ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದು ಸೆಲ್ಫಿ ಯುಗ. ಕೈನಲ್ಲಿ ಮೊಬೈಲ್ ಪ್ರತಿಯೊಂದು ಕ್ಷಣದ ಫೋಟೋ ಸೆಲ್ಫಿಯಾಗಿ ಹೊರಬರುತ್ತದೆ. ಸೆಲ್ಫಿ ವಿಶೇಷತೆ ಹೊಂದಿರುವ ಮೊಬೈಲ್ ಫೋನುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವಿಶ್ವದಾದ್ಯಂತ ಸೆಲ್ಫಿ ಕಾರಣಕ್ಕೆ ನಡೆಯುತ್ತಿರುವ ಸಾವಿನಲ್ಲಿ ಶೇಕಡಾ 60ರಷ್ಟು ಪಾಲು ಭಾರತದ್ದಿದೆ. ಕಳೆದ ಎರಡು ವರ್ಷಗಳ ಅಂಕಿ-ಅಂಶ ಇದನ್ನು ಸ್ಪಷ್ಟಪಡಿಸಿದೆ.

ಹೊಸ ವರ್ಷಕ್ಕೆ ಇನ್ನೆರೆಡೇ ದಿನ ಬಾಕಿ ಇದೆ. ಹೊಸ ವರ್ಷದ ಪಾರ್ಟಿಗೆ ಎಲ್ಲ ತಯಾರಿ ಶುರುವಾಗಿದೆ. ಡ್ರೆಸ್, ಆಹಾರ, ಪಾರ್ಟಿ ಹಾಲ್ ಎಲ್ಲ ಬುಕ್ ಆಗ್ತಿದೆ. ಎಲ್ಲವೂ ಪರ್ಫೆಕ್ಟ್ ಆಗಿರಬೇಕೆನ್ನುವವರು ಫೋಟೋಗ್ರಫಿ ಬಗ್ಗೆಯೂ ಹೆಚ್ಚು ಗಮನ ನೀಡಬೇಕಾಗುತ್ತದೆ. ಪಾರ್ಟಿ ಎಂಜಾಯ್ ಮಾಡಿದ ಫೋಟೋ ಚೆನ್ನಾಗಿ ಬರಲಿಲ್ಲವೆಂದ್ರೆ ಮೂಡ್ ಹಾಳಾಗೋದು ನಿಶ್ಚಿತ. ಹಾಗಾಗಿ ಸೆಲ್ಫಿ ತೆಗೆಯುವ ಮುನ್ನ ಕೆಲವೊಂದು ವಿಷ್ಯದ ಬಗ್ಗೆ ಗಮನವಿರಲಿ.

ಈ ಮಧ್ಯೆ ನಡೆದ ಸಂಶೋಧನೆಯೊಂದು ಸೆಲ್ಫಿಯನ್ನು ಮಾನಸಿಕ ಸಮಸ್ಯೆ ಎಂದು ಘೋಷಣೆ ಮಾಡಿದೆ. ಯುಕೆ ನ ನಾಟ್ಟಿಂಗ್ಹ್ಯಾಮ್ ಟ್ರೆಂಟ್ ಯುನಿವರ್ಸಿಟಿ ಮಧುರೈನ ತ್ಯಾಗರಾಜ್ ಮ್ಯಾನೇಜ್ಮೆಂಟ್ ಸ್ಕೂಲ್ನಲ್ಲಿ ಈ ಅಧ್ಯಯನ ನಡೆಸಿದೆ.

ಅಗತ್ಯಕ್ಕಿಂತ ಹೆಚ್ಚು ಸೆಲ್ಫಿ ತೆಗೆಯುವುದು ಹಾಗೂ ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದು ಒಂದು ರೋಗ. ಇದನ್ನು ಸೆಲ್ಫಿಟಿಸ್ ಎಂದು ಕರೆಯಲಾಗುತ್ತದೆ. ಸೆಲ್ಫಿಟಿಸ್ ಅನೇಕ ವರ್ಷಗಳಿಂದ ಕೇಳಿ ಬರ್ತಿರುವ ಶಬ್ಧ. ಆದ್ರೆ ಇದಕ್ಕೆ ತಜ್ಞರು ಈಗ ಮಾನಸಿಕ ರೋಗದ ರೂಪ ನೀಡಿದ್ದಾರೆ.

ಸಂಶೋಧನೆ ಇದನ್ನು ಸೆಲ್ಫಿಟಿಸ್ ಬಿಹೇವಿಯರ್ ಸ್ಕೇಲ್ ಎಂದು ಕರೆದಿದೆ. ಇದ್ರಲ್ಲಿ ಮೂರು ಹಂತವಿರುತ್ತದೆ. ಆರಂಭದಲ್ಲಿ ಈ ರೋಗಿಗಳು ದಿನದಲ್ಲಿ ಮೂರು ಬಾರಿ ಮಾತ್ರ ಫೋಟೋ ತೆಗೆಯುತ್ತಾರೆ. ಆದ್ರೆ ಸಾಮಾಜಿಕ ಜಾಲತಾಣಕ್ಕೆ ಹಾಕುವುದಿಲ್ಲ. ಎರಡನೇ ಹಂತದಲ್ಲಿ ಸೆಲ್ಫಿ ತೆಗೆಯುವ ಪ್ರಮಾಣ ಹೆಚ್ಚಾಗುವ ಜೊತೆಗೆ ಸಾಮಾಜಿಕ ಜಾಲತಾಣಕ್ಕೆ ಫೋಟೋ ಹಾಕುವ ಪ್ರಕ್ರಿಯೆ ಶುರುವಾಗುತ್ತದೆ. ದಿನದಲ್ಲಿ ಹೆಚ್ಚೆಚ್ಚು ಫೋಟೋ ಹಾಕಲು ಮನಸ್ಸು ಹಾತೊರೆಯುತ್ತದೆ. ಈ ಕ್ರಿಯೆ ಮಿತಿ ಮೀರಿದಲ್ಲಿ ಅದನ್ನು ಕೊನೆಯ ಹಂತವೆಂದು ಪರಿಗಣಿಸಲಾಗುತ್ತದೆ.

ಸೆಲ್ಫಿ ಹುಚ್ಚಿಗೆ ಬಲಿಯಾಗುತ್ತಿರುವ ಪ್ರಕರಣವನ್ನು ಅನೇಕ ದೇಶಗಳು ಗಂಭೀರವಾಗಿ ತೆಗೆದುಕೊಂಡಿವೆ. ಈ ಬಗ್ಗೆ ಅನೇಕ ಜಾಗೃತಿಗಳು ನಡೆಯುತ್ತಿವೆ. ಆದ್ರೆ ಅಷ್ಟೊಂದು ಸೆಲ್ಫಿ ಹುಚ್ಚಿಗೆ ಸರಿಯಾದ ಕಾರಣ ಪತ್ತೆಯಾಗಿಲ್ಲ. ಆತ್ಮವಿಶ್ವಾಸದ ಕೊರತೆ, ಗಮನ ಸೆಳೆಯಲು, ಬೇರೆಯವರಿಗಿಂತ ಮುಂದಿರಲು ಬಯಸುವವರು ಈ ಹುಚ್ಚು ಹಚ್ಚಿಕೊಳ್ತಾರೆ ಎಂದು ನಂಬಲಾಗಿದೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಡೀನ್ ಎಲ್ಗರ್ ಅವರು ಅಜೇಯ 96 ರನ್ ಗಳಿಸಿದರು, ದಕ್ಷಿಣ ಆಫ್ರಿಕಾವು 240 ರನ್ ಬೆನ್ನಟ್ಟಿದ್ದು ಏಳು ವಿಕೆಟ್‌ಗಳೊಂದಿಗೆ ಜೋಹಾನ್ಸ್‌ಬರ್ಗ್‌ನಲ್ಲಿ ಭಾರತವನ್ನು ತನ್ನ ಮೊದಲ ಸೋಲಿಗೆ ಒಪ್ಪಿಸಿತು. ಈ ವಿಜಯವು ಕೇಪ್ ಟೌನ್‌ನಲ್ಲಿ ಅಂತಿಮ ಟೆಸ್ಟ್‌ಗೆ ಹೋಗುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ದಕ್ಷಿಣ ಆಫ್ರಿಕಾ ಜೀವಂತವಾಗಿರಿಸಿತ್ತು. ಬುಧವಾರ, ಎಲ್ಗರ್ ತಮ್ಮ ದೇಹವನ್ನು ಲೈನ್‌ನಲ್ಲಿ ಹಾಕಿದರು, ಅವರು ತಮ್ಮ ವಿಕೆಟ್ ಅನ್ನು ಉಳಿಸಲು ಪ್ರಯತ್ನಿಸುತ್ತಿರುವಾಗ ಕೈಗವಸುಗಳು ಮತ್ತು ಭುಜದ ಮೇಲೆ ಹೊಡೆತಗಳನ್ನು ಪಡೆದರು. ಅವರು ಇಂದು ಹೆಚ್ಚು…
![]()
ಲೋಕಸಮರದ ಫಲಿತಾಂಶಕ್ಕೂ ಮುನ್ನ ಮಧ್ಯಪ್ರದೇಶದ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದೆ. ಈಗಾಗಲೇ ಆಡಳಿತರೂಢ ಸರ್ಕಾರಕ್ಕೆ ಬಹುಮತವಿಲ್ಲ ವಿಶೇಷ ಅಧಿವೇಶನ ಕರೆಯಬೇಕೆಂದು ಬಿಜೆಪಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸಿಎಂ ಕಮಲ್‍ನಾಥ್ ಬಿಜೆಪಿ ರಾಜ್ಯದಲ್ಲಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಸುಮಾರು 10 ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದಡಿಯಲ್ಲಿ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ನಮ್ಮ ಶಾಸಕರಿಗೆ ಆಫರ್ ಸುರಿಮಳೆಯ ಫೋನ್ ಕರೆಗಳು ಬರುತ್ತಿವೆ. ಬೇಕಾದರೆ ಆ 10 ಶಾಸಕರ ಹೆಸರನ್ನು ಬಹಿರಂಗಗೊಳಿಸಬಲ್ಲೆ ಎಂದು ಕಮಲ್…
ಕೊಡಗು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ತಮ್ಮ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸುವ ಮೂಲಕ ಮಾದರಿಯಾಗಿದ್ದರೆ. ತಮ್ಮ ಪುಟ್ಟ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸಿ ಕನ್ನಡ ಕಲಿಗೆ ಒತ್ತು ನೀಡಿದ್ದಾರೆ.ಗ್ರಾಮೀಣ ಮಕ್ಕಳೊಂದಿಗೆ ಬೆರೆಯುವ ಉದ್ದೇಶದಿಂದ ಮಗುವನ್ನು ಅಂಗನವಾಡಿಗೆ ನಿತ್ಯವೂ ಕಳಿಸಿ ತಾವು ಕೆಲಸಕ್ಕೆ ತೆರಳುತ್ತಾರೆ ಸುಮನ್. ಕಲಿಕೆ, ಆಟ, ಊಟದ ಜೊತೆಗೆ ಮಕ್ಕಳೊಂದಿಗೆ ಈ ಅಂಗನವಾಡಿಯಲ್ಲಿ ಎಸ್‍ಪಿ ಮಗಳು ಸಹ ಬೆರೆಯುತ್ತಿದ್ದಾಳೆ. ಸಾಮಾನ್ಯರ ಮಕ್ಕಳಂತೆ ಸರ್ಕಾರಿ ಅಂಗನವಾಡಿಯಲ್ಲಿ ಎಸ್‍ಪಿ ಪುತ್ರಿ ಖುಷಿ ಸಹ ಪಾಠ…
17 ವರ್ಷಗಳ ನಂತರ ಭಾರತ ವಿಶ್ವ ಸುಂದರಿ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಚೀನಾದ ಸಾನ್ಯಾ ಸಿಟಿಯಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧೀಕರಿಸಿದ್ದ ಮಾನುಷಿ ಚಿಲ್ಲರ್ 2017 ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಬಡತನದಲ್ಲಿ ಅರಳಿದ ಪ್ರತಿಭೆಗಳು ನಮ್ಮ ರಾಜ್ಯದಲ್ಲಿ ಹಾಗು ದೇಶದಲ್ಲಿ ತುಂಬಾನೇ ಜನ ಇದ್ದಾರೆ ಅವರಲ್ಲಿ ಈ ಲಕ್ಷಿ ಕೂಡ ಒಬ್ಬರು ಅನ್ನಬಹುದು. ನಮ್ಮ ನೆಲದ ಸೊಗಡು ಅಥವಾ ನಮ್ಮ ನೆಲದ ಸಂಸ್ಕೃತಿಯ ಮೂಲ ಅಂದರೆ ಅದುವೇ ಜಾನಪದ ಎಂಬುದಾಗಿ ಹೇಳಲಾಗುತ್ತದೆ. ಅಂತಹ ಜಾನಪದ ಸೊಗಡು ಹೆಚ್ಚಿನದಾಗಿ ಗ್ರಾಮೀಣ ಪ್ರದೇಶದಲ್ಲಿ ಹಾಗು ಹಳ್ಳಿಗಳಲ್ಲಿ ಕಾಣಬಹುದು.
ಲೋಕಸಭಾ ಚುನಾವಣೆಯವರೆಗೆ ತಣ್ಣಗಿದ್ದ ಆಪರೇಷನ್ ಕಮಲ ವಿಚಾರ ಮತದಾನ ಮುಗಿದ ಬಳಿಕ ತರೆಮರೆಯಲ್ಲಿ ಆರಂಭವಾಗಿದೆ ಎನ್ನಲಾಗಿದ್ದು, ಈಗ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ತಮ್ಮ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಮಾತಿನ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರಿಗೆ ಆತಂಕ ಶುರುವಾಗಿದೆ ಎನ್ನಲಾಗಿದ್ದು ಹೀಗಾಗಿ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಭಾನುವಾರ ಸಂಜೆ ಖಾಸಗಿ ಹೋಟೆಲ್‍ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ನಡೆಯಲಿರುವ ಮೊದಲ ಜೆಡಿಎಸ್ ಶಾಸಕಾಂಗ ಸಭೆ ಇದಾಗಿದೆ….