ಜ್ಯೋತಿಷ್ಯ

ಇಂದು ಸೋಮವಾರ,12/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

395

ಇಂದು ಸೋಮವಾರ,  12/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಮಡದಿಯ ಕಿರಿಕಿರಿ ಹೆಚ್ಚಲಿದೆ.ಏಕಾಏಕಿ ಹೊಸ ಕಾರ್ಯಗಳನ್ನು ಆರಂಭಿಸುವುದು ಅಷ್ಟು ಸೂಕ್ತವಲ್ಲ. ಸ್ವಲ್ಪ ತಾಳ್ಮೆ ವಹಿಸಿರಿ. ಮುಂದೆ ಒಳಿತಾಗುವುದು. ಸಾಮಾಜಿಕ ಕಾರ್ಯಕರ್ತರಿಗೆ ಯೋಗ್ಯ ಪುರಸ್ಕಾರ ದೊರಕಲಿದೆ.ನೀವು ಪ್ರಮುಖ ಭೂಮಿ ಒಪ್ಪಂದಗಳನ್ನು ಮಾಡಲು ಹಾಗೂ ಮನರಂಜನಾ ಯೋಜನೆಗಳಿಗಾಗಿ ಅನೇಕರನ್ನು ಸಂಘಟಿಸುವ ಒಂದು ಸ್ಥಾನದಲ್ಲಿರುತ್ತೀರಿ. ವೃತ್ತಿರಂಗದಲ್ಲಿ ಮುನ್ನಡೆ ಗೌರವವನ್ನು ಕೊಡಲಿದೆ.

ವೃಷಭ:-

ಖರ್ಚು ಮಾಡಲು ಮುಂದೆಹೋದಲ್ಲಿ ನೀವು ಖಾಲಿ ಜೇಬಿನಿಂದ ಮನೆ ಸೇರಬೇಕಾಗುತ್ತದೆ. ಕೆಲಸ, ಕಚೇರಿ ಕೆಲಸಗಳಿಗೆ ಒತ್ತಡ ನಿಮ್ಮನ್ನು ಬಾಧಿಸುವ ಸಾಧ್ಯತೆ ಇದೆ.ಕುಟುಂಬದಲ್ಲಿ ಒಬ್ಬ ವಯಸ್ಸಾದ ವ್ಯಕ್ತಿಯ ಆರೋಗ್ಯ ಸ್ವಲ್ಪ ಒತ್ತಡಕ್ಕೆ ಕಾರಣವಾಗಬಹುದು. ವೈಯಕ್ತಿಕ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಮಹಿಳೆಯರು ಅಧಿಕ ಮಾತಿನಿಂದಾಗಿ ಸಂಕಷ್ಟಕ್ಕೊಳಗಾಗಬಹುದು. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ಮನೆಯವರ ಕೆಲಸ ಕಾರ್ಯಗಳಿಗೆ ಸಹಕಾರ ನೀಡುವ ಮೂಲಕ ಆನಂದ ಅನುಭವಿಸುವಿರಿ.

ಮಿಥುನ:

ನಿಮಗೆ ಸಹಾಯ ಮಾಡಲು ನಾ ಮುಂದು ತಾ ಮುಂದು ಎಂದು ಜನರು ಸಹಕರಿಸುವರು.ಪ್ರಯತ್ನಕ್ಕೆ ತಕ್ಕುದಾದ ಪ್ರತಿಫಲ ದೊರಕಲಿದೆ. ನಿಮ್ಮ ಮಗುವಿಗೆ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಲು ಸಾಧ್ಯವಾಗದಿದ್ದಲ್ಲಿ ಅದಕ್ಕೆ ಛೀಮಾರಿ ಹಾಕಬೇಡಿ. ಬದಲಿಗೆ ನೀವು ಮುಂದಿನ ಬಾರಿ ಚೆನ್ನಾಗಿ ಮಾಡುವಂತೆ ಅವರನ್ನು ಪ್ರೋತ್ಸಾಹಿಸಬೇಕು. ಸರ್ಕಾರಿ ಉದ್ಯೋಗಿಗಳಿಗೆ ಇಲಾಖೆಗಳಲ್ಲಿ ಮುಂಬಡ್ತಿ. ನಿಮ್ಮ ಪಾಲುದಾರರು ಅವರ ಮಾತು ನಡೆಸದಿದ್ದರೆ ಬೇಸರಿಸಿಕೊಳ್ಳಬೇಡಿ-ನೀವು ಕುಳಿತುಕೊಂಡು ಮಾತನಾಡಬೇಕಾದ ಅಗತ್ಯವಿದೆ. ಮೀನು ಮುಂತಾದ ಸಮುದ್ರ ಖಾದ್ಯ ಉದ್ಯಮಿಗಳಿಗೆ ಲಾಭದ ನಿರೀಕ್ಷೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ. ನೀವು ಇಚ್ಚಿಸಿದ ಕಾರ್ಯಗಳು ಕೈಗೂಡುವುದು. ನಿಮಗೆ ತಿಳಿದ ಜನರ ಮೂಲಕ ಆದಾಯದ ಹೊಸ ಮೂಲಗಳು ಕಂಡುಬರುತ್ತವೆ.

ಕಟಕ :-

ಹೊಸ ಗ್ರಾಹಕರೊಂದಿಗೆ ಮಾತುಕತೆಗೆ ಇದೊಂದು ಅದ್ಭುತ ದಿನ. ತೃಪ್ತಿದಾಯಕ ದಾಂಪತ್ಯ ಜೀವನ. ವಸ್ತ್ರಾಭರಣ ಖರೀದಿ ಸಾಧ್ಯತೆ. ಕಚೇರಿಯ ಅಧಿಕಾರಿಗಳೊಡನೆ ವಿನಾಕಾರಣ ಮನಃಸ್ತಾಪ ಮಾಡಿಕೊಳ್ಳದಿರಿ. ನೀವು ಹಾಗೂ ನಿಮ್ಮ ಪ್ರೀತಿಪಾತ್ರರು ಒಬ್ಬರೊನ್ನಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಮಯ ವ್ಯಯಿಸಬೇಕು. ಪುಣ್ಯ ಕ್ಷೇತ್ರ ದರ್ಶನ ಭಾಗ್ಯ ಒದಗಿಬರುವುದು.

 ಸಿಂಹ:

ವೃತ್ತಿ ಸಮಸ್ಯೆಗಳು ಉಲ್ಬಣಗೊಂಡರೂ ಕ್ರಮೇಣ ಪರಿಹಾರ ಕಂಡುಕೊಳ್ಳುವವು. ಆರೋಗ್ಯ ವಿಷಯಗಳಲ್ಲಿ ನಿಮ್ಮ ಬಗ್ಗೆ ನೀವೇ ನಿರ್ಲಕ್ಷ್ಯ ಮಾಡದಂತೆ ಎಚ್ಚರಿಕೆ ವಹಿಸಿ. ಉದ್ಯೋಗ ಪ್ರಾಪ್ತಿ. ವಾಹನ ಸವಾರರು ಎಚ್ಚರಿಕೆ ಯಿಂದಿರುವುದು ಒಳಿತು. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ನಿಮ್ಮ ವೈವಾಹಿಕ ಜೀವನ ದೈನಂದಿನ ಅಗತ್ಯಗಳ ನೆರವೇರಿಸುವಿಕೆಯ ಕೊರತೆಯಿಂದಾಗಿ ಇಂದು ಒತ್ತಡಕ್ಕೊಳಗಾಗಬಹುದು. ಚಾಣಾಕ್ಷ ಮತಿಗಳಾದ ನೀವು ಯೋಚಿಸದೆ ಯಾವ ಕೆಲಸವನ್ನು ಮಾಡಲಾರಿರಿ. ಇಂದು ಹೂಡಿಕೆಗಳನ್ನು ಮಾಡಬಾರದು.

ಕನ್ಯಾ :-

ವಿಶೇಷ ವ್ಯಕ್ತಿಗಳ ಪರಿಚಯದಿಂದ ಪ್ರಭಾವಿತರಾಗಿ ಮನಸ್ಸಿನಲ್ಲಿ ಉಲ್ಲಾಸ ಮೂಡುವುದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ. ಹೆಣ್ಣುಮಕ್ಕಳ ವಿಚಾರದಲ್ಲಿ ಸ್ವಲ್ಪಮಟ್ಟಿನ ಮುತುವರ್ಜಿ ವಹಿಸುವುದು ಉತ್ತಮ. ವದಂತಿಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಗ್ರಹಗಳ ಪ್ರತಿಕೂಲ ಸಂಚಾರದ ದೆಸೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುವುದು. ಹಾಗಾಗಿ ದೊಡ್ಡ ಕಾರ್ಯಗಳನ್ನು ಆರಂಭಿಸುವುದು ಸೂಕ್ತವಲ್ಲ. ಹಣವನ್ನು ಹೂಡುವ ಪ್ರಶ್ನೆ ಬಂದಾಗ ಆತುರದ ನಿರ್ಧಾರಗಳನ್ನು ಮಾಡಬೇಡಿ. ನೀವು ಇಂದು ಏನು ಮಾಡಬೇಕು ಅಥವಾ ಮಾಡಬಾರದು ಎಂಬುದನ್ನು ನಿಮ್ಮ ಕುಟುಂಬದ ಸದಸ್ಯರು ನಿರ್ಧರಿಸಲು ಬಿಡಬೇಡಿ. ಗುರುಹಿರಿಯರ ಆಶೀರ್ವಾದವನ್ನು ಪಡೆಯಿರಿ.

ತುಲಾ:

ಹಿರಿಯರ ಮಾತುಗಳಿಗೆ ಅಗೌರವ ತೋರದಿರಿ. ಮಕ್ಕಳ ಪ್ರಗತಿಯು ನಿಮಗೆ ಸಂತಸವನ್ನು ನೀಡುವುದು. ಯಾವುದೇ ಸಂಕಷ್ಟಗಳು ಬಂದರೂ ಹಿರಿಯರ ಮಾತುಗಳಿಂದಾಗಿ ಪರಿಹಾರ ಕಂಡುಕೊಳ್ಳುವವು. ನೀವು ಇಂದು ಪ್ರಯಾಣಿಸುತ್ತಿದ್ದರೆ ನಿಮ್ಮ ಸಾಮಾನಿನ ಬಗ್ಗೆ ಹೆಚ್ಚುವರಿ ಕಾಳಜಿ ತಗೆದುಕೊಳ್ಳಬೇಕಾಗುತ್ತದೆ. ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಒತ್ತಡ ಹೇರದಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧ ನಿಮ್ಮ ಕಚೇರಿ ಕೆಲಸದ ಕಾರಣ ಹಾಳಾಗಬಹುದು.

ವೃಶ್ಚಿಕ :-

ನೆರೆಹೊರೆಯವರಿಂದ ನಿಮ್ಮ ಕೆಲಸಗಳಿಗೆ ಸಹಕಾರ. ಇನ್ನೂ ಸ್ವಲ್ಪ ದಿನದಲ್ಲಿ ನಿಮ್ಮ ಸಮಸ್ಯೆಗಳು ತಿಳಿಗೊಳ್ಳುವುದು. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವ ಸುಯೋಗ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ಪ್ರವಾಸ ಕಾರ್ಯಕ್ರಮವನ್ನು ಮುಂದೂಡುವುದು ಒಳಿತು. ಕೆಲಸಕ್ಕೆ ಸಂಬಂಧಿಸಿದಂತೆ ಈ ದಿನ ಒಳ್ಳೆಯದಿರುವಂತೆ ಕಾಣುತ್ತದೆ. ಗುರುವಿನ ಸ್ತೋತ್ರವನ್ನು ಪಠಿಸಿ.

ಧನಸ್ಸು:

ಉತ್ತಮ ಕೆಲಸಗಳಿಗಾಗಿ ಮುನ್ನುಗ್ಗಿ ಯಶಸ್ಸನ್ನು ಸಾಧಿಸುವಿರಿ.ನಿಮಗೆ ತಿಳಿಯದಂತೆ ಕೆಲವು ಹಿತಶತ್ರುಗಳ ಕಾಟ ಆರಂಭವಾಗುವುದು. ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳಲು ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಮುಖ್ಯ.ಬೂದಿ ಮುಚ್ಚಿದ ಕೆಂಡದಂತೆ ಇರುವ ಕೆಲವರು ಏಕಾಏಕಿ ನಿಮ್ಮ ಮೇಲೆ ಏರಿ ಬರುವ ಸಂದರ್ಭವಿರುತ್ತದೆ. ನಕಾರಾತ್ಮಕ ಆಲೋಚನೆಗಳು ಮಾನಸಿಕ ಕಾಯಿಲೆಗಳಾಗುವ ಮೊದಲೇ ನೀವು ಅವುಗಳನ್ನು ನಾಶಮಾಡಬೇಕು.  ಹಣಕಾಸಿನ ವ್ಯವಹಾರ ಅಷ್ಟೊಂದು ಲಾಭ ತರಲಾರದು. ಕುಟುಂಬ ಸಮೇತರಾಗಿ ಕ್ಷೇತ್ರ ದರ್ಶನ ಮಾಡುವ ಅವಕಾಶ. ಪ್ರೀತಿಯ ವ್ಯವಹಾರಗಳಲ್ಲಿ ಬಲವಂತ ಮಾಡುವುದನ್ನು ತಪ್ಪಿಸಿ.

ಮಕರ :-

ಪತ್ನಿ ವರ್ಗದವರಿಂದ ನೆರವಿನ ನಿರೀಕ್ಷೆ. ಖರ್ಚಿನ ದೃಷ್ಟಿಯಿಂದ ಹೊಸದಾದ ಒತ್ತಡ ಎದುರಾದರೂ ಬೇರೆ ರೂಪಗಳಿಂದ ಹಣವು ಹರಿದು ಬರುವುದರಿಂದ ಅನುಕೂಲವಾಗುವುದು. ಇಂದು ಜನರು ಹೊಗಳಿಕೆಗಳನ್ನು ನೀಡುತ್ತಾರೆ-ಇವುಗಳನ್ನು ನೀವು ಯಾವಾಗಲೂ ಕೇಳಬಯಸಿರುತ್ತೀರಿ. ನಿಮ್ಮ ಕಾರ್ಯಗಳು ಸುಗಮವಾಗುವುದು. ವೈಯಕ್ತಿಕ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ನಿಮ್ಮ ಸಂತಸಕ್ಕೆ ಮಡದಿ ಮಕ್ಕಳು ಸಹಾಯ ಮಾಡುವರು.

ಕುಂಭ:-

ಸ್ನೇಹಿತರಿಂದಾಗಿ ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ. ತಾಳ್ಮೆಗೂ ಒಂದು ಮಿತಿ ಇರುತ್ತದೆ. ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯಿಂದಾಗಿ ಉತ್ತಮ ಕಾರ್ಯನಿರ್ವಹಣೆ. ಮನರಂಜನೆ ಮತ್ತು ವೈಭೋಗಗಳ ಮೇಲೆ ಅತಿಯಾಗಿ ಖರ್ಚು ಮಾಡಬೇಡಿ. ನೆನೆಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಚಾಲನೆ ದೊರೆಯುವುದು. ನಿಮ್ಮ ಬಾಸ್ ಇಂದು ನಿಜವಾಗಿಯೂ ಕೆಟ್ಟ ಮನಸ್ಥಿತಿಯೊಡನೆ ಬರಬಹುದು ಹಾಗೂ ಅದನ್ನು ನೀವು ನಿರ್ವಹಿಸುವುದು ನಿಮಗೆ ಕಷ್ಟಕರವಾಗಬಹುದು. ದೂರದ ನೆಂಟರ ಆಗಮನ ಸಾಧ್ಯತೆ. ಹಾಗಾಗಿ ಕೋಪಗೊಳ್ಳುವುದರಲ್ಲಿ ಒಂದು ಅರ್ಥವಿರುತ್ತದೆ.

ಮೀನ:-

ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗಿ ನೆಮ್ಮದಿ ದೊರಕುವುದು. ನಿಮ್ಮ ಕಷ್ಟದ ದಿನಗಳು ಕೆಲವೇ ದಿನಗಳಲ್ಲಿ ಕರಗಿ ಹೋಗಲಿವೆ. ಒಬ್ಬ ಕುಟುಂಬದ ಸದಸ್ಯರ ಆರೋಗ್ಯದ ಸ್ಥಿತಿ ಸ್ವಲ್ಪ ಒತ್ತಡಕ್ಕೆ ಕಾರಣವಾಗುತ್ತದೆ.  ಮಹಿಳೆಯರು ಸಮಾರಂಭಗಳಲ್ಲಿ ಭಾಗಿಯಾದಾಗ ಆಭರಣಗಳ ಬಗ್ಗೆ ಎಚ್ಚರಿಕೆ. ನಿಮ್ಮನ್ನು ವಿರೋಧಿಸುತ್ತಿದ್ದವರು ನಿಮಗೆ ಹಣಕಾಸಿನ ಸಹಾಯ ಮಾಡಲು ಮುಂದೆ ಬರುವರು. ರಾಜಕೀಯದಲ್ಲಿರುವವರಿಗೆ ಯಶಸ್ಸು. ನೀವು ಸ್ವಲ್ಪ ಪ್ರೀತಿ ಹಂಚಿಕೊಂಡಲ್ಲಿ ಇಂದು ನಿಮ್ಮ ಪ್ರಿಯತಮೆ ನಿಮ್ಮ ದೇವತೆಯಾಗುತ್ತಾಳೆ.  ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    2014ರ ಏಪ್ರಿಲ್‌‌ನಿಂದ 2017ರವರೆಗೆ ಮೋದಿ ಸರ್ಕಾರ ವ್ಯಯಿಸಿದ್ದು ಎಷ್ಟು ಸಾವಿರ ಕೋಟಿ ಹಣ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರೂವರೆ ವರ್ಷದಲ್ಲಿ ಪ್ರಚಾರಕ್ಕಾಗಿ 3,755 ಕೋಟಿ ರೂಪಾಯಿ ವ್ಯಯಿಸಿದೆ ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಯಿಂದ ಬಯಲಿಗೆ ಬಂದಿದೆ.

  • ಸುದ್ದಿ

    ಅಂಬರೀಷ್ ಹುಟ್ಟುಹಬ್ಬಕ್ಕೆ ಅಭಿಮಾನಿಯಿಂದ 500 ಕೆ ಜಿ ಧಾರವಾಡ ಪೇಡಾ!

    ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ, ಅಂಬರೀಷ್ ಅಭಿಮಾನಿಯೊಬ್ಬರು ಧಾರವಾಡದಿಂದ ಬರೋಬ್ಬರಿ 500 ಕೆಜಿ ಪೇಡಾವನ್ನು ಮಂಡ್ಯಕ್ಕೆ ಕಳುಹಿಸುತ್ತಿದ್ದಾರೆ.ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಅಲ್ಲಿ ನಡೆದ ಜಿದ್ದಾಜಿದ್ದಿಯಲ್ಲಿ ಸುಮಲತಾ ಗೆಲುವು ಸಾಧಿಸಿದ್ದರು. ಮಂಡ್ಯದಲ್ಲಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಸ್ವಾಭಿಮಾನ ಸಮಾವೇಶವನ್ನು ಹಮ್ಮಿಕೊಂಡಿದ್ದು, ಈ ಸಮಾವೇಶಕ್ಕೆ ಧಾರವಾಡದಿಂದ ಮಂಡ್ಯ ಜನತೆಗೆ ಪೇಡಾ ಬಂದಿದೆ….

  • ಆರೋಗ್ಯ

    ನೀವು ತಿಳಿದಿರದ ಕಮರಾಕ್ಷಿ ಮರದ ಉಪಯೋಗಗಳ ಬಗ್ಗೆ ತಿಳಿಯಲು ಈ ಲೇಖನ ಓದಿ..

    ನಮ್ಮ ದೇಶದಲ್ಲಿ ಹಣ್ಣಿನ ತೋಟಗಳು, ಕೈತೋಟಗಳು, ಸಸ್ಯೋದ್ಯಾನ, ದೊಡ್ಡ ಕಟ್ಟಡಗಳ ಪೌಳಿಗೋಡೆಯ ಆವರಣ, ಸಾಲುಮರವಾಗಿ, ತೋಟಗಾರಿಕೆ ಸಸಿಮಡಿಗಳು ಮುಂತಾದೆಡೆ ಈ ಹಣ್ಣಿನ ಮರವನ್ನು ಕಾಣಬಹುದು.ಒಂದು ರಸವತ್ತಾದ ಮೃದು ಹಣ್ಣು. ನಮ್ಮಲ್ಲಿ ಇದನ್ನು ಇತರ ದೇಶಗಳಲ್ಲಿದ್ದಂತೆ ವಾಣಿಜ್ಯವಾಗಿ ಯಾರೂ ಬೆಳೆಯುತ್ತಿಲ್ಲ. ಕ್ಯಾಲಿಫೋರ್ನಿಯಾ, ಹವಾಯ್‌, ಚೀನಾ ತೈವಾನ್‌, ಕ್ವೀನ್ಸ್‌ಲ್ಯಾಂಡ್‌ ಮುಂತಾದೆಡೆ ಕಮರಾಕ್ಷಿಯ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.

  • ಸುದ್ದಿ

    ‘ಎಲ್ಲಾ ದೈವ ಇಚ್ಚೆ’ಅಂತ ಹೇಳಿ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಯೊಳಗೆ ರೀ ಎಂಟ್ರಿಕೊಟ್ಟ ಚೈತ್ರ ಕೊಟ್ಟೂರ್…!

    ಬಿಗ್ ಬಾಸ್ 7ನೇ ಸೀಸನ್ ಈಗ 7ನೇ ವಾರಕ್ಕೆ ಕಾಲಿಡುತ್ತಿದೆ .ಕಳೆದ ಎಪಿಸೋಡ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ  ನಟಿ ರಕ್ಷಾ ಸೋಮಶೇಖರ್ ಬೆನ್ನಲ್ಲೇ ಮತ್ತೊಬ್ಬ ಸದ್ಯಸ್ಯರು ಬಿಗ್ ಬಾಸ್ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆ ಎರಡನೇ ಶಾಕ್ ನೀಡಿದ್ದಾರೆ. 6 ನೇ ವಾರಂತ್ಯದಲ್ಲಿ ಮನೆಯಿಂದ ನಟಿ ಸುಜಾತ ಅವರು ಹೊರ ಹೋಗಿದ್ದೇ ತಡ ಹೊಸ ಸದ್ಯರೊಬ್ಬರನ್ನು ಬಿಗ್ ಬಾಸ್ 2ನೇ ವೈಲ್ಡ್ ಕಾರ್ಡ್ಎಂಟ್ರಿ ಮೂಲಕ ಮನೆಯೊಳಕ್ಕೆ ಕರೆಸಿಕೊಂಡಿದ್ದಾರೆ. ಬಿಗ್​​ ಬಾಸ್​ ಮನೆಗೆ…

  • ಸುದ್ದಿ

    ಗದ್ದೆಯಲ್ಲಿ ಮಕ್ಕಳ ಹೆಜ್ಜೆ , “ನಮ್ಮ ನಡಿಗೆ ಕೃಷಿಯ ಕಡೆಗೆ”…!

    ಶಂಕರಪುರ ಸೈಂಟ್ ಜೋನ್ಸ್ ಫ್ರೌಢ ಶಾಲಾ ಭಾರತ ಸೇವಾದಳ, ಸ್ಕೌಟ್, ಗೈಡ್ಸ್, ನೇಸರ ಹಸಿರುಪಡೆಯ 134 ವಿದ್ಯಾರ್ಥಿಗಳು ಶಂಕರಪುರ ಸಮೀಪದ ಕುರ್ಕಾಲು ಗರಡಿಮನೆ ಪ್ರಗತಿಪರ ಕೃಷಿಕ ವಸಂತ ಪೂಜಾರಿಯವರ ಗದ್ದೆಗೆ ಭೇಟಿ ನೀಡಿದರು. ಟಿಲ್ಲರ್‍ನಲ್ಲಿ ಉಳುಮೆ ಮಾಡಿದ ಗದ್ದೆಗೆ ಇಳಿದರು. ಭಾರತ ಸೇವಾದಳದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ “ಸಾರೇ ಜಾಹಾಂಸೆ ಅಚ್ಚಾ,,,, ಹಿಂದೂಸ್ತಾನ್ ಹಮಾರಾ..! ಗೀತೆಯನ್ನು ಸಾಮೂಹಿವಾಗಿ ಅಭಿನಯದ ಮೂಲಕ ಹಾಡಿದರು. ಗದ್ದೆಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ, ಸಂಭ್ರಮಿಸಿದರು. ಕೆಸರುಗದ್ದೆಯಲ್ಲಿ ಇಳಿದ ಪ್ರಥಮ ಅನುಭವದ ವಿದ್ಯಾರ್ಥಿಗಳು…

  • ಸುದ್ದಿ

    ಆನ್‍ಲೈನ್ ಫುಡ್ ಪ್ರಿಯರೆ ದಯವಿಟ್ಟು ಇದನ್ನೊಮ್ಮೆ ಓದಿ, ಇದನ್ನು ನೀವು ತಪ್ಪದೇ ತಿಳಿದುಕೊಳ್ಳಬೇಕು,.!

    ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಗ್ರಾಹಕರೇ ಹುಷಾರಾಗಿರಿ. ಯಾಕೆಂದರೆ ಬೆಂಗಳೂರಿನ ಹಲವೆಡೆ ಆನ್‍ಲೈನ್ ಫುಡ್ ಮಾಫಿಯಾ ನಡೆಯುತ್ತಿದೆ. ಇಂದಿನ ಬ್ಯುಸಿ ಶೆಡ್ಯೂಲ್ ನಲ್ಲಿ ಜನರಿಗೆ ಅಡುಗೆ ಮಾಡಿಕೊಂಡು ಊಟ ಮಾಡಲು ಸಹ ಸಮಯ ಇಲ್ಲ. ಸಿಲಿಕಾನ್ ಸಿಟಿಯಂತಹ ಮಹಾನಗರಗಳಲ್ಲಿ ಬಹುತೇಕರು ಆನ್‍ಲೈನ್ ಫುಡ್ ತರಿಸೋ ಮೂಲಕ ಸಮಯ ಉಳಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಒಮ್ಮೆ ನೀವು ಆರ್ಡರ್ ಮಾಡುವ ಆಹಾರ ತಯಾರಾಗುವ ಸ್ಥಳ ನೋಡಿದ್ರೆ ಬೇಡಪ್ಪ ಬೇಡ ಅನ್‍ಲೈನ್ ಅನ್ನೋದು ಗ್ಯಾರೆಂಟಿ. ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಕರಾವಳಿ…