ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ವಿಟ್ಜರ್‌ಲ್ಯಾಂಡ್‌ನ ಈ ಪ್ರಕೃತಿ ಮನೋಹರ ಪಟ್ಟಣಕ್ಕೆ ವಲಸೆ ಬರುವವರಿಗೆ ಅಲ್ಲಿಯ ಸರಕಾರವೇ 60,000 ಡಾ.(ಸುಮಾರು 38.7 ಲ.ರೂ.) ನೀಡುತ್ತದೆ. ಸರಕಾರದ ಈ ಕೊಡುಗೆಗೆ ಕಾರಣವಿದೆ. ಈ ಪಟ್ಟಣದಲ್ಲಿ ಜನಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ.
ಈ ಪಟ್ಟಣದ ಬಗ್ಗೆ ವಿವರಗಳಿಲ್ಲಿವೆ:-
ಅಲ್ಬಿನೆನ್ ಈ ಪಟ್ಟಣದ ಹೆಸರು. ಸಮುದ್ರ ಮಟ್ಟದಿಂದ 4265 ಅಡಿ ಎತ್ತರದಲ್ಲಿ ರಮಣೀಯ ಕಣಿವೆಯಲ್ಲಿದೆ. ಇದು ಪರ್ವತ ನಗರವಾಗಿದ್ದು, ತನ್ನದೇ ಆದ ಚರ್ಚ್ ಹೊಂದಿದೆ. ಇಲ್ಲಿ ಎಲ್ಲೆಲ್ಲಿಯೂ ಸಾಂಪ್ರದಾಯಿಕ ವಾಲೈಸ್ ವಾಸ್ತು ಸೌಂದರ್ಯ ರಾರಾಜಿಸುತ್ತಿದೆ.
ಈ ಪಟ್ಟಣವು ಪ್ರಶಾಂತ ವಾತಾವರಣ, ಅದ್ಭುತ ನೈಸರ್ಗಿಕ ದೃಶ್ಯಗಳು, ಶುದ್ಧ ಗಾಳಿ ಮತ್ತು ವರ್ಷದ ಹೆಚ್ಚಿನ ಸಮಯ ಹದವಾದ ಬಿಸಿಲಿನಿಂದ ಕೂಡಿದೆ. ಆದರೆ ಇಲ್ಲಿಯ ನಿವಾಸಿಗಳೆಲ್ಲ ವಾಸಕ್ಕಾಗಿ ದೊಡ್ಡ ನಗರಗಳಿಗೆ ತೆರಳುತ್ತಿರುವುದರಿಂದ ಇನ್ನು ಕೆಲವೇ ವರ್ಷಗಳಲ್ಲಿ ಇಲ್ಲಿ ಜನಸಂಖ್ಯೆಯಿಲ್ಲದೆ ಇಡೀ ಪಟ್ಟಣವೇ ಬಿಕೋ ಎನ್ನುವ ಬೆದರಿಕೆ ಸರಕಾರವನ್ನು ಕಾಡುತ್ತಿದೆ.
ಸದ್ಯ ಈ ಪಟ್ಟಣದಲ್ಲಿ ಕೇವಲ 240 ಜನರು ವಾಸವಾಗಿದ್ದಾರೆ. ಇವರ ಪೈಕಿ ಮಕ್ಕಳ ಸಂಖ್ಯೆ ಹೇಗೆ ಎಣಿಸಿದರೂ ಏಳನ್ನು ಮೀರುವುದಿಲ್ಲ. ಹೆಚ್ಚಿನ ಕುಟುಂಬಗಳೆಲ್ಲ ದೊಡ್ಡ ನಗರಗಳಿಗೆ ವಲಸೆ ಹೋದ ಬಳಿಕ ಈ ಊರಿನ ಶಾಲೆಯು ಬಾಗಿಲು ಹಾಕಿಕೊಂಡಿದ್ದರಿಂದ ಈ ಮಕ್ಕಳು ಬಸ್‌ನಲ್ಲಿ ಸಮೀಪದ ಪಟ್ಟಣದ ಶಾಲೆಗೆ ಹೋಗುತ್ತಾರೆ.
ಈ ಸುಂದರವಾದ ತಾಣದಲ್ಲಿ ವಾಸವಾಗಲು ಬರುವವರಿಗೆ 60,000 ಡಾ.ಗಳ ಕೊಡುಗೆಯನ್ನು ಸರಕಾರವು ಘೋಷಿಸಿದೆ. ಇದರಿಂದಾಗಿ ಅವರು ಇಲ್ಲಿ ತಮ್ಮದೇ ಆದ ಮನೆಗಳನ್ನು ಖರೀದಿಸಬಹುದಾಗಿದೆ. 45 ವರ್ಷದೊಳಗಿನ, ಎರಡು ಮಕ್ಕಳಿರುವ ದಂಪತಿಗಳಿಗೆ ಮಾತ್ರ ಈ ಕೊಡುಗೆ ಮುಕ್ತವಾಗಿದೆ.
ಅಂದ ಹಾಗೆ ಈ ಕೊಡುಗೆಯೊಂದಿಗೆ ಒಂದು ಷರತ್ತೂ ಇದೆ. 60,000 ಡಾ.ಗಳನ್ನು ಪಡೆದುಕೊಂಡು ಇಲ್ಲಿ ನೆಲೆಸುವ ದಂಪತಿಗಳು ಈ ಊರನ್ನು ತೊರೆಯಲು ನಿರ್ಧರಿಸಿದರೆ ಸರಕಾರಕ್ಕೆ ಅಷ್ಟೂ ಹಣವನ್ನು ಹಿಂದಿರುಗಿಸಬೇಕಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಹಿಳೆಯರು, ಯುವತಿಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣಗಳು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ.ಅತ್ಯಾಚಾರ ಹಾಗೂ ಬಲವಂತ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಸಹಾಯವಾಗುವಂತಹ ಮಾಡೆಲ್ ಒಂದು ತಯಾರಾಗಿದೆ.
ಮುಂಬೈ: ಆಟೋ ಚಾಲಕರೊಬ್ಬರು ಬರ್ಗರ್ ಕಿಂಗ್ನಲ್ಲಿ ಬರ್ಗರ್ ತಿಂದ ತಕ್ಷಣವೇ ಬಾಯಿಂದ ರಕ್ತ ಹೊರಬಂದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.ಸಾಜಿತ್ ಪಠಾಣ್(31) ಬರ್ಗರ್ ತಿಂದ ಆಟೋ ಚಾಲಕ. ಇವರು ಕಳೆದ ಬುಧವಾರ ತನ್ನ ಸ್ನೇಹಿತರ ಜೊತೆ ಬರ್ಗರ್ ಕಿಂಗ್ಗೆ ಬಂದಿದ್ದರು. ಅಲ್ಲಿ ಅವರು ಬರ್ಗರ್, ಫ್ರೈಂಚ್ ಫ್ರಯಿಸ್ ಹಾಗೂ ಸಾಫ್ಟ್ ಡ್ರಿಂಕ್ ಆರ್ಡರ್ ಮಾಡಿದ್ದರು. ಸಾಜಿತ್ ಬರ್ಗರ್ ತಿಂದ ತಕ್ಷಣವೇ ಗಂಟಲಿನಲ್ಲಿ ನೋವುಂಟಾಗಿ ರಕ್ತ ಹೊರ ಬಂದಿದೆ. ಸಾಜಿತ್ ಗಂಟಲಿನಲ್ಲಿ ಏನೋ ಸಿಲುಕಿಕೊಂಡಿದೆ ಎಂದು ಹೇಳಿದ್ದಾರೆ. ಹೀಗಾಗಿ…
ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಬರ್ತಿದೆ.ನಮ್ಮಲ್ಲಿ ವೋಟರ್ ಕಾರ್ಡ್ ಇದ್ರೂ ಕೂಡ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೋ,ಇಲ್ಲವೋ ಎಂಬ ಅನುಮಾನ ಕಾಡುವುದು ಸಹಜ.
ಆದ್ರೆ ನಿಮಗೆ ಅನುಮಾನ ಬೇಡ.ನಿಮ್ಮ ಹೆಸರು ಅಥವಾ ಬೇರೆ ಯಾರದೇ ಹೆಸರಾಗಲಿ ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೆಂಬುದನ್ನು ನಿಮ್ಮ ಮೊಬೈಲ್’ನಲ್ಲಿ ನೀವೇ ನೋಡಬಹುದು.
ಭಾರತ ಮತ್ತು ಪಾಕಿಸ್ತಾನ ನಡುವೆ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ನಡೆದಿದ್ದು, ಭಾರತ ಪಾಕಿಸ್ತಾನ ವಿರುದ್ದ ಸೋಲನುಭವಿಸಬೇಕಾಯಿತು.
ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸರ್ಕಾರಿ ಉದ್ಯೋಗ ನೀಡಲಾಗುವುದಿಲ್ಲವೆಂದು ಅಸ್ಸಾಂ ಸರ್ಕಾರ ನಿರ್ಧಾರ ಕೈಗೊಂಡಿದೆ.ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು 2021 ರಿಂದ ಈ ನೀತಿ ಅನುಷ್ಠಾನಗೊಳ್ಳುತ್ತದೆ. 2017 ರಲ್ಲಿ ಅಸ್ಸಾಂ ವಿಧಾನಸಭೆಯಲ್ಲಿ “ಅಸ್ಸಾಂ ಜನಸಂಖ್ಯೆ ಮತ್ತು ಮಹಿಳಾ ಸಬಲೀಕರಣ ನೀತಿ” ಅಂಗಿಕಾರವಾಗಿತ್ತು. ಇದರ ಅನ್ವಯ ಎರಡು ಅಥವಾ ಒಂದು ಮಕ್ಕಳನ್ನು ಹೊಂದಿದ್ದರವರು ಮಾತ್ರ ಸರ್ಕಾರಿ ಉದ್ಯೋಗ ಪಡೆಯಲು ಅರ್ಹರಾಗಿದ್ದರು. ಈ ನೀತಿ ಪ್ರಸ್ತುತ ಸರ್ಕಾರಿ ಉದ್ಯೋಗದಲ್ಲಿರುವವರಿಗೂ ಅನ್ವವಾಗಲಿದ್ದು 2021 ರಿಂದ ಅಧಿಕೃತವಾಗಿ…
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು, ಇಂದು ಜನಸಾಮಾನ್ಯರನ್ನು ಆಕರ್ಷಿಸುತ್ತಿವೆ. ಇಂದಿರಾ ಕ್ಯಾಂಟೀನ್ ಪ್ರಸಿದ್ದಿಯ ಬಳಿಕ, ಗಾರ್ಮೆಂಟ್ಸ್ ಮಹಿಳೆಯರಿಗೆ, ಕಟ್ಟಡ ಕಾರ್ಮಿಕ ಮಹಿಳೆಯರಿಗೆ ಇಂದಿರಾ ಪಾಸ್ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಘೋಷಿಸಿದ್ದರು. ಈ ಬಳಿಕ ಇದೀಗ, ಇಂದಿರಾ ಕ್ಲಿನಿಕ್ ಆರಂಭಗೊಂಡಿದೆ. ರಾಜ್ಯದಲ್ಲಿ ಆರೋಗ್ಯ ಸೇವೆಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ, ಇಂದಿನಿಂದ ರಾಜ್ಯದ ರಾಜಧಾನಿಯಲ್ಲಿ ಇಂದಿರಾ ಕ್ಲಿನಿಕ್ ಆರಂಭವಾಗಿವೆ.