ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವ್ಯಕ್ತಿ ತಾನು ದುರ್ಬಲನೆಂದು ಭಾವಿಸಬಾರದು. ಏಕೆಂದರೆ ದೌರ್ಬಲ್ಯವೇ ಪಾಪ, ದೌರ್ಬಲ್ಯವೇ ಮರಣ. ತನ್ನ ದೌರ್ಬಲ್ಯವನ್ನು ಗೆಲ್ಲುವುದರಿಂದ ಎಲ್ಲವನ್ನೂ ಸಾಧಿಸಬಹುದು. ತನ್ನ ಆತ್ಮವಿಶ್ವಾಸದಿಂದ ಎದ್ದು ನಿಲ್ಲಬೇಕು, ತನ್ನೊಳಗಿರುವ ದೈವಿಕತೆಯನ್ನು ಹೊರಚಿಮ್ಮಬೇಕು…” ಇಂಥ ಘೋಷಣೆಯೊಂದಿಗೆ ದೇಶದ ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ ಮಹಾನ್ ವ್ಯಕ್ತಿಗಳೇ ಸ್ವಾಮಿ ವಿವೇಕಾನಂದರು.
ಇಂದು ಜಗತ್ತು ಕಂಡ ಮಹಾನ್ ಕ್ರಾಂತಿಕಾರಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 156ನೇ ಜನ್ಮದಿನ.ಇದೇ ಹಿನ್ನೆಲೆಯಲ್ಲಿ ಜ.12ನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ.ಯುವ ಜನರ ಪಾಲಿಗಂತೂ ಪರಮಾದರ್ಶವಾದ ಈ ಧೀಮಂತ ಮೂರ್ತಿಯ ಜನ್ಮದಿನವನ್ನು ಆಚರಿಸುವುದು ‘ಯುವ ದಿನ’ ಎಂದೇ.

ವಿವೇಕಾನಂದ ಹೆಸರೇ ಅದ್ಭುತ! ಬಹುಷ: ಸ್ವಾಮಿ ವಿವೇಕಾನಂದರ ಹೆಸರು ಮಾಡಿರುವಷ್ಟು ಪರಿಣಾಮವನ್ನು ಬೇರೆ ಯಾವುದೇ ಹೆಸರು ಮಾಡಿರಲು ಸಾಧ್ಯವಿಲ್ಲ! ದೇಶದ ಹಿತಕ್ಕಾಗಿ, ದೇಶದ ಕೀರ್ತಿಯನ್ನು ಸನಾತನ ಧರ್ಮವಾದ ಹಿಂದೂ ಧರ್ಮದ ಮಹತ್ವನ್ನು ವಿದೇಶಿ ರಾಷ್ಟ್ರಗಳಿಗೆ ತಿಳಿಸಲು ತಮ್ಮ ಜೀವನವನ್ನೇ ಮುಡಿಪಿಟ್ಟ ವಿವೇಕಾನಂದರು.
ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು 1863 ಜನವರಿ 12ರಂದು ಕಲ್ಕತ್ತೆಯಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ‘ವಿವೇಕಾನಂದ’ ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು.

ಅಮೇರಿಕಾದ ಚಿಕಾಗೋದಲ್ಲಿ ನಡೆದ ‘ಸರ್ವ ಧರ್ಮ ಸಮ್ಮೇಳನ’ದಲ್ಲಿ ಮಾತನಾಡಿ, ‘ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಮೌಲ್ಯ’ದ ಪರಿಚಯ ಮಾಡಿಕೊಟ್ಟ ವಿವೇಕಾನಂದರ ಭಾಷಣ ವಿಶ್ವ ವಿಖ್ಯಾತವಾಗಿದೆ. ‘ಅಮೇರಿಕಾದ ಸಹೋದರ ಸಹೋದರಿಯರೇ’ ಎಂಬ ಸಂಬೋಧನೆಯೊಂದಿಗೆ ಪ್ರಾರಂಭವಾದ ವಿವೇಕಾನಂದ ಭಾಷಣ ಅಲ್ಲಿನ ವಿಜ್ಞಾನಿಗಳು, ಪಂಡಿತರು, ಅಲ್ಲಿ ನೆರೆದಿದ್ದ ಅನ್ಯ ಧರ್ಮೀಯರೆಲ್ಲರೂ ತಲೆದೂಗುವಂತೆ ಮಾಡಿಬಿಟ್ಟರು.
ಆ ದಿನ ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವಧರ್ಮ ಸಮ್ಮೇಳನದ ವೇದಿಕೆ ಮೆಲೆ ನಿಂತು, ಕೇವಲ ಮೂರೂವರೆ ನಿಮಿಷಗಳಲ್ಲಿ ಇಡೀ ಅಮೆರಿಕಾ ದೇಶವನ್ನೇ ಇವರ ತುಪಾಕಿಯಂತ ಮಾತಿನ ಮೋಡಿಗೆ ತಲೆ ಬಾಗುವಂತೆ ಮಾಡಿದ್ರು.ಪಾಶ್ಚಾತ್ಯರಿಂದ ‘ವಿಚಿತ್ರ ಧರ್ಮ’ ಎಂದು ಕರೆಯಿಸಿಕೊಂಡಿದ್ದ ಹಿಂದೂ ಧರ್ಮದ ನಿಜವಾದ ಅರ್ಥವನ್ನು,ಸಿದ್ಧಾಂತಗಳನ್ನು ಪಾಶ್ಚಾತ್ಯರಿಗೆ ಮನದಟ್ಟು ಮಾಡುವಲ್ಲಿ ಸ್ವಾಮಿ ವಿವೇಕಾನಂದ ಯಶಸ್ವಿಯಾದರು.



ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಗಜ ಚಂಡಮಾರುತದ ಪರಿಣಾಮ ನಗರದಲ್ಲಿ ಗುರುವಾರ ಮತ್ತು ಶುಕ್ರವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತದಿಂದ ಚಂಡಮಾರುತ ಎದ್ದಿದ್ದು ಮುಂದಿನ 24 ಗಂಟೆಗಳಲ್ಲಿ ಆಂಧ್ರಪ್ರದೇಶ, ತಮಿಳುನಾಡು ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.ಸ್ತುತ ತಮಿಳುನಾಡು ಕರಾವಳಿಯತ್ತ ಧಾವಿಸುತ್ತಿರುವ ಗಜ ಚಂಡಮಾರುತ ದಕ್ಷಿಣ ಆಂಧ್ರ ಪ್ರದೇಶ ಕರಾವಳಿಯಲ್ಲೂ ಭಾರಿ ಮಳೆ ಆತಂಕ ಸೃಷ್ಟಿ ಮಾಡಿದೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ…
ಈಗಾಗಲೇ ನಗರದಲ್ಲಿ ವಿದ್ಯುತ್ ತಗಲಿ ಮಕ್ಕಳು ಸೇರಿದಂತೆ ವಯಸ್ಕರು ಮೃತಪಟ್ಟಿದ್ದಾರೆ. ಇಂದು ಕೂಡ ವಿದ್ಯುತ್ ತಗಲಿ ಮತ್ತೊಬ್ಬ ಬಾಲಕ ಮೃತಪಟ್ಟಿದ್ದಾನೆ. ಬೆಂಗಳೂರಿನ ಜೆ.ಪಿ ನಗರದ ಜಂಬೂಸವಾರಿ ದಿಣ್ಣೆ ಬಳಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುನಿರಾಜು ಎಂಬವರ ಪುತ್ರ ಅಕ್ಷಯ್ (8) ಮೃತ ದುರ್ದೈವಿ. ಬಾಲಕ ಸೆಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಸ್ನೇಹಿತರ ಜೊತೆ ಆಟವಾಡುತ್ತಿದ್ದನು. ಈ ವೇಳೆ ಸ್ಟೇರ್ ಕೇಸ್ ಹತ್ತುವಾಗ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ…
ವಿದ್ಯುತ್ ಉತ್ಪಾದನೆಗೆ ಹಲವು ಆಯ್ಕೆಗಳಿವೆ. ನೀರು, ಗಾಳಿ, ಬೆಳಕು ಹೀಗೆ ವಿವಿಧ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ ವಿದ್ಯುತ್ ಗಳಿಸಲು ಜನರು ವಿವಿಧ ಆಯ್ಕೆಗಳನ್ನು ಸಂಶೋಧಿಸುತ್ತಿದ್ದಾರೆ.
ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಂದಿ ಮೂರ್ತಿಗೆ ಯಾರೋ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಇಂದು ಬೆಳಗ್ಗಿನ ಜಾವ ಪೂಜಾ ವಿಧಿ-ವಿಧಾನದ ಮಾಡುವಾಗ ಚಪ್ಪಲಿ ಹಾರ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಪೂಜೆ ಮಾಡಿದ ಬಳಿಕ ದೇವಸ್ಥಾನಕ್ಕೆ ಬಾಗಿಲು ಹಾಕಲಾಗಿತ್ತು. ಆದರೆ ಇಂದು ಬೆಳಗ್ಗೆ ಮತ್ತೆ ದೇವಾಲಯದ ಬಾಗಿಲು ತೆರೆದಾಗ ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿರುವುದು ಕಂಡು ಬಂದಿದೆ. ರಾತ್ರಿ ದೇವಸ್ಥಾನದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಿಡಿಗೇಡಿಗಳು ನಂದಿ ವಿಗ್ರಹಕ್ಕೆ ಚಪ್ಪಲಿ…
ಬಾಹುಬಲಿ -2’ ಬಂದಿದ್ದೇ ಬಂದಿದ್ದು ಟಾಲಿವುಡ್ ಸ್ಟಾರ್ ಪ್ರಭಾಸ್ ಮನೆ ಮಾತಾಗಿದ್ದಾರೆ. ಈ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸುದ್ದಿಯಾದ ವಿಷಯಗಳಲ್ಲಿ ಪ್ರಭಾಸ್ ಮದುವೆ ಸುದ್ದಿ ಕೂಡ ಪ್ರಮುಖವಾಗಿದೆ. ಟಾಲಿವುಡ್ ಇಂಡಸ್ಟ್ರಿಯ ಮೋಸ್ಟ್ ಬ್ಯಾಚುಲರ್ ಹೀರೋ ಅಂದ್ರೆ ಪ್ರಭಾಸ್. ಕೆಲವು ದಿನಗಳಿಂದ ಈ ನಟನ ಮದುವೆಯ ಬಗ್ಗೆ ಗಾಸಿಪ್ ಗಳು ಕೇಳಿ ಬರುತ್ತಿದೆ. ಆದರೆ ಈಗ ಟಾಲಿವುಡ್ ಅಂಗಳದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ನಿಹಾರಿಕಾ ಅವರೊಂದಿಗೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳತೊಡಗಿದೆ….
ಪ್ರಕೃತಿಯ ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಕೆಲುವೊಂದಕ್ಕೆ ಉತ್ತರ ಸಿಗಲ್ಲ. ಹೀಗೆ ಉತ್ತರ ಸಿಗದ ಅದೇಷ್ಟೋ ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ. ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ಒಬ್ಬ ಮಹಿಳೆ ಮಾರುಕಟ್ಟೆಗೆ ಹೋಗಿ ಕ್ಯಾಪ್ಸಿಕಂ ತಂದು ಅಡುಗೆ ಮಾಡುವಾಗ ಅದನ್ನು ಕಟ್ ಮಾಡುತ್ತಿದ್ದಾಗ ಕ್ಯಾಪ್ಸಿಕಂ ಒಳಗೆ ಇದದ್ದು ಏನು ಗೊತ್ತಾ..? ಇಡೀ ಪ್ರಪಂಚವನ್ನು ಚಿಂತಿಸುವಂತೆ ಮಾಡಿದ ಆ ಘಟನೆ ನಡೆದದ್ದು ಹೇಗೆ ಗೊತ್ತಾ..? ಕೆನಡಾಗೆ ಸೇರಿದ ನಿಕೋಲೆ ಎಂಬ ಮಹಿಳೆ ರಾತ್ರಿ ಅಡುಗೆ ಮಾಡುವ ಸಲುವಾಗಿ ಹತ್ತಿರದ…