ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೈಗ್ರೇನ್ ಅನ್ನುವುದು ಒಂದು ಸಾಮಾನ್ಯ ರೀತಿಯ ತಲೆನೋವು. ವಾಕರಿಕೆ, ವಾಂತಿ ಅಥವಾ ಬೆಳಕಿಗೆ ಸಂವೇದನಾಶೀಲತೆ ಇರುವುದು ಇತ್ಯಾದಿ ರೋಗಲಕ್ಷಣಗಳ ಜತೆಗೆ ಇದು ಕಾಣಿಸಿಕೊಳ್ಳಬಹುದು. ಅನೇಕ ಜನರಲ್ಲಿ ತಲೆಯ ಒಂದೇ ಬದಿಯಲ್ಲಿ ಇರಿಯುವಂತಹ ನೋವು ಕಾಣಿಸಿಕೊಳ್ಳಬಹುದು.
ಹಾಗೆಂದು ಎಲ್ಲಾ ತಲೆನೋವುಗಳೂ ಮೈಗ್ರೇನ್ ಅಲ್ಲ. ದೃಷ್ಟಿದೋಷ, ನೆಗಡಿಗೆ ಸಂಬಂಧಿಸಿದ ತೊಂದರೆಗಳು, ಜ್ವರ ಇತ್ಯಾದಿ ಕಾರಣಗಳಿಂದಲೂ ತಲೆನೋವು ಬರುತ್ತದೆ. ಆದರೆ ಅದು ಮೈಗ್ರೇನ್ ಅಲ್ಲ. ಆದರೆ ಮೈಗ್ರೇನ್ ತಲೆನೋವು ಅತ್ಯಂತ ಸಾಮಾನ್ಯವಾದದ್ದು.
ಮೈಗ್ರೇನ್ ಎಂದರೇನು ?
ಕೆಲವು ಕಾರಣಗಳಿಂದ ಒಂದು ವ್ಯಕ್ತಿಯ ತಲೆಯೊಳಗಿನ ರಕ್ತನಾಳಗಳ ಗಾತ್ರದಲ್ಲಿ ಅಸ್ತಿರತೆಯುಂಟಾಗಿ, ಅವು ಮೊದಲು ಸಂಕುಚಿತವಾಗಿ ನಂತರ ವಿಕಸಿತವಾಗುತ್ತದೆ.ಆಗ ರಕ್ತನಾಳಗಳಿಗೆ ಸಂಬಂಧಿಸಿದ ಸೂಕ್ಷ್ಮ ನರಗಳು ಉದ್ರೇಕಗೊಂಡು ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಅದೇ ಮೈಗ್ರೇನ್.
ಕಾರಣಗಳು, ಸಂದರ್ಭ ಮತ್ತು ಅಪಾಯಕಾರಿ ಅಂಶಗಳು:
ಸಾಮಾನ್ಯವಾಗಿ ಮೈಗ್ರೇನ್ ತಲೆನೋವು 10 ರಿಂದ 45 ವಯಸ್ಸಿನ ನಡುವೆ ಕಾಣಿಸಿಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಜೀವನದ ಅಂತಿಮ ಹಂತಗಳಲ್ಲಿಯೂ ಸಹ ಕಾಣಿಸಿಕೊಳ್ಳಬಹುದು.ಮೈಗ್ರೇನ್ ಪುರುಷರಿಗಿಂತಲೂ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಮೈಗ್ರೇನ್ ತಲೆನೋವು ವಂಶಪರಂಪರಾಗತವಾಗಿ ಬರಬಹುದು. ಕೆಲವು ಮಹಿಳೆಯರಲ್ಲಿ , ಎಲ್ಲರಲ್ಲಿಯೂ ಅಲ್ಲ , ಅವರು ಗರ್ಭಿಣಿ ಆಗಿರುವಾಗ ಮೈಗ್ರೇನ್ ಕಾಣಿಸಿಕೊಳ್ಳಬಹುದು.
ಇದಕ್ಕೆ ನಿರ್ಧಿಷ್ಟ ಕಾರಣವನ್ನು ಹೇಳಲಾಗದಿದ್ದರೂ ಈ ಕೆಲವು ಸಾಮಾನ್ಯ ಕಾರಣಗಳನ್ನು ಹೇಳಬಹುದು.
1 ಹೆಚ್ಚು ಕೆಲಸದಿಂದಾಗಿ ಮಾನಸಿಕ ಒತ್ತಡ ಇರುವ ಸಾಫ್ಟ್ವೇರ್ ಎಂಜಿನಿಯರುಗಳಿಗೆ ಇದು ಸಾಮಾನ್ಯ. ಅವರಿಗೆ ದಿನದ ಹೆಚ್ಚುಕಾಲ ಒತ್ತಡದ ಕೆಲಸ ಮತ್ತು ನಿದ್ರೆ ಕಡಿಮೆ, ಅನಿಯಮಿತ ಆಹಾರದ ಸೇವನೆ ಇರುತ್ತದೆ.
2 . ಮಾನಸಿಕ ಒತ್ತಡಗಳಾದ ಕೋಪ,ಚಿಂತೆ, ಖಿನ್ನತೆ,ಗಾಬರಿಗಳಿಂದ ತಲೆನೋವು ಉದ್ರೇಕವಾಗಬಹುದು.
3 .ಆಹಾರ ಸೇವನೆಯಿಂದ ವ್ಯತ್ಯಾಸವಾದ ಹಸಿವೆ, ಮದ್ಯ ಸೇವನೆ, ಕಡಿಮೆ ನೀರು ಕುಡಿಯುವುದರಿನ್ದಲೂ ತಲೆನೋವು ಉದ್ರೇಕವಾಗುತ್ತದೆ.
4 . ನಿದ್ರೆ ಮಾತ್ರೆ ಸೇವನೆ, ಬಿ. ಪಿ., ಹಲ್ಲು ನೋವು, ಕಣ್ಣಿನ ತೊಂದರೆ, ತಂಬಾಕು ಅಥವಾ ಸಿಗರೇಟು ಸೇವನೆ, ಗರ್ಭನಿರೋಧಕ ಮಾತ್ರೆ, ಮೂಗಿನ ಉಸಿರಾಟದ ತೊಂದರೆ, ಸಂಸ್ಕರಿಸದ ಆಹಾರ ಸೇವನೆ, ಅತಿ ಮುಖ್ಯವಾಗಿ ನಿದ್ರಾಹೀನತೆ ಮುಂತಾದುವುಗಳಿಂದ ಸಹ ತಲೆನೋವು ಉದ್ರೇಕಗೊಳ್ಳಬಹುದು.
5 . ಹೆಚ್ಚು ಕಾಲ ಬಿಸಿಲಿನಲ್ಲಿ ಇರುವುದು, ದೀರ್ಘಕಾಲ ಪ್ರಯಾಣ ಮಾಡುವುದು, ಮದುವೆ ಅಥವಾ ಇತರೆ ಗಲಾಟೆ ಇರುವ ಸಮಾರಂಭದಲ್ಲಿ ಹೆಚ್ಚು ಹೊತ್ತು ಭಾಗವಹಿಸುವುದು, ಕೆಲವರಿಗೆ ಹೆಚ್ಚಾಗಿ ಓದುವುದು, ಹೆಚ್ಚು ಕಾಲ ಸಿನೆಮಾ / ಟಿ. ವಿ, ನೋಡುವುದು ಇವುಗಳಿಂದ ತಲೆನೋವು ಉದ್ರೇಕಗೊಳಬಹುದು.
6 . ಕೆಲವು ಸ್ತ್ರೀಯರಿಗೆ ಋತುಚಕ್ರದ ಏರುಪೇರುಗಳಿಂದ ತಲೆನೋವು ಉದ್ರೇಕಗೊಳ್ಳಬಹುದು.
ಮೈಗ್ರೇನ್ ರೋಗಲಕ್ಷಣಗಳು:
ದೃಷ್ಟಿ ಅಸ್ತವ್ಯಸ್ತಗೊಳ್ಳುವುದು, ಅಥವಾ ಕಣ್ಣಿನ ಬದಿಗಳಲ್ಲಿ ಬೆಳಕಿನ ಬಿಂಬಗಳು ಅಥವಾ ಪ್ರಭಾವಳಿ ಸುತ್ತುತ್ತಿರುವಂತೆ ಅನ್ನಿಸುವುದನ್ನು ಮೈಗ್ರೇನ್ ಬರುತ್ತಿದೆ ಎನ್ನುವುದರ ಎಚ್ಚರಿಕೆಯ ಸೂಚನೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಬೆಳಕಿನ ಬಿಂಬಗಳು ಒಂದು ಅಥವಾ ಎರಡೂ ಕಣ್ಣಿನ ಬದಿಗಳಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಕೆಳಗೆ ಹೇಳುವ ಒಂದು ಅಥವಾ ಎಲ್ಲ ರೋಗಲಕ್ಷಣಗಳ ಜತೆಗೆ ಕಾಣಿಸಿಕೊಳ್ಳಬಹುದು.
ಕಣ್ಣಿನಲ್ಲಿ ತಾತ್ಕಾಲಿಕವಾಗಿ ಆಂಶಿಕ ಕುರುಡುತನ ಅಥವಾ ಕಣ್ಣಿನ ಎದುರು ಕಪ್ಪು ಚುಕ್ಕೆಗಳು ಗೋಚರಿಸುವುದು,ದೃಷ್ಟಿ ಮಬ್ಟಾಗುವುದು,ಕಣ್ಣು ನೋವು,ಕಣ್ಣಿನ ಸುತ್ತಲೂ ನಕ್ಷತ್ರಗಳು ಅಥವಾ ಅಂಕುಡೊಂಕಾದ ಗೆರೆಗಳು ಗೋಚರಿಸುವುದು
ಕೊಳವೆಯೊಳಗಿನಿಂದ ನೋಡಿದಂತೆ ದೃಶ್ಯಗಳು ಅರೆಬರೆ ಕಾಣಿಸುವುದು (ಟನೆಲ್‌ಷನ್-ಕಣ್ಣಿನ ಮುಂಭಾಗದ ದೃಶ್ಯಗಳು ಮಾತ್ರವೇ ಗೋಚರಿಸಿ ಬದಿಗಳಲ್ಲಿನ ದೃಶ್ಯ ಕಾಣಿಸದೆಯೇ ಇರುವುದು)
ಮೈಗ್ರೇನ್ ಇರುವ ಎಲ್ಲ ವ್ಯಕ್ತಿಗಳಿಗೂ ಬೆಳಕಿನ ಪುಂಜ ಕಾಣಿಸದೆ ಇರಬಹುದು. ಇಂತಹ ಬೆಳಕಿನ ಪುಂಜ ಕಾಣಿಸಿಕೊಳ್ಳುವವರಲ್ಲಿ ತಲೆನೋವು ಕಾಣಿಸಿಕೊಳ್ಳುವುದಕ್ಕೆ ಸುಮಾರು 10-15 ನಿಮಿಷ ಮೊದಲು ಇದು ಕಾಣಿಸಿಕೊಳ್ಳಬಹುದು. ಹಾಗಿದ್ದರೂ ಸಹ ಅದು ಕೆಲವೇ ನಿಮಿಷಗಳಿಗೆ ಮೊದಲು ಅಥವಾ 24 ಗಂಟೆಗಳಿಗೂ ಮೊದಲು ಕಾಣಿಸಿಕೊಳ್ಳಬಹುದು. ಬೆಳಕಿನ ಪುಂಜ ಕಾಣಿಸಿಕೊಂಡ ಅನಂತರ ಯಾವಾಗಲೂ ತಲೆನೋವು ಬಂದೇ ಬರುತ್ತದೆ ಎಂದು ಹೇಳುವಂತಿಲ್ಲ.
ಮೈಗ್ರೇನ್ ತಲೆನೋವು ಬಹಳ ಸಣ್ಣದಾಗಿ ಇರಬಹುದು ಅಥವಾ ತೀವ್ರ ರೂಪದಲ್ಲಿಯೂ ಬಾಧಿಸಬಹುದು. ನೋವು ಕಣ್ಣಿನ ಹಿಂಭಾಗದಲ್ಲಿ ಅಥವಾ ಕತ್ತು ಮತ್ತು ತಲೆಯ ಹಿಂಭಾಗದಲ್ಲಿ ಕಾಣಿಸಿಕೊಳ್ಳಬಹುದು. ಕೆಲವು ರೋಗಿಗಳಲ್ಲಿ ಪ್ರತಿಯೊಂದು ಬಾರಿಯೂ ತಲೆನೋವು ಒಂದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ತಲೆನೋವು ಸಾಮಾನ್ಯವಾಗಿ ಈ ರೀತಿಯಲ್ಲಿ ಇರಬಹುದು.
ಬಹಳ ಸಣ್ಣದಾಗಿ ಆರಂಭವಾದ ನೋವು ಕೆಲವೇ ನಿಮಿಷಗಳಲ್ಲಿ ಅಥವಾ ಗಂಟೆಗಳಲ್ಲಿ ತೀವ್ರಗೊಳ್ಳಬಹುದು. 6 ರಿಂದ 48 ಗಂಟೆಗಳ ವರೆಗೂ ಇರಬಹುದು.
ಮೈಗ್ರೇನ್ ನ ನಿವಾರಣೆ :-
1 . ಮೈಗ್ರೇನ್ ತಲೆನೋವು ಬಂದಾಗ ಕೆಲವರಿಗೆ ಯಾವುದಾದರೂ ನೋವು ನಿವಾರಕ ಮಾತ್ರೆಯನ್ನು [ Pain killer ] ತೆಗೆದುಕೊಂಡರೆ ಸ್ವಲ್ಪ ಸಮಯದ ನಂತರ ನೋವು ಕಡಿಮೆಯಾಗುತ್ತದೆ.
2 . ಇನ್ನು ಕೆಲವರಿಗೆ ಏನನ್ನೂ ಉಪಯೋಗಿಸದೆ ನಿಷ್ಯಬ್ದವಾದ ಕೊಠಡಿಯಲ್ಲಿ ಕೆಲವು ಕಾಲ ವಿಶ್ರಾಂತಿ ತೆಗೆದುಕೊಳ್ಳುವುದರಿಂದಲೇ ತಲೆನೋವು ಕಡಿಮೆಯಾಗುತ್ತದೆ.
3 . ಇದಲ್ಲದೆ ಜೀವನ ಶೈಲಿಯನ್ನ್ನು ಬದಲಾಯಿಸಿಕೊಳ್ಳುವುದರಿಂದ ಈ ತೆರನ ತಲೆನೋವನ್ನು ನಿಯಂತ್ರಿಸಿಕೊಳ್ಳಬಹುದು.
ಮುನ್ಸೂಚನೆಗಳು:–
ಚಿಕಿತ್ಸೆಗೆ ಪ್ರತಿಯೊಬ್ಬನೂ ಸ್ಪಂದಿಸುವ ರೀತಿ ಹಾಗೂ ಪ್ರಮಾಣ ಭಿನ್ನ-ಭಿನ್ನವಾಗಿರುತ್ತವೆ. ಕೆಲವರಿಗೆ ಸ್ವಲ್ಪಮಟ್ಟಿನ ಚಿಕಿತ್ಸೆಯಿಂದ ಅಥವಾ ಚಿಕಿತ್ಸೆಯೇ ಇಲ್ಲದೆ ತಲೆನೋವು ಕಡಿಮೆ ಆಗಬಹುದು, ಇನ್ನು ಕೆಲವರಿಗೆ ಅನೇಕ ಔಷಧಿಗಳನ್ನು ಉಪಯೋಗಿಸಬೇಕಾಗಿ ಬರಬಹುದು ಅಥವಾ ಆಸ್ಪತ್ರೆಗೂ ಸೇರಬೇಕಾಗಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತ್ರೀವಿಧ ದಾಸೋಹದ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದ ಸಿದ್ದಗಂಗಾ ಶ್ರೀಗಳು ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದಿದ್ದಾರೆ. ಪರಮಪೂಜ್ಯ ಶ್ರೀ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಕಾರಣ ಇಡೀ ನಡೇ ಕಣ್ಣೀರಿನಲ್ಲಿ ಮುಳುಗಿದೆ.. ಬಡವರ ಬಂಧು.. ಜಾತಿ ಧರ್ಮ ಮತ ಬೇದ ಮಾಡದೇ ಕಾಯಕ ಯೋಗಿ ಪವಾಡ ಪುರುಷ ಶಿವಯೋಗಿ.. ಸಿದ್ದ ಪುರುಷ ಮಹಾಸ್ವಾಮಿಗಳು ಇಂದು ಬೆಳಿಗ್ಗೆ 11.44 ರಲ್ಲಿ ಭಕ್ತ ಕೋಟಿ ಸಾಗರವನ್ನು ಅಗಲಿದ್ದಾರೆ.. ಶಿವಕುಮಾರ ಸ್ವಾಮೀಜಿಗಳಿಗೆ ಮಕ್ಕಳೆಂದರೇ ಜಾಸ್ತಿ ಮಮತೆ. ಬದುಕಿನ ಹೆಚ್ಚಿನ ಕ್ಷಣಗಳನ್ನು ಶ್ರೀಗಳು ಮಕ್ಕಳ ಜೊತೆ…
ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಕಲಬೆರಕೆ ಇಲ್ಲವೇ ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆ ನಿಷೇಧಿಸಲು ಮುಜರಾಯಿ ಇಲಾಖೆ ಮುಂದಾಗಿದೆ. ಇಲಾಖೆ ವ್ಯಾಪ್ತಿಯ ಕೆಲವು ದೇಗುಲಗಳಲ್ಲಿ ಕಲಬೆರಕೆ ಇಲ್ಲವೇ ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆಯಾಗುತ್ತಿರುವ ಬಗ್ಗೆ ಭಕ್ತರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ದೇಗುಲಗಳಲ್ಲಿ ಪೂಜಾ ಕಾರ್ಯಗಳಿಗೆ ನಿಯಮಿತವಾಗಿ ಕುಂಕುಮ ಖರೀದಿಸಿ ಬಳಸಲಾಗುತ್ತದೆ. ಅರ್ಚನೆಗೆ ಬಳಸಿದ ಕುಂಕುಮವನ್ನು ಬಳಿಕ ಭಕ್ತರಿಗೆ ವಿತರಿಸಲಾಗುತ್ತದೆ. ಜತೆಗೆ ಭಕ್ತರು ಪೂಜೆಗೆಂದು ಸಲ್ಲಿಸಿದ ಕುಂಕುಮವನ್ನೂ ವಿತರಿಸಲಾಗುತ್ತಿದೆ.ರಾಸಾಯನಿಕ ಕುಂಕುಮದ ಬಣ್ಣ ಗಾಢವಾಗಿರಲಿದ್ದು, ಚರ್ಮ…
ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುವ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಇದೀಗ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅವಕಾಶ ಸಿಕ್ಕಾಗ ತಾವು ಮತದಾನ ಮಾಡದೇ, ಇದೀಗ ಟ್ವಿಟರ್ ನಲ್ಲಿ ಮತದಾನದ ಜಾಗೃತಿ ಮೂಡಿಸಲು ಹೋಗಿ ಟ್ವಿಟ್ಟಿಗರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ರಮ್ಯಾ ತಮ್ಮ ಟ್ವಿಟ್ಟರ್ ನಲ್ಲಿ, ‘ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರು ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಸೇರಿಸಿಕೊಳ್ಳಿ, ಟೈಂ ಹೋಗ್ತಿದೆ…..ಭವಿಷ್ಯ ನಿಮ್ಮದಾಗಿದೆ’ ಅಂತಾ ಟ್ವೀಟ್ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರು…
ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಹಾಗೂ ತೈಲ ಸಂಸ್ಕರಣಾ ಸಂಸ್ಥೆ ಭಾರತ್ ಪೆಟ್ರೋಲಿಯಂ ನಿಗಮ ಶೀಘ್ರದಲ್ಲೇ ಮಾರಾಟವಾಗಲಿದೆ. ನಷ್ಟದಲ್ಲಿರುವ ಈ ಎರಡೂ ಸಂಸ್ಥೆಗಳನ್ನುಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಮುಂದಿನ ವರ್ಷ ಮಾರ್ಚ್ ಒಳಗೆಎರಡೂ ಸಂಸ್ಥೆಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆಎಂದು ಕೇಂದ್ರ ಹಣಕಾಸು ಸಚಿವೆನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಮೂಲಕ ಪ್ರಸಕ್ತಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ1 ಲಕ್ಷ ಕೋಟಿ ರೂ. ಹೆಚ್ಚುವರಿಹಣ ಸೇರ್ಪಡೆಯಾಗಲಿದೆ. ಏರ್ ಇಂಡಿಯಾ ಹಾಗೂ ಭಾರತ್ಪೆಟ್ರೋಲಿಯಂ ಸಂಸ್ಥೆಗಳನ್ನು ಖರೀದಿಸಲು ಹೂಡಿಕೆದಾರರು ಭಾರೀ ಆಸಕ್ತಿವಹಿಸಿದ್ಧಾರೆ ಎಂದುನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದ್ರೆ, ಕೇಂದ್ರ…
2 ವರ್ಷದಲ್ಲಿ ಜಾರಿಯಾದ ಕೇ೦ದ್ರ ಸರಕಾರದ ಯೋಜನೆಗಳು:
ಬಿಗ್ ಬಾಸ್ ಕನ್ನಡ ಸೀಸನ್ 5ರ ರಿಯಾಲಿಟಿ ಪ್ರಣಯ ಜೋಡಿ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅದ್ದೂರಿಯಾಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದಕ್ಕೂ ಮುನ್ನವೇ ನಿವೇದಿತಾ ಗೌಡ ಗುಡ್ ನ್ಯೂಸ್ ನೀಡಿದ್ದಾರೆ. ಬಿಗ್ ಬಾಸ್ ಮನೆಯ ಬೇಬಿ ಡಾಲ್ ಎಂದೇ ಹೆಸರಾದ ನಿವೇದಿತಾ ಗೌಡರನ್ನು ಯಾರು ತಾನೇ ಮರೆಯುವುದುಂಟ ಹೇಳಿ. ತನ್ನ ಮುದ್ದು-ಮುದ್ದಾದ ಮಾತುಗಳನ್ನಾಡುತ್ತ ಸೋಷಿಯಲ್ ಮೀಡಿಯಾದಿಂದ ಬಿಗ್ ಬಾಸ್ ಮನೆಯ ತನಕ ಹೆಜ್ಜೆಯಿಟ್ಟ ಚೆಲುವೆ ನಿವೇದಿತಾ. ಬಿಗ್ ಬಾಸ್ ಮನೆಯಲ್ಲಿ ಕನ್ನಡದ ರ್ಯಾಪ್…