ಆಧ್ಯಾತ್ಮ

ಈ ಮಂತ್ರಗಳನ್ನು ಹೇಳಿದರೆ ಏನಾಗುತ್ತೆ ಗೊತ್ತಾ !!! ಹಾಗಾದ್ರೆ ಮುಂದೆ ಓದಿದ್ರೆ ಮಾತ್ರ ನಿಮಗೆ ಗೊತ್ತಾಗುತ್ತೆ…..

5009

ಸಂಪತ್ತು, ಬುದ್ಧಿವಂತಿಕೆ ಹೆಚ್ಚಬೇಕೆಂದರೆ ಮನಸ್ಸು ನಿರ್ಮಲವಾಗಿರುವುದು ಅತಿ ಮುಖ್ಯವಾಗುತ್ತದೆ. ಅಂತೆಯೇ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಲು ಸಹಕಾರಿಯಾಗುವಂತೆ ನಮ್ಮ ಭಾರತೀಯ ಸನಾತನ ಧರ್ಮದಲ್ಲಿ ಋಷಿ-ಮುನಿಗಳು ಹಲವು ಮಂತ್ರಗಳನ್ನು ಕೊಟ್ಟಿದ್ದಾರೆ. ‘ಮನಯೇವ ಮನುಷ್ಯಾಣಾಂ, ಕಾರಣಯೋ ಬಂಧನ, ಮೋಕ್ಷಯಃ‘ ಎಂದಿವೆ ಸ್ಮೃತಿ ವಾಕ್ಯಗಳು. ಅಂದರೆ ಬಂಧನದಿಂದ ಬಿಡಿಸಿಕೊಳ್ಳುವುದಕ್ಕೆ ಹಾಗೂ ಮೋಕ್ಷ ಪಡೆಯುವುದಕ್ಕೆ ಮನಸ್ಸೇ ಮುಖ್ಯ ಕಾರಣವಾಗುತ್ತದೆ.

ಮನಸ್ಸನ್ನು ನಿಗ್ರಹಿಸಿ ಬುದ್ಧಿವಂತಿಕೆ ಹೆಚ್ಚಿಸಿಕೊಳ್ಳುವುದಕ್ಕೆ ಬ್ರಹ್ಮರ್ಷಿ ವಿಶ್ವಾಮಿತ್ರರು ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ. 24 ಅಕ್ಷರಗಳ ಒಂದು ಛಂದಸ್ಸಿನ ಗಾಯತ್ರಿ ಮಂತ್ರಕ್ಕೆ ಸಮನಾದ ಮಂತ್ರ ವೇದದಲ್ಲಿಯೇ ಮತ್ತೊಂದಿಲ್ಲ ಎನ್ನುತ್ತಾರೆ ಋಷಿಗಳು. ‘ಬ್ರಹ್ಮದೇವರು ಮೂರು ವೇದದ ಸಾರವನ್ನು ಗಾಯತ್ರಿ ಮಂತ್ರದ ಮೂರು ಚರಣಗಳಲ್ಲಿ ತುಂಬಿಸಿಕೊಟ್ಟಿರುವವರು‘ ಗಾಯತ್ರಿಯಿಂದ ಸರ್ವ ರೀತಿಯ ಸಿದ್ಧಿಪ್ರಾಪ್ತಿಯಾಗುತ್ತದೆ ಎನ್ನುತ್ತಾನೆ ಭಗವಾನ್ ಮನು.

ಎಲ್ಲಾ ಮಂತ್ರ, ಪೂಜೆ, ಪುರಸ್ಕಾರಗಳಿಗೂ ಅತೀ ಎತ್ತರದಲ್ಲಿ ರಾರಾಜಿಸುವುದು ಗಾಯತ್ರಿ ಮಹಾಮಂತ್ರ. ಅಥರ್ವವೇದದಲ್ಲಿ ಗಾಯತ್ರಿ ಮಂತ್ರವನ್ನು ಶಕ್ತಿ, ಧನ ಸಂಪತ್ತು ಮತ್ತು ಬ್ರಹ್ಮತೇಜಸ್ಸನ್ನು ನೀಡುವ ಮಹಾಮಾತೆ ಎಂದು ಉಲ್ಲೇಖಿಸಿದ್ದಾರೆ.

ಇನ್ನು ಮಹಾಭಾರತವನ್ನು ರಚಿಸಿದ ವ್ಯಾಸ ಮಹರ್ಷಿಗಳೂ ಸಹ ಗಾಯತ್ರಿ ಮಂತ್ರವನ್ನು ಕೊಂಡಾಡಿದ್ದು, ಗಾಯತ್ರಿವನ್ನು ಪಕ್ವಾನ್ನ( ಮೃಷ್ಟಾನ್ನ)ಕ್ಕೆ ಹೋಲಿಕೆ ಮಾಡಿದ್ದಾರೆ. ಗಾಯತ್ರಿಯು ಲೋಕಕ್ಕೆ ತಾಯಿ. ಪರಬ್ರಹ್ಮನ ಸ್ವರೂಪವುಳ್ಳವಳು, ಶ್ರೇಷ್ಠ ಸಂಪತ್ತನ್ನು ಕೊಡುವವಳು, ಜಪಿಸಲು ಯೋಗ್ಯಳು, ಬ್ರಹ್ಮತೇಜಸ್ಸನ್ನು ಹೆಚ್ಚಿಸುವವಳು ಆಗಿದ್ದಾಳೆ.

ಗಾಯತ್ರಿ ಮಂತ್ರ :-

“ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್”           ಹೀಗೆ ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಏಕಾಗ್ರತೆ ಹೆಚ್ಚಲಿದ್ದು, ಮನಸ್ಸನ್ನು ನಿಯಂತ್ರಿಸಿ ಇಷ್ಟಾರ್ಥಗಳನ್ನು ಸಿದ್ಧಿಸುವ ಮನೋಬಲ ಸಿದ್ಧಿಸುತ್ತದೆ. ಈ ಮೂಲಕ ಸಂಪತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬ ನಂಬಿಕೆ ಇದೆ.

ಸಂಪತ್ತಿನ ವೃದ್ಧಿಗಾಗಿ ಜಪಿಸಬೇಕಿರುವ ಮತ್ತೊಂದು ಮಂತ್ರವೆಂದರೆ ಅದು ಭಗವಾನ್  ವಿಷ್ಣುವಿನ ಮಂತ್ರ :-

ಮಹಾ ವಿಷ್ಣು ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಯ ಪತಿ. ಲಕ್ಷ್ಮಿ ಪತಿಯ ಮಂತ್ರ                                             “ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್” ವನ್ನು ಜಪಿಸಿದರೆ ಸಂಪತ್ತು ವೃದ್ಧಿಸಲಿದೆ ಎಂಬ ನಂಬಿಕೆ ಇದೆ.

ಓಂ ಮಹಾಲಕ್ಷ್ಮೈಚ ವಿದ್ಮಹೇ ವಿಷ್ಣು ಪತ್ನೀಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್ ಎಂಬುದೂ ಸಹ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಇರುವ ಮಂತ್ರವಾಗಿದ್ದು ಈ ಮಂತ್ರವನ್ನು ಜಪಿಸಿದರೂ ಸಹ ಸಂಪತ್ತು, ಸಂವೃದ್ಧಿ ಹೆಚ್ಚಲಿದೆ ಎಂಬ ದೃಢ ನಂಬಿಕೆ ಇದೆ.

ಮಂತ್ರಗಳನ್ನು ಬರೀ ಉಚ್ಚರಿಸುವುದಲ್ಲ, ಅದರ ಮೇಲೆ ನಿಮಗೆ ನಂಬಿಕೆ ಇರಬೇಕು. ನಂಬಿಕೆ ಇಲ್ಲಂದ್ರೆ ಏನು ಮಾಡಿದರೂ ಯಶಸ್ಸು ಸಿಗುವುದಿಲ್ಲ. ಆದ್ರಿಂದ ನಂಬಿಕೆ ಇಟ್ಟು ಮಾಡಿ ಎಲ್ಲಾ ಒಳ್ಳೆಯದೇ ಆಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ