ಸುದ್ದಿ

ಈಗಾಗಲೇ ಉಗ್ರರ ದಾಳಿಯಲ್ಲಿ ಒಬ್ಬ ಮಗನನ್ನು ಕಳೆದುಕೊಂಡಿದ್ದರೂ, ಸೇನೆಗೆ ಇನ್ನೊಬ್ಬ ಮಗನನ್ನು ಕಳುಹಿಸುವೆ ಎಂದ ಹುತಾತ್ಮ ಯೋಧನ ತಂದೆ..!

220

ಪುಲ್ವಾಮ ಉಗ್ರರ ದಾಳಿಯಲ್ಲಿ 40 ಸೈನಿಕರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ , ಹುತಾತ್ಮ ಯೋಧನ ತಂದೆಯ ಮಾತುಗಳು ಎಲ್ಲರ ಹೃದಯ ಸ್ಪರ್ಶಿಸುತ್ತಿವೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಹುತಾತ್ಮರಾದ ಯೋಧರೊಬ್ಬರ ತಂದೆ ಮಗನ ಸಾವಿನ ನೋವಿನಲ್ಲೂ ದೇಶದ ಮೇಲೆ ತಮಗಿರುವ ಪ್ರೀತಿಯನ್ನು ತೋರಿಸಿದ್ದಾರೆ.

ಗುರುವಾರ ಸಂಜೆ ಸಿಆರ್‌ಪಿಎಫ್ ಯೋಧ ರತನ್ ಠಾಕೂರ್ ಜೈಶ್-ಇ-ಮೊಹಮ್ಮದ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಿಂದ ಹುತಾತ್ಮರಾಗಿದ್ದಾರೆ. ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಮರಳುತ್ತಿದ್ದ ಯೋಧನ ಅಂತ್ಯ ಈ ರೀತಿ ಆಗುತ್ತದೆ ಎಂದು ಯಾರು ಯೋಚಿಸಲು ಸಾಧ್ಯವಿರಲಿಲ್ಲ.

ನಾನು ಒಬ್ಬ ಮಗನನ್ನು ಕಳೆದುಕೊಂಡಿದ್ದೇನೆ, ನನಗೆ ಇನ್ನೊಬ್ಬ ಮಗನಿದ್ದು ಆತನನ್ನು ಭಾರತ ಮಾತೆಯ ಸೇವೆಗಾಗಿ ಮುಡಿಪಿಡುವೆ, ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಬಿಹಾರ ಮೂಲದ ಹುತಾತ್ಮ ಯೋಧ ರತನ್ ಠಾಕೂರ್ ತಂದೆ ಹೇಳಿದ್ದಾರೆ.

ರತನ್ ಠಾಕೂರ್ ಅವರು ಮೂಲತಃ ಬಿಹಾರದ ಭಾಗಲ್‍ಪುರದವರು. ಮಗನನ್ನು ಕಳೆದುಕೊಂಡು ನೋವಿನಲ್ಲಿರುವ ತಂದೆ, ದೇಶಕ್ಕಾಗಿ ಓರ್ವ ಮಗನನ್ನು ಅರ್ಪಿಸಿದ್ದೇನೆ. ಈಗ ಇರುವ ಇನ್ನೊಬ್ಬ ಮಗನನ್ನೂ ಉಗ್ರರ ವಿರುದ್ಧ ಹೋರಾಡಲು ಕಳುಹಿಸಲು ಸಿದ್ಧನಿದ್ದೇನೆ. ಯೋಧರನ್ನು ಬಲಿಪಡೆದಿರುವ ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇಬೇಕು ಎಂದು ಠಾಕೂರ್ ಅವರ ತಂದೆ ಕಣ್ಣೀರಿಟ್ಟಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ

    ರೋಗಮುಕ್ತ ಜೀವನಕ್ಕಾಗಿ ಯೋಗಾಭ್ಯಾಸ ಮಾಡಿ

    ಯೋಗಾಭ್ಯಾಸದಿಂದ ವ್ಯಕ್ತಿಯ ಆತ್ಮಗೌರವ, ಹಾಗೂ ಆತ್ಮವಿಶ್ವಾಸವು ವೃದ್ಧಿಸುತ್ತದೆ. ನಿರಂತರವಾಗಿ ಯೋಗಾಭ್ಯಾಸವನ್ನು ರೂಢಿಸಿಕೊಂಡವರು ರೋಗಮುಕ್ತವಾದ ಜೀವನವನ್ನು ನಡೆಸಬಹುದು ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬೆಂಗಳೂರು ಪಶ್ಚಿಮ ವಲಯದ ಸಂಚಾಲಕ ಜಯರಾಮ್ ರವರು ಅಭಿಪ್ರಾಯಪಟ್ಟರು. ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಯೋಗಾಭ್ಯಾಸ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯೋಗಾಭ್ಯಾಸವನ್ನು ಎಲ್ಲಿ ಬೇಕಾದರೂ ಮಾಡಬಹುದು. ಅದಕ್ಕೆ ವಿಶೇಷ ತಯಾರಿ ಅಥವಾ ಪರಿಕರಗಳೇನೂ ಬೇಕಾಗಿಲ್ಲ. ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರಸ್ತುತ…

  • ಆರೋಗ್ಯ

    ಹೊಟ್ಟೆಯ ಭಾದೆಗಳನ್ನು ನಿವಾರಿಸುವ ಸಿಹಿ ಗೆಣಸು!

    ಸಿಹಿ ಗೆಣಸು ಅನ್ನೋದು ಹಿಂದಿನ ಕಾಲದಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿದ್ದ ತರಕಾರಿಗಳಲ್ಲಿ ಒಂದು ಅನ್ನಬಹುದು. ಇದು ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ಇದರಲ್ಲಿರುವಂತ ಹಲವು ಆರೋಗ್ಯಕಾರಿ ಗುಣಗಳು ಹಲವು ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಈ ಸಿಹಿ ಗೆಣಸು ದೇಹವನ್ನು ಗಟ್ಟಿಮುಟ್ಟಾಗಿ ಬಲಿಷ್ಠವಾಗಿ ಬೆಳೆಯುವಂತೆ ಮಾಡುತ್ತದೆ. ಇದರಲ್ಲಿರುವಂತ ಆರೋಗ್ಯಕಾರಿ ಗುಣಗಳೇನು ಅನ್ನೋದನ್ನ ತಿಳಿಯುವುದಾದರೆ ವಿಟಮಿನ್ ಡಿ, ವಿಟಮಿನ್ ಬಿ 6, ಮಾಗ್ಯಶಿಯಂ, ಪೊಟ್ಯಾಶಿಯಂ ಹೀಗೆ ಅನೇಕ ಆರೋಗ್ಯಕಾರಿ ಗುಣಗಳನ್ನು ಸಿಹಿ ಗೆಣಸು ಹೊಂದಿದೆ. ಇದು ನಾಲಿಗೆಯ…

  • ಸುದ್ದಿ

    ನೀವು ಹುಟ್ಟಿದ ದಿನಾಂಕವನ್ನು ಬಳಸಿ ನೀವು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಆಗುವಿರಾ ಎಂದು ತಿಳಿಯಲು ಇದನ್ನು ಓದಿ…!

     ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಜೀವನದ ಗುಟ್ಟನ್ನು ಕಂಡು ಹಿಡಿಯಬಹುದು ವ್ಯಕ್ತಿಗಳ ಜನ್ಮ ದಿನಾಂಕ ಆಧರಿಸಿ ಅವರು ಲವ್ ಮ್ಯಾರೇಜ್ ಆಗುತ್ತರಾ ಅಥವಾ ಅರೇಂಜ್ ಮ್ಯಾರೇಜ್ ಆಗುತ್ತಾರೆ ಎನ್ನುವುದನ್ನು ತಿಳಿಯಬಹುದು. ಸಂಖ್ಯೆ 1. ಒಂದನೇ ಸಂಖ್ಯೆಯನ್ನು ಸೂರ್ಯ ಎಂದು ಹೇಳಲಾಗುತ್ತದೆ. ಒಂದು ನಂಬರ್ ಅವರು ತುಂಬಾ ನಾಚಿಕೆ ಸ್ವಭಾವದವರು ಆಗಿರುತ್ತಾರೆ ಇವರು ಯಾವತ್ತೂ ಪ್ರೀತಿಯನ್ನು ತಿಳಿಸುವುದಿಲ್ಲ ಇದರಿಂದಾಗಿ ಪ್ರೇಮ ವಿವಾಹದಿಂದ ಇವರು ದೂರ ಇರುತ್ತಾರೆ. ಸಂಖ್ಯೆ 2. ಸಂಖ್ಯೆ 2…

  • ವಿಸ್ಮಯ ಜಗತ್ತು

    ಚಿಕ್ಕ ರಂದ್ರ ಮಾಡಿ ವೀರ್ಯವನ್ನು ತುಂಬಿದ 21 ದಿನಗಳ ನಂತರ ಹೊರಬಂದದ್ದು ಏನ್ ಅಂತ ತಿಳಿದರೆ ಬೆಚ್ಚಿ ಬಿಳ್ತೀರಾ

    ಪ್ರತಿದಿನ ನಾವು ಯಾವುದಾದರೊಂದು ಪ್ರಯೋಗಳನ್ನು ಮಾಡುತ್ತಿರುತ್ತಾರೆ ವಿಧವಿಧವಾದ ವಸ್ತುಗಳ ಮೇಲೆ ಪ್ರಯೋಗಗಳನ್ನು ಮಾಡುತ್ತಾರೆ. ಕೆಲವರು ಮನುಷ್ಯರ ಮೇಲೆ ಪ್ರಯೋಗ ಮಾಡಿದರೆ ಇನ್ನು ಕೆಲವರು ಮನುಷ್ಯನರ ಆಲೋಚನೆಗಳ ಮೇಲೆ ಪ್ರಯೋಗ ಮಾಡುತ್ತಾರೆ. ಪ್ರಯೋಗ ಮಾಡುವ ಕೆಲವರು ವಿಚಿತ್ರವಾದ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈ ರೀತಿಯ ವಿಚಿತ್ರ ಪ್ರಯೋಗಗಳಲ್ಲಿ ಒಂದು ನಾವು ತಿಳಿಸಿಕೊಡುತ್ತೇವೆ ನೋಡಿ. ಒಬ್ಬ ವ್ಯಕ್ತಿಗೆ ಪ್ರಯೋಗಗಳ ಮೇಲೆ ಅವುಗಳನ್ನು ಮಾಡುವುದರ ಮೇಲೆ ತುಂಬಾ ಹುಚ್ಚು ಆಸಕ್ತಿ ಹುಚ್ಚು ಎಷ್ಟರ ಮಟ್ಟಿಗೆ ಇದೆ ಅಂದರೆ ಕೋಳಿ ಮೊಟ್ಟೆಯಲ್ಲಿ ಮನುಷ್ಯರನ್ನು ಹುಟ್ಟಿಸಬೇಕು…

  • ಸುದ್ದಿ

    ಶಾಸಕರ ಮುಂದೆಯೆ ವಿದ್ಯಾರ್ಥಿನಿಯರಿಂದ ಬಿಇಓಗೆ ಸಕತ್ ಕ್ಲಾಸ್…! ಯಾಕೆ ಗೊತ್ತಾ?

    ನಿಮ್ಮನ್ನು ನಂಬಿ ಎಷ್ಟು ದಿನ ನಾವೂ ಹೀಗೆ ಶಾಲೆಗೆ ಬರಬೇಕು. ಅದೇಗೆ ಕಲಿತು ತಂದೆ ತಾಯಿಗೆ ಒಳ್ಳೆಯ ಹೆಸರು ತರೊಕಾಗುತ್ತದೆ? ಎಂದು ಶಾಸಕನ ಮುಂದೆ ವಿದ್ಯಾರ್ಥಿನಿ ಪೋನ್ ಮಾಡಿ ಬಿಇಓ ವೆಂಕಟೇಶ ಗುಡಿಯಾಳಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಜಿಲ್ಲೆಯ ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಈ ಮೊದಲು ವಿದ್ಯಾರ್ಥಿಗಳು ಶಾಸಕರಿಗೆ ನಮ್ಮ ಶಾಲೆಗೆ ಭೇಟಿ ಕೊಡಿ ಎಂದಿದ್ದರು. ವಿದ್ಯಾರ್ಥಿಗಳ ಕರೆಗೆ ಶಾಲೆಗೆ ಭೇಟಿ ನೀಡಿದ ಮಾನವಿ ಶಾಸಕ ರಾಜಾ…