ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮರಣಾ ನಂತರದ ದೇಹದ ವಿಸರ್ಜನ ಕ್ರಿಯೆಗೆ ಅಂತ್ಯೇಷ್ಟಿ ಅಥವಾ ಅಂತಿಮ ಸಂಸ್ಕಾರ ಎಂದು ಕರೆಯಲಾಗುತ್ತದೆ.ನಮ್ಮ ಭಾರತ ದೇಶದಲ್ಲಿ ಅಂತ್ಯಸಂಸ್ಕಾರವು ಧರ್ಮದಿಂದ ಧರ್ಮಕ್ಕೆ ವಿಭಿನ್ನವಾಗಿರುತ್ತದೆ.
ಆದರೆ ನಮ್ಮ ಪಕ್ಕದ ದೇಶವಾದ ಟಿಬೇಟಿನಲ್ಲಿ ವಿಚಿತ್ರ ರೀತಿಯ ಶವ ಸಂಸ್ಕಾರ ಮಾಡುತ್ತಾರೆ. ಸಾಮಾನ್ಯರು ಸತ್ತಾಗ ಹಳೆಯ ಟೈರು ಮತ್ತಿತರ ಉರಿಯುವ ವಸ್ತುಗಳನ್ನು ಉಪಯೋಗಿಸಿ ಶವದಹನ ಮಾಡುವ ಪದ್ಧತಿ ಇದು. ಎರಡನೆಯದು ಹೊಂಡ ತೆಗೆದು ಹೂಳುತ್ತಾರೆ.ಮೂರನೆಯದು ಸತ್ತ ಮೂರೂ ದಿನಗಳ ನಂತರ ಹೆಣವನ್ನು ಬಟ್ಟೆಯಲ್ಲಿ ಸುತ್ತಿ ನೀರಿನಲ್ಲಿ ಹಾಕುತ್ತಾರೆ.
ನಾಲ್ಕನೆಯ ಶವ ಸಂಸ್ಕಾರ ಮಾಡುವ ರೀತಿ ಕೇಳಿದ್ರೆ ನಿಮ್ಮ ಮೈ ಮನ ಜುಮ್ ಎನ್ನಿಸದೇ ಇರಲ್ಲ. ಈ ಭಯಂಕರ ಪದ್ಧತಿ ಏನು ಗೊತ್ತಾ?
ಈ ಪದ್ದತಿಯ ಪ್ರಕಾರ ಸತ್ತ ಹೆಣದ ದೇಹವನ್ನು ರಣಹದ್ದುಗಳಿಗೆ ಆಹಾರವಾಗಿ ಹಾಕುತ್ತಾರೆ. ಮನುಷ್ಯನಿಗೆ ದೇವರು ನೀಡಿದ ದೇಹ ಸತ್ತ ಮೇಲೂ ಪ್ರಾಣಿ ಪಕ್ಷಿಗಳ ಆಹಾರವಾದರೆ ಜನ್ಮ ಸಾರ್ಥಕವಾಗುತ್ತದೆಂದು ಇವರ ನಂಬಿಕೆ.
ಹೀಗೇಕೆ ಮಾಡುತ್ತಾರೆ ಗೊತ್ತಾ..? ಶಾಕ್ಯನೆಂಬ ಬೌದ್ಧ ಮುನಿ ಈ ವಿಧಾನವನ್ನು ಆರಂಭಿಸಿದನಂತೆ. ಆತ ತನ್ನ ದೇಹದ ಮಾಂಸವನ್ನು ಪಾರಿವಾಳಗಳಿಗೆ ಆಹಾರವಾಗಿ ನೀಡಿದನೆಂಬ ಕಥೆಯೇ ಇದಕ್ಕೆ ಪ್ರೇರಣೆಯಾಗಿದೆ.
ಈ ಶವ ಸಂಸ್ಕಾರದಲ್ಲೂ ಇದೆ ಹಲವು ನಿಯಮಗಳು!
ಇಂತಹ ಸಂಸ್ಕಾರವನ್ನು ಗರ್ಭಿಣಿಯರು, ಹದಿನೆಂಟಕ್ಕಿಂತ ಕಡಿಮೆ ವಯಸ್ಸಿನವರು, ವ್ಯಾಧಿ ಮತ್ತು ಅಪಘಾತದಿಂದ ಸತ್ತವರ ದೇಹಗಳಿಗೆ ಮಾಡುವುದಿಲ್ಲ. ಇಂತಹ ಶವ ಸಂಸ್ಕಾರಕ್ಕೆ ಯಾವುದೇ ಬಲವಂತವಿರುವುದಿಲ್ಲ. ಸಾಯುವುದಕ್ಕೂ ಮೊದಲು ಆ ವ್ಯಕ್ತಿ ಯಾವ ರೀತಿ ಶವ ಸಂಸ್ಕಾರ ಬೇಕು ಎಂದು ಹೇಳಿರುತ್ತಾನೋ ಅದೇ ರೀತಿ ಶವ ಸಂಸ್ಕಾರ ಮಾಡಲಾಗುತ್ತದೆ.
ಇಲ್ಲಿನ ಪದ್ಧತಿ ಪ್ರಕಾರ ಯಾವುದೇ ವ್ಯಕ್ತಿ ಸತ್ತಾಗ ಮೃತ ದೇಹವನ್ನು ಮೂರೂ ದಿನಗಳವರೆಗೆ ಹಾಗೆಯೇ ಇಡುತ್ತಾರೆ. ಕಾರಣ ಆತ್ಮವು ಮತ್ತೆ ಅವನ ದೇಹ ಪ್ರವೇಶಿಸಿ ಅವನು ಬದುಕಬಹುದೆಂಬ ನಂಬಿಕೆ ಅವರಲ್ಲಿದೆ. ನಂತರ ನಾಲ್ಕನೆಯ ದಿನ ಶವ ಸಂಸ್ಕಾರದ ವಿಧಿ ವಿಧಾನಗಳು ನೆರವೇರಿದ ಬಳಿಕ, ಶವದ ಮಂಡಿಗಳನ್ನು ಮತ್ತು ಕೈಗಳನ್ನು ಹಿಂಭಾಗಕ್ಕೆ ಜೋಡಿಸಿ ಕಟ್ಟಿ ಬಿಳಿ ಬಣ್ಣದ ಬಟ್ಟೆಯಲ್ಲಿ ಬಿಗಿದು ಹೆಗಲಿನಲ್ಲಿ ಹೊತ್ತು, ಮೃತನ ಮಕ್ಕಳು ಅಥವಾ ಬಂಧುಗಳು ಬೆಟ್ಟದಲ್ಲಿರುವ ಕಲ್ಲುಬಂಡೆಯ ಮೇಲೆ ಅದನ್ನು ಕೆಳಗಿಳಿಸಿದ ಬಳಿಕ ಹಿಂತಿರುಗಿ ನೋಡದೆ ಮರಳುತ್ತಾರೆ.
ನಂತರ ಲಾಮಾ ಗುರುಗಳು ಪ್ರಾರ್ಥನಾ ಚಕ್ರವನ್ನು ತಿರುಗಿಸುತ್ತ ಕೈಯಲ್ಲಿರುವ ಕಂಚಿನ ಗಂಟೆಯನ್ನು ಬಡಿಯಲಾರಂಭಿಸುತ್ತಾರೆ. ರಣಹದ್ದುಎಷ್ಟೇ ದೂರದಲ್ಲಿದ್ದರೂ ಈ ಗಂಟೆಯ ನಾದ ಕೇಳಿದ ಕೂಡಲೇ ಅಲ್ಲಿಗೆ ಧಾವಿಸಿ, ಶವದ ಸುತ್ತಲೂ ಹಾರಾಡಿ ಮೃತ ದೇಹವನ್ನು ತಿನ್ನುತ್ತವೆ.ಇವರ ಪ್ರಕಾರ ರಣ ಹದ್ದುಗಳು ತಿಂದ ವ್ಯಕ್ತಿಯ ಆತ್ಮ ನೇರವಾಗಿ ಸ್ವರ್ಗಕ್ಕೆ ಹೋಗುತ್ತದಂತೆ.ಅವರಿಗೆ ಮರು ಜನ್ಮವಿರುದಿಲ್ಲವಂತೆ.
ಕೆಲವೇ ನಿಮಿಷಗಳಲ್ಲಿ ಸಣ್ಣ ಸಣ್ಣ ಮೂಳೆಯ ಚೂರುಗಳು, ಕೂದಲು, ಚರ್ಮದ ಚಿಕ್ಕತುಂಡುಗಳ ಹೊರತು ಉಳಿದುದೆಲ್ಲವನ್ನೂ ಹದ್ದುಗಳು ತಿಂದು ಮುಗಿಸುತ್ತವೆ. ಬಳಿಕ ಅಸ್ಥಿಪಂಜರವನ್ನು ಸುತ್ತಿಗೆಯಿಂದ ಗುದ್ದಿ ಹುಡಿ ಮಾಡಿ ಹುರಿದ ಬಾರ್ಲಿಯ ಹಿಟ್ಟು, ಯಾಕ್ ಬೆಣ್ಣೆ, ಹಾಲು ಈ ಯಾವುದಾದರೊಂದನ್ನು ಬೆರೆಸಿ ಹದ್ದುಗಳಿಗೆಸೆದಾಗ ಅದನ್ನೂ ಖಾಲಿ ಮಾಡುತ್ತವೆ.
ಮಾಂಸ ಭಕ್ಷಣೆಯಿಂದ ಪವಿತ್ರ ಹದ್ದುಗಳಿಗೆ ಯಾವ ವ್ಯಾಧಿಯೂ ಬರದಿರಲಿ ಎಂದು ಇಂಥ ಮಿಶ್ರಣ ಮಾಡುವರಂತೆ. ಹದ್ದುಗಳು ಶವ ಭಕ್ಷಿಸದಿದ್ದರೆ ಅಪಶಕುನವೆಂದು ನಂಬುತ್ತಾರೆ. ಈ ಹದ್ದುಗಳು ಮಾನವ ಶವದ ಹೊರತು ಬೇರೆ ಯಾವ ಆಹಾರವನ್ನೂ ತಿನ್ನುವುದಿಲ್ಲವಂತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶಾಪಿಂಗ್ಗೆ ಅಂತ ಹೋದ್ರೆ ಹೆಣ್ಣುಮಕ್ಕಳು ಯಾವತ್ತೂ ಬೇಗನೆ ಅಂಗಡಿಯಿಂದ ಹೊರಬರಲ್ಲ ಅನ್ನೋದು ಸಾಮಾನ್ಯವಾಗಿ ಕೇಳಿಬರೋ ಮಾತು. ಆದ್ರೆ ಶಾಪಿಂಗ್ ಮಾಡೋದೂ ಒಂದು ಕಲೆ ಅನ್ನೋದು ನೆನಪಿರಲಿ. ಕಣ್ಣಿಗೆ ಚೆನ್ನಾಗಿ ಕಂಡಿದ್ದೆಲ್ಲಾ ಆರಿಸಿಕೊಂಡು ಬಿಲ್ ಮಾಡಿಸೋದು, ಅರ್ಜೆಂಟ್ನಲ್ಲಿ ಯಾವುದೋ ಒಂದು ಸೆಲೆಕ್ಟ್ ಮಾಡಿ ಖರೀದಿಸಿಬಿಡೋದು, ಇಂತಹ ತಪ್ಪುಗಳನ್ನ ಮಾಡಿದ್ರೆ ಕೊನೆಗೆ ಕೊಟ್ಟ ಹಣಕ್ಕೆ ತಕ್ಕ ಬಟ್ಟೆ ಖರೀದಿಸಲಿಲ್ಲವಲ್ಲ ಅಂತ ಪರಿತಪಿಸಬೇಕಾಗುತ್ತದೆ.
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿ BSNL (ಭಾರತ್ಸಂಚಾರ್ ನಿಗಮ್ ಲಿಮಿಟೆಡ್) ವಿಶಿಷ್ಟವಾದ ಯೋಜನೆಯೊಂದನ್ನು ಆರಂಭಿಸಿದೆ. ಇದು ಲ್ಯಾಂಡ್ ಲೈನ್ಹಾಗೂ ಬ್ರ್ಯಾಡ್ ಬ್ಯಾಂಡ್ ಬಳಕೆದಾರರಿಗೆ ಮಾತ್ರ ಅನ್ವಯ ಆಗುತ್ತದೆ. ಏನು ಈ ವಿಶಿಷ್ಟ ಯೋಜನೆ ಅಂತೀರಾ? 5 ನಿಮಿಷದ ವಾಯ್ಸ್ ಕಾಲ್ ಮಾಡಿದರೆ ಬಿಎಸ್ ಎನ್ ಲ್ ನಿಂದಲೇ 6 ಪೈಸೆ ನೀಡಲಾಗುತ್ತದೆ. ಹೌದು, ಸರಿಯಾಗಿಯೇ ಓದುತ್ತಾ ಇದ್ದೀರಾ. ಕರೆಮಾಡಿ, ಐದು ನಿಮಿಷ ಮಾತನಾಡಿದರೆ ಆರು ಪೈಸೆ ನೀಡುವ ಸ್ಕೀಂ ಇದು. ಭಾರತದಲ್ಲೇ ಇಂಥ ಯೋಜನೆ ಇದೇ ಮೊದಲ…
ಇಂದು ಗುರುವಾರ, 22/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಸಾಧನೆ ಅನ್ನೋದು ಸುಲಭದ ಮಾತಲ್ಲ. ‘ಆಗುವುದಿಲ್ಲ ಅನ್ನೋ ಮಾತನ್ನು ಬಿಟ್ಟು ಆಗುತ್ತೆ’ ಅನ್ನೋ ದಾರಿಯನ್ನು ಹುಡುಕಿದಾಗ ಮಾತ್ರ ಆ ಸಾಧನೆಯನ್ನು ಮಾಡಲು ಸಾಧ್ಯವಾಗುವುದು ಹಾಗು ಅದಕ್ಕೆ ಪ್ರತಿಫಲ ಸಿಗುವುದು.ಕಣ್ರೀ ನಾವು ನಿಮಗೆ ಹೇಳಲು ಹೊರಟಿರುವ ಕಥೆ ಎಲ್ಲರ ಕಣ್ಣು ಹುಬ್ಬೇರಿಸುವ ರೀತಿಯಲ್ಲಿರುವ ಕಥೆ ಇದು.
ಪ್ರಗತಿಪರ ಚಿಂತಕೆರೆನಿಸಿಕೊಂಡವರು ಐತಿಹಾಸಿಕ ಸ್ಥಳಗಳ ರಕ್ಷಣೆ, ಅವುಗಳ ನವೀಕರಣಕ್ಕಾಗಿ ಸರಕಾರಕ್ಕೆ ಪತ್ರ ಬರೆಯುವುದನ್ನು ನಾವು ನೋಡಿದ್ದೇವೆ. ಮಾನ ಮುಚ್ಚಲು ಬಾಹುಬಲಿ ಪತ್ರಿಮೆಗೆ ಬಟ್ಟೆ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರಕರ್ತರೊಬ್ಬರು ಪತ್ರದ ಮೂಲಕ ವಿಚಿತ್ರ ಮನವಿ ಸಲ್ಲಿಸಿದ್ದಾರೆ.
ಈ ತಲೆಮಾರಿನ ಮಕ್ಕಳಿಗೆ ಒಂದರ್ಥದಲ್ಲಿ ಅಪರೂಪದ ವಸ್ತುವೇ ಆಗಿರುವ ಒಂದು ರೂಪಾಯಿಯ ನೋಟು ಚಲಾವಣೆಗೆ ಬಂದು ಇಂದಿಗೆ(ನ.30, 1917) ಸರಿಯಾಗಿ ನೂರು ವರ್ಷ ಸಂದಿದೆ. ಕಿಂಗ್ ಐದನೇ ಜಾರ್ಜ್ ಚಿತ್ರದೊಂದಿಗೆ ಹೊರಬಂದ ಈ ನೋಟಿನ ವಿಶೇಷತೆ ಎಂದರೆ ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ಮುದ್ರಿಸುವುದಿಲ್ಲ. ಬದಲಾಗಿ ಭಾರತೀಯ ಸರ್ಕಾರ ಮುದ್ರಿಸುತ್ತದೆ.