ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯಶಸ್ಸಿಗೆ ಯಾವುದೇ ಅಡ್ಡದಾರಿಗಳು ಇರುವುದಿಲ್ಲ. ಆದರೆ ಕೆಲ ಹವ್ಯಾಸಗಳನ್ನು ಅನುಸರಿಸಿದರೆ ಅವು ಸ್ವಯಂ ನಿರ್ಮಿತ ಕೋಟ್ಯಾಧಿಪತಿ ಆಗುವಂತೆ ಉತ್ತೇಜನ ಹಾಗೂ ಪ್ರೇರೆಪಣೆ ನೀಡಬಲ್ಲವು ಎಂಬುದರಲ್ಲಿ ಸಂಶಯವಿಲ್ಲ. ಟಾಟಾ, ಅಂಬಾನಿ, ನಾರಾಯಣಮೂರ್ತಿ, ಬಿಲ್ ಗೇಟ್ಸ್ ಹೀಗೆ ಹಲವರ ಜೀವನಶೈಲಿ ನಮ್ಮನ್ನು ಸ್ಪೂರ್ತಿ ನೀಡಬಲ್ಲದು.
ಅವರೆಲ್ಲ ಕೋಟ್ಯಾಧಿಪತಿಯಾದ ಸಾಹಸಗಳ ಹಿಂದಿನ ಶಕ್ತಿಗಳು ಮತ್ತು ಅನುಸರಿಸಿದ ಮಾರ್ಗಗಳೇನು? ಅವರೆಲ್ಲ ಮಿಲಿಯನೇರ್ ಆಗಲು ಸಾಧ್ಯ ಆಗಿದ್ದಾದರು ಹೇಗೆ? ಹೀಗೆ ಹತ್ತು ಹಲವು ಪ್ರಶ್ನೆಗಳು ನಮ್ಮನ್ನು ಕಾಡಬಹುದು. ಅದಕ್ಕಾಗಿ ಯಾವಾಗಲೂ ಪ್ರಸ್ತುತ.
ಕೋಟ್ಯಾಧಿಪತಿ ಆಗಲು ತಿಳಿದುಕೊಳ್ಳಬೇಕಾದ ಸಂಗತಿಗಳು ಯಾವುವು ಗೊತ್ತೆ? ಇಲ್ಲಿವೆ ನೋಡಿ…

* ನಿಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿ :-
ಕೋಟ್ಯಾಧಿಪತಿ ಆಗಬೇಕೆಂದು ಬಯಸುವ ಆಶಾವಾದಿಗಳು ಮೂಲಭೂತವಾಗಿ ಆದಾಯದ ಮೂಲಗಳನ್ನು ಹೆಚ್ಚಿಸಲೇ ಬೇಕು. ಒಂದೇ ಆದಾಯದ ಮೂಲಕ್ಕೆ ಅವಲಂಬನೆ ಆಗುವುದು ಬೇಡ. ಹೂಡಿಕೆ ಮಾಡಬಹುದಾದ ಮಾರ್ಗ ಮತ್ತು ಮೂಲಗಳನ್ನು ಹುಡುಕಿ. ರಿಯಲ್ ಎಸ್ಟೇಟ್, ಇನ್ಫ್ರಾಸ್ಟ್ರಕ್ಚರ್, ಷೇರುಗಳಲ್ಲಿ ಹೂಡಿಕೆ ಮಾಡಿ. ಶ್ರೀಮಂತ ಜನರು ಯಾವುದೇ ಒಂದು ಆದಾಯದ ಮೇಲೆ ಅವಲಂಬಿತರಾಗಿರುವುದಿಲ್ಲ.
*ಗುರಿ ಇರಲಿ:-
ಗುರಿ ಇಲ್ಲದ ಸ್ಟೀವ್ ಜಾಬ್ಸ್ ರನ್ನು ಊಹಿಸಲು ಯಾರಿಂದಲಾದರೂ ಸಾಧ್ಯವಿದೆಯೆ? ನಿಮ್ಮ ಗುರಿಗಳನ್ನು ಬರೆದು ನೀವು ಬಯಸಿದಂತ ಭವಿಷ್ಯವನ್ನು ಊಹಿಸಿಕೊಳ್ಳಿ. ಅಂದರೆ ಮನಸ್ಸಿನಲ್ಲಿರುವ ಗುರಿಗಳನ್ನು ಬರೆದಿಟ್ಟು ಅದಕ್ಕನುಗುಣವಾಗಿ ಯೋಜನೆಗಳನ್ನು ರೂಪಿಸಿ, ಅದರ ಸಾಧನೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಕಾಗದದ ಮೇಲೆ ಬರೆದಿಡುವುದರಿಂದ ಅದು ಸಂಭವಿಸುವಂತೆ ಮಾಡಬಹುದು!
* ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ (Time is Money)
ಒಂದು ಭಾರಿ ಕಳೆದ ಸಮಯ ಎಂದೂ ಮತ್ತೆ ಸಿಗದು. ಸಮಯವನ್ನು ಅನ್ಯತಹ ವ್ಯರ್ಥ ಮಾಡುವುದು ಮನುಷ್ಯನ ದೊಡ್ಡ ದೌರ್ಬಲ್ಯ. ಕೆಲವರು ಟಿವಿ ನೋಡುತ್ತಾ, ಹರಟೆ ಹೊಡೆಯುತ್ತ ಕಾಲಹರಣ ಮಾಡುತ್ತಿರುತ್ತಾರೆ. ಆದರೆ ಕೋಟ್ಯಾಧಿಪತಿಗಳು ಟಿವಿ ನೋಡುವುದರಿಂದ ದೂರ ಉಳಿದು ಬಿಸಿನೆಸ್ ಸ್ಟ್ರಾಟಜಿ ಅಥವಾ ಹೊಸ ಯೋಜನೆಗಳ ಬಗ್ಗೆ ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ತಮ್ಮ ಬಿಸಿನೆಸ್ ಮತ್ತು ಪ್ರಾಜೆಕ್ಟ್ ಮೇಲೆ ಹೆಚ್ಚು ಸಮಯ ಕಳೆಯುವುದೇ ಸಂತೋಷ ಕೊಡುತ್ತದೆ.
* ಬೇರೆಯವರನ್ನು ನೋಡಿ ಕಲಿಯುವುದು ಸಾಕಷ್ಟಿದೆ:-
ಎಲ್ಲ ತಪ್ಪುಗಳನ್ನು ನಾವೇ ಮಾಡಿ ಅದನ್ನು ಸರಿಪಡಿಸಿಕೊಂಡು ಹೋಗುವಷ್ಟು ದೀರ್ಘ ಜೀವನ ನಮ್ಮದಲ್ಲ. ಆದರಿಂದ ಇನ್ನೊಬ್ಬರ ಸೋಲು ಗೆಲುವುಗಳಿಂದ ತಿಳಿದುಕೊಳ್ಳಬೇಕಾದದ್ದು ತುಂಬಾ ಇರುತ್ತದೆ. ಇನ್ನೊಬ್ಬರಿಂದ ತಿಳಿದುಕೊಳ್ಳಬೇಕಾದ, ಬೋಧಿಸಿಕೊಳ್ಳಬೇಕಾದ ಅಗತ್ಯ ಏನಿದೆ ಎಂಬ ಅಹಂಭಾವ ಇರಬಾರದು. ಶ್ರೀಮಂತರು ಯಾವಾಗಲೂ ಸಲಹೆಗಾರರನ್ನು ಇಟ್ಟುಕೊಂಡು ಮಾರ್ಗದರ್ಶನ ಪಡೆಯುತ್ತಿರುತ್ತಾರೆ. ಹೀಗಾಗಿ ಯಾವಾಗಲೂ ತುಂಬಾ ಎಚ್ಚರಿಕೆಯಿಂದ ಮನಸ್ಸನ್ನು ಸದಾ ಜಾಗೃತನನ್ನಾಗಿ ಇಡಬೇಕಾಗುತ್ತದೆ. ಹೊಸತನಕ್ಕೆ ಸದಾ ತೆರೆದುಕೊಂಡು, ಹೊಂದಿಕೊಂಡು ಹೋಗಬೇಕಾಗುತ್ತದೆ.
*ಕನಸು ಕಾಣಿರಿ:-
ನಿಮ್ಮ ಕನಸುಗಳನ್ನು ಬಿಟ್ಟುಕೊಡಬೇಡಿ. ಉತ್ತಮ ಭವಿಷ್ಯದತ್ತ ಸಾಗಲು ಕಂಡ ಕನಸ್ಸುಗಳ ಸಾಕಾರದತ್ತ ಮುನ್ನಡೆಯಬೇಕು. ಶ್ರೀಮಂತನಾಗ ಬಯಸುವ ವ್ಯಕ್ತಿ ಕೇವಲ ಕನಸುಗಳನ್ನು ನನಸು ಮಾಡುವತ್ತ ನಡೆಯುತ್ತಿರುತ್ತಾನೆ. ಎದುರಾಗುವ ಅಡಚಣೆ, ವೈಫಲ್ಯ, ತೊಂದರೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಕನಸುಗಳ ಮೇಲೆ ಸವಾರಿ ಮಾಡುವುದಷ್ಟೇ ಅವರ ಗುರಿ.
*ಹಠ ವಿರಲಿ :-
ಯಶಸ್ಸು ಅನ್ನುವುದು ನಿಂತ ನೀರಲ್ಲ. ಅದು ಯಾವಾಗಲೂ ನಿರಂತರವಾಗಿರುತ್ತದೆ. ಕೋಟ್ಯಾಧಿಪತಿ ಆಗಬಯಸುವವರಿಗೆ ನಿರಂತರತೆಯೇ ಕಿಲಿ ಕೈ. ಯೋಜನೆ ಮತ್ತು ವ್ಯವಹಾರಗಳ ಬಗ್ಗೆ ನಿರಂತರತೆ ಇರುತ್ತದೆ. ನಿರಂತರತೆ ಅನ್ನುವುದು ಅಹಂ ಅಲ್ಲ. ಅದು ದೃಢತೆಯನ್ನು ಪ್ರತಿಬಿಂಬಿಸುವ ಚಟ, ಹಂಬಲ ಹಾಗೂ ತುಡಿತ. ಹೀಗಾಗಿ ನಿರಂತರತೆ ತುಂಬಾ ಮುಖ್ಯ.
*ನಿಮ್ಮನ್ನು ನೀವು ಅವಲೋಕನ ಮಾಡಿಕೊಳ್ಳಿ:-
ಪ್ರತಿ ಹಂತದಲ್ಲೂ ಏಳು ಬೀಳುಗಳ ಬಗ್ಗೆ ಅವಲೋಕನ ಮಾಡುವುದು ತುಂಬಾ ಮುಖ್ಯ. ಪ್ರತಿನಿತ್ಯ ನಿಮ್ಮ ಪ್ರಗತಿ ಬಗ್ಗೆ ಅವಲೋಕನ ಮಾಡುವುದರಿಂದ ನಾವು ಯಾವ ಹಾದಿಯಲ್ಲಿ ಸಾಗುತ್ತಿದ್ದೇವೆ ಹಾಗೂ ಸರಿ ತಪ್ಪುಗಳೇನು ಎಂಬುದು ಗೊತ್ತಾಗುತ್ತದೆ. ನಮ್ಮ ತಪ್ಪುಗಳನ್ನು ಸರಿಪಡಿಸಿ ಮುನ್ನಡೆಯದಿದ್ದರೆ ಯಶಸ್ಸು ಸಾಧ್ಯವಿಲ್ಲ. ಸೋಲು ಮತ್ತು ಗೆಲುವುಗಳಿಗೆ ಕಾರಣಗಳೇನು ಎಂಬುದನ್ನು ಪ್ರತಿ ಹೆಜ್ಜೆಯಲ್ಲೂ ತಿಳಿದುಕೊಳ್ಳುತ್ತಿರಬೇಕು.
*ನಿಮ್ಮ ಸುತ್ತಮುತ್ತ ಒಳ್ಳೆ ಜನರಿರಲಿ:-
ಶ್ರೀಮಂತ ವ್ಯಕ್ತಿಗಳು ಯಾವಾಗಲೂ ತಮ್ಮ ಸುತ್ತಮತ್ತ ಯಶಸ್ವಿ, ಸಮಾನ ಮನಸ್ಕ ಮತ್ತು ಬುದ್ದಿವಂತ ಜನರನ್ನು ಹೊಂದಿರಲು ಬಯಸುತ್ತಾರೆ. ಯಶಸ್ವಿ ವ್ಯಕ್ತಿಗಳು ಅಂದರೆ ತಮ್ಮ ಚಿಕ್ಕ ವಯಸ್ಸಿನಲ್ಲಿ ಮಹತ್ತರ ಸಾಧನೆ ಮಾಡಿ ಇನ್ನೂ ಹೆಚ್ಚಿನ ಸಾಧನೆಗಾಗಿ ಹಪಹಪಿಸುತ್ತಿರುತ್ತಾರೆ ಅಂತವರು ನಮ್ಮ ಸುತ್ತಮುತ್ತ ಇರುವಂತೆ ನೋಡಿಕೊಳ್ಳಬೇಕು. ಅವರಲ್ಲಿರುವ ಉತ್ಸಾಹ ಇನ್ನು ಉತ್ತಮ ಕೆಲಸಕ್ಕಾಗಿ ಪ್ರೇರೆಪಿಸುತ್ತದೆ.
9. ಮುಂಜಾನೆ ಬೇಗ ಏಳುವ ರೂಡಿ ಮಾಡಿಕೊಳ್ಳಿ :-
ಹೆಚ್ಚಿನ ಯಶಸ್ವಿ ವ್ಯಕ್ತಿಗಳು ಬೇಗ ಎದ್ದೇಳುವ ಹವ್ಯಾಸ ಹೊಂದಿರುತ್ತಾರೆ. ಮುಂಜಾನೆ ಬೇಗ ಎದ್ದೇಳುವುದರಿಂದ ಹೆಚ್ಚಿನ ಸಮಯ ಸಿಗುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ಇಡೀ ದಿನ ಉಲ್ಲಾಸದಿಂದ ಇರುವುದು ಮುಖ್ಯವಾಗಿರುತ್ತದೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮವು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕ್ರೇಜ್ ಜಾಸ್ತಿ ಮಾಡುತ್ತಿದ್ದು,ಶೋ ಮುಗಿಯೋದಕ್ಕೆ ಕೇವಲ 5 ದಿನಗಳು ಬಾಕಿ ಉಳಿದಿವೆ. ನೆನ್ನೆ ಮಧ್ಯರಾತ್ರಿ ಬಿಗ್ ಬಾಸ್ ಸ್ಪರ್ಧಿಗಳಿಗೆ ರಾತ್ರೋ ರಾತ್ರಿ ಒಬ್ಬರನ್ನು ಎಲಿಮಿನೇಟ್ ಮಾಡುವ ಮುಖಾಂತರ ಶಾಕ್ ಕೊಟ್ಟಿದ್ದಲ್ಲದೆ, ವೀಕ್ಷಕರಲ್ಲಿ ಬಾರಿ ಕುತೂಹಲವನ್ನು ಉಂಟುಮಾಡಿದೆ.
ಎಲ್ಲರೂ ಎಲ್ಲೆಂದರಲ್ಲೇ ತಮಗಿಷ್ಟ ಬಂದಂತೆ ಫೋಟೋಗಳನ್ನು ತೆಗೆಯುತ್ತಾರೆ. ಆ ಫೋಟೋಗಳಲ್ಲಿ ತಮಗಿಷ್ಟವಾದ ಕೆಲುವು ಫೋಟೋಗಳನ್ನು ತಮ್ಮ ಮೊಬೈಲ್ ಗ್ಯಾಲರಿಯಲ್ಲಿ ಸೇವ್ ಮಾಡಿರುತ್ತಾರೆ. ತಮ್ಮ ಸವಿ ನೆನುಪು ಗಳಿಗೋಸ್ಕರ ಆ ಫೋಟೋಗಳನ್ನು ತುಂಬಾ ಜಾಗರೂಕತೆಯಿಂದ ಕಾಪಾಡಿಕೊಂಡು ಬಂದಿರುತ್ತಾರೆ.
ಅನೇಕ ವರ್ಷಗಳ ಹಿಂದೆ, ವಿದ್ಯಾರ್ಥಿಯೋಬ್ಬನು ಕಾನೂನು ಶಿಕ್ಷಣವನ್ನು ಕಲಿಯಲು ಬಂದ. ಆದ್ರೆ ಅವನ ಹತ್ತಿರ ಶುಲ್ಕವನ್ನು ಪಾವತಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಅವನು ಶಿಕ್ಷಕರ ಜೊತೆ ಒಪ್ಪಂದವೊಂದನ್ನು ಮಾದಿಲೊಂಡನು.ಅದೆಂದರೆ “ನಾನು ನ್ಯಾಯಾಲಯದಲ್ಲಿ ನನ್ನ ಮೊದಲ ಪ್ರಕರಣವನ್ನು ಗೆಲ್ಲುವ ದಿನ ನಿಮ್ಮ ಶುಲ್ಕವನ್ನು ನಾನು ಪಾವತಿಸುತ್ತೇನೆ” ಎಂದು ವಿಧ್ಯಾರ್ಥಿ ಮತ್ತು ಶಿಕ್ಷಕರು ಒಪ್ಪಂದ ಮಾಡಿಕೊಂಡರು.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಕ್ಷೇತ್ರದಲ್ಲೇ ಬಾಲ್ಯವಿವಾಹ ನಡೆದಿದ್ದು, ಈ ಬಾಲ್ಯ ವಿವಾಹದ ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ಯತ್ನವೂ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಸ್ವಕ್ಷೇತ್ರ ಚಾಮರಾಜನಗರದ ಕಲ್ಯಾಣ ಮಂಟಪವೊಂದರಲ್ಲಿ ಬಾಲ್ಯ ವಿವಾಹ ನಡೆದಿದೆ. ಸಚಿವರ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಗೆ 24 ವರ್ಷದ ಯುವಕನೊಂದಿಗೆ ವಿವಾಹ ನೆರವೇರಿದೆ.ಚಾಮರಾಜನಗರದ ಉಪ್ಪಾರ ಬಡಾವಣೆಯ ಬಾಲಕಿಯೊಂದಿಗೆ ಅದೇ ಬಡಾವಣೆಯ ಯುವಕನೊಂದಿಗೆ ಮದುವೆ ನಡೆಯುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ…
ವಿಶ್ವ ಆರೋಗ್ಯ ಸಂಸ್ಥೆಯು ಮೇ 31ರಂದು ವಿಶ್ವ ತಂಬಾಕು ದಿನವನ್ನಾಗಿ ಆಚರಣೆ ಮಾಡುತ್ತದೆ. ತಂಬಾಕು ಬಳಕೆ ಮತ್ತು ಧೂಮಪಾನದಿಂದ ಆಗುವಂತಹ ಹಾನಿ ಬಗ್ಗೆ ತಿಳಿಸಲು ಈ ವಿಶ್ವ ತಂಬಾಕು ದಿನವನ್ನು ಆಚರಿಸಲಾಗುತ್ತದೆ. ತಂಬಾಕು ಸೇವನೆಯಿಂದ ದೇಹಕ್ಕೆ ಆಗುವಂತಹ ಹಾನಿಯನ್ನು ಈ ವೇಳೆ ಜನರಿಗೆ ವಿವರಿಸಲಾಗುತ್ತದೆ. ಇದರಿಂದ ಅವರು ತಂಬಾಕು ಸೇವನೆ ಕಡಿಮೆ ಮಾಡಲಿ ಮತ್ತು ಧೂಮಪಾನ ಮಾಡುವ ಜನರಿಂದಲೂ ದೂರವಿರಲಿ ಎನ್ನುವುದು ಇದರ ಉದ್ದೇಶವಾಗಿದೆ. ಪ್ರತೀ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ಹೊಸ ಧ್ಯೇಯ ವಾಕ್ಯದೊಂದಿಗೆ ವಿಶ್ವದ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತ ಚುನಾವಣಾ ಅಧಿಕಾರಿಗಳು ಅವರ ಫಾರ್ಮ್ ಹೌಸ್ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿರುವ ತೂಗುದೀಪ ಫಾರ್ಮ್ ಹೌಸ್ನಲ್ಲಿ ಚುನಾವಣಾ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳು ಸುಮಾರು ಅರ್ಧ ಗಂಟೆಯ ಕಾಲ ಫಾರ್ಮ್ ಹೌಸ್ನಲ್ಲಿರುವ ಇಡೀ ಮನೆ ತಪಾಸಣೆ ಮಾಡಿ ವಾಪಸ್ ಹೋಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇಂದು ಬೆಳಗ್ಗೆ ಸುಮಾರು 10.30ಕ್ಕೆ ಅಧಿಕಾರಿಗಳು ಬಂದಿದ್ದರು. ಸದ್ಯಕ್ಕೆ…