ಹಣ ಕಾಸು

ಈ ಕಾನೂನು ಜಾರಿಗೆ ಬಂದ್ರೆ ಎಲ್ಲ ಕಾರ್ಮಿಕರಿಗೂ ಸಿಗಲಿದೆ, ಕನಿಷ್ಟ 18,000ರೂ ಸಂಬಳ !

9893

ಕಾರ್ಮಿಕ ಕಾಯ್ದೆಯನ್ವಯ ಎಲ್ಲಾ ವಯಗಳಲ್ಲೂ ಕನಿಷ್ಠ ವೇತನ ನೀಡುವ ಹೊಸ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಕಾನೂನು ಜಾರಿಗೊಂಡರೆ ನಾಲ್ಕು ಕೋಟಿ ಕಾರ್ಮಿಕರು ಇದರ ಲಾಭ ಪಡೆದುಕೊಳ್ಳಲಿದ್ದಾರೆ.

ಈ ಹೊಸ ಕನಿಷ್ಠ ವೇತನ ವಿಧೇಯಕದಲ್ಲಿನ ಅಧಿನಿಯಮದ ಪ್ರಕಾರ ಎಲ್ಲಾ ವಲಯಗಳಲ್ಲಿನ ಕಾರ್ಮಿಕರಿಗೆ ಪ್ರತಿ ತಿಂಗಳೂ ಕನಿಷ್ಠ ವೇತನ 18,000 ರೂ. ನೀಡಬೇಕಾಗುತ್ತದೆ. ಈ ಪ್ರಸ್ತಾವನೆಯನ್ನು ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆ ಅಂಗೀಕರಿಸಿ ಒಪ್ಪಿಗೆ ನೀಡಿದೆ.

ಮುಂಗಾರು ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗಲಿದ್ದು, ಅಲ್ಲಿ ಅನುಮೋದನೆ ಸಿಕ್ಕ ನಂತರ ಈ ಕಾನೂನು ಜಾರಿಗೆ ಬರಲಿದೆ.

ಕನಿಷ್ಠ ವೇತನ ಕಾಯ್ದೆ 1948, ವೇತನ ಪಾವತಿ ಕಾಯ್ದೆ 1936, ಬೋನಸ್‌ ಪಾವತಿ ಕಾಯ್ದೆ 1965, ಸಮಾನ ಸಂಭಾವನೆ ಕಾಯ್ದೆ 1976ನ್ನು ಈ ವಿಧೇಯಕದಲ್ಲಿ ಸೇರಿಸಲಾಗಿದೆ.

ಕನಿಷ್ಠ ವೇತನ ವಿಧೇಯಕ ಕಾನೂನು ಜಾರಿಗೆ ಬಂದರೆ, ಯಾರಿಗೆ ಸಿಹಿ ಯಾರಿಗೆ ಕಹಿ:-

ಕಾನೂನು ತಜ್ಞರ ಪ್ರಕಾರ ಈ ನೂತನ ವಿಧೇಯಕ ಸಿಹಿ ಸುದ್ದಿಯೂ ಹೌದು, ಕಹಿ ಸುದ್ದಿಯೂ ಹೌದು! ಏಕಂದರೆ ಕೇಂದ್ರ ಸರಕಾರವು ಇದುವರೆಗೂ ತನ್ನ ವ್ಯಾಪ್ತಿಗೆ ಬರುವ ಕಾರ್ಮಿಕರಿಗೆ ಮಾತ್ರ ಕನಿಷ್ಠ ವೇತನದ ನಿರ್ಧಾರ ತೆಗೆದುಕೊಳ್ಳುತಿತ್ತು. ಬೇರೆ ಬೇರೆ ರಾಜ್ಯಗಳಲ್ಲಿ ಈ ಕನಿಷ್ಠ ವೇತನದ ಬಗ್ಗೆ ಆ ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದು ಕೊಳ್ಳುತ್ತಿದ್ದವು. ಹೀಗಾಗಿ ಭಾರತದಲ್ಲಿ ಏಕರೂಪದ ವೇತನವಿರಲಿಲ್ಲ.

ಈ ಕಾನೂನು ಬಂದ್ರೆ ಹಲವು ಸಣ್ಣ ಕಂಪನಿಗಳಿಗೆ ತೊಂದರೆಯಾಗಲಿದೆ. ಏಕೆಂದರೆ ನಮ ದೇಶದಲ್ಲಿ ಬಹುಪಾಲು ಜನ ಸಣ್ಣ ಮತ್ತು ಮಧ್ಯಮ ಕಂಪನಿಗಳನ್ನು ನಡೆಸುತ್ತಿದ್ದಾರೆ. ಈ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತುಂಬಾ ಕಡಿಮೆಯಲ್ಲಿದ್ದಾರೆ. 500 ಅಥವಾ ಅದಕ್ಕಿಂತ ಮೇಲ್ಪಟ್ಟ ಕಾರ್ಮಿಕರನ್ನು ಹೊಂದಿರುವ ಕಂಪನಿಗಳು ತುಂಬಾ ಕಡಿಮೆ.

ಹಾಗಾಗಿ ಈ ಕನಿಷ್ಠ ವೇತನ ಜಾರಿ ಬಂದ್ರೆ ಸಂತಸವೇನೋ ನಿಜ. ಆದ್ರೆ ಸಣ್ಣ ಮತ್ತು ಮಧ್ಯಮ ಕಂಪನಿಗಳು ಕನಿಷ್ಠ ವೇತನವನ್ನು ಕೊಡಲಾಗದೆ ಕೆಲಸದಿಂದ ಕಾರ್ಮಿಕರನ್ನು ತೆಗೆಯುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ, ಈ ದಿನದ ರಾಶಿ ಭವಿಷ್ಯದಲ್ಲಿ ಈ ರಾಶಿಗಳಿಗೆ ವಿಪರೀತ ಧನಲಾಭವಾಗಲಿದ್ದು ಇದರಲ್ಲಿ ನಿಮ್ಮ ರಾಶಿ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(7 ಫೆಬ್ರವರಿ, 2019) ತೀರಾ ಖರ್ಚು ಮಾಡುವ ಮತ್ತು ಮನರಂಜನೆಗೆ ತುಂಬಾ ಖರ್ಚ ಮಾಡುವ ನಿಮ್ಮ ಪ್ರವೃತ್ತಿಗೆ…

  • ಸುದ್ದಿ

    ಖತರ್ನಾಕ್ ಕಳ್ಳರನ್ನು ಬಂಧಿಸಿ 5 ಲಕ್ಷ ಮೌಲ್ಯದ 14 ಬೈಕ್‍ಗಳನ್ನು ವಶಕ್ಕೆ ಪಡೆದುಕೊಂಡ ಕ್ಯಾತಸಂದ್ರ ಪೊಲೀಸರು

      ತುಮಕೂರು, ಆ.23-ವಿವಿಧ ಕಡೆಗಳಲ್ಲಿ ಮೋಟಾರ್ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಖತರ್ನಾಕ್ ಕಳ್ಳನನ್ನು ಕ್ಯಾತಸಂದ್ರ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅನಂತಪುರ ಜಿಲ್ಲೆ ಅರೆಸಮುದ್ರಂ ನಿವಾಸಿ ನರಸಿಂಹ ಮೂರ್ತಿ (30) ಬಂಧಿತ ಆರೋಪಿಯಾಗಿದ್ದು, ಈತ ತುಮಕೂರು ಪಟ್ಟಣದ ಹಳೇ ದೇವರಾಯಪಟ್ಟಣದಲ್ಲಿ ಪ್ರಸ್ತುತ ವಾಸವಾಗಿದ್ದನು. ಕಳೆದ 2013ರಲ್ಲಿ ಬೆಂಗಳೂರು, ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ ಕಡೆಗಳಲ್ಲಿ ಮೋಟಾರ್‍ಬೈಕ್‍ಗಳನ್ನು ಕಳ್ಳತನ ಮಾಡಿದ್ದು, ಈತನ ಬಂಧನದಿಂದ ಹಲವು ಪ್ರಕರಣಗಳು ಪತ್ತೆಯಾದಂತಾಗಿದೆ….

  • ತಂತ್ರಜ್ಞಾನ

    ಇನ್ನು 6 ತಿಂಗಳಲ್ಲಿ ನಿಮ್ಮ ಹಣವನ್ನು ವಾಟ್ಸಪ್ ಮಾಡಬಹುದು..!ತಿಳಿಯಲು ಈ ಲೇಖನ ಓದಿ…

    ಪೇಟಿಮ್ ಬಂದ ಮೇಲೆ ಬೇರೆ ಬೇರೆ ಡಿಜಿಟಲ್ ಪೇಮೆಂಟ್ ಆಪ್ ಗಳು ಪ್ರಾರಂಭಿಸಿದವು. ಸಾಮಾಜಿಕ ಜಾಲತಾಣದ ದೈತ್ಯ ವಾಟ್ಸಪ್ ಸದ್ಯದಲ್ಲೇ ಡಿಜಿಟಲ್ ಪೇಮೆಂಟ್ ಶುರು ಮಾಡಲು ಹೊರಟಿದೆ. ಪ್ರಪಂಚದಲ್ಲಿ ಭಾರತದಲ್ಲೇ ಈ ರೀತಿಯ ಮೊದಲ ಹೆಜ್ಜೆ ಇಡುತ್ತಿರುವುದು.

  • ಮನರಂಜನೆ

    ಬಿಗ್ ಬಾಸ್ ಕಿರೀಟ ಧರಿಸಿದ ಆಧುನಿಕ ರೈತ..!ಬಿಗ್ ಬಾಸ್ ನಲ್ಲಿ ಅನ್ಯಾಯ ಆಗಿದೆ ಎಂದ ವೀಕ್ಷಕರು…

    ಬಿಗ್ ಬಾಸ್ ಸೀಸನ್ 6 ರ ವಿನ್ನರ್ ಆಗಿ ಮಾಡರ್ನ್ ರೈತ ಶಶಿಕುಮಾರ್ ಹೊರಹೊಮ್ಮಿದ್ದಾರೆ. ಇವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಗಾಯಕ ನವೀನ್ ಸಜ್ಜು ಎರಡನೇ ಸ್ಥಾನ ಪಡೆದಿದ್ದಾರೆ. ಭಾನುವಾರ ರಾತ್ರಿ ನಡೆದ ಗ್ರ್ಯಾಂಡ್ ಫಿನಾಲೆಯ ಕೊನೆಯಲ್ಲಿ ಉಳಿದಿದ್ದ ಗಾಯಕ ನವೀನ್ ಸಜ್ಜು ಮತ್ತು ಶಶಿಕುಮಾರ್ ನಡುವೆ ವಿನ್ನರ್ ಆಗಲು ಬಿಗ್‍ಫೈಟ್ ನಡೆದಿತ್ತು. ಕಡೆಯದಾಗಿ ಜನಾಭಿಪ್ರಾಯದ ಮೇಲೆ ಶಶಿಯನ್ನು ಬಿಗ್‍ಬಾಸ್ ನಿರೂಪಕ ಕಿಚ್ಚ ಸುದೀಪ್ ವಿನ್ನರ್ ಎಂದು ಘೋಷಿಸಿದರು. ನವೀನ್ ಸಜ್ಜು ರನ್ನರ್ ಆಗಿ ಹೊರಹೊಮ್ಮಿದ್ರು. ದಿ…

  • ಸ್ಪೂರ್ತಿ

    ತನ್ನ ಸಾಧನೆಯಿಂದಾಗಿ ಇಡೀ ದೇಶದ ಗಮನ ಸೆಳೆದ ಕೇವಲ ಎರಡೇ ವರ್ಷದ ಮೈಸೂರಿನ ಪುಟ್ಟ ಪೋರಿ..!

    ಬುದ್ದಿಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಇನ್ನೂ ಕೇವಲ ಎರಡು ವರ್ಷದ ಮಗುವೆ ಸಾಕ್ಷಿ. ಈ ಮಗುವಿನ ಬುದ್ದಿವಂತಿಕೆ ಅವಳ ವಯಸ್ಸಿಗೆ ಮೀರಿದ್ದು.ಕರ್ನಾಟಕದ ಸಾಂಸ್ಕೃತಿಕ ನಗರ ಎಂದೇ ಕರೆಯುವ ಮೈಸೂರಿನ ಪುಟ್ಟಪೋರಿ ಈಡೀ ದೇಹವೇ ಮೆಚ್ಚವಂತ ಸಾಧನೆ ಮಾಡಿದ್ದಾಳೆ. ತನ್ನ ವಯಸ್ಸಿಗೆ ಮೀರಿದ ಸಾಧನೆ ಮಾಡಿರುವ ಮೈಸೂರಿನ ಹಳ್ಳದಕೇರಿ ನಿವಾಸಿಯಾಗಿರುವ ಗಣೇಶ್ ಹಾಗೂ ನಯನ ದಂಪತಿಯ ಸುಪುತ್ರಿ ದ್ಯುತಿ ಎರಡೇ ವರ್ಷಕ್ಕೆ ಇಡೀ ಜಗತ್ತನ್ನು ಗೆದ್ದು ಬಿಗಿದ್ದಾಳೆ. ತನ್ನ ಬುದ್ಧಿ ಸಾಮಾರ್ಥ್ಯದಿಂದಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿ…