆ 5 ಸಾವಿರ ಸೈಟ್ ಹಂಚಿಕೆ ..!ತಿಳಿಯಲು ಈ ಲೇಖನ ಓದಿ..

178

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೊದಲ ಹಂತದ ಐದು ಸಾವಿರ ಸೈಟ್‌ಗಳ ಹಂಚಿಕೆಗೆ ಫಲಾನುಭವಿಗಳ ಅಂತಿಮ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ, ಮತ್ತೆ 5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಬಿಡಿಎ ಮುಂದಾಗಿದೆ. ರಾಜ್ಯ ಸರ್ಕಾರ ಬೆಂಗಳೂರು 5 ಸಾವಿರ ಸೈಟ್ಗಳ ಹಂಚಿಕೆಗೆ ಅಧಿಸೂಚನೆ ಹೊರಡಿಸಲಿದೆ.

 

ಮೊದಲ ಹಂತದಲ್ಲಿ ಈಗಾಗಲೇ 5 ಸಾವಿರ ಸೈಟ್ ಹಂಚಿಕೆ ಮಾಡಿರುವ ಪ್ರಾಧಿಕಾರ ಮತ್ತೆ 5 ಸಾವಿರ ಸೈಟ್ ಹಂಚಿಕೆಗೆ ಮುಂದಾಗಿದ್ದು, ನಾಳೆಯಿಂದಲೇ ಅರ್ಜಿ ಸಿಗಲಿವೆ. ಫೆ. 2. 2018 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಎರಡನೇ ಹಂತದ ಸೈಟ್‌ಗಳನ್ನೂ ವಿತರಿಸುವಂತೆ ಸಿಎಂ ಹಾಗೂ ನಗರ ಉಸ್ತುವಾರಿ ಸಚಿವರು ಪ್ರಾಧಿಕಾರಕ್ಕೆ ಸೂಚಿಸಿದ್ದರು. ಆದರೆ, ಮೊದಲ ಹಂತದ ಅಂತಿಮ ಪಟ್ಟಿ ಪ್ರಕಟಿಸಲು ವಿಳಂಬವಾದ ಕಾರಣ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿರಲಿಲ್ಲ.

ಎರಡನೆ ಹಂತದ ಹಂಚಿಕೆಯಲ್ಲಿ ಮೊದಲನೇ ಹಂತಕ್ಕೆ ನಿಗದಿಯಾದ ದರವೇ ಫಿಕ್ಸ್ ಆಗಿದ್ದು, ರಿಯಾಯತಿ ದರದಲ್ಲಿ ಬಡ ಹಾಗೂ ಮಾಧ್ಯಮ ವರ್ಗದ ಜನರಿಗೆ ಸೈಟ್ ಹಂಚಿಕೆ ಮಾಡಲಾಗುತ್ತಿದೆ.

600 ಅಡಿ ಚದರ ಅಡಿ ವಿಸ್ತೀರ್ಣ ನಿವೇಶನಕ್ಕೆ 10.46 ಲಕ್ಷ, 1200 ಚದರ ಅಡಿ ವಿಸ್ತೀರ್ಣಕ್ಕೆ 23.31 ಲಕ್ಷ, 4000 ಚದರ ಅಡಿ ವಿಸ್ತೀರ್ಣಕ್ಕೆ 96.87 ಲಕ್ಷದ ದರ ಫಿಕ್ಸ್ ಆಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ