ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತರಕಾರಿಗಳಲ್ಲಿ ಇರುವಂತಹ ಪೋಷಕಾಂಶಗಳು ಆರೋಗ್ಯಕ್ಕೆ ಮಾತ್ರ ಲಾಭ ನೀಡುತ್ತದೆ ಎಂದು ನಾವು ಭಾವಿಸಿದ್ದೇವೆ. ಆದರೆ ಪ್ರತಿಯೊಂದು ತರಕಾರಿಯಲ್ಲಿ ಇರುವಂತಹ ಕೆಲವೊಂದು ಅಂಶಗಳು ನಮ್ಮ ತ್ವಚೆ ಹಾಗೂ ಕೂದಲಿಗೆ ತುಂಬಾ ಉಪಯೋಗಕಾರಿ. ಇದರ ಬಗ್ಗೆ ಕೆಲವರಿಗೆ ತಿಳಿದಿದ್ದರೂ ಇದನ್ನು ಬಳಸುವುದು ಹೇಗೆ ಎನ್ನುವ ಪ್ರಶ್ನೆ ಅವರಲ್ಲಿ ಕಾಡುತ್ತಾ ಇರುತ್ತದೆ.
ಎಲ್ಲರಿಗೂ ತಾವು ಬೆಳ್ಳಗೆ ಇರಬೇಕಂತ ಆಸೆ ಇದ್ದೆ ಇರುತ್ತೆ. ಬೆಳ್ಳಗಿರುವವರನ್ನು ಕಂಡಾಗ ತಾನು ಹಾಗಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅನಿಸಿರುತ್ತೆ. ಅಂತವರು ಬ್ಯೂಟಿ ಪಾರ್ಲರಿಗೆ ಹೋಗಿ ಫೇಶಿಯಲ್, ಬ್ಲಿಚ್ ಅಂತ ಹೆಚ್ಚಿನ ಹಣ ಸುರಿಯುವ ಬದಲು ಮನೆಯಲ್ಲೆ ತಯಾರಿಸುವ ನೈಸರ್ಗಿಕ ವಿಧಾನ ಬಳಸಿ.
ಮುಖದ ಅಂದವನ್ನು ಹೆಚ್ಚಿಸುವುದು:-
ತರಕಾರಿಗಳಲ್ಲೊಂದಾದ ಆಲೂಗಡ್ಡೆ ಮುಖದ ಅಂದವನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಲೂಗಡ್ಡೆಯನ್ನು ಬೇಯಿಸಿ ನಂತರ ಅದರ ಸಿಪ್ಪೆ ತೆಗೆದು ನುಣ್ಣಗೆ ಮಾಡಿ, ನಂತರ ಅದಕ್ಕೆ 3 ಚಮಚ ಹಾಲು ಅಥವಾ ಮೊಸರನ್ನು ಸೇರಿಸಿ, 1 ಚಮಚ ಜೇನುತುಪ್ಪ ಹಾಕಿ ಮಿಕ್ಸ ಮಾಡಿ.
ಆಮೇಲೆ ಅದಕ್ಕೆ ½ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಕ್ಸ ಮಾಡಿ ಪ್ಯಾಕ್ ರೆಡಿ ಮಾಡಿ.
ಈ ಪ್ಯಾಕನ್ನು ಮುಖಕ್ಕೆ ಹಚ್ಚಿ 20 ನಿಮಿಷದ ನಂತರ ತೊಳೆಯಿರಿ.ಇದನ್ನು ಪ್ರತಿದಿನ ಮಾಡುವುದರಿಂದ ಮುಖದ ಬಣ್ಣ ಬಿಳಿಯಾಗುತ್ತದೆ.
ಕಲೆಗಳ ನಿವಾರಣೆ:-
ಆಲೂಗಡ್ಡೆ ಜ್ಯೂಸ್ ಕಲೆ ಹಾಗೂ ಬ್ಲ್ಯಾಕ್ ಹೆಡ್ಸ್ ಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಿ ಸ್ವಚ್ಛ ಚರ್ಮ ನೀಡಲಿದೆ.
ಇದಕ್ಕಾಗಿ ತಾಜಾ ಆಲೂಗಡ್ಡೆಯ ಜ್ಯೂಸ್ ತೆಗೆದು ಫ್ರಿಡ್ಜ್ ನಲ್ಲಿಟ್ಟು ದಿನದಲ್ಲಿ ಎರಡು ಸಲ ತಂಪಾಗಿರುವ ಈ ಜ್ಯೂಸ್ ಅನ್ನು ಭಾದಿತ ಪ್ರದೇಶಕ್ಕೆ ಹಚ್ಚಿ.
ಕೂದಲ ಬೆಳವಣಿಗೆ:-
ಕೂದಲ ಬೆಳವಣಿಗೆ ಹಾಗೂ ಅದು ದಪ್ಪವಾಗಲು ಒಂದು ಆಲೂಗಡ್ಡೆಯ ಜ್ಯೂಸ್, ಒಂದು ಮೊಟ್ಟೆಯ ಲೋಳೆ ಮತ್ತು ಒಂದು ಚಮಚ ಜೇನುತುಪ್ಪ ಮಿಶ್ರಣ ಮಾಡಿಕೊಳ್ಳಿ. ಇದನ್ನು ಕೂಡಲು ಹಾಗೂ ತಲೆಬುರುಡೆಗೆ ಹಚ್ಚಿಕೊಂಡು 1.5-2 ಗಂಟೆ ಕಾಲ ಹಾಗೆ ಬಿಡಿ.
ಬಳಿಕ ಶಾಂಪೂ ಹಾಕಿ ತೊಳೆಯಿರಿ. ಇದು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮಾತ್ರವಲ್ಲದೆ ಕೂದಲನ್ನು ದಪ್ಪ ಮಾಡುವುದು.
ಬಿಳಿ ಕೂದಲು :-
ಕೂದಲಿಗೆ ಶಾಂಪೂ ಹಾಕಿ ತೊಳೆಯುವ ವೇಳೆ ನೀವು ಬಿಸಿ ಅಥವಾ ತಣ್ಣೀರನ್ನು ಬಳಸುತ್ತಿರಬಹುದು. ಅದರ ಬದಲಿಗೆ ನೀವು ಆಲೂಗಡ್ಡೆ ಜ್ಯೂಸ್ ಬಳಸಿಕೊಳ್ಳಿ. ಇದರಿಂದ ಕೂದಲು ಕಪ್ಪಾಗುವುದು ಮತ್ತು ಕೂದಲಿಗೆ ಒಳ್ಳೆಯ ಹೊಳಪು ನೀಡುವುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆ ವ್ಯಕ್ತಿಯೇ ರಿಯಾ ಕೂಪರ್. ಆತ ತನ್ನ ಲಿಂಗದ ಗೊಂದಲದಲ್ಲಿ ಮೂರು ಸಲ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾನೆ. ರಿಯಾ ಕೂಪರ್ ಇಂಗ್ಲೆಂಡಿನಲ್ಲಿ ಅತೀ ಸಣ್ಣ ವಯಸ್ಸಿನಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡವ ಎನ್ನುವ ಪ್ರಸಿದ್ಧಿಗೆ ಒಳಗಾದ. ಆತ ಕೇವಲ 15 ವರ್ಷದಲ್ಲಿ ಮಹಿಳೆಯಾಗಿ ಲಿಂಗ ಪರಿವರ್ತನೆ ಮಾಡಿ ಕೊಂಡ ಮತ್ತು ಇದರಿಂದ ಬೇಸತ್ತು ಮತ್ತೆ ಲಿಂಗ ಪರಿವರ್ತನೆಗೆ ಮುಂದಾದ.
ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಕಲಬೆರಕೆ ಇಲ್ಲವೇ ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆ ನಿಷೇಧಿಸಲು ಮುಜರಾಯಿ ಇಲಾಖೆ ಮುಂದಾಗಿದೆ. ಇಲಾಖೆ ವ್ಯಾಪ್ತಿಯ ಕೆಲವು ದೇಗುಲಗಳಲ್ಲಿ ಕಲಬೆರಕೆ ಇಲ್ಲವೇ ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆಯಾಗುತ್ತಿರುವ ಬಗ್ಗೆ ಭಕ್ತರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ದೇಗುಲಗಳಲ್ಲಿ ಪೂಜಾ ಕಾರ್ಯಗಳಿಗೆ ನಿಯಮಿತವಾಗಿ ಕುಂಕುಮ ಖರೀದಿಸಿ ಬಳಸಲಾಗುತ್ತದೆ. ಅರ್ಚನೆಗೆ ಬಳಸಿದ ಕುಂಕುಮವನ್ನು ಬಳಿಕ ಭಕ್ತರಿಗೆ ವಿತರಿಸಲಾಗುತ್ತದೆ. ಜತೆಗೆ ಭಕ್ತರು ಪೂಜೆಗೆಂದು ಸಲ್ಲಿಸಿದ ಕುಂಕುಮವನ್ನೂ ವಿತರಿಸಲಾಗುತ್ತಿದೆ.ರಾಸಾಯನಿಕ ಕುಂಕುಮದ ಬಣ್ಣ ಗಾಢವಾಗಿರಲಿದ್ದು, ಚರ್ಮ…
ವಿಶ್ವದೆಲ್ಲೆಡೆ ಡೌನ್ ಆಗಿದ್ದ ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್ ಮತ್ತೆ ಎಂದಿನಂತೆ ಕೆಲಸ ಮಾಡುತ್ತಿವೆ. ಈ ಬಗ್ಗೆ ಫೇಸ್ಬುಕ್ ಇಂದು ಬೆಳಗ್ಗೆ ಸ್ಪಷ್ಟನೆ ನೀಡಿ, ನಮ್ಮ ಕೆಲ ಬಳಕೆದಾರರಿಗೆ ಫೋಟೋ, ವಿಡಿಯೋ ಅಪ್ಲೋಡ್ ಮತ್ತು ಕಳುಹಿಸಲು ಕಷ್ಟವಾಗಿತ್ತು. ಈಗ ಈ ಸಮಸ್ಯೆ ಬಗೆಹರಿದಿದ್ದು ನಾವು ಮರಳಿ ಬಂದಿದ್ದೇವೆ. ಈ ತೊಂದರೆ ಆಗಿದ್ದಕ್ಕೆ ಕ್ಷಮೆ ಕೇಳುತ್ತೇವೆ ಎಂದು ಟ್ವೀಟ್ ಮಾಡಿದೆ. ನಮ್ಮ ಕೆಲ ಬಳಕೆದಾರರಿಗೆ ಫೋಟೋ, ವಿಡಿಯೋ ಅಪ್ಲೋಡ್ ಮತ್ತು ಕಳುಹಿಸಲು ಕಷ್ಟವಾಗುತ್ತಿದೆ ಎನ್ನುವ ವಿಚಾರ ನಮ್ಮ ಗಮನಕ್ಕೆ ಬಂದಿದೆ….
ಹಿಂದೂ ಸಂಸ್ಕೃತಿ ಎಂದರೆ ಜಗತ್ಪ್ರಸಿದ್ಧ ಸಂಸ್ಕೃತಿ ಎಂಬುದರಲ್ಲಿ ಸಂಶಯವಿಲ್ಲ. ಹಿಂದೂ ಧರ್ಮದ ಆಚರಣೆಗಳು ಯಾವ ರೀತಿ ಜಗತ್ತು ಒಪ್ಪಿಕೊಂಡಿವೆ ಎಂದರೆ ಮನುಷ್ಯರು ಮಾತ್ರವಲ್ಲದೆ ಇಡೀ ಪ್ರಕೃತಿಯೇ ಸನಾತನ ಧರ್ಮದ ಆಚರಣೆಗೆ ಒಳಪಡುತ್ತದೆ. ಕಣ ಕಣದಲ್ಲೂ ದೇವರನ್ನು ಕಾಣುವ ಹಿಂದೂ ಧರ್ಮ, ಕಲ್ಲು, ಮಣ್ಣು, ನೀರು, ಬೆಂಕಿ, ಪ್ರಾಣಿ ಪಕ್ಷಿ, ಗಿಡ ಮರ, ಹೀಗೆ ಎಲ್ಲಾ ಜೀವಿಗಳಲ್ಲೂ ದೇವರನ್ನು ಕಾಣುವ ಧರ್ಮ ಒಂದಿದ್ದರೆ ಅದು ಹಿಂದೂ ಧರ್ಮ ಮಾತ್ರ ಎಂಬುದು ಸ್ಪಷ್ಟ. ಭೂಮಿಯ ಯಾವುದೇ ಮೂಲೆಗೆ ಹೋದರೂ ಅಲ್ಲಿ…
ಕಡಿಮೆ ವೆಚ್ಚದಲ್ಲಿ ಮಂಗಳಯಾನ, ಒಟ್ಟಿಗೆ 104 ಉಪಗ್ರಹಗಳನ್ನು ಹಾರಿಸಿ ವಿಶ್ವದಾಖಲೆ ಸ್ಥಾಪಿಸಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಇನ್ನೊಂದು ದಾಖಲೆಯನ್ನು ನಿರ್ಮಿಸಿದೆ
ದೇಹದಲ್ಲಿ ಬಿಸಿಯಾಗಲು ಮತ್ತು ಶರೀರ ತಾಪಮಾನ ಏರಿಕೆಗೆ ಹಲವು ಕಾರಣಗಳಿವೆ. ನಿಮ್ಮ ಸುತ್ತಲಿನ ಪರಿಸರದ ಕಾರಣದಿಂದಾಗಿ ನಿಮ್ಮ ದೇಹದಲ್ಲಿನ ಶಾಖಕ್ಕೆ ಕಾರಣ.