ಗ್ಯಾಜೆಟ್, ತಂತ್ರಜ್ಞಾನ

ಈಗ ಯೂಟ್ಯೂಬ್ ವಿಡಿಯೋವನ್ನು ವಾಟ್ಸ್‌ಆಪ್‌ನಲ್ಲೇ ನೋಡಬಹುದು..!ಹೇಗೆ ಗೊತ್ತಾ..?ತಿಳಿಯಲು ಇದನ್ನು ಓದಿ ..

433

ದೇಶದಲ್ಲಿ ನಡೆಯುತ್ತಿರುವ ಮೊಬೈಲ್ ಡೇಟಾ ಕ್ರಾಂತಿ ಇಡೀ ವಿಶ್ವವನ್ನು ನಮ್ಮ ಕಡೆಗೆ ತಿರುಗುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಗೂಗಲ್-ಫೇಸ್‌ಬುಕ್‌ ಸೇರಿದಂತೆ ಎಲ್ಲಾ ದೈತ್ಯ ಕಂಪನಿಗಳು ಭಾರತದ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದು, ಭಾರತೀಯರಿಗಾಗಿಗೇ ಸೇವೆಗಳನ್ನು ನೀಡಲು ಮುಂದಾಗಿವೆ.

ಸದ್ಯ ದೇಶದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ತಾಣಗಳು ಎಂದರೆ ಅದು ಯೂಟ್ಯೂಬ್ ಮತ್ತು ವಾಟ್ಸ್‌ಆಪ್ ಇವು ಸಹ ಭಾರತೀಯರಿಗಾಗಿಯೆ ಬದಲಾಗಿವೆ.

ಹೆಚ್ಚಿನ ಜನರನ್ನು ಆಕರ್ಷಿಸಿರುವ ಯೂಟ್ಯೂಬ್ ಮತ್ತು ವಾಟ್ಸ್‌ಆಪ್ ಎರಡು ಸಹ ಇನ್ನುಷ್ಟು ಜನರ ಬಳಿಗೆ ಹೋಗುವ ಸಲುವಾಗಿ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿವೆ. ವಾಟ್ಸ್‌ಆಪ್‌ನಲ್ಲಿಯೇ ಯೂಟ್ಯೂಬ್ ವಿಡಿಯೋಗಳನ್ನ ನೋಡುವ ಅವಕಾಶವನ್ನು ಮಾಡಿಕೊಡಲು ಮುಂದಾಗಿವೆ. ಇದರಿಂದಾಗಿ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ.

ವಾಟ್ಸ್‌ಆಪ್ ಹೊಸ ಆಪ್‌ಡೇಟ್:-

ವಾಟ್ಸ್‌ಆಪ್ ತನ್ನ ಆಂಡ್ರಾಯ್ಡ್ ಮತ್ತು ಆಪಲ್ ಬಳಕೆದಾರರಿಗೆ ಹೊಸ ಆಯ್ಕೆಯನ್ನು ನೀಡುತ್ತಿದ್ದು, ಇದರಲ್ಲಿ ನೀವು ಸ್ನೇಹಿತರಿಗೆ ಯೂಟ್ಯೂಬ್ ವಿಡಿಯೋವನ್ನು ಕಳುಹಿಸಿದರೆ ಅವರು ಯೂಟ್ಯೂಬ್‌ಗೆ ಹೋಗಿ ವಿಡಿಯೋ ನೋಡುವ ಅವಶ್ಯಕತೆ ಇಲ್ಲ.

ಬದಲಾಗಿ ವಾಟ್ಸ್‌ಆಪ್ ನಲ್ಲಿಯೇ ವಿಡಿಯೋವನ್ನು ನೋಡಬಹುದಾಗಿದೆ.

ಪಿಚ್ಚರ್ ಇನ್ ಪಿಚ್ಚರ್ ಆಯ್ಕೆ:-

ಇದಕ್ಕಾಗಿಯೇ ವಾಟ್ಸ್‌ಆಪ್ ಪಿಚ್ಚರ್ ಇನ್ ಪಿಚ್ಚರ್ ಆಯ್ಕೆಯನ್ನು ನೀಡಲಾಗಿದ್ದು, ಇದರಿಂದಾಗಿ ವಾಟ್ಸ್‌ಆಫ್ ವಿಂಡೋದಲ್ಲಿಯೇ ಯೂಟ್ಯೂಬ್ ವಿಡಿಯೋವನ್ನು ನೋಡವ ಅವಕಾಶವನ್ನು ವಾಟ್ಸ್‌ಆಪ್ ಬಳಕೆದಾರರು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ

ವಿಡಿಯೋ ನೋಡುವ ಜೊತೆಗೆ ಚಾಟ್ ಮಾಡಬಹುದು :-

ಇದಲ್ಲದೇ ನೀವು ವಾಟ್ಸ್‌ಆಪ್‌ನಲ್ಲಿ ವಿಡಿಯೋವನ್ನು ನೋಡುವ ಜೊತೆಗೆ ನಿಮ್ಮ ಸ್ನೇಹಿತರೊಂದಿಗೆ ಚಾಟ್ ಸಹ ನಡೆಸಬಹುದಾಗಿದೆ.

ಇದರಿಂದಾಗಿ ವಾಟ್ಸ್‌ಆಪ್ ಮತ್ತು ಯೂಟ್ಯೂಬ್ ಬಳಕೆ ಮತ್ತಷ್ಟು ಸುಲಭವಾಗಲಿದೆ ಎನ್ನಲಾಗಿದೆ.

ಶೀಘ್ರವೇ ಬಳಕಗೆ ಲಭ್ಯ:-

ಈ ಆಯ್ಕೆಯೂ ಶೀಘ್ರವೇ ಬಳಕೆದಾರರಿಗೆ ದೊರೆಯಲಿದೆ ಎನ್ನುವ ಅಂಶವು ತಿಳಿದು ಬಂದಿದ್ದು, ಈಗಾಗಲೇ ಬಿಟಾ ಬಳಕೆದಾರರು ಈ ಆಯ್ಕೆಯನ್ನು ಪಡೆಯಬಹುದಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ