ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಿಶ್ವ ಆಹಾರ ದಿನದ ಹಿನ್ನೆಲೆ ಆಹಾರ ವಿಷವಾಗಲು ಕಾರಣಗಳೇನು, ಅದಕ್ಕೆ ಚಿಕಿತ್ಸೆ ಹಾಗೂ ಪರಹಾರವೇನು ಎಂದು ಮುಂದೆ ಲೇಖನದಲ್ಲಿ ತಿಳಿಯೋಣ. ಆಹಾರಕ್ಕಾಗಿಯೇ ಮನುಷ್ಯ ದಿನವಿಡೀ ನಾನಾ ಸರ್ಕಸ್ ಮಾಡಿಕೊಂಡು ಜೀವನ ಸಾಗಿಸುತ್ತಾನೆ. ಆದರೆ ಮನುಷ್ಯ ಕೆಲವೊಮ್ಮೆ ತಿನ್ನುವಂತಹ ಆಹಾರವು ವಿಷವಾಗುವುದು ಇದೆ. ಇಂತಹ ಸಮಸ್ಯೆಯು ಹೆಚ್ಚಿನವರನ್ನು ಕಾಡುವುದು ಇದೆ. ಆಹಾರವು ವಿಷವಾಗುವ ಪರಿಣಾಮ ಹಲವಾರು ರೀತಿಯ ಅಡ್ಡಪರಿಣಾಮಗಳು ದೇಹದ ಮೇಲೆ ಆಗಬಹುದು. ಆಹಾರ ವಿಷವಾಗುವುದು ಹೇಗೆ, ಅದಕ್ಕೆ ಪರಿಹಾರವೇನು ಎಂದು ನಾವು ಈ ಲೇಖನದ ಮೂಲಕ ತಿಳಿಯುವ.

ಆಹಾರ ವಿಷವಾಗುವುದು ಎಂದರೇನು? ಆಹಾರಕ್ಕೆ ಸಂಬಂಧಿಸಿದ ಕೆಲವೊಂದು ಅನಾರೋಗ್ಯವನ್ನು ಆಹಾರ ವಿಷವಾಗುವುದು ಎಂದು ಕರೆಯಲಾಗುತ್ತದೆ. ಕಲುಷಿತ ಆಹಾರ, ಕೆಟ್ಟ ಆಹಾರ ಅಥವಾ ವಿಷವಾಗಿರುವಂತಹ ಆಹಾರ ಸೇವನೆಯೇ ಆಹಾರ ವಿಷವಾಗಲು ಕಾರಣವಾಗಿದೆ. ಆಹಾರ ವಿಷವಾಗುವ ಪ್ರಮುಖ ಲಕ್ಷಣಗಳೆಂದರೆ ವಾಕರಿಕೆ, ವಾಂತಿ ಮತ್ತು ಅತಿಸಾರ. ಆಹಾರ ವಿಷವಾಗುವುದು ಅಸಾಮಾನ್ಯವಲ್ಲದ ಕಾರಣದಿಂದಾಗಿ ಇದು ತುಂಬಾ ಅಹಿತರ ಭಾವನೆ ಉಂಟು ಮಾಡುವುದು. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಟೇಷನ್(ಸಿಡಿಸಿ) ಹೇಳುವ ಪ್ರಕಾರ ಅಮೆರಿಕಾದಲ್ಲಿ 6 ಮಂದಿಯಲ್ಲಿ ಒಬ್ಬರು ಪ್ರತೀ ವರ್ಷ ಆಹಾರ ವಿಷವಾಗುವ ಸಮಸ್ಯೆಗೆ ಒಳಗಾಗುವರು.
ಬ್ಯಾಕ್ಟೀರಿಯಾ ಆಹಾರ ವಿಷವಾಗಲು ಪ್ರಮುಖ ಕಾರಣ ಬ್ಯಾಕ್ಟೀರಿಯಾ ಎಂದು ಹೇಳಲಾಗುತ್ತದೆ. ತುಂಬಾ ಅಪಾಯಕಾರಿ ಬ್ಯಾಕ್ಟೀರಿಯಾಗಳಾಗಿರುವಂತಹ ಇ ಕೋಲಿ, ಲಿಸ್ಟೇರಿಯಾ, ಮತ್ತು ಸಾಲ್ಮೊನೆಲ್ಲಾಕಮ್ ಇದರಲ್ಲಿ ಪ್ರಮುಖವಾಗಿದೆ. ಸಾಲ್ಮೊನೆಲ್ಲಾಕಮ್ ಆಹಾರ ವಿಷವಾಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಿಡಿಸಿಟಿ ಪ್ರಕಾರ ಸುಮಾರು ಒಂದು ಮಿಲಿಯನ್ ಆಹಾರ ವಿಷವಾಗುವ ಪ್ರಕರಣಗಳು ಪತ್ತೆಯಾಗಿದೆ ಮತ್ತು ಇದರಲ್ಲಿ 20 ಸಾವಿರ ಮಂದಿ ಆಸ್ಪತ್ರೆಗೆ ದಾಖಲಾಗಿರುವರು. ಈ ಎಲ್ಲಾ ಪ್ರಕರಣದಲ್ಲಿ ಸಾಲ್ಮೊನೆಲ್ಲಾಕಮ್ ಆಹಾರ ವಿಷವಾಗಲು ಪ್ರಮುಖ ಕಾರಣವಾಗಿದೆ. ಕ್ಯಾಂಪಿಲೋಬ್ಯಾಕ್ಟರ್ ಮತ್ತು ಸಿ. ಬೊಟುಲಿನಮ್ (ಬೊಟುಲಿಸಮ್) ಆಹಾರ ವಿಷವಾಗಲು ಕಾರಣವಾಗುವಂತಹ ಇತರ ಬ್ಯಾಕ್ಟೀರಿಯಾಗಳಾಗಿವೆ.

ವೈರಸ್ : ವೈರಸ್ ನಿಂದಾಗಿಯೂ ಆಹಾರವು ವಿಷವಾಗಬಹುದು. ನೊರೊವೈರಸ್ ಅಥವಾ ನೊರವಾಕ್ ವೈರಸ್ ಪ್ರತೀ ವರ್ಷ ಸುಮಾರು 19 ಮಿಲಿಯನ್ ಪ್ರಕರಣಗಳಲ್ಲಿ ಆಹಾರವನ್ನು ವಿಷವಾಗಿಸುವುದು ಎಂದು ಮೂಲಗಳು ಹೇಳಿವೆ. ಅಪರೂಪದ ಸಂದರ್ಭದಲ್ಲಿ ಇದು ಪ್ರಾಣಹಾನಿಗೆ ಕಾರಣವಾಗಬಹುದು. ಸಪೋವೈರಸ್, ರೋಟವೈರಸ್ ಮತ್ತು ಆಸ್ಟ್ರೋವೈರಸ್ ಒಂದೇ ರೀತಿಯ ಲಕ್ಷಣಗಳನ್ನು ತೋರಿಸಬಹುದು. ಆದರೆ ಇದು ಸಾಮಾನ್ಯವಾಗಿ ಇರುವುದಿಲ್ಲ. ಹೆಪಟಿಟಿಸ್ ಎ ವೈರಸ್ ಆಹಾರದ ಮೂಲಕವೇ ದೇಹದೊಳಗೆ ಪ್ರವೇಶಿಸಿ, ಗಂಭೀರ ಪರಿಣಾಮ ಬೀರುವುದು

ಆಹಾರ ವಿಷವಾಗದಂತೆ ದೇಹವನ್ನು ರಕ್ಷಿಸಿಕೊಳ್ಳುವುದು ಹೇಗೆ? * ಆಹಾರವನ್ನು ತುಂಬಾ ಸುರಕ್ಷಿತವಾಗಿ ನೀವು ಇಟ್ಟುಕೊಳ್ಳಬೇಕು ಮತ್ತು ಅಸುರಕ್ಷಿತ ವಾತಾವರಣದಲ್ಲಿ ಆಹಾರವನ್ನು ತೆರೆದಿಡಬಾರದು. * ಕೆಲವೊಂದು ಆಹಾರಗಳು ಉತ್ಪನ್ನವಾಗುವ ಕ್ರಮದಿಂದಾಗಿ ಬೇಗನೆ ವಿಷವಾಗುವುದು. ಉದಾಹರಣೆಗೆ ಮಾಂಸ, ಕೋಳಿಮಾಂಸ, ಮೊಟ್ಟೆ ಮತ್ತು ಚಿಪ್ಪುಮೀನು ಬೇಗನೆ ಕೆಡುವುದು. ಆದರೆ ಇದೆಲ್ಲವನ್ನು ಬಿಸಿ ಮಾಡುವ ವೇಳೆ ಸೋಂಕು ನಿವಾರಣೆ ಆಗುವುದು. ಇಂತಹ ಆಹಾರಗಳನ್ನು ನೀವು ಹಸಿಯಾಗಿ ತಿಂದರೆ ಅಥವಾ ಸರಿಯಾಗಿ ಬೇಯಿಸದೆ ತಿಂದರೆ ಆಗ ಆಹಾರವು ಬೇಗನೆ ವಿಷವಾಗುವುದು
ಆಹಾರ ವಿಷವಾಗಿಸುವ ಕೆಲವೊಂದು ಖಾದ್ಯಗಳು ಕೆಲವೊಂದು ಮೀನಿನ ಖಾದ್ಯಗಳು ಹಸಿಯಾಗಿರುವುದು ಮತ್ತು ಅರೆ ಬೇಯಿಸಿದ ಮಾಂಸ ಬಳಸಿರುವಂತಹ ಖಾದ್ಯಗಳು ಹಾಗೂ ಹಾಟ್ ಡಾಗ್ ನ್ನು ಸರಿಯಾಗಿ ಬಿಸಿ ಮಾಡದೆ ಇರುವ ಪರಿಣಾಮವಾಗಿ ಇದು ವಿಷವಾಗುವುದು. ಪಾಶ್ಚರೀಕರಿಸದೆ ಇರುವ ಹಾಲು, ಚೀಸ್ ಮತ್ತು ಜ್ಯೂಸ್, ತೊಳೆಯದೆ ಇರುವ ಹಣ್ಣುಗಳು ಹಾಗೂ ತರಕಾರಿಗಳು ಆಹಾರ ವಿಷವಾಗಿಸಬಹುದು.
ಎಚ್ಚರಿಕೆಗಳು * ಅಡುಗೆ ಮಾಡುವ ಮೊದಲು ಅಥವಾ ಊಟ ಮಾಡುವ ಮೊದಲು ಸರಿಯಾಗಿ ಕೈಗಳನ್ನು ತೊಳೆಯಿರಿ. * ಆಹಾರವು ಸರಿಯಾಗಿ ಸೀಲ್ ಆಗಿದೆಯಾ ಅಥವಾ ಶೇಖರಣೆ ಮಾಡಲಾಗಿದೆಯಾ ಎಂದು ನೋಡಿ. * ಮಾಂಸ ಮತ್ತು ಮೊಟ್ಟೆಯನ್ನು ಸರಿಯಾಗಿ ಬೇಯಿಸಿ. * ಯಾವುದೇ ತಾಜಾ ಆಹಾರವನ್ನು ಬಳಸುವ ಮೊದಲು ಅದನ್ನು ಸರಿಯಾಗಿ ತೊಳೆಯಿರಿ. * ಹಣ್ಣುಗಳು ಹಾಗೂ ತರಕಾರಿಗಳನ್ನು ಸರಿಯಾಗಿ ತೊಳೆದ ಬಳಿಕ ಬಳಸಿಕೊಂಡರೆ ಆಹಾರ ವಿಷವಾಗುವುದನ್ನು ತಪ್ಪಿಸಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
2016 ರಲ್ಲಿ ಚಿತ್ರದುರ್ಗದ ಈ ಗಣಪತಿ ಅತಿ ಹೆಚ್ಚು ಜನ ಸೇರಿದರಿಂದ ಕರ್ನಾಟಕದ ಹೆಚ್ಚು ಜನ ಆಕರ್ಷಿಸಿದ ಗಣಪ ಎಂದು ತಿಳಿದು ಬಂದಿದೆ.
ನವದೆಹಲಿ, ಮಾರಾಟ ಕುಸಿತದ ಬೆನ್ನಲ್ಲೇ ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿ ಭರ್ಜರಿ ಡಿಸ್ಕೌಂಟ್ ಆಫರ್ ನೀಡಿದೆ. ಮಾರುತಿ ಸುಜುಕಿ S ಕ್ರಾಸ್ ಕಾರು ಖರೀದಿಸುವ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗಿದೆ. ವಾಹನ ಮಾರಾಟ ಕುಸಿತ ಕಂಡಿರುವ ಬೆನ್ನಲ್ಲೇ ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಡಿಸ್ಕೌಂಟ್ ಆಫರ್ ನೀಡುತ್ತಿದೆ. ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ S ಕ್ರಾಸ್ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ತಿಂಗಳಲ್ಲಿ S ಕ್ರಾಸ್ ಖರೀದಿಸುವ ಗ್ರಾಹಕರಿಗೆ ಗರಿಷ್ಠ…
ಬೆಳಗಿನ ತಿಂಡಿಯನ್ನು ತಿನ್ನಲೂ ಹೆಚ್ಚಿನವರಿಗೆ ಪುರಸೊತ್ತು ಇರುವುದಿಲ್ಲ. ಹೆಚ್ಚಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಇದಕ್ಕೆ ಹೊರತಲ್ಲ. ಬ್ರೇಕ್ಫಾಸ್ಟ್ ತಪ್ಪಿಸುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ
ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸತು ಎನಿಸುತ್ತದೆ. ಆದರೆ ತಾವರೆ ಹೂವುಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಮತ್ತೆ ಕೆಲವರು ಲೋಟಸ್ ನಟ್ಸ್ ಎಂದು ಕರೆಯುತ್ತಾರೆ. ಇದನ್ನು ಸಾರಿನಲ್ಲಿ ಕೆಲವರು ಬಳಸುವುದುಂಟು. ಈ ಬೀಜಗಳನ್ನು ಒಣಗಿಸಿ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪ್ರಮುಖವಾಗಿ ಚೀನಿಯರು ಈ ಬೀಜಗಳಿಂದ ತಮ್ಮ ಸಂಪ್ರದಾಯ ಔಷಧಗಳನ್ನು ತಯಾರಿಸುತ್ತಾರೆ.ಈ ಬೀಜಗಳಿಂದ ಸಾಕಷ್ಟು ಪೋಷಕಗಳು ಲಭ್ಯವಾಗುತ್ತವೆ. ಇವುಗಳಲ್ಲಿ ಪ್ರೋಟೀನ್ ನೊಂದಿಗೆ ಮೆಗ್ನೀಶಿಯಂ, ಪೊಟಾಶಿಯಂ, ಫಾಸ್ಪರಸ್ ನಂತಹ ಖನಿಜಗಳು, ಐರನ್, ಜಿಂಕ್…
Bandipur National Park is regarded as one of the most beautiful and the better-managed national parks of India. Located amidst the picturesque surroundings of the towering Western Ghat Mountains on the Mysore-Ooty highway in Karnataka, Bandipur National Park covers an area of about 874.2 sq km.
ಬೆಂಗಳೂರು, ವಿಕ್ರಮ್ ಲ್ಯಾಂಡರ್ನ್ನು ಚಂದ್ರನಿಗೆ ಮತ್ತಷ್ಟುಸಮೀಪಕ್ಕೆ ಕಳುಹಿಸುವ ಪ್ರಯತ್ನ ಇಂದು ಮತ್ತೊಮ್ಮೆಯಶಸ್ವಿಯಾಗಿದ್ದು, ಕೊನೆಯ ಕ್ಷಣದ ಕಾರ್ಯಚರಣೆಗಳನ್ನುಇದೀಗ ಎದುರು ನೋಡಲಾಗುತ್ತಿದೆ ಬುಧವಾರ ಬೆಳಿಗ್ಗೆ 3:42 ನಿಮಿಷಕ್ಕೆ ನೌಕೆಯಲ್ಲಿನ ಇಂಜಿನ್ನ್ನು 9 ಸೆಕೆಂಡುಗಳ ಕಾಲ ಉರಿಸಿ ಚಂದ್ರನಿಗೆ ಮತ್ತಷ್ಟು ಸಮೀಪದ ಕಕ್ಷೆಯಲ್ಲಿ ವಿಕ್ರಮ್ ಲ್ಯಾಂಡರ್ (ಪ್ರಗ್ಯಾನ್ ರೋವರ್ ಇದರ ಒಳಗಿದೆ)ನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೆಲೆಗೊಳಿಸಿದೆ. ಸದ್ಯ ವಿಕ್ರಮ್ ಲ್ಯಾಂಡರ್35ಕಿ.ಮೀ x 101 ಕಿ.ಮೀ ಕಕ್ಷೆಯಲ್ಲಿದೆ. ಇನ್ನೊಂದು ಕಡೆ ಚಂದ್ರಯಾನ 2 ಕ್ಷಕೆಗಾಮಿಯು96 ಕಿ.ಮೀ x 125 ಕಿ.ಮೀ…