ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಹಾನಿ ತಪ್ಪಿಸುವ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿರುವ ವಿನೂತನ ಶೈಲಿಯ ಸಿಲಿಂಡರ್‌ಗಳನ್ನು ‘ಗೋ ಗ್ಯಾಸ್’ ಮಾರುಕಟ್ಟೆಗೆ ಪರಿಚಯಿಸಿದೆ.

ಗೋ ಗ್ಯಾಸ್‌ನ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಡಿ. ವೆಂಕಟರಾಮನ್, ಗ್ಯಾಸ್ ಸಿಲಿಂಡರ್ ಸೋರಿಕೆ, ಸ್ಫೋಟದಂತಹ ಹಲವಾರು ಪ್ರಕರಣಗಳಿಂದ ಗ್ರಾಹಕರಿಗೆ ಮುಕ್ತಿ ನೀಡಲು ಗೋ ಗ್ಯಾಸ್ ಬಹಳ ಅನುಕೂಲಕರವಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಗೋ ಗ್ಯಾಸ್ ಎಲೈಟ್ ಎಲ್’ಪಿಜಿ ಸಿಲಿಂಡರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದು ತಿಳಿಸಿದರು.

ಗೃಹ ಬಳಕೆಗಾಗಿ ಮೊದಲ ಬಾರಿಗೆ ‘ಗೋ ಗ್ಯಾಸ್’ ಎಲ್‌ಪಿಜಿ ಸಂಪರ್ಕ ಪಡೆಯಲು ಬಯಸುವವರು ವಿಳಾಸ ದೃಡೀಕರಣ ದಾಖಲೆ ಹಾಗೂ 1,350 ರೂ. ನೀಡಬೇಕು. ವಾಣಿಜ್ಯ ಉದ್ದೇಶಕ್ಕಾಗಿ 1700 ರೂ. ನೀಡಬೇಕು. ಆಮೇಲೆ ಪ್ರತಿ ಸಿಲಿಂಡರ್‌ಗೆ ಗೃಹ ಬಳಕೆದಾರರು 930 ರೂ. ಮತ್ತು ವಾಣಿಜ್ಯ ಬಳಕೆದಾರರು 1,450 ರೂ. ನೀಡಬೇಕು ಎಂದರು.

ಗೋ ಗ್ಯಾಸ್ ಎಲೈಟ್ ಸಿಲಿಂಡರ್‌ಗಳು ಅತ್ಯಂತ ಹಗುರವಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಇದನ್ನು ಸುಲಭದಲ್ಲಿ ಎತ್ತಬಹುದು. ಸಿಲಿಂಡರ್‌ಗಳು ಪಾರದರ್ಶಕವಾಗಿದ್ದು ಅನಿಲ ಪ್ರಮಾಣ ಕಾಣುತ್ತದೆ. ಇವು ಬಳಕೆಗೆ ಅತ್ಯಂತ ಸುರಕ್ಷಿತವಾಗಿವೆ. ಸಿಲಿಂಡರ್‌ನಲ್ಲಿ ಅನಿಲ ಕದಿಯುವುದು ಮತ್ತು ಕಡಿಮೆ ಅನಿಲ ಪೂರೈಸಲು ಸಾಧ್ಯವಿರುವುದಿಲ್ಲ ಎಂದರು.

ಗೋ ಗ್ಯಾಸ್ ಎಲೈಟ್ ಸಿಲಿಂಡರ್‌ಗಳು ಹೈಡ್ರಾಲಿಕ್ ಫ್ರೂಪ್ ಪ್ರೆಷರ್ ಟೆಸ್ಟ್ ಹೈಡ್ರಾಲಿಕ್ ಎಕ್ಸ್‌ಪ್ಯಾನ್ಷನ್ ಟೆಸ್ಟ್, ಸಿಲಿಂಡರ್ ಸಿಡಿಯುವ ಪರೀಕ್ಷೆ, ಆ್ಯಂಬಿಯೆಂಟ್ ಸೈಕಲ್ ಟೆಸ್ಟ್, ವ್ಯಾಕ್ಯೂಮ್ ಟೆಸ್ಟ್, ಎನ್ವಿರಾನ್‌ಮೆಂಟಲ್ ಸೈಕಲ್ ಟೆಸ್ಟ್, ಹೈ ಟೆಂಪರೇಚರ್ ಕ್ರೀಪ್ ಟೆಸ್ಟ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದ್ದು ಅವುಗಳಿಂದ ಈ ಸಿಲಿಂಡರ್ ಶೇ.100ರಷ್ಟು ಸುರಕ್ಷಿತವೆಂದು ತಿಳಿದು ಬಂದಿದೆ ಎಂದು ವಿವರಿಸಿದರು.

ನಗರದ ಲಾಲ್‌ಬಾಗ್, ಬಿಇಎಲ್‌ನ ಎಂ.ಎಸ್.ಪಾಳ್ಯ ಹಾಗೂ ಚಾಮರಾಜಪೇಟೆ ಸೇರಿದಂತೆ ರಾಜ್ಯದಲ್ಲಿ ಒಟ್ಟು 18 ಕಡೆ ಆಟೋ ಎಲ್‌ಪಿಜಿ ಬಂಕ್‌ಗಳಿವೆ. ಇವು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿವೆ.ಇಲ್ಲಿ ಗ್ರಾಹಕರು ಯಾವುದೇ ಸಮಯದಲ್ಲಿ ಎಲ್‌ಪಿಜಿ ಮುಗಿದರೂ ಬಂಕ್‌ಗಳಿಗೆ ಬಂದು, ಭರ್ತಿ ಮಾಡಿರುವ ಸಿಲಿಂಡರ್‌ಗಳನ್ನು ಪಡೆಯಬಹುದು ಎಂದು ವಿವರಿಸಿದರು.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತ ಚೀನಾಗಳ ನಡುವೆ ಯುದ್ಧದ ಕಾರ್ಮೋಡಗಳು ದಟ್ಟವಾಗುವಂತೆ ಕಾಣುತ್ತಿವೆ. ಆದರೆ ಜಾಗತಿಕ ಗತಿ-ವಿಧಿಗಳನ್ನು ಅರ್ಥೈಸಿಕೊಂಡ ಯಾವನಾದರೂ ಚೀನಾದ ಇಂದಿನ ಹತಾಶ ಮನಸ್ಥಿತಿಯನ್ನು ನೋಡಿದರೆ ಚೀನಾ ಯುದ್ಧಕ್ಕೆಳೆಸಲಾರದೆಂದು ತಕ್ಷಣಕ್ಕೆ ನಿಶ್ಚಯಿಸಬಲ್ಲ. ಚೀನಾ ತನ್ನ ಹಿಡಿತದಲ್ಲಿರುವ ಪತ್ರಿಕೆಗಳ ಮೂಲಕ ಕೊಡುತ್ತಿರುವ ಹೇಳಿಕೆಗಳನ್ನು ನೋಡಿದರೆ, ಒಂದು ಕಾಲದಲ್ಲಿ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ ಕೊಡುತ್ತಿತ್ತಲ್ಲ ಅದೇ ದನಿಯಿದೆ.
ಪ್ರಸಿದ್ಧ ಟಿವಿ ರಿಯಾಲಿಟಿ ಶೋ ನಟಿ ಕಿಮ್ ಕರ್ದಾಶಿಯನ್ ಮೂರನೇ ಬಾರಿ ಅಮ್ಮನಾಗಿದ್ದಾಳೆ. ಬಾಡಿಗೆ ತಾಯಿ ಮೂಲಕ ಕಿಮ್ ಮನೆಗೆ ಸೋಮವಾರ ಮಗುವೊಂದರ ಆಗಮನವಾಗಿದೆ. ಮಗಳ ಸ್ವಾಗತಕ್ಕೆ ಕಿಮ್ ಹಾಗೂ ಆಕೆ ಪತಿ ಕೆನ್ನೆ ವೆಸ್ಟ್ ವಿಶೇಷ ತಯಾರಿ ನಡೆಸಿದ್ದಾರೆ.
ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಎಂದು ಕರೆಯಲ್ಪಡುವ ಆಶಾಢ ಮಾಸದ ಹುಣ್ಣಿಮೆಯೊಂದಿಗೆ ದಕ್ಷಿಣಾಯಣ ಪ್ರಾರಂಭವಾಗುತ್ತದೆ. ಆಶಾಢ ತಿಂಗಳ ಶುಕ್ಲ ಹುಣ್ಣಿಮೆಯನ್ನು ಗುರುಗಳಿಗೆ ಗೌರವ ರೂಪದಲ್ಲಿ ಆಚರಿಸಲಾಗುತ್ತದೆ. ಈ ಬಾರಿ ಗುರು ಪೂರ್ಣಿಮಾ ಜುಲೈ 16 ರಂದು ಅಂದರೆ ಮಂಗಳವಾರ ಬಂದಿದೆ. ಗುರುವನ್ನು ಯಾವಾಗಲೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂದು ಪರಿಗಣಿಸಲಾಗುತ್ತದೆ. ಈ ಹಬ್ಬವನ್ನು ವೇದ ಮಹರ್ಷಿಗೆ ಅರ್ಪಿಸಲಾಗುತ್ತದೆ. ವೇದ, ಉಪನಿಷತ್ತು ಮತ್ತು ಪುರಾಣಗಳನ್ನು ಪಠಿಸುವ ವೇದ ವ್ಯಾಸ್ ಜಿ ಅವರನ್ನು ಮಾನವಕುಲದ ಮೂಲ ಗುರು…
ಒಂದು ದಿನ ರಾತ್ರಿ ಗಂಡ ಮತ್ತು ಹೆಂಡತಿಯರಲ್ಲಿ ಒಂದು ಪಂದ್ಯವನ್ನ ಹಾಕಿಕೊಂಡರು. ಅದು ಏನೆಂದರೆ ಇವತ್ತು ಯಾರೇ ಬಾಗಿಲು ತಟ್ಟಿದರೂ ಬಾಗಿಲು ತೆಗೆಯ ಬಾರದು ಎಂದು. ಮೂಲ ಪಂದ್ಯಕ್ಕೆ ಹೆಂಡತಿ ಒಪ್ಪಿಕೊಂಡಳು. ಅದರಂತೆಯೆ ಕೋಣೆಯ ಬಾಗಿಲು ಮುಚ್ಚಿಟ್ಟು ಇಬ್ಬರು ನಿಶ್ಯಬ್ದವಾಗಿ ಕುಳಿತಿದ್ದರು. ಮೂಲ ಮೊದಲು ಗಂಡನ ಅಪ್ಪ ಮತ್ತು ಅಮ್ಮ ಬಂದು ಬಾಗಿಲನ್ನು ತಟ್ಟಿದರು.ಗಂಡ ಬಾಗಿಲನ್ನ ತೆಗೆಯಲು ಎದ್ದನು, ಅಷ್ಟರಲ್ಲಿ ಪಂದ್ಯ ನೆನಪಿಗೆ ಬಂದು ಕುಳಿತು ಬಿಟ್ಟ.ಅವರು ಸ್ವಲ್ಪ ಸಮಯ ಬಾಗಿಲನ್ನ ತಟ್ಟಿ ಶಬ್ದ ಕೇಳಿಸದೆ ಹೋದಾಗ…
2016 ರಲ್ಲಿ ಚಿತ್ರದುರ್ಗದ ಈ ಗಣಪತಿ ಅತಿ ಹೆಚ್ಚು ಜನ ಸೇರಿದರಿಂದ ಕರ್ನಾಟಕದ ಹೆಚ್ಚು ಜನ ಆಕರ್ಷಿಸಿದ ಗಣಪ ಎಂದು ತಿಳಿದು ಬಂದಿದೆ.
ದೇಶದ ಕೆಲ ಕಿಡಿಗೇಡಿ ಅಭಿಮಾನಿಗಳು ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ಚಿತ್ರವನ್ನು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾರೆ.