ವಿಚಿತ್ರ ಆದರೂ ಸತ್ಯ

ಈ ಗ್ರಾಮದಲ್ಲಿ, ಮೊದಲು ಮಕ್ಕಳು, ಆಮೇಲೆ ಮದುವೆ..!ತಿಳಿಯಲು ಇದನ್ನು ಓದಿ…

1393

ಅವಿವಾಹಿತ ಜೋಡಿಯೊಂದು ಮುಂದಿನ ಜೀವನವನ್ನು ಜೊತೆಯಾಗಿ ಕಳೆಯುವ ನಿರ್ಧಾರ ಕೈಗೊಂಡಾಗ ಇಬ್ಬರೂ ಮುಂದಿನ ಜೀವನದ ಸಾಧಕ ಬಾಧಕಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಯಾವ ಸಮಾಜ ತಮ್ಮನ್ನು ಸ್ವೀಕರಿಸುತ್ತದೆ ಎಂಬುದರಿಂದ ಹಿಡಿದು ಇತರ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ.

 

ಇಂದು ಭಾರತದಂತಹ ವಿವಿಧ ಸಂಸ್ಕೃತಿಗಳ ದೇಶದಲ್ಲಿ ಯುವಜನತೆ ವೈವಾಹಿಕ ಸಂಬಂಧಕ್ಕೆ ಧುಮುಕುವ ಮುನ್ನ ಮುಂದಿನ ದಿನಗಳಲ್ಲಿ ತಮ್ಮ ಜೋಡಿ ಸಮರ್ಪಕವಾಗಬಹುದೇ ಎಂದು ಪ್ರಮಾಣಿಸಿ ನೋಡಿದ ಬಳಿಕವೇ ಮುಂದಡಿಯಿಡುವ ಪರಿಯನ್ನು ನಿಧಾನವಾಗಿ ಅನ್ವಯಿಸಿಕೊಳ್ಳುತ್ತಿದೆ.

ಆದರೆ ರಾಜಸ್ಥಾನದ ಗ್ರಾಮವೊಂದರಲ್ಲಿ ಮಗುವಾದ ಬಳಿಕವೇ ವಿವಾಹ ಮಾಡಿಸುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಗರಾಸಿಯಾ ಎಂಬ ಜನಾಂಗಕ್ಕೆ ಸೇರಿದ ಜನರು ತಮ್ಮ ವಿಶಿಷ್ಟ ಸಂಪ್ರದಾಯದಿಂದಲೇ ಹೆಸರುವಾಸಿಯಾಗಿದ್ದಾರೆ. ಯುವಜನತೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದ್ದು, ವಿವಾಹ ಬಂಧನದ ಗೊಡವೆಯೇ ಇಲ್ಲದೆ ಜೊತೆಯಾಗಿ ಇರಲೂ ಅವಕಾಶವಿದೆ. ಇದು ಮಹಿಳಾ ಪ್ರಧಾನ ಜನಾಂಗವಾಗಿದ್ದು, ಇಲ್ಲಿ ಅತ್ಯಾಚಾರ, ವರದಕ್ಷಿಣೆ ಕಿರುಕುಳದಂತಹ ಪ್ರಕರಣಗಳೇ ಕಂಡುಬರುವುದಿಲ್ಲ. ಮೂಲತಃ ಕೃಷಿಕರಾಗಿರುವ ಇವರು ಜೀವನ ನಡೆಸುವಷ್ಟು ಹಣ ಸಂಗ್ರಹಿಸಿಕೊಂಡ ಬಳಿಕ ಮದುವೆ ಮಾಡಿಕೊಳ್ಳುತ್ತಾರೆ.

ಇತ್ತೀಚೆಗಷ್ಟೇ ವೃದ್ಧೆಯೊಬ್ಬರು ಮದುವೆಯಾಗಿದ್ದರು. ಇಷ್ಟು ವರ್ಷ ಈಕೆ ತನ್ನ ಜೀವನ ಸಂಗಾತಿ ಜೊತೆ ಲಿವಿಂಗ್‌ ಟು ಗೆದರ್‌ ಸಂಬಂಧದಲ್ಲಿದ್ದು, ವಯಸ್ಸಾದ ಬಳಿಕ ಮದುವೆಯಾಗಿದ್ದಾರೆ. ಆದರೆ ಈ ಜೋಡಿಗೆ ಮೂವರು ಗಂಡು ಮಕ್ಕಳಿದ್ದು, ಮೂವರೂ ಒಟ್ಟಿಗೇ ಮದುವೆಯಾಗಿದ್ದಾರೆ.

ಅಲ್ಲದೆ ಈ ಜನಾಂಗದವರು ವಿಚಿತ್ರ ಸಂಪ್ರದಾಯವೊಂದನ್ನು ಆಚರಿಸಿಕೊಂಡು ಬರುತ್ತಿದ್ದು, ಹದಿಹರೆಯದಲ್ಲಿರುವ ಹೆಣ್ಣು ಮಕ್ಕಳನ್ನು ಹದಿಹರೆಯದ ಗಂಡು ಮಕ್ಕಳು ಆಯ್ಕೆ ಮಾಡಿಕೊಳ್ಳಲು ಎರಡು ದಿನದ ಮೇಳ ಆಯೋಜಿಸಲಾಗುತ್ತದೆ. ಈ ಜನಾಂಗಕ್ಕೆ ಸೇರಿದ ಎಲ್ಲರೂ ತಮ್ಮ ಮಕ್ಕಳನ್ನು ಮೇಳಕ್ಕೆ ಕರೆತಂದು ಮಕ್ಕಳನ್ನು ಅಲ್ಲಿಯೇ ಬಿಟ್ಟು ದೊಡ್ಡವರೆಲ್ಲ ತೆರಳುತ್ತಾರೆ. ಬಳಿಕ ಯುವಕರು ತಮಗಿಷ್ಟವಾದವರನ್ನು ಆಯ್ಕ ಮಾಡಿಕೊಂಡು ವಾಪಸ್‌ ತಮ್ಮ ಮನೆಗಳಿಗೆ ತೆರಳುತ್ತಾರೆ. ಬಳಿಕ ಇವರು ಲಿವಿಂಗ್ ಟು ಗೆದರ್‌ ಸಂಬಂಧದಲ್ಲೋ, ಅಥವಾ ಮದುವೆಯಾಗಿಯೋ ಜೀವನ ಸಾಗಿಸುತ್ತಾರೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಪ್ಪಟ ರಾಪ್ಟ್ರೀಯವಾದಿ,ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಇನ್ನಿಲ್ಲ….!

    ಬಿಜೆಪಿ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮೋದಿ ಸಂಪುಟದಿಂದಲೂ ಹೊರಗೆ ಉಳಿದಿದ್ದರು.ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆ ಕಾರಣಕ್ಕೆ ಮೋದಿ ಸಂಪುಟದಿಂದಲೂ ಸ್ವರಾಜ್  ಹೊರಗೆ ಉಳಿದಿದ್ದರು. 1952 ರ ಫೆಬ್ರವರಿ 14 ರಂದು ಜನಿಸಿದ್ದ ಅವರಿಗೆ  67 ವರ್ಷ ವಯಸ್ಸಾಗಿತ್ತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದಾಗ ಕ್ಯಾಬಿನೆಟ್ ನಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು. ಕರ್ನಾಟಕದೊಂದಿಗೂ ನಿಕಟ ಸಂಪರ್ಕ ಹೊಂದಿದ್ದ ಸುಷ್ಮಾ…

  • ಉದ್ಯೋಗ

    ಕಡಿಮೆ ಬಂಡವಾಳದಲ್ಲಿ ತಿಂಗಳಿಗೆ 50 ಸಾವಿರದಿಂದ 1 ಲಕ್ಷ ರೂಪಾಯಿಗಳ ವರೆಗೆ ಸಂಪಾದಿಸಬಹುದು..! ತಿಳಿಯಲು ಈ ಲೇಖನ ಓದಿ …

    ನಗರ ಮತ್ತು ಪಟ್ಟಣಗಳಲ್ಲಿ ನೀರಿನ ಅವಶ್ಯಕತೆಯೇ ನೀರಿನ ಒಂದು ದೊಡ್ಡ ಬಿಜನೆಸ್ ನ ಮೂಲವಾಗಿದೆ. ಜನರಿಗೆ ಸ್ವಚ್ಛವಾದ ಶುದ್ಧ ನೀರಿನ ಉಪಲಬ್ಧವನ್ನು ಮಾಡಿ ಕೊಡುವ ಒಳ್ಳೆಯ ವ್ಯವಸಾಯ ಮಾಡಬಹುದು ಜೊತೆಗೆ ತಿಂಗಳಿಗೆ ಸಮಾಧಾನವೆನ್ನುವದಕ್ಕಿಂತ ಹೆಚ್ಚಿಗೆ ಆದಾಯ ಗಳಿಸಬಹುದು.

  • ಆರೋಗ್ಯ, ಸುದ್ದಿ

    ಈ ಒಂದು ಪಲ್ಯ ತಿಂದರೆ ಸಾಕು ಕಿಡ್ನಿಯಲ್ಲಿರುವ ಕಲ್ಲು ಹೊರಗೆ ಬರುವುದು ಗ್ಯಾರಂಟಿ,.!

    ಸಾಮಾನ್ಯವಾಗಿ ಕಿಡ್ನಿ ಸ್ಟೋನ್ ಅನ್ನುವುದು ಈಗ ಎಲ್ಲರಿಗು ಸಾಮಾನ್ಯವಾದ ವಿಷಯ ಇದಕ್ಕೆ ಎಲ್ಲರು ಹಾಸ್ಪಿಟಲ್ಗೆ  ಹೋಗಿ ಚಿಕಿತ್ಸೆ ಪಡೆಯುತ್ತಾರೆ ಮತ್ತು ಇನ್ನು ಸ್ವಲ್ಪ ಜನ ನಾಟಿ ಔಷದಿ  ಪಡೆಯುತ್ತಾರೆ. ಆದರೆ ಇಲ್ಲಿದೆ ನೋಡಿ ಈ  ಒಂದು ಪಲ್ಯ ತಿಂದರೆ ಸಾಕು ಕಿಡ್ನಿಯಲ್ಲಿರುವ ಕಲ್ಲು ಹೊರಗೆ ಬರುತ್ತದೆ.ಇದಕ್ಕೆ ನೀವು ಜಾಸ್ತಿ ಏನು ಖರ್ಚು ಮಾಡಬೇಕಿಲ್ಲ. ಅದ್ಬುತವಾದ ಪಲ್ಯ ಮಾಡೊದು ಹೇಗೆ ಎಂದು ತಿಳಿಯಲು ಇದನ್ನೊಮ್ಮೆ ಓದಿ.ಬಾಳೆದಿಂಡಿನ ಪಲ್ಯವನ್ನು ಮಾಡುವುದು ಹೇಗೆ ಎಂಬುದನ್ನು ನಾನು ನಿಮಗೆ ತಿಳಿಸುತ್ತೇನೆ ಮೊದಲಿಗೆ ಬಾಳೆದಿಂಡನ್ನು…

  • ಮನರಂಜನೆ

    ಆಫೀಸ್ ಗೆ ಸ್ಪೈಡರ್ ಮ್ಯಾನ್ ವೇಷದಲ್ಲಿ ಬಂದ ಭೂಪ..!ಆಮೇಲೆ ಏನಾಯ್ತು ಗೊತ್ತಾ?ಈ ವಿಡಿಯೋ ನೋಡಿ

    ಯಾವುದೇ ಒಂದು ಕಂಪನಿಯಲ್ಲಿ ನೌಕರಿ ಮಾಡುತ್ತಿರುವವರು ನಿವೃತ್ತಿ ಹೊಂದುವ ವೇಳೆ ಅಥವಾ ಮತ್ತೊಂದು ಕಂಪನಿಗೆ ಸೇರ್ಪಡೆಗೊಳ್ಳಲು ರಾಜೀನಾಮೆ ನೀಡುವ ಸಂದರ್ಭ ಎದುರಾದಾಗ ತಮ್ಮ ಸಹೋದ್ಯೋಗಿಗಳನ್ನು ನೆನಪಿಸಿಕೊಂಡು ಭಾವುಕರಾಗುವುದು ಸಹಜ.ಆದರೆ ಇಲ್ಲೊಬ್ಬ ಬ್ಯಾಂಕ್ ಉದ್ಯೋಗಿ ತನ್ನ ಕೆಲಸದ ಕಡೆ ದಿನ ಸ್ಪೈಡರ್ ಮ್ಯಾನ್ ವೇಷ ಧರಸಿ ಆಫೀಸ್ ಗೆ ಹೋಗಿದ್ದಾರೆ. ಈ ಘಟನೆ ಬ್ರೆಜಿಲ್ ನ ಸಾವೋ ಪಾಲೊದಲ್ಲಿ ನಡೆದಿದ್ದು,ಇಡೀ ದಿನ ಸ್ಪೈಡರ್ ಮ್ಯಾನ್ ವೇಷದಲ್ಲಿ ತನ್ನ ಕೆಲಸ ಮಾಡಿದ್ದಾನೆ. ಈ ದೃಶ್ಯಗಳನ್ನು ಸೆರೆ ಹಿಡಿದ ಸಹೋದ್ಯೋಗಿಯೊಬ್ಬರು ಸಾಮಾಜಿಕ…

  • ಸುದ್ದಿ

    ಗ್ರಾಹಕರಿಗೆ ಶಾಕ್ ನೀಡಿದ ಏರ್‌ಟೆಲ್, ವೊಡಾಫೋನ್; ಡಿಸೆಂಬರ್‌ 1ರಿಂದ ಕರೆ ದುಬಾರಿ!

    ಜಿಯೋ ಗ್ರಾಹಕರ ಬೆನ್ನಲ್ಲೇ ಏರ್‌ಟೆಲ್‌ ಮತ್ತು ವೊಡಾಫೋನ್‌ ಗ್ರಾಹಕರಿಗೆ ಮುಂದಿನ ತಿಂಗಳಿಂದ ಫೋನ್‌ ಬಿಲ್‌ ಶಾಕ್‌ ತಟ್ಟಲಿದೆ. ವೊಡಾಫೋನ್‌ ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್‌ ಕಂಪನಿಗಳು ಡಿಸೆಂಬರ್‌ 1ರಿಂದ ತನ್ನ ಸೇವೆಗಳ ದರಗಳನ್ನು ಏರಿಕೆ ಮಾಡುವುದಾಗಿ ಘೋಷಿಸಿವೆ. ಕೆಲವೇ ವರ್ಷಗಳ ಹಿಂದೆ ಹತ್ತಾರು ದೂರ ಸಂಪರ್ಕ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ತರಹೇವಾರಿ ಆಫರ್‌ಗಳ ಮೂಲಕ ಕಡಿಮೆ ದರ ಸೇವೆಗಳನ್ನು ಘೋಷಿಸುತ್ತಿದ್ದವು. ಆದರೆ ಈಗ ಬಹುತೇಕ ದೂರಸಂಪರ್ಕ ಕಂಪೆನಿಗಳು ಮುಚ್ಚಿ ಹೋಗಿವೆ ಅಥವಾ ವಿಲೀನಗೊಂಡಿವೆ. ಜಿಯೋ, ಏರ್‌ಟೆಲ್, ವೊಡಾಫೊನ್ ಐಡಿಯಾ ಹಾಗೂ ಸರ್ಕಾರಿ ಸ್ವಾಮ್ಯ…