ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರಿನಲ್ಲಿ ಜಿಮ್ ಗೆ ಬರುವವರಿಗೆ ಹಾನಿಕಾರಕ ಔಷಧ ಕೊಡುತ್ತಿದ್ದ ಜಿಮ್ ಟ್ರೈನರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆಯ 4 ನೇ ಮುಖ್ಯರಸ್ತೆಯಲ್ಲಿರುವ ಜಿಮ್ ನಲ್ಲಿ ಫಿಟ್ನೆಸ್ ಗಾಗಿ ಬರುತ್ತಿದ್ದವರಿಗೆ ದೇಹ ಹುರಿಗೊಳಿಸಲು ಮತ್ತು ತೆಳ್ಳಗಾಗಲು ಜಿಮ್ ಟ್ರೈನರ್ ನಿಷೇಧಿತ ಔಷಧ ಕೊಡುತ್ತಿದ್ದ. ನಿಷೇಧಿತ ಡ್ರಗ್ಸ್ ಗಳನ್ನು ಬೇರೆ ಕಡೆಯಿಂದ ತರಿಸಿ ಕೊಡುತ್ತಿದ್ದ. ಜಿಮ್ ಗೆ ಬರುತ್ತಿದ್ದ ಕೆಲವರಿಗೆ ಈ ನಿಷೇಧಿತ ಔಷಧ ಸೇವಿಸಿದ್ದರಿಂದ ಆರೋಗ್ಯದ ಸಮಸ್ಯೆ ಎದುರಾಗಿದೆ. ಕೆಲವರಿಗೆ ಪುರುಷತ್ವ ಕಡಿಮೆಯಾಗಿದೆ ಎನ್ನಲಾಗಿದೆ.
ಆರೋಗ್ಯ ಸಮಸ್ಯೆ ಕಾಣಿಸಿಕೊಂಡವರಿಗೆ ವೈದ್ಯರು ನಿಷೇಧಿತ ಔಷಧ ಸೇವನೆಯಿಂದ ಹೀಗಾಗಿದೆ ಎಂದು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಜಿಮ್ ಗೆ ಬರುವ ಗ್ರಾಹಕರಿಗೆ ಹಾನಿಕಾರಕ ಔಷಧ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ದೇಹಹುರಿಗೊಳಿಸಲು ಮತ್ತು ತೆಳ್ಳಗಾಗಲು ಬ್ಯಾನ್ ಆಗಿರುವ ಹಾನಿಕಾರಕ ಔಷಧ ನೀಡುತ್ತಿದ್ದಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸಲು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಭೇಟಿ ಮಾಡಿದ್ದಾರೆ. ರತನ್, ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಚಿಕ್ಕವಯಸ್ಸಿನಲ್ಲೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ದರ್ಶನ್ ಅವರನ್ನು ನೋಡುವುದು ರತನ್ನ ಬಹುದಿನದ ಆಸೆ ಆಗಿದ್ದು. ಒಂದೇ ಒಂದು ಬಾರಿ ದರ್ಶನ್ ಅವರನ್ನು ನೋಡಬೇಕೆಂದು ರತನ್ ತುಂಬಾ ಹಂಬಲಿಸುತ್ತಿದ್ದನು. ಈ ವಿಷಯ ತಿಳಿದ ದರ್ಶನ್, ರತನ್ ಕುಟುಂಬವನ್ನು ಹಾಸನದಿಂದ ಬೆಂಗಳೂರಿಗೆ ಕರೆಸಿಕೊಂಡರು. ಬಳಿಕ ರತನ್ ದರ್ಶನ್ ಅವರನ್ನು ಭೇಟಿ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾನೆ….
ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನನ್ನ ಕಂಡರೆ ಮನುಷ್ಯನಿಗೆ ಆಗುವುದಿಲ್ಲ. ಒಬ್ಬರನ್ನ ಕಂಡು ಇನ್ನೊಬ್ಬರು ಹೊಟ್ಟೆ ಕಿಚ್ಚು ಪಡುವುದೇ ಹೆಚ್ಚು. ಒಮ್ಮೊಮ್ಮೆ ಮನುಷ್ಯರಿಗಿಂದ ಪ್ರಾಣಿಗಳೇ ಉತ್ತಮ ಎನ್ನಿಸುತ್ತದೆ. ಮನುಷ್ಯರು ಬಡವ ಶ್ರೀಮಂತ ಎಂಬ ಬೇಡತೊರುತ್ತಾರೆ ಆದರೆ ಪಾನಿಗಳು ಹಾಗಲ್ಲ, ಅವುಗಳಿಗೆ ಬದುಕುವುದಷ್ಟೇ ಗೊತ್ತು.
ಉತ್ತರ ಕೊರಿಯ ತಾನು ಇನ್ನೊಂದು ಹೈಡ್ರೋಜನ್ ಬಾಂಬ್ ಪರೀಕ್ಷೆ ಕೈಗೊಳ್ಳುವುದಾಗಿ ಒಡ್ಡಿದ ಬೆದರಿಕೆಯಿಂದ ವಿಶ್ವಾದ್ಯಂತ ಶೇರು ಮಾರುಕಟ್ಟೆಗಳು ನಲುಗಿರುವಂತೆಯೇ ಇಂದು ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 400ಕ್ಕೂ ಅಧಿಕ ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಯಿತು.
‘ಬಿಗ್ ಬಾಸ್ ಕನ್ನಡ ಸಂಚಿಕೆ 5’ ಮುಕ್ತಾಯವಾಗಿದೆ. ಎಲ್ಲರೂ ಜಯರಾಂ ಕಾರ್ತಿಕ್(ಜೆಕೆ) ಅವರಿಗೆ ‘ಬಿಗ್ ಬಾಸ್ ಪಟ್ಟ ಸಿಗಬಹುದು, ಎಂದುಕೊಂಡಿದ್ದವರಿಗೆ ಶಾಕ್ ನೀಡಿದ್ದಾನೆ ಬಿಗ್ ಬಾಸ್. ಕಾಮಾನ್ ಮ್ಯಾನ್ ಆಗಿ ‘ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ದಿವಾಕರ್ ರನ್ನರ್ ಆಪ್ ಆಗಿ ಹೊರಬಂದಿದ್ದಾರೆ.
ತೂಕ ನಷ್ಟಕ್ಕೆ ಆಹಾರವನ್ನು ಅನುಸರಿಸುವಾಗ ನೀವು ಸೇವಿಸುವ ಕ್ಯಾಲೊರಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗುತ್ತದೆ. ನೀವು ಸೇವಿಸುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ನೀವು ಸುಡಬೇಕು. ಅದಕ್ಕಾಗಿಯೇ ತೂಕ ನಷ್ಟಕ್ಕೆ ಯಾವುದೇ ಆಹಾರವು ನೀವು ಸೇವಿಸುವ ಕ್ಯಾಲೊರಿಗಳ ಸಂಖ್ಯೆಯನ್ನು ನಿರ್ಬಂಧಿಸುತ್ತದೆ. ಆದರೆ ದಿನದ ಯಾವುದೇ ಸಮಯದಲ್ಲಾದರೂ ಹಸಿವು ಜಾಸ್ತಿಯಾಗಿ ನಿವು ಅಗತ್ಯಕ್ಕಿಂತ ಹೆಚ್ಚಿನದನ್ನು ತಿನ್ನಬಹುದು ಇದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುವುದಿಲ್ಲ. ಹೊಟ್ಟೆಯ ಕೊಬ್ಬಿನ ಶೇಖರಣೆಗೆ ಕಾರಣವಾಗುವ ಆಹಾರವನ್ನ ನಿವು ಹಸಿವನ್ನು ನೀಗಿಸಲು ಹೆಚ್ಚಾಗಿ ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸುತ್ತೀರಿ. ಅಂತಹ ಪರಿಸ್ಥಿತಿಯನ್ನು…
ಚಿಕ್ಕೋಡಿ: ಚಕ್ರ ಸ್ಫೋಟಗೊಂಡು ಚಲಿಸುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ ಸುಮಾರು 10ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದಲ್ಲಿ ನಡೆದಿದೆ. ಸಾರಿಗೆ ಬಸ್ ಗೋಕಾಕ್ನಿಂದ ಸಂಕೇಶ್ವರ ಪಟ್ಟಣದತ್ತ ಹೋಗುತಿತ್ತು. ಬಸ್ಸಿನಲ್ಲಿ ಸುಮಾರು 34 ಮಂದಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಡ್ಡದಿಡ್ಡಿ ಹೋಗುತಿತ್ತು. ಬಸ್ ರಕ್ಷಿ ಗ್ರಾಮದ ಹೊರವಲಯದ ಯರಗಟ್ಟಿ – ಸಂಕೇಶ್ವರ ರಾಜ್ಯ ಹೆದ್ದಾರಿ ಮೇಲೆ ಬರುತ್ತಿದ್ದಂತೆ ಏಕಾಏಕಿ…