ಜ್ಯೋತಿಷ್ಯ

ಇಂದು ಬುಧವಾರ 07/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ..?ಇದನ್ನು ನೋಡಿ ತಿಳಿಯಿರಿ…

242

ಇಂದು ಬುಧವಾರ 07/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಇಂದು ನಿಮ್ಮ ಪ್ರಿಯತಮೆ ಉಡುಗೊರೆಗಳ ಜೊತೆ ನಿಮ್ಮ ಸ್ವಲ್ಪ ಸಮಯವನ್ನೂ ಅಪೇಕ್ಷಿಸಬಹುದು. ನಿಮ್ಮ ನಡೆಯಲ್ಲಿ ಪ್ರಾಮಾಣಿಕವಾಗಿರಿ.ಕುಟುಂಬದವರೊಂದಿಗೆ ಕ್ಷೇತ್ರ ದರ್ಶನ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ಓದಿನಲ್ಲಿ ಪ್ರಗತಿ, ಗಣಪತಿ ದರ್ಶನ ಮಾಡಿ.ನಿಮ್ಮ ಮಾತಿಗೂ ಕೃತಿಗೂ ಅಂತರವಿರದಿರಲಿ. ಕೆಲ ಗ್ರಹಗಳ ಸಂಚಾರದಿಂದ ಇಂದು ನಿಮಗೆ ಅಧಿಕ ಒತ್ತಡ ಉಂಟಾಗುವುದು. ಹಾಗಾಗಿ ಆದಷ್ಟು ತಾಳ್ಮೆಯಿಂದ ಇರಿ. ಕುಲದೇವತಾ ಪ್ರಾರ್ಥನೆ ಮಾಡಿರಿ.

ವೃಷಭ:-

ಬೆನ್ನು ನೋವು ಅಥವಾ ಮಂಡಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಪೈಪೋಟಿ, ಶತ್ರುಗಳಿಂದ ಅಪಾಯ, ಕಾಗದ ಪತ್ರಗಳು ಕಾಣೆಯಾಗುತ್ತವೆ, ಗುರು ಸ್ಮರಣೆ ಮಾಡಿ. ಈ ದಿನ ಕಾಲು ಕೆಜಿಯಷ್ಟು ತೊಗರಿಬೇಳೆಯನ್ನು ದಾನ ಮಾಡಿರಿ.ನಿಮ್ಮ ಕೆಲಸದ ಮೇಲೆ ಗಮನ ಹರಿಸಿದಲ್ಲಿ ಯಶಸ್ಸು ಮತ್ತು ಮನ್ನಣೆ ನಿಮ್ಮದಾಗುತ್ತದೆ. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ. ನೀವು ಇಂದು ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಜೀವನದ ಅತ್ಯುತ್ತಮ ದಿನವನ್ನು ಕಳೆಯುತ್ತೀರಿ.

ಮಿಥುನ:

ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ನಿಮ್ಮ ಸುತ್ತಲಿರುವ ಜನರು ಏನಾದರೂ ಮಾಡಿ ನಿಮ್ಮ ಜೀವನ ಸಂಗಾತಿ ಮತ್ತೆ ನಿಮ್ಮ ಜೊತೆ ಪ್ರೇಮದಲ್ಲಿ ಬೀಳುವಂತೆ ಮಾಡಬಹುದು. ಗುರುಹಿರಿಯರ ಸಲಹೆಯನ್ನು ತಪ್ಪದೆ ಪಾಲಿಸಿ. ನ್ಯಾಯಾಲಯದ ತೀರ್ಪಿಗೆ ತಿರುಗಾಟ, ನರ ದೌರ್ಬಲ್ಯ, ವಾತ ಬಾಧೆ, ಕ್ಷೇತ್ರ ದರ್ಶನ ಭಾಗ್ಯ.

ಕಟಕ :-

ಬಂಧುಗಳ ಆಗಮನದಿಂದ ಮನಸ್ಸಿಗೆ ಆನಂದವಾಗುವುದು. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡುವುದು. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಮಾತಿನ ರೂಪದಲ್ಲಿ ಅಪಮಾನ ಆಗುವ ಸಾಧ್ಯತೆ ಇರುತ್ತದೆ. ಸಮಾಜ ಸೇವಕರಿಗೆ ಗೌರವ, ವಿವಾಹ ಯೋಗ, ಭ್ರಾತೃ ಪ್ರೇಮ, ಕಾರ್ಯ ಲಾಭ.

 ಸಿಂಹ:

ನಿಮ್ಮ ಕುಟುಂಬದ ಸದಸ್ಯರ ಅಗತ್ಯಗಳ ಮೇಲೆ ಗಮನ ಹರಿಸುವುದು ಇಂದು ನಿಮ್ಮ ಆದ್ಯತೆಯಾಗಿರಬೇಕು. ಭಾವನಾತ್ಮಕ ತೊಂದರೆಗಳು ನಿಮ್ಮನ್ನು ಕಾಡುತ್ತವೆ. ನೀವು ಸ್ವಲ್ಪ ಕಾಲ ಒಬ್ಬಂಟಿಯಾಗಿದ್ದಂತೆ ತೋರುತ್ತದೆ ಸಹೋದ್ಯೋಗಿಗಳು,ನಿಮ್ಮ ಸಹಾಯಕ್ಕೆ ಬರಬಹುದು – ಆದರೆ ಅವರು ಹೆಚ್ಚೇನೂ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ.ಧರ್ಮ, ನ್ಯಾಯ ಹಾಗೂ ಸತ್ಯಗಳನ್ನು ರಕ್ಷಿಸುವುದೇ ನಿಮ್ಮ ಮೊದಲನೆಯ ಆದ್ಯತೆ ಆಗಿರುವುದು. ಹಾಗಿದ್ದರೂ ನಿಮ್ಮ ಕೈ ಕೆಳಗೆ ಕೆಲಸ ಮಾಡುವ ಜನರು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡು ಕೆಲಸದಿಂದ ದೂರು ಸರಿಯುವರು. ಗುರು ಮಂತ್ರ ಪಠಿಸಿರಿ.

ಕನ್ಯಾ :-

ವಿದೇಶ ಪ್ರವಾಸ ಅಥವಾ ದೂರ ಪ್ರವಾಸದ ಸಾಧ್ಯತೆ ಇರುವುದು. ಬಂಧುಗಳ ಹಾಗೂ ಹಿತೈಷಿಗಳ ಭೇಟಿಯ ಸಾಧ್ಯತೆ ಇದೆ. ಮಹತ್ತರ ಕಾರ್ಯಕ್ಕೆ ಸಾಕ್ಷಿಯಾಗುವಿರಿ. ತಾಯಿಯ ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ. ಪತಿ-ಪತ್ನಿಯರಲ್ಲಿ ಹೊಂದಾಣಿಕೆ, ಅನವಶ್ಯಕ ಖರ್ಚುಗಳು, ಮಿತ್ರರೇ ಶತ್ರುಗಳಾಗುವರು, ರಾಘವೇಂದ್ರ ಅಷ್ಟೋತ್ತರ ಪಠಿಸಿ.

ತುಲಾ:

ಕೆಲಸದ ಸ್ಥಳದಲ್ಲಿ ನಿಮ್ಮ ಹೆಗಲಿಗೆ ಹೊಸದೇ ರೀತಿಯ ಜವಾಬ್ದಾರಿಗಳು ಏರಲಿವೆ. ಅಂತೆಯೇ ಸಾಕಷ್ಟು ಒತ್ತಡವೂ ಉಂಟಾಗುವ ಸಾಧ್ಯತೆ ಇದೆ. ಗೆಳೆಯರ ಜೊತೆ ವಾದ-ವಿವಾದ ಬೇಡ. ಮಗನ ಬೇಡಿಕೆಯನ್ನು ಪೂರೈಸುವಲ್ಲಿ ಸಂತಸ ಕಾಣುವಿರಿ.

ವೃಶ್ಚಿಕ :-

ಸ್ತ್ರೀ ಮೂಲಕ ಧನ ಪ್ರಾಪ್ತಿ, ಸಾಧುಗಳು ರಾಜಕೀಯ ಪ್ರವೇಶ. ನಿಮ್ಮ ಪ್ರೇಮಿಗೆ ಇಷ್ಟವಿಲ್ಲದ ಉಡುಪುಗಳು ಅವರಿಗೆ ಮುಜುಗರ ಉಂಟುಮಾಡಬಹುದಾದ್ದರಿಂದ ಅವುಗಳನ್ನು ಧರಿಸಬೇಡಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಲು ಕನಕಧಾರಾ ಸ್ತೋತ್ರವನ್ನು ಪಠಿಸುವುದು ಒಳ್ಳೆಯದು.ವ್ಯರ್ಥವಾದ ಪ್ರಯತ್ನಗಳಿದ ಕಂಗೆಟ್ಟಿರುವ ನೀವು ಬೆಟ್ಟಿಂಗ್‌, ಜೂಜು ಇತ್ಯಾದಿಗಳಲ್ಲಿ ಹಣ ಹೂಡುವುದು ತರವಲ್ಲ. ಈ ದಿನ ಹಣವನ್ನು ಆದಷ್ಟು ಕಡಿಮೆ ಖರ್ಚು ಮಾಡುವುದು ಒಳ್ಳೆಯದು.

ಧನಸ್ಸು:

ದುಡುಕಿನ ನಿರ್ಧಾರ, ವ್ಯವಹಾರದಲ್ಲಿ ಜಾಗ್ರತೆ ಇರಲಿ, ನಿಮ್ಮ ಪ್ರೇಮಿಯ ಅನಗತ್ಯ ಬೇಡಿಕೆಗಳಿಗೆ ಮಣಿಯಬೇಡಿ. ಕೆಲಸದಲ್ಲಿ ಎಲ್ಲವೂ ಚೆನ್ನಾಗಿರುವಂತೆ ತೋರುತ್ತದೆ. ನಿಮ್ಮ ಮನಸ್ಥಿತಿ ದಿನವಿಡೀ ಚೆನ್ನಾಗಿರುತ್ತದೆ. ಹತಾಶೆಯ ಭಾವನೆ ನಿಮ್ಮನ್ನುಅವರಿಸಲು ಬಿಡಬೇಡಿ.ಮನರಂಜನೆ ಅಥವಾ ಹೊರನೋಟದ ಸುಧಾರಣೆಗಾಗಿ ಹೆಚ್ಚು ಖರ್ಚು ಮಾಡಬೇಡಿ. ಎಲ್ಲಾ ಕೆಲಸ ಸುಲಲಿತವಾಗುತ್ತಿದೆ ಎಂದುಕೊಳ್ಳುತ್ತಿರುವಾಗಲೇ ವಿಪರೀತ ಉದರಶೂಲೆ ಕಾಡುವುದರಿಂದ ಕಚೇರಿಗೆ ಹೋಗಿ ಕೆಲಸ ಮಾಡುವುದೇ ದುಸ್ತರವಾಗುವ ಸಾಧ್ಯತೆ ಇದೆ. ವಿಶ್ರಾಂತಿ ಪಡೆಯಿರಿ.

ಮಕರ :-

ಬೆಲೆ ಬಾಳುವ ವಸ್ತು ಖರೀದಿ, ಪ್ರಯಾಣ, ಪುಸ್ತಕ ವ್ಯಾಪಾರಿಗಳಿಗೆ ಶುಭ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಮತ್ತು ಕೇವಲ ಅಗತ್ಯವಾದ ವಸ್ತುಗಳ ಮಾತ್ರ ಇಂದು ಖರೀದಿಸಲು ಪ್ರಯತ್ನಿಸಿ.ತುರ್ತು ಕಾರ್ಯ ನಿರ್ವಹಣೆಗಾಗಿ ಸಾಲ ಮಾಡಬೇಕಾಗುವುದು. ಬಂಧುಗಳು ಸಹ ನಿಮ್ಮ ಈ ಪರಿಸ್ಥಿತಿಯಲ್ಲಿ ಸಹಾಯ ಮಾಡಲು ಹಿಂದೇಟು ಹಾಕುವರು. ಇಂದು ನೀವು ನಿಮ್ಮ ಕನಸಿನ ಹುಡುಗಿಯನ್ನು ಭೇಟಿಯಾಗುತ್ತಿದ್ದ ಹಾಗೆ ನಿಮ್ಮ ಕಣ್ಣುಗಳು ಬೆಳಗುತ್ತವೆ ಹಾಗೂ ನಿಮ್ಮ ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ.

ಕುಂಭ:-

ಕಳೆದು ಹೋಗಿದ್ದ ಅಥವಾ ನಿಮಗೆ ಬರಬೇಕಾದ ಹಣವು ಬರುವ ಸೂಚನೆಯಿಂದು ನಿಮಗೆ ತಲುಪುವುದು. ಔಷಧಿ ವ್ಯಾಪಾರಿಗಳಿಗೆ ಲಾಭ, ಅನ್ನದಾನ ಮಾಡಿ. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಕ್ಕೆ ತೆರೆ ಬೀಳಲಿದೆ. ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಒದಗಿಬರುವುದು. ನಿಮ್ಮನ್ನು ಟೀಕಿಸುವವರು ಸಹ ನಿಮ್ಮ ಮುಂದೆ ಮಾತನಾಡಲು ಅಸಮರ್ಥರಾಗುವರು. ನಿಮ್ಮ ತಪ್ಪನ್ನು ಕ್ಷ ಮಿಸಿ ನಿಮಗೆ ಗೌರವವನ್ನು ಕೊಡುವರು.

ಮೀನ:-

ಸರ್ಕಾರಿ ಅಥವಾ ಅರೇ ಸರ್ಕಾರಿ ನೌಕರರಿಗೆ ಉತ್ತಮ ದಿನ. ಪ್ರತಿಭೆಗೆ ತಕ್ಕ ಪುಸ್ಕಾರ ಸಿಗಲಿದೆ. ವ್ಯಾಪಾರದಲ್ಲಿ ಏರಿಳಿತ ಆಗಲಿದೆ. ಹೊಸ ಹೂಡಿಕೆಗಳನ್ನು ಮಾಡುವಾಗ ಸ್ವತಂತ್ರರಾಗಿರಿ ಮತ್ತು ನಿಮ್ಮ ಸ್ವಂತ ನಿರ್ಧಾರಗಳನ್ನು ಕೈಗೊಳ್ಳಿ. ಅರಳಿ ವೃಕ್ಷ ಪ್ರದಕ್ಷಿಣೆ  ಮಾಡಿ.ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ಆಂಜನೇಯ ಸ್ತೋತ್ರ ಪಠಿಸಿ. ವಿಷ್ಣು ದೇವಾಲಯಕ್ಕೆ ತುಳಸಿ ಮಾಲೆ ನೀಡಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಈರುಳ್ಳಿಯಲ್ಲಿದೆ ಕೂದಲು ದಷ್ಟಪುಷ್ಟವಾಗಿ ಬೆಳೆಯಲು ರಾಮಬಾಣ…! ತಿಳಿಯಲು ಈ ಲೇಖನ ಓದಿ….

    ಈರುಳ್ಳಿ ಆರೋಗ್ಯಕ್ಕೆ ಮಾತ್ರ ವಲ್ಲದೆ ಕೂದಲಿಗೂ ತುಂಬಾ ಉಪಯೋಗಕಾರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕೂದಲಿನ ಆರೈಕೆಯಲ್ಲಿ ಈರುಳ್ಳಿ ಬಳಸು ಕೂದಲು ಸೊಂಪಾಗಿ ಬೆಳೆಯಬೇಕೇ? ಈರುಳ್ಳಿ ರಸ ಹಚ್ಚಿವುದು ಹೇಗೆ ಎಂದು ಹೆಚ್ಚಿನವರಿಗೆ ಅಚ್ಚರಿಯಾಗಬಹುದು.

  • ಸುದ್ದಿ

    ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ರಾನು: ವಿಡಿಯೋ..!

    ಇಂಟರ್‌ನೆಟ್ ಸ್ಟಾರ್ ರಾನು ಮೊಂಡಲ್ ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ರಾನು ಮೊಂಡಲ್ ಅವರು ಮಾರ್ಕೆಟ್‌ಗೆ ಹೋಗಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ರಾನು ಅವರನ್ನು ನೋಡಿ ಖುಷಿಯಾಗುತ್ತಾರೆ. ಅಲ್ಲದೆ ಅವರ ಕೈ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಅಭಿಮಾನಿಯ ವರ್ತನೆ ನೋಡಿ ರಾನು ಅವರ ಮೇಲೆ ರೇಗಾಡುತ್ತಾರೆ. ಅಭಿಮಾನಿ ಕೈ ಹಿಡಿದು ಎಳೆಯುತ್ತಿದ್ದಂತೆ ರೊಚ್ಚಿಗೆದ್ದ ರಾನು, ನನ್ನ ಕೈಯನ್ನು ಏಕೆ ಹೀಗೆ…

  • ಉಪಯುಕ್ತ ಮಾಹಿತಿ

    ‘ನೋಕಿಯಾ ಸ್ಮಾರ್ಟ್‌ಫೋನ್’ ಈಗ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಶುರು ಮಾಡಿವೆ..! ತಿಳಿಯಲು ಈ ಲೇಖನ ಓದಿ ..

    ನೋಕಿಯಾ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಶುರು ಮಾಡಿವೆ. ಈಗಾಗಲೇ ನೋಕಿಯಾ ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಅಮೆಜಾನ್ ಆನ್‌ಲೈನ್‌ ಶಾಪಿಂಗ್ ತಾಣ ಸೇರಿದಂದೆ ಆಫ್‌ಲೈನ್‌ ಮಾರುಕಟ್ಟೆಯಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಲಭ್ಯವಿದೆ.

  • ಸಿನಿಮಾ

    ಉಪ್ಪಿ ರಾಜಕೀಯ ಎಂಟ್ರಿ?ಯಾವ ರಾಜಕೀಯ ಪಕ್ಷ ಸೇರ್ತಾರೆ ಗೊತ್ತಾ?ಮುಂದೆ ಓದಿ…

    ದೇಶದ ರಾಜಕಾರಣದಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್‍ಗಳಾದ ರಜನಿಕಾಂತ್ ಹಾಗೂ ಕಮಲಹಾಸನ್ ಅವರು ರಾಜಕೀಯಕ್ಕೆ ಬರುತ್ತಿರುವ ಬೆನ್ನಲ್ಲೇ ನಮ್ಮ ನಾಡಿನ ರಿಯಲ್‍ಸ್ಟಾರ್ ಉಪೇಂದ್ರ ಸಹ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

  • ಸುದ್ದಿ

    ಎಚ್ಚರಿಕೆ ಕಾವೇರಿ ನೀರು ಬಿಟ್ಟರೆ ಜನ ದಂಗೆ ಏಳ್ತಾರೆ: ಮಾದೇಗೌಡ ……!

    ತಮಿಳುನಾಡಿಗೆ ನೀರು ಬಿಡುವಂತೆ ಕೇಂದ್ರ ಜಲ ಆಯೋಗ ಆದೇಶಿಸಿರುವ ಬೆನ್ನಲ್ಲೇ, ಮಂಡ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಆದೇಶ ಹೊರಬೀಳುತ್ತಿದ್ದಂತೆಯೇ ಜಿಲ್ಲೆಯ ವಿವಿಧೆಡೆ ರೈತರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ರೈತಸಂಘ, ಕನ್ನಡಸೇನೆ ಕಾರ್ಯಕರ್ತರು ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ನಾಲೆಗಳಿಗೆ ನೀರು ಬಿಡದೆ ಬೆಳೆದ ಬೆಳೆಗಳು ಒಣಗುತ್ತಿವೆ. ಬೆಂಗಳೂರಿಗೆ ಕುಡಿಯುವ ನೀರು ಹರಿಸಲು ಸಹ ಇರುವ ಸಂಗ್ರಹದಲ್ಲಿರುವ ನೀರು ಸಾಲುವುದಿಲ್ಲ. ಪರಿಸ್ಥಿತಿ…

  • ಸುದ್ದಿ

    ಕಾಡಂದಿಯ ಹೊಟ್ಟೆಯಲ್ಲಿ ಸಿಕ್ಕ ಈ ವಸ್ತುವಿನಿಂದ ಕೋಟ್ಯಾಧಿಪತಿ ಆದ ರೈತ, ಅದು ಹೇಗೆ?

    ಸಾಮಾನ್ಯವಾಗಿ ರೈತರು ಮನೆಯಲ್ಲೇ ರಾಗಿ, ಭತ್ತ ಹಾಗೆ ಇತರೆ ತರಕಾರಿಗಳನ್ನ ಬೆಳೆಯುತ್ತಾರೆ ಮತ್ತು ಮನೆಗಳಲ್ಲಿ ಕುರಿ ಮತ್ತು ಕೋಳಿಗಳನ್ನ ಸಾಕಿ ಜೀವನವನ್ನ ಮಾಡುತ್ತಾರೆ ಹಾಗೆ ಊರಿನ ಹಬ್ಬದ ಇದೆ ಕೋಳಿ ಮತ್ತು ಕುರಿಯನ್ನ ಕಡಿದು ಅಡುಗೆಯನ್ನ ಮಾಡಿ ಊಟ ಮಾಡುತ್ತಾರೆ. ಇನ್ನು ಚೀನಾ ದೇಶದಲ್ಲಿ ರೈತರು ಊರು ಹಬ್ಬದ ದಿನ ಬೇಟೆಯಾಡಿ ತಂದ ಮಾಂಸವನ್ನ ಅಡುಗೆ ಮಾಡಿ ಊರಿಗೆಲ್ಲ ಬಡಿಸುತ್ತಾರೆ, ಇನ್ನು ಇದೆ ರೀತಿಯಾಗಿ ಉಹಾನ್ ಅನ್ನುವ ರೈತ ಬೇಟೆಗಾಗಿ ಕಾಡಿಗೆ ಹೋಗಿ ಕಾಡಿನಲ್ಲಿ ಹಂದಿಯನ್ನ ಬೇಟೆಯಾಡಿ…