ಜ್ಯೋತಿಷ್ಯ

ಇಂದು ಭಾನುವಾರ, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

247

ಇಂದು ಭಾನುವಾರ , 18/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ದುಡುಕು ತನದಿಂದಾಗಿ ಕಾರ್ಯ ವೈಫಲ್ಯ ತಪ್ಪಿಸಲು ತಾಳ್ಮೆ ಅವಶ್ಯ. ಸಂಶೋಧನೆಯಲ್ಲಿ ಅಪಾರ ಶ್ರಮ ವಹಿಸಲಿದ್ದೀರಿ. ಹೊಸ ಉತ್ಸಾಹದಿಂದ ಆರಂಭಿಸಿದ ಕಾರ್ಯಗಳಲ್ಲಿ ಹೆಚ್ಚಿನ ಸಿದ್ಧಿಯಾಗಲಿದೆ. ಆಗಾಗ ಸಂಚಾರದಿಂದ ಕಾರ್ಯಸಿದ್ಧಿಯಾದರೂ ದೇಹಾಯಾಸ ತಂದೀತು. ಹೊಸ ಆದಾಯದ ಮೂಲಗಳು ಗೋಚರಕ್ಕೆ ಬಂದಾವು. ಸೂಕ್ತ ಸಲಹೆಗಾಗಿ ಹಿತೈಷಿಗಳು ನಿಮ್ಮ ಮಾರ್ಗದರ್ಶನಕ್ಕೆ ಬಂದಾರು.

ವೃಷಭ:-

ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಉದಾಸೀನತೆ ತೋರಿಸಿಯಾರು. ವೃತ್ತಿರಂಗದಲ್ಲಿ ಮುನ್ನಡೆ ಸಮಾಧಾನ ತರುತ್ತದೆ. ಯಾವುದೇ ಸಮಸ್ಯೆಗಳನ್ನು ತಾಳ್ಮೆ ಸಮಾಧಾನದಿಂದ ಪರಿಹರಿಸಿಕೊಳ್ಳಬೇಕು. ಸ್ನೇಹಿತರೊಂದಿಗೆ ದಿನವನ್ನು ಸಂತೋಷದಿಂದ ಕಳೆಯಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಓಡಾಟ, ಜತೆಗೆ ಮಕ್ಕಳ ಸಲುವಾಗಿ ವ್ಯಾಪಾರ ಮಾಡುವ ಸಾಧ್ಯತೆ. ಉತ್ತಮ ಆರೋಗ್ಯ.

 

ಮಿಥುನ:

ಕಾರ್ಯಕ್ಷೇತ್ರದಲ್ಲಿ ಒಮ್ಮತ ಮೂಡಿಸಲು ಅನುಸರಿಸಿದ ಮಾರ್ಗಕ್ಕೆ ಮೇಲಾಧಿಕಾರಿಗಳಿಂದ ಪ್ರಶಂಸೆ. ಕಚೇರಿಯಲ್ಲಿ ನಿಮ್ಮ ಸ್ಥಾನ ಮಾನಗಳು ಗಟ್ಟಿಯಾಗುವ ಜತೆಗೆ ಕಾರ್ಯ ಬಾಹುಳ್ಯ ಅಧಿಕವಾಗಲಿದೆ. ಸಹಧರ್ಮಿಣಿಯ ಸಾರ್ಥಕ ಸಹಯೋಗ ಸುಖವರ್ಧನೆಗೆ ಪ್ರಚೋದನೆ ನೀಡಲಿದೆ. ಹಾಗೆ ಆರ್ಥಿಕವಾಗಿ ಮುನ್ನಡೆ ತೋರಿ ಬಂದರೂ ಖರ್ಚುವೆಚ್ಚಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.

ಕಟಕ :-

ನೌಕರ ವರ್ಗಕ್ಕೆ ಸಂತಸ ಸುದ್ದಿ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯಕ್ಕೆ ಕ್ಷತಿ ಇರಲಾರದು. ಗೃಹ ಬದಲಾವಣೆಯ ಸಾಧ್ಯತೆ ಇರುತ್ತದೆ. ಸ್ವಪಯತ್ನಬಲಕ್ಕೆ ವಿಶ್ವಾಸವಿಟ್ಟು ಮುಂದುವರಿಯಿರಿ. ಕಚೇರಿ ಕೆಲಸಗಳ ಸುಗಮತೆಗೆ ಸಹವರ್ತಿಗಳ ಸಲಹೆ ಸಹಕಾರ ಕೋರಲಿದ್ದೀರಿ. ಸಂಗಾತಿಗೆ ಹೊಸ ಉದ್ಯೋಗದಿಂದ ಸಂತೋಷ. ನಿರ್ದಿಷ್ಟ ಕೆಲಸಗಳಿಗೆ ಗಮನ ಕೊಟ್ಟು ಕಾರ್ಯನಿರ್ವಹಿಸುವುದು ಒಳಿತು.

 

 ಸಿಂಹ:

ಮನೆಯಲ್ಲಿ ದೇವತಾಕಾರ್ಯಗಳ ಚಿಂತನೆ ನಡೆಯಲಿದೆ. ಪ್ರವಾಸಾದಿಗಳಿಂದ ಸಂತಸ ತರುತ್ತದೆ. ಆರ್ಥಿಕ ಹಿಡಿತವಿದ್ದಲ್ಲಿ ಹೆಚ್ಚಿನ ಸಮಸ್ಯೆ ಇರಲಾರದು. ಅವಿವಿರತ ದುಡಿಮೆ ದೇಹಾಯಾಸ ತಂದೀತು. ಉದ್ಯೋಗದಲ್ಲಿ ಸ್ಥಾನ ಮಾನಗಳು ಅಧಿಕಗೊಳ್ಳುವುದು. ರೈತಾಪಿ ವರ್ಗದವರಿಗೆ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಲು ತೊಡಕುಗಳು ಎದುರಾದೀತು. ಅನ್ನಪೂರ್ಣೇಶ್ವರಿಯ ಆರಾಧನೆಯಿಂದ ಸಮೃದ್ಧಿ.

ಕನ್ಯಾ :-

ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆಯಾಗುವುದು. ಹೊಸ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ನಿಮ್ಮದಾಗಲಿದೆ. ಸಂಗಾತಿಯ ಇಷ್ಟಾರ್ಥಗಳನ್ನು ಈಡೇರಿಸಲಿದ್ದೀರಿ. ಆಭರಣ ಖರೀದಿ ಸಾಧ್ಯತೆ. ಗೃಹ ನಿರ್ಮಾಣಕಾರ್ಯಗಳಿಗೆ ಸಕಾಲವಿದು. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ತೋರಿ ಬಂದೀತು. ದಾಂಪತ್ಯ ಜೀವನದಲ್ಲಿ ಸಂತೃಪ್ತಿ ತರುತ್ತದೆ. ಗುರುಹಿರಿಯರ ಸೇವೆ ಶಾಂತಿ ಸಮಾಧಾನ ತರಲಿದೆ.

 

ತುಲಾ:

ವಾದೀತು. ಬಂಧುಮಿತ್ರರ ಸಹಕಾರದಿಂದ ನೆಮ್ಮದಿ ತಂದೀತು. ದೇವರ ಉಪಾಸನೆಯಿಂದ ಮನಸ್ಸಿನ ಮನೋಕಾಮನೆಗಳು ನಡೆಯಲಿವೆ. ಕಾರ್ಯದೊತ್ತಡಗಳಿಂದ ಕಾರ್ಯವಿಳಂಬ ಒದಗಿಬಂದಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಸ್ನೇಹಿತನ ಸಹಾಯಕ್ಕೆ ನಿಲ್ಲಬೇಕಾದ ಅವಕಾಶ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗದ ಅವಕಾಶ ದೊರೆತು ನೆಮ್ಮದಿ ಮೂಡುವುದು.

ವೃಶ್ಚಿಕ :-

ಆರ್ಥಿಕವಾಗಿ ವ್ಯಾಪಾರ ವ್ಯವಹಾರಗಳ ಬಗ್ಗೆ ಜಾಗ್ರತೆ ವಹಿಸಬೇಕು. ಸಾಂಸಾರಿಕವಾಗಿ ಹೆಚ್ಚಿನ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾದೀತು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ. ಲಲಿತ ಕಲೆಗಳಲ್ಲಿ ಆಸಕ್ತಿ ವಹಿಸಲಿದ್ದೀರಿ. ಮುಖ್ಯವಾದ ವಿಷಯವೊಂದರ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಸ್ನೇಹಿತರ ಸಹಾಯ ಪಡೆದುಕೊಳ್ಳಬೇಕಾದೀತು. ಭಾವೋದ್ವೇಗ ತಗ್ಗಿಸಿಕೊಳ್ಳುವಿರಿ.

 

ಧನಸ್ಸು:

ಹಣಕಾಸಿನ ಅಡಚಣೆಗಳು ದೂರವಾಗಲಿವೆ. ಜೀವನದಲ್ಲಿ ಬದಲಾವಣೆ ತರುವ ಘಟನೆಯೊಂದು ಎದುರಾಗುವ ಸಾಧ್ಯತೆ ಇದೆ. ಸಂಪನ್ಮೂಲಗಳು ಕೂಡಿಬರಲಿವೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಮುನ್ನಡೆ ಸಾಧಕವಾಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಸಮಾಧಾನ ಕಂಡು ಬರುತ್ತದೆ. ಯೋಗ್ಯ ವಯಸ್ಕರು ಕಂಕಣಬಲವನ್ನು ಪಡೆಯಲಿದ್ದಾರೆ. ದಿನಾಂತ್ಯ ಶುಭವಿದೆ.

 

ಮಕರ :-

ಆತ್ಮೀಯರೊಂದಿಗೆ ಹಣಕಾಸಿನ ಪರಿಸ್ಥಿತಿ ಚರ್ಚಿಸಲಿದ್ದೀರಿ. ನಿವೇಶನ ಕೊಳ್ಳುವ ವಿಚಾರ ಮುಂದೂಡುವ ಬದಲಾಗಿ ಹೊಂದಾಣಿಕೆಯಿಂದ ಮುಂದುವರೆಯುವುದು ಸೂಕ್ತ. ಆರೋಗ್ಯ ಉತ್ತಮವಾಗಿರುವುದು. ಆಗಾಗ ರಾಹು ಕೇತು ಪೀಡೆಯಿಂದ ಮಾನಸಿಕ, ದೈಹಿಕ ಸಮಸ್ಯೆಗಳನ್ನು ಅನುಭವಿಸುವಿರಿ. ಶಕ್ತಿ ಸಾಮರ್ಥ್ಯಗಳಿದ್ದರೂ ಆಗಾಗ ಆಲಸ್ಯ ವಿರುತ್ತದೆ. ದಿನಾಂತ್ಯ ಶುಭವಾರ್ತೆ ಇದೆ.

ಕುಂಭ:-

ಕ್ರೀಡಾಪಟುಗಳಿಗೆ ಹಾಗೂ ರಾಜಕೀಯ ವರ್ಗದವರಿಗೆ ಯಶಸ್ಸು ಹಿಂಬಾಲಿಸಲಿದೆ. ಆರ್ಥಿಕ ಸ್ಥಿತಿ ಉನ್ನತಿ ತರುತ್ತದೆ. ಧರ್ಮಪತ್ನಿಯ ಸಲಹೆಗಳಿಗೆ ಸ್ಪಂದಿಸಬೇಕಾಗುತ್ತದೆ. ಶುಭವಿದೆ. ಸಮಾಜ ಸೇವೆಯ ನಿಮಿತ್ತ ಹೆಚ್ಚಿನ ಓಡಾಟ ಮಾಡಬೇಕಾದೀತು. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಮಿತ್ರರೊಬ್ಬರು ಸನಿಹಕ್ಕೆ ಬರುವ ಸಾಧ್ಯತೆ. ಆರ್ಥಿಕ ಅನುಕೂಲತೆಗಳು ಸಹಜವಾಗಿರುವುದು.

ಮೀನ:-

ಹೊಸ ನಿರ್ಮಾಣ ಕಾರ್ಯಗಳ ಬಗ್ಗೆ ಒಪ್ಪಂದ ಏರ್ಪಟ್ಟು ಸಂತೋಷ ತರುವುದು. ಸಂಶೋಧನಾ ವೃತ್ತಿಯಲ್ಲಿರುವವರಿಗೆ ಪ್ರಶಸ್ತಿ, ಗೌರವಾದರಗಳು ಲಭ್ಯ. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಮಾತಿನಿಂದ ಅನಾವಶ್ಯಕ ಸಮಸ್ಯೆ ತಂದೀತು. ಚತುರತೆಯಿಂದ ಕಾರ್ಯ ಸಾಧಿಸಬೇಕಾಗುತ್ತದೆ. ರಾಹು ಕಿರಿಕಿರಿಯನ್ನು ಹಾಗೆ ಶನಿಯು ಆರ್ಥಿಕ ನಷ್ಟ ತಂದಾನು. ಜಾಗ್ರತೆಯಿಂದ ಇರಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಚಿತ್ರ ಆದರೂ ಸತ್ಯ

    ಈ ವಿಮಾನದಲ್ಲಿ ಪ್ರಯಾಣಿಸಲು ಬಟ್ಟೆ ಬಿಚ್ಚಿ ಹೋಗ ಬೇಕು..!ತಿಳಿಯಲು ಈ ಲೇಖನ ಓದಿ..

    ನೀವು ಹೊಟೇಲುಗಳಲ್ಲಿ ಹೆಸರಿಗೆ ತೋರಿಸಿಕೊಳ್ಳಲು ಬಟ್ಟೆ ಧರಿಸಿದವರನ್ನು ನೀವು ನೋಡಿರಬಹುದು. ಆದರೆ ಜರ್ಮನಿಯಲ್ಲಿ ಟ್ರಾವೆಲ್ ಏಜೆನ್ಸಿಯೊಂದು ಜಗತ್ತಿನ ಮೊದಲ ನ್ಯೂಡ್ ಏರ್‌ಲೈನ್ಸನ್ನು ಲಾಂಚ್ ಮಾಡಿದೆ. ಇದರಲ್ಲಿ ನೀವು ಬಟ್ಟೆಹಾಕಿಕೊಂಡು ಪ್ರಯಾಣಿಸುವಂತಿಲ್ಲ. ಇದರಲ್ಲಿ ಪ್ರಯಾಣಿಸುವವರು 30 ಸಾವಿರ ಅಡಿ ಎತ್ತರಕ್ಕೆ ಹಾರಿದ ಮೇಲೆ ಬಟ್ಟೆ ತೆಗೆಯುತ್ತಾರೆ.

  • ಜ್ಯೋತಿಷ್ಯ

    ಶಿವ ಪರಮಾತ್ಮನನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ whatpp ಮೆಸೇಜ್ ಮಾಡಿ…

  • ಸುದ್ದಿ

    ಶಿವೈಕ್ಯರಾದ ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ….

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸೋಮವಾರ ನಿಧನರಾಗಿದ್ದಾರೆ. ನಡೆದಾಡುವ ದೇವರೇ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ಸಂತರಾಗಿ 111 ವರ್ಷಗಳ ಯತಿ ಜೀವನ ಯಾನ ಪೂರೈಸಿರುವ ಶ್ರೀಗಳನ್ನೂ ಕಾಡುತ್ತಿದ್ದ ಅನಾರೋಗ್ಯ ಇಂದು ಅವರನ್ನು ಭಕ್ತ ಸಾಗರದಿಂದ ಬಹದೂರಕ್ಕೆ ಒಯ್ದಿದೆ. ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ…

  • ಸುದ್ದಿ

    ಬಹುಅಂತಸ್ತಿನ ಕಟ್ಟಡದಲ್ಲಿ ಆಕಸ್ಮಿಕ ಅಗ್ನಿ ಅವಘಡ,7 ಮಂದಿ ಸಾವು..!

    ರಾಜಧಾನಿ ದೆಹಲಿಯ ಜನನಿಬಿಡ ಝಾಕಿರ್ ನಗರದ ಬಹು ಅಂತಸ್ತುಗಳ ಕಟ್ಟಡವೊಂದರಲ್ಲಿ ಇಂದು ನಸುಕಿನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಇಬ್ಬರು ಮಕ್ಕಳೂ ಸೇರಿದಂತೆ ಏಳು ಮಂದಿ ಮೃತಪಟ್ಟು, ಇತರ 16 ಮಂದಿ ತೀವ್ರ ಗಾಯಗೊಂಡಿದ್ದಾರೆ.ಗಾಯಾಳುಗಳಲ್ಲಿ ಏಳು ಮಂದಿಯ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸುಟ್ಟು ಕರಕಲಾಗಿದ್ದರೆ, ಐವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇನೆಗಳು ಮುಖ್ಯ ಅಧಿಕಾರಿ ಅತುಲ್ ಗರ್ಗ್ ಹೇಳಿದ್ದಾರೆ.ಬೆಂಕಿವ್ಯಾಪಿಸಿದಸಂದರ್ಭದಲ್ಲಿಕಟ್ಟಡದಲ್ಲಿದ್ದಕೆಲವರುಅಪಾಯದಿಂದಪಾರಾಗಲುಮಹಡಿಗಳಿಂದಕೆಳಕ್ಕೆಜಿಗಿದರು. ಇವರಲ್ಲಿಕೆಲವರಿಗೆಗಾಯಗಳಾಗಿವೆ. ಅಗ್ನಿಶಾಮಕ ದಳದ ಇಬ್ಬರು ಸಿಬ್ಬಂದಿಗೂ…

  • ದೇಶ-ವಿದೇಶ

    2018ರ ಮೊದಲ ದಿನದ ಯಾವ ದೇಶದಲ್ಲಿ ಎಷ್ಟು ಶಿಶುಗಳ ಜನನ..!ತಿಳಿಯಲು ಈ ಲೇಖನ ಓದಿ..

    2018ರ ಮೊದಲ ದಿನದ ಪ್ರಕಾರ ವಿಶ್ವದಲ್ಲಿ 3,86,000 ಲಕ್ಷ ಶಿಶುಗಳ ಜನನವಾಗಿದೆ. ಆದ್ರೆ ಇದರಲ್ಲಿ ಭಾರತದ ಪಾಲು 69,070. ಈ ಮೂಲಕ ಈ ವರ್ಷದ ಮೊದಲ ದಿನ ಹೆಚ್ಚು ಮಕ್ಕಳು ಜನಿಸಿದ ದೇಶದ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ ಲಭಿಸಿದೆ.

  • ಸುದ್ದಿ

    ಎರಡನೇ ಪತ್ನಿಯಿಂದ ಸಿಎಂ ಕುಮಾರಸ್ವಾಮಿಗೆ ಸಂಕಷ್ಟ..!ಈ ಸುದ್ದಿ ನೋಡಿ…

    ಮೈತ್ರಿ ಸರ್ಕಾರದ ಪರವಾಗಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಯಾಯ್ವರು ಸಾಕಷ್ಟು ಏಳು ಬೀಳುಗಳ ನಡುವೆಯೂ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿರುವ ಮುಖ್ಯಮಂತ್ರಿಗಳಿಗೆ ಈಗೊಂದು ಸಂಕಷ್ಟ ಎದುರಾಗಿದೆ. ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ. ಈ ದೂರು ಪುರಸ್ಕರಿಸಿರುವ ನ್ಯಾಯಾಲಯ, ದೂರಿನ ವಿಚಾರಣೆಯನ್ನು ಬರುವ ಮೇ 2ಕ್ಕೆ ಮುಂದೂಡುವಂತೆ ಮಂಗಳವಾರ ಆದೇಶಿಸಿದೆ.ಕಳೆದ 2018ರಲ್ಲಿ ನಡೆದ ವಿಧಾನಸಭಾ…