ಸುದ್ದಿ

‘ಇಂಟರ್ ನ್ಯಾಷನಲ್ ರೆಲಿಜಿಯಸ್ ಫ್ರೀಡಂಅವಾರ್ಡ್’ ತನ್ನದಾಗಿಸಿಕೊಂಡ 83 ವರ್ಷದ ಅಬೂಬಕರ್ ಅಬ್ದುಲ್ಲಹಿ….!

55

ದಾಳಿಕೋರರಿಂದ ನೂರಾರು ಕ್ರೈಸ್ತರನ್ನು ರಕ್ಷಿಸಿದ ಮುಸ್ಲಿಂ ಧರ್ಮಗುರುವಿಗೆ ಅತ್ಯುನ್ನತ ಪ್ರಶಸ್ತಿ ನೀಡಿದ ಅಮೆರಿಕಾಲಾಗೊಸ್, ನೈಜೀರಿಯಾ, ಜು.19:  ಮಧ್ಯ ನೈಜೀರಿಯಾದಲ್ಲಿ ದಾಳಿಯೊಂದರ ಸಂದರ್ಭ ತನ್ನ ನಿವಾಸ ಹಾಗೂ ಮಸೀದಿಯಲ್ಲಿ 262 ಕ್ರೈಸ್ತರಿಗೆ ಆಶ್ರಯವೊದಗಿಸಿದ 83 ವರ್ಷದ ಮುಸ್ಲಿಂ ಧರ್ಮಗುರು ಇಮಾಮ್ ಅಬೂಬಕರ್ ಅಬ್ದುಲ್ಲಾಹಿ ಎಂಬವರನ್ನು  ಅಮೆರಿಕಾ ಸರಕಾರ ಗೌರವಿಸಿದೆ.

ಅಬ್ದುಲ್ಲಾಹಿ ಅವರ ಜತೆ ಸುಡಾನ್, ಇರಾಕ್, ಬ್ರೆಝಿಲ್ ಹಾಗೂ ಸೈಪ್ರಸ್ ದೇಶಗಳ ನಾಲ್ಕು ಮಂದಿ ಇತರ ಧಾರ್ಮಿಕ ನಾಯಕರಿಗೆ  2019ನೇ ವರ್ಷದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಪ್ರಶಸ್ತಿ (ಇಂಟರ್ ನ್ಯಾಷನಲ್ ರಿಲಿಜಿಯಸ್ ಫ್ರೀಡಂ ಅವಾರ್ಡ್) ನೀಡಿ ಗೌರವಿಸಲಾಗಿದೆ. ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

ಜೂನ್ 23, 2018ರಂದು ಬರ್ಕಿನ್ ಲಡಿ ಪ್ರದೇಶದಲ್ಲಿ 10 ಗ್ರಾಮಗಳ ಕ್ರೈಸ್ತ ಕೃಷಿಕರ ಮೇಲೆ ದನಕಾಯುವ ಮುಸ್ಲಿಮರು ನಡೆಸಿದ ಸಂಘಟಿತ ದಾಳಿಗಳಿಂದ ತಪ್ಪಿಸಿಕೊಂಡು  ಓಡಿದ ನೂರಾರು ಕ್ರೈಸ್ತರಿಗೆ ಅಬ್ದುಲ್ಲಾಹಿ ಆಶ್ರಯ ನೀಡಿದ್ದರು.“ಈ ಕ್ರೈಸ್ತ ಮಂದಿ ಎಲ್ಲಿದ್ದಾರೆಂದು ದಾಳಿಕೋರರು ಅವರನ್ನು ಕೇಳಿದರೂ ಯಾವುದೇ ಮಾಹಿತಿಯನ್ನು ಅಬ್ದುಲ್ಲಾಹಿ ಹೊರಗೆಡಹಿರಲಿಲ್ಲ, ಅವರು ಧೈರ್ಯ, ಸಹೋದರತೆಯ ಭಾವ ಹಾಗೂ ನಿಸ್ವಾರ್ಥತೆಯಿಂದ ಈ ಸಹಾಯ ಮಾಡಿದ್ದರು.

ಎಂದು ಬುಧವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಧಾರ್ಮಿಕ ಸ್ವಾತಂತ್ರ್ಯ ರಾಯಭಾರಿ ಸ್ಯಾಮ್ ಬ್ರೌನ್ ಬ್ಯಾಕ್ ಹೇಳಿದರು.ಕಳೆದ ವರ್ಷ ನಡೆದ ಈ ದಾಳಿಯಲ್ಲಿ 80ಕ್ಕೂ ಅಧಿಕ ಮಂದಿ ಬಲಿಯಾಗಿದ್ದರಲ್ಲದೆ, ದಾಳಿಕೋರರು ಹಲವಾರು ಮನೆಗಳಿಗೆ ಬೆಂಕಿ ಕೂಡ ಹಚ್ಚಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಬಾಂಬ್ ಬ್ಲಾಸ್ಟ್‌ನಲ್ಲಿ ಎರಡೂ ಕೈಗಳನ್ನು ಕಳೆದುಕೊಂಡರೂ ಈಕೆ ಪಿಎಚ್‍ಡಿ ಮಾಡಿದ್ದಾರೆ..!ತಿಳಿಯಲು ಇದನ್ನು ಓದಿ..

    ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಮುಂದೆ ಸಾಗಬೇಕೆ ಹೊರತು ಹಿಂದಡಿ ಇಡಬಾರದು. ಅಂಗವೈಕಲ್ಯ ಇದೆ ಎಂದು ನೋವನುಭವಿಸಬಾರುದು. ಅದನ್ನು ಜಯಿಸಬೇಕು. ಯಶಸ್ಸಿನಿಂದ ಮುಂದೆ ಸಾಗಬೇಕು. ಮಾಳವಿಕಾ ಅಯ್ಯರ್‌ ಯುವತಿ ತನ್ನ 13ನೇ ವರ್ಷ ಬಾಂಬ್ ಬ್ಲಾಸ್ಟ್‌ನಲ್ಲಿ ಎರಡೂ ಕೈಗಳನ್ನು ಕಳೆದುಕೊಂಡರೂ ಈಗ ಪಿಎಚ್‍ಡಿ ಮಾಡಿದ್ದಾರೆ. ತನ್ನಂತಹ ಅದೆಷ್ಟೋ ಮಂದಿಗೆ ಪ್ರೇರಣೆಯಾಗಿದ್ದಾರೆ. ಆಕೆ ಬಿಕನೀರ್ ಮೂಲದವರು. ಮಾಳವಿಕಾ ಅಯ್ಯರ್‌ದು ತಮಿಳುನಾಡಿನ ಕುಂಭಕೋಣ ಪ್ರದೇಶ. ಅಲ್ಲೇ ಬೆಳದಳು. ಆದರೆ ತಂದೆಗೆ ಬಿಕನೀರ್‌ಗೆ ಟ್ರಾನ್ಸ್‌ಫರ್ ಆಯಿತು. ಆತ ವಾಟರ್ ವರ್ಕ್ಸ್ ಇಲಾಖೆಯಲ್ಲಿ…

  • ಸೌಂದರ್ಯ

    ನಿಮ್ಮ ಸುಂದರ ಕೂದಲಿಗಾಗಿ ಇಲ್ಲಿದೆ ಸುಲಭೋಪಾಯಗಳು….

    ದಟ್ಟವಾದ ರೇಷಿಮೆಯಂತಹ ಕೂದಲು ನೋಡಿದರೆ ಕಣ್ಮನ ಸೆಳೆಯುತ್ತದೆ. ಸುಂದರ ಕೇಶ ಯಾವ ಮೇಕಪ್ ಮತ್ತು ಆಭರಣಗಳು ನೀಡದಂತಹ ಮೆರುಗನ್ನು ನೀಡುತ್ತದೆ. ನಿದಾನವಾಗಿ ತಲೆಬಾಚಲು ಸಹ ಸಮಯ ಸಿಗದ ಇಂದಿನ ದಿನಗಳಲ್ಲಿ ಕೇಶಕ್ಕಾಗಿ ಆರೈಕೆ ತುಸು ಕಷ್ಟವೇ.

  • ಉಪಯುಕ್ತ ಮಾಹಿತಿ

    ಸುಟ್ಟ ಗಾಯ ಮತ್ತು ಕಲೆಗಳನ್ನು ಹೋಗಲಾಡಿಸಲು ಇಲ್ಲಿದೆ ಮನೆ ಮದ್ದು…ಮಾಹಿತಿಗೆ ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ಸುಟ್ಟಗಾಯಗಳೇ ಇಷ್ಟು, ಗಾಯ  ವಾಸಿಯಾದರೂ ಕಲೆ ಹೋಗುವುದಿಲ್ಲ.. ಕಲೆಗಳಿಂದಾಗಿ ಚರ್ಮದ ಕಾಂತಿ ಕುಗ್ಗಿದಂತಾಗುತ್ತದೆ. ಈ ಕಲೆಗಳಿಂದಾಗಿ ನಮ್ಮ ಸೌಂದರ್ಯವೇ ಹಾಳಾಗುತ್ತದೆ. ಇಂತಹ ಮಾಸದ ಕಲೆಗಳನ್ನ ಸುಲಭವಾಗಿ ನಿವಾರಿಸಬಹುದು. ಸುಟ್ಟ ಕಲೆಗಳನ್ನ ಹೋಗಲಾಡಿಸಲು ಇಲ್ಲಿವೆ ಸಿಂಪಲ್ ಮನೆ ಮದ್ದುಗಳು. * ಲೋಳೆರಸ ಇದು ಎಲ್ಲಾ ರೀತಿಯ ಚರ್ಮ ರೋಗಗಳಿಗೂ ಪರಿಹಾರ ನೀಡುತ್ತೆ ಎಂದರೆ ತಪ್ಪಾಗಲಾರದು. ಆದ್ದರಿಂದ ಸುಟ್ಟ ಗಾಯದ ಮೇಲೆ ಲೋಳೆರಸ ಲೇಪಿಸುವುದರಿಂದ ಉರಿ ಕಡಿಮೆಗೊಳಿಸಿ. ಕಲೆಯು ಉಳಿಯದಂತೆ ಮಾಡುತ್ತದೆ. * ಪುದೀನಾ ಎಲೆಯನ್ನು ರುಬ್ಬಿ ತೆಳುವಾದ ಹತ್ತಿ…

  • ಜೀವನಶೈಲಿ

    ದಯವಿಟ್ಟು ಹೀಗೆ ಹಲ್ಲುಜ್ಜುವುದು ಬೇಡವೇ ಬೇಡ ??? ಏಕೇ ಗೊತ್ತಾ? ಮುಂದೆ ಓದಿ…..

    ಬಾಯಿ ನಮ್ಮ ದೇಹಾರೋಗ್ಯದ ಕನ್ನಡಿ ಎನ್ನುತ್ತಾರೆ,ಆದರೆ ಕೆಲವರು ಹಲ್ಲುಜ್ಜುವಾಗ ಸ್ನೇಹಿತರ ಜೊತೆ ಮಾತನಾಡಿಕೊಂಡೋ, ಟಿವಿ ನೋಡಿಕೊಂಡೋ, ಮತ್ತೆನ್ನಿನೋ ಮಾಡಿಕೊಂಡೋ ಗಂಟೆಗಟ್ಟಲೆ ಹಲ್ಲು ಉಜ್ಜುತ್ತಾರೆ….

  • ಆರೋಗ್ಯ, ಉಪಯುಕ್ತ ಮಾಹಿತಿ

    ಬೆಳಗಿನ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ತಿಂದರೆ ಏನಾಗುತ್ತೆ ಗೊತ್ತಾ..?

    ನೀವು ಪ್ರತಿದಿನ ಸೇವಿಸುವ ಆಹಾರದಲ್ಲಿ ಬೆಳಗ್ಗೆ ತಿಂಡಿ ಅತ್ಯಂತ ಮುಖ್ಯವಾದದ್ದು. ಮುಂಜಾನೆಯ ಉಪಾಹಾರ ಅತ್ಯಂತ ಪ್ರಮುಖವಾಗಿದ್ದು ಉಪಾಹಾರವನ್ನು ಯಾವುದೇ ಕಾರಣಕ್ಕೂ ಬಿಡಕೂಡದು. ಭರಪೂರ ಪೋಷಕಾಂಶಗಳಿಂದ ಕೂಡಿರೋ ತಿನಿಸನ್ನೇ ಬೆಳಗ್ಗೆ ತಿಂದರೆ ಸೂಕ್ತ. ಹಾಗಾಗಿ ಎಲ್ಲರೂ ಬ್ರೇಕ್ ಫಾಸ್ಟ್ ಗೆ ಬಾಳೆಹಣ್ಣನ್ನು ತಿನ್ನಲು ಇಷ್ಟಪಡ್ತಾರೆ.ಹೆಚ್ಚಿನವರು ಬೇನಗೇ ಉದ್ಯೋಗಸ್ಥಳಕ್ಕೆ ತಲುಪುವ ಧಾವಂತದ ಕಾರಣ ಉಪಾಹಾರವನ್ನೇ ತ್ಯಜಿಸುತ್ತಾರೆ. ಇಲ್ಲದಿದ್ದರೆ ಒಂದು ಬಾಳೆಹಣ್ಣನ್ನೋ, ಸೇಬನ್ನೋ ತಿಂದು ಹೊರಟುಬಿಡುತ್ತಾರೆ. ಆದ್ರೆ ಹಸಿದ ಹೊಟ್ಟೆಯಲ್ಲಿ ಫೈಬರ್, ಪೊಟ್ಯಾಶಿಯಂ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.ಬಾಳೆಹಣ್ಣು ಅತ್ಯಂತ ಪೌಷ್ಟಿಕ…

  • ಸುದ್ದಿ

    ಈ ಮೀನಿನ ಮುಖ ನೋಡಿದರೆ ಅಚ್ಚರಿಯಾಗುವುದಂತೂ ಗ್ಯಾರಂಟಿ ಯಾಕೆ ಗೊತ್ತಾ?ನೀವೇ ನೋಡಿ ಫ್ರೆಂಡ್ಸ್…

    ಪ್ರಕೃತಿಯ ವೈಚಿತ್ರ್ಯಒಮ್ಮೊಮ್ಮೆ ಎಲ್ಲರನ್ನೂ ಬೆರಗಾಗಿಸುತ್ತದೆ. ಬರೀ ಕಲ್ಪನೆಯಲ್ಲಿ ಮಾತ್ರ ಇದ್ದಂತಹ ವಸ್ತುಗಳು, ಜೀವಿಗಳು ಇದ್ದಕ್ಕಿದ್ದಂತೆ ಧುತ್ತನೆ ನಮಗೆದುರಾಗುತ್ತವೆ. ಸದ್ಯ ಚೀನಾದಲ್ಲಿ ಆಗಿರುವುದು ಇದೇ. ಮತ್ಸ್ಯಕನ್ಯೆ ಎಂಬ ಕಲ್ಪನೆ ನಮ್ಮಲ್ಲಿದೆ. ಈ ಹೆಸರು ಹೇಳಿದ ತಕ್ಷಣ ನಮಗೆ ಅರ್ಧ ಮೀನಿನ ದೇಹ, ಅರ್ಧ ಸುಂದರಿಯ ದೇಹ ಕಣ್ಣೆದುರು ಸುಳಿಯುತ್ತದೆ. ನಿಜವಾಗಿಯೂ ಮತ್ಸ್ಯ ಕನ್ಯೆಯನ್ನು ಕಂಡವರಿಲ್ಲ. ಇವೆಲ್ಲ ಬರೀ ನಮ್ಮ ಕಲ್ಪನೆಯ ಪರಿಧಿಯಲ್ಲಿ ಇರುವ ಅಂಶಗಳು. ಆದರೆ,ಕೆಲವೊಮ್ಮೆ ನಮ್ಮ ಕಲ್ಪನೆಯಲ್ಲಿರುವ ವಸ್ತುಗಳೇ ಧುತ್ತನೆ ಪ್ರತ್ಯಕ್ಷವಾಗಿ ನಮ್ಮನ್ನೇ ಒಂದು ಕ್ಷಣ ಆಶ್ಚರ್ಯ…