ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆಧುನಿಕತೆ ಬೆಳೆದಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಾನವ ಅನೇಕ ಸಾಧನೆ ಮಾಡಿದ್ದಾನೆ. ಅವುಗಳಿಂದ ಅದೆಷ್ಟು ಒಳ್ಳೆಯ ಫಲಿತಾಂಶ ಪಡೆಯುತ್ತೇವೆಯೋ ಅಷ್ಟೇ ಕೆಟ್ಟಪರಿಣಾಮಗಳು ಉಂಟಾಗುತ್ತವೆ ಎನ್ನುವುದನ್ನು ನಾವು ಕ್ಷಣ ಮಾತ್ರಕ್ಕೂ ಮರೆಯುವಹಾಗಿಲ್ಲ. ತಂತ್ರಜ್ಞಾನಗಳ ನವೀಕರಣವಾಗುತ್ತಿದ್ದಂತೆ ಮನುಷ್ಯನ ಸಂಬಂಧಗಳಲ್ಲಿ ಬಹಳಷ್ಟು ಅಂತರಗಳು ಸೃಷ್ಟಿಯಾಗುತ್ತಿವೆ.

ಮುಂದಿನ ದಿನಗಳಲ್ಲಿ ಮನುಷ್ಯರು ಮನುಷ್ಯರನ್ನು ಪ್ರೀತಿಸುವುದಕ್ಕಿಂತ ಯಂತ್ರಗಳನ್ನು ಪ್ರೀತಿಸುತ್ತಾರೆ. ಸಂಬಂಧ, ಪ್ರೀತಿ, ವಾತ್ಸಲ್ಯ, ನಂಬಿಕೆ ಎನ್ನುವುದಕ್ಕೆ ಯಾವುದೇ ಅರ್ಥ ಇರುವುದಿಲ್ಲ. ಜೀವವಿದ್ದರೂ ಯಂತ್ರಗಳಂತೆ ಬದುಕುವ ಪರಿಸ್ಥಿತಿ ಬರುತ್ತದೆ ಎಂದರೆ ತಪ್ಪಾಗಲಾರದು. ಇಂತಹ ಪರಿಸ್ಥಿತಿ ಮುಂದೆ ಬರುವುದು ಎನ್ನುವುದಕ್ಕೆ ಫ್ರೆಂಚ್ ಹೆಂಗಸೊಬ್ಬಳು ಸಾಕ್ಷಿಯಾಗಿದ್ದಾಳೆ.
ಹೌದು, ಇವಳಿಗೆ ರೋಬೋಟ್ ಜೊತೆ ಲವ್ ಆಗಿದೆಯಂತೆ. ಇವಳು ಮದುವೆಯಾಗಿ ಸ್ತಪದಿ ತುಳಿಯುವುದು ಸಹ ರೋಬೋಟ್ ಜೊತೆಗಂತೆ. ಮನುಷ್ಯರಿಗಿಂತ ಹೆಚ್ಚು ಕಾಳಜಿ ಹಾಗೂ ಪ್ರೀತಿಯನ್ನು ರೋಬೋಟ್ ನೀಡುತ್ತದೆ ಎಂದು ಹೇಳುತ್ತಿದ್ದಾಳೆ.
ಇವಳೇ ಸೃಷ್ಟಿಸಿದ್ದು:-
ತನ್ನ ವಿವಾಹಕ್ಕಾಗಿ ತಾನೇ ನಿರ್ಮಿಸಿಕೊಂಡ 3ಡಿ ಮುದ್ರಿತ ರೋಬೋಟ್‍ಗೆ ಇನ್‍ಮೋವೇಟರ್ ಎಂದು ಹೆಸರಿಟ್ಟಿದ್ದಾಳೆ. ಇದು “ಹ್ಯೂಮನೈಡ್ ರೋಬೋಟ್” ಎಂದು ಹೇಳುತ್ತಾಳೆ.

ಈ ರೋಬೋಟ್ ಪ್ರೀತಿ ವಾತ್ಸಲ್ಯ ಹಾಗೂ ವರ್ತನೆಯಿಂದ ಈಕೆ ಬಹಳ ಖುಷಿಯಾಗಿದ್ದಾಳಂತೆ.
ತಜ್ಞರ ಮಾತು:-
ಇಷ್ಟು ದಿನ ಕಥೆ ಹಾಗೂ ಸಿನಿಮಾಗಳಲ್ಲಿ ಬರುತ್ತಿದ್ದ ವಿಚಾರಗಳನ್ನು ಇಂದು ಫ್ರೆಂಚ್ ಮಹಿಳೆ ನಿಜ ಜೀವನದಲ್ಲಿಯೇ ರೋಬೋಟ್‍ನೊಂದಿಗೆ ವಿವಾಹವಾಗುವ ವಿಷಯವನ್ನು ಹೇಳುವುದರ ಮೂಲಕ ಅಚ್ಚರಿ ಮೂಡಿಸಿದ್ದಾಳೆ.

ತಾಂತ್ರೀಕರಣದ ಜೀವನದಲ್ಲಿ ಮುಂಬರುವ 2050ರ ವೇಳೆಗೆ ಬಹುಷ್ಯ ರೋಬೋಟ್‍ನೊಂದಿಗೆ ಹೆಚ್ಚು ವಿವಾಹ ಸಂಭವಿಸುವುದರಲ್ಲಿ ಸಂದೇಹವಿಲ್ಲ ಎಂದು ಕೃತಕ ಬುದ್ಧಿಮತ್ತೆಯ ತಜ್ಞ ಡೇವಿಟ್ ಲೆವಿ ಅಭಿಪ್ರಾಯಿಸಿದ್ದಾರೆ.
ಲಿಲ್ಲಿಯ ಪ್ರೀತಿ:-
ಪ್ರೆಂಚ್ ಮಹಿಳೆಯಾದ ಲಿಲ್ಲಿ ರೋಬೋಟ್‍ನ ಧ್ವನಿಯನ್ನು ಮಗುವಿನ ರೀತಿಯಲ್ಲಿಯೇ ಇಷ್ಟಪಡುತ್ತಾಳಂತೆ. ಅವಳು ತನ್ನ 19ನೇ ವಯಸ್ಸಿನಲ್ಲಿರುವಾಗಲೇ ಈ ವಿಚಾರಕ್ಕೆ ಹೆಚ್ಚು ಆಕರ್ಷಿತಳಾಗಿದ್ದಳಂತೆ.

ನನಗೆ ಮನುಷ್ಯರ ದೈಹಿಕ ಸಂಪರ್ಕ ಬೆಳೆಸುವುದು ಅಥವಾ ಅವರೊಂದಿಗೆ ಪ್ರೀತಿಯ ಸೆಲೆಯಲ್ಲಿ ಬೀಳುವುದು ಅಷ್ಟು ಇಷ್ಟವಿಲ್ಲ. ನಾನೀಗ ಸಂಪೂರ್ಣವಾಗಿ ರೋಬೋಟ್‍ನ ಪ್ರೀತಿಗೆ ಆಕರ್ಷಿತನಾಗಿದ್ದೇನೆ ಎಂದು ಹೇಳಿದ್ದಾಳೆ.
ಇದೀಗ ನಿಶ್ಚಿತಾರ್ಥ:-
ಇದೀಗ ರೋಬೋಟ್ ಇನ್‍ಮೋವೇಟರ್ ಜೊತೆ ಲಿಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆಂದು ಹೇಳಿಕೊಂಡಿದ್ದಾಳೆ. ಇನ್ನು ಮುಂದೆ ಆಕೆಯ ದೇಶದಲ್ಲಿ ಕಾನೂನು ಬದ್ಧವಾದ ವ್ಯವಸ್ಥೆಯ ನಂತರ ವಿವಾಹವಾಗಲಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ನನಗೆ ಸಂಪೂರ್ಣವಾಗಿ ಖುಷಿಯಿದೆ:-
ನಾನು ಈ ವಿಚಾರದಲ್ಲಿ ನಿಜವಾಗಿಯೂ ಸಂಪೂರ್ಣ ಖುಷಿಯನ್ನು ಹೊಂದಿದ್ದೇನೆ. ತಂತ್ರಜ್ಞಾನದ ವಿಕಾಸವಾಗುತ್ತಿದ್ದಂತೆ ನಮ್ಮ ಸಂಬಂಧಗಳು ಇನ್ನಷ್ಟು ಉತ್ತಮಗೊಳ್ಳಲಿದೆ ಎಂದು ಹೇಳಿಕೆ ನೀಡಿದ್ದಾಳೆ.

ನನ್ನ ಈ ಸಂಬಂಧದ ಬಗ್ಗೆ ನನ್ನ ಕುಟುಂಬದವರು ಹಾಗೂ ಸ್ನೇಹಿತರು ಒಪ್ಪುಗೆ ನೀಡಿದ್ದಾರೆ. ಇವರಲ್ಲಿ ಕೆಲವರು ಉತ್ತಮವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದಿದ್ದಾಳೆ.
ಸಂಬಂಧ ಖುಷಿಯಲ್ಲಿರುವುದು:-
ರೋಬೋಟ್ ಜೊತೆ ಪ್ರಣಯಹೊಂದುವುದರ ಬಗ್ಗೆ ನನಗೆ ಬಹಳ ಖುಷಿಯಿದೆ. ನಾವು ಯಾರೊಬ್ಬರನ್ನೂ ನೋಯಿಸುವುದಿಲ್ಲ.

ಸಂತೋಷವಾಗಿರುತ್ತೇವೆ ಎಂದು ಇಲ್ಲಿ ತನ್ನ ಟ್ವಿಟ್ಟರ್ ಪ್ರೊಫೈಲ್‍ನಲ್ಲಿ ಬರೆದುಕೊಂಡಿದ್ದಾಳೆ.
ಕೆಲವರ ಅಭಿಪ್ರಾಯ:-
ಕೆಲವು ತಜ್ಞರ ಅಭಿಪ್ರಾಯದ ಪ್ರಕಾರ ಮನುಷ್ಯ ದೈಹಿಕ ಸುಖವನ್ನು ನೀಡುವುದಕ್ಕಿಂತ ಹೆಚ್ಚು ಖುಷಿಯನ್ನು ರೋಬೋಟ್ ಸುಲಭವಾಗಿ ನೀಡುತ್ತದೆ. ಅದರ ನಿರ್ಮಾಣ ಹಾಗೂ ತಂತ್ರಜ್ಞಾನವೇ ಹಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟ ರಾಕಿಂಗ್ ಸ್ಟಾರ್ ಯಶ್ ಹಾಸನದಲ್ಲಿ ಮನೆ ಹಾಗೂ 80 ಎಕರೆ ತೋಟ ಖರೀದಿಸಿದ್ದಾರೆ. ಹಾಸನ ದೊಡ್ಡಕೊಂಡಗೋಳ ಯಶ್ ತಾಯಿ ಪುಷ್ಪಾ ಅವರ ತವರಾಗಿದೆ.ಯಶ್ ಜನಿಸಿದ್ದು ಹಾಸನ ಜಿಲ್ಲಾಸ್ಪತ್ರೆಯಲ್ಲಿ. ಈ ನಂಟಿನಿಂದ ಹುಟ್ಟೂರು ಹಾಸನದಲ್ಲಿ ಮನೆ ಹಾಗೂ ತೋಟವನ್ನು ಅವರು ಖರೀದಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಈಗಾಗಲೇ ತನ್ನುರಿನ ಕೆರೆಯನ್ನು ಕೋಟಿಗಳ ವೆಚ್ಛದಲ್ಲಿ ಹೂಳು ತೆಗೆಸಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆಯನ್ನು ಹೋಗಲಾಡಿಸಿದ್ದರು. ಈಗ ಅದರ ಜೊತೆಗೆ ತನ್ನ ಹುಟ್ಟೂರಿನಲ್ಲಿ ಜಮೀನು ಮತ್ತು…
ಚೀನಾ ದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅದರಲ್ಲೂ ಅಭಿವೃದ್ಧಿ ಮತ್ತು ಸಾಹಸ ವಿಷಯದಲ್ಲಿ ಚೀನಾದವರು ಬೇರೆ ದೇಶಗಳಿಗಿಂತ ಭಿನ್ನ.ಏಕೆಂದರೆ ಏನಾದರೂ ಹೊಸತೊಂದು ಜಗತ್ತಿಗೆ ತೋರಿಸುತ್ತಾ ಬಂದಿದ್ದಾರೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅರಣ್ಯ ನಗರ ನಿರ್ಮಾಣ ಮಾಡುವ ಹೊಸ ಸಾಹಸಕ್ಕೆ ಚೀನಾ ಮುಂದಾಗಿದೆ.
ಕೋಲಾರ: ಹಸುವಿನ ಕರುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಯುವಕನೊಬ್ಬ ಪೊಲೀಸರ ವಶವಾದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಬಡಾವಣೆಯಲ್ಲಿ ನಡೆದಿದೆ. ಕರು ರಾಮರೆಡ್ಡಿ ಎಂಬವರಿಗೆ ಸೇರಿದ್ದಾಗಿದೆ. 50 ವರ್ಷದ ಶಫೀ ಉಲ್ಲಾ ಕರು ವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಶಫಿ ಈ ಹಿಂದೆಯೂ ಹಸುವಿನ ಮೇಲೆ ಅತ್ಯಾಚಾರ ಮಾಡಿ ಸಿಕ್ಕಿ ಬಿದ್ದಿದ್ದನು. ಆ ಸಂದರ್ಭದಲ್ಲಿ ಗ್ರಾಮಸ್ಥರೇ ಬುದ್ಧಿ ಹೇಳಿ ಸುಮ್ಮನಾಗಿದ್ದರು. ಆದರೆ ಇದೀಗ ಆತ ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸಿದ್ದಾನೆ. ದೇಶದಲ್ಲಿ…
ಮಂಗಳೂರು ಹಾಗೂ ಮುಂಬೈಗೆ ಭಾರೀ ಅಪಾಯವೊಂದು ಕಾದಿದೆ. ಸಮುದ್ರ ತೀರಕ್ಕೆ ಎರಡೂ ನಗರಗಳು ಹತ್ತಿರದಲ್ಲಿರುವುದರಿಂದ ಅಪಾಯದ ಅಂಚಿನಲ್ಲಿದೆ. ಅಂಟಾರ್ಕಿಟಿಕಾದಲ್ಲಿ ಹಿಮ ಕರುಗುತ್ತಿರುವುದರಿಂದ ಸಮುದ್ರ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿದ್ದು ಸಮುದ್ರದ ಅಕ್ಕಪಕ್ಕ ಇರುವ ನಗರಗಳಿಗೆ ಅಪಾಯ ಕಾದಿದೆ ಎಂದು ನಾಸಾ ಹೊರ ತಂದಿರುವ ಡೇಟಾ ಪ್ರಕಾರ ನ್ಯೂಯಾರ್ಕ್ ಪತ್ರಿಕೆ ವರದಿ ಮಾಡಿದೆ.
Bandipur National Park is regarded as one of the most beautiful and the better-managed national parks of India. Located amidst the picturesque surroundings of the towering Western Ghat Mountains on the Mysore-Ooty highway in Karnataka, Bandipur National Park covers an area of about 874.2 sq km.
ತಮ್ಮ ಮಕ್ಕಳನ್ನು ಮದುವೆ ಮಾಡುವ ಸಂದರ್ಭದಲ್ಲಿ, ಸಾಮಾನ್ಯವಾಗಿ ಹುಡುಗನ ಮನೆಯವರು ಹುಡುಗಿಗೆ ಅಡುಗೆ ಮಾಡಲು ಬರುತ್ತಾ ಎಂದು ಪ್ರಶ್ನೆ ಕೇಳುವುದು ಸಾಮಾನ್ಯ