ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳ ಬದುಕು ಮತ್ತೊಮ್ಮೆ ಬೀದಿಗೆ ಬೀಳುವ ಸಾಧ್ಯತೆ ನಿಚ್ಚಳವಾಗುತ್ತಿದೆ. ಕಳೆದ ಫೆಬ್ರವರಿ 13ರಂದು ಅರಣ್ಯದಿಂದ ಎಲ್ಲರನ್ನು ಒಕ್ಕಲೆಬ್ಬಿಸಬೇಕು ಎಂಬ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ತೂಗುಕತ್ತಿಯ ಕೆಳೆಗೆ ಬದುಕುತ್ತಿರುವ ಈ ನತದೃಷ್ಟರಿಗೆ ನೆಮ್ಮದಿ ಎಂಬುದು ಜೀವಮಾನದ ಕನಸು ಎಂಬಂತಾಗಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಮೇಲ್ಮನವಿ ಸಲ್ಲಿಸುವುದರ ಮೂಲಕ ತಡೆಯಾಜ್ಞೆ ತಂದಿರುವುದರಿಂದ ತಾತ್ಕಾಲಿಕವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ತಡೆಯಾಜ್ಞೆಯ ಜೊತೆಗೆ ರಾಷ್ಟ್ರದ ಹದಿನಾಲ್ಕು ರಾಜ್ಯಗಳ ಅರಣ್ಯಗಳಲ್ಲಿ ಬದುಕುತ್ತಿರುವ ಆದಿವಾಸಿಗಳ ಅರಣ್ಯದ ಮೇಲಿನ ಹಕ್ಕುಗಳ ಅರ್ಜಿಗಳ ಪರಿಶೀಲನಾ ಕಾರ್ಯಕೂಡ ಬಿರುಸಿನಿಂದ ನಡೆಯುತ್ತಿದೆ. 2006ರಲ್ಲಿ ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಆದಿವಾಸಿಗಳಿಗೆ ದಯಪಾಲಿಸಿದ್ದ ಇದೇ ಸರ್ವೋಚ್ಛನ್ಯಾಯಾಲಯವು ಇದೀಗ ಎಲ್ಲರನ್ನು ಸಾಮೂಹಿಕವಾಗಿ ಅರಣ್ಯಗಳಿಂದ ತೆರವುಗೊಳಿಸಬೇಕು ಎಂಬ ತೀರ್ಪು ನೀಡುವುದರ ಮೂಲಕ ತನ್ನ ಧ್ವಂದ್ವ ನೀತಿಯನ್ನು ಅನಾವರಣಗೊಳಿಸಿದೆ.
ಮೂರು ಕೋಟಿಗೂ ಅಧಿಕ ಮಂದಿ ಬುಡಕಟ್ಟು ಸಮುದಾಯದ ಜನತೆ ಭಾರತದ ಅರಣ್ಯಗಳಲ್ಲಿ ಅನೇಕ ಶತಮಾನಗಳದಿಂದಲೂ ಬದುಕು ಕಟ್ಟಿಕೊಂಡಿದ್ದಾರೆ. ಅವರ ಜೊತೆಗೆ ಅರಣ್ಯದಂಚಿನಲ್ಲಿ ಬದುಕುತ್ತಿರುವ ಹಿಂದುಳಿದ ಹಲವಾರು ಸಮುದಾಯಗಳು, ಬೇಸಾಯ ಮತ್ತು ಅರಣ್ಯದ ಕಿರುಉತ್ಪನ್ನಗಳನ್ನು ನಂಬಿ ಬದುಕುತ್ತಿವೆ. ಈ ತೀರ್ಪಿನ ವಿರುದ್ಧ ಈಗಾಗಲೇ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಮೇಲ್ಮನವಿ ಸಲ್ಲಿಸಿವೆ. ಜೊತೆಗೆ ದೇಶ್ಯಾದ್ಯಂತ ನಾಗರೀಕರಿಂದ ಪ್ರತಿಭಟನೆ ಮತ್ತು ಟೀಕೆಗಳು ವ್ಯಕ್ತವಾಗಿದ್ದವು. ಇದನ್ನು ಮನಗಂಡ ನ್ಯಾಯಾಲಯ ತಾತ್ಕಾಲಿಕವಾಗಿ ತನ್ನ ತೀರ್ಪನ್ನು ತಡೆ ಹೊಡಿದಿದೆ. ಈ ನಡುವೆ ಕೇಂದ್ರ ಸರ್ಕಾರದ ಅರಣ್ಯ ಸಚಿವಾಲಯವು ಅತ್ಯಂತ ಗುಪ್ತವಾಗಿ ನೂತನ ಅರಣ್ಯಕಾಯ್ದೆಯೊಂದನ್ನು ರಚಿಸಿದ್ದು, ಅದನ್ನು ಜಾರಿಗೆ ತರಲು ಹುನ್ನಾರ ನಡೆಸಿದೆ. ಅಕಸ್ಮಾತ್ ಈ ಕಾಯ್ದೆಯು ಜಾರಿಗೆ ಬಂದಿದ್ದೇ ಆದರೆ, ಇದನ್ನು ನಾವು ಭಾರತದ ಆದಿವಾಸಿಗಳ ಪಾಲಿಗೆ ಮರಣ ಶಾಸನ ಎಂದು ಬಣ್ಣಿಸಬಹುದು.
ಆದಿವಾಸಿಗಳೆಂದರೆ, ಆರಣ್ಯ ನಾಶಕರು ಎಂದು ನಂಬಿರುವ ಇಂದಿನ ಆಡಳಿತ ವ್ಯವಸ್ಥೆಯ ತಲೆಯೊಳಗೆ ಮಲ ತುಂಬಿಕೊಂಡಿದೆ ಎಂದರೆ, ತಪ್ಪಾಗಲಾರದು. ಈ ದೇಶದಲ್ಲಿ ಇನ್ನೂ ಅರಣ್ಯ ಮತ್ತು ಅಲ್ಲಿನ ಜೀವಸಂಕುಲ ಜೀವಂತವಾಗಿದ್ದರೆ ಅಥವಾ ಸುರಕ್ಷಿತವಾಗಿದ್ದರೆ ಅದು ಅರಣ್ಯವಾಸಿಗಳಾದ ಆದಿವಾಸಿಗಳಿಂದ ಮತ್ತು ಅವರು ನಂಬಿಕೊಂಡು ಬಂದಿರುವ ನಮ್ಮ ನೆಲಮೂಲ ಸಂಸ್ಕೃತಿ ಮತ್ತು ಪರಂಪರೆಯಿಂದ ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ. ಇದರ ಜೊತೆಗೆ ನಮ್ಮ ಜನಪದರು ಗ್ರಾಮೀಣ ಭಾಗದಲ್ಲಿ ನಾಗಬಮ. ದೇವರ ಕಾಡು ಹೆಸರಿನಲ್ಲಿ ಅರಣ್ಯವನ್ನು ಪೋಷಿಸಿಕೊಂಡು ಬಂದಿದ್ದಾರೆ. ಅರಣ್ಯಾಧಿಕಾರಿಗಳು ಎಂಬ ಈ ಬಿಳಿಯಾನೆಗಳಿಂದ ಭಾರತದಲ್ಲಿ ಅರಣ್ಯಗಳು ಮತ್ತು ಅಲ್ಲಿನ ಪ್ರಾಣಿ ಮತ್ತು ಪಕ್ಷಿ ಸಂಕುಲ ಅಭಿವೃದ್ಧಿಯಾಗಿದ್ದರೆ ಅದು ಅವರ ಕಡತಗಳಲ್ಲಿ ಮಾತ್ರ.
ಪಕ್ಷಭೇದವಿಲ್ಲದೆ ಎಲ್ಲಾ ಕೇಂದ್ರ ಸರ್ಕಾರಗಳು ಆದಿವಾಸಿಗಳ ಬದುಕಿನ ಜೊತೆ ನಿರಂತರವಾಗಿ ಚೆಲ್ಲಾಟವಾಡುತ್ತಲೇ ಬಂದಿವೆ. ಅವರಿಗೊಂದು ಶಾಶ್ವತ ನೆಲೆ ಕಲ್ಪಿಸಿಕೊಡಲು ವಿಫಲವಾಗಿವೆ. ಈಗವರೆಗಿನ ಕಾನೂನುಗಳು, ತಿದ್ದುಪಡಿಗಳು ಮತ್ತು ಶಿಫಾರಸ್ಸುಗಳು ಅವರನ್ನೂ ಸದಾ ಅತಂತ್ರದ ಸ್ಥಿತಿಯಲ್ಲಿ ನಿಲ್ಲಿಸಿವೆ. 1976 ರಲ್ಲಿ ರಾಷ್ಟ್ರೀಯ ಕೃಷಿ ಆಯೋಗವು ಆದಿವಾಸಿಗಳನ್ನು ಅರಣ್ಯದಿಂದ ಹೊರದಬ್ಬಬೇಕೆಂದು ಶಿಫಾರಸ್ಸು ಮಾಡಿತ್ತು. ಇದರ ಅನ್ವಯ 1980ರಲ್ಲಿ ಭಾರತದ ಅರಣ್ಯ ರಕ್ಷಣಾ ಕಾಯ್ದೆಯು ಜಾರಿಗೆ ಬಂದಿತು. ಆದರೆ, 1988 ರಲ್ಲಿ ಜಾರಿಯಾದ ಮತ್ತೊಂದು ಭಾರದ ಅರಣ್ಯ ನಿಯಮವೊಂದು ಜಾರಿಗೆ ಬಂದು ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸದೆ ಕರುಣೆ ತೋರಿತು. ಜೊತೆಗೆ 1996 ರಲ್ಲಿ ಅಸ್ತಿತ್ವಕ್ಕೆ ತರಲಾದ ಬುಡಕಟ್ಟು ಜನಾಂಗಗಳ ರಕ್ಷಾಣಾ ಕಾಯ್ದೆಯು ಆದಿವಾಸಿಗಳ ಪಾಲಿಗೆ ರಕ್ಷಣಾ ಗೋಡೆಯಾಗಿ ಪರಿಣಮಿಸಿತು. ಇವೆಲ್ಲಾ ಗೊಂದಲಗಳ ನಡುವೆಯೂ ಅರಣ್ಯವಾಸಿಗಳ ಬಲುದಿನಗಳ ಬೇಡಿಕೆಯಾದ ‘ಜಲ್, ಜಂಗಲ್, ಜಮೀನ್’ ( ಜಲ, ಅರಣ್ಯ ಮತ್ತು ಜಮೀನು) ಪೂರ್ಣವಾಗಿ ಯಶಸ್ವಿಯಾಗಲಿಲ್ಲ. ನಕ್ಸಲ್ ಹಿಂಸಾಚಾರವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮತ್ತು ಆದಿವಾಸಿಗಳು ಮಾವೋವಾದಿ ನಕ್ಸಲರ ಹಿಡಿತಕ್ಕೆ ಸಿಲುಕದಿರಲಿ ಎಂಬ ಆಲೋಚನೆಯಿಂದ 2006ರಲ್ಲಿ ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಅವರಿಗೆ ದಯಪಾಲಿಸಿದ ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪಿನಿಂದಾಗ ಅವರುಗಳು ಒಂದಿಷ್ಟು ಕಾಲ ನೆಮ್ಮದಿಯಿಂದ ಇದ್ದರು. ಜೊತೆಗೆ ತಮ್ಮ ಹಕ್ಕು ಸ್ಥಾಪಿಸಲು ಹೋರಾಡುತ್ತಿದ್ದಾರೆ. ಇಂದಿಗೂ ಕೂಡ ದೇಶಾದ್ಯಂತ ರಾಜ್ಯಗಳ ಅರಣ್ಯ ಇಲಾಖೆಗಳಲ್ಲಿ ಅರಣ್ಯವಾಸಿಗಳು ಅಧಿಕೃತ ವಾಸ ಕುರಿತಂತೆ ಮತ್ತು ಅವರು ಹೊಂದಿರುವ ಭೂಮಿ ಕುರಿತಂತೆ ನಾಲ್ಕು ಲಕ್ಷದ 21 ಸಾವಿರ ಅರ್ಜಿಗಳು ವಿಲೇವಾರಿಯಾಗದೆ ಕೊಳೆಯುತ್ತಿವೆ. ಈವರೆಗೆ 79 ಸಾವಿರ ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ಕರ್ನಾಟಕದಲ್ಲಿ 53 ಸಾವಿರದ 785 ಅರ್ಜಿಗಳು ಬಾಕಿ ಉಳಿದಿವೆ. ಛತ್ತೀಸ್ ಗಡ ರಾಜ್ಯದ ಒಟ್ಟು ವಿಸ್ತಿರ್ಣದ ಶೇಕಡ 44ರಷ್ಟು ಅರಣ್ಯ ಭೂಮಿಯಿದ್ದು ಅರಣ್ಯವಾಸಿಗಳಿಗೆ ಅದು ಶಾಶ್ವತ ನೆಲೆಯಾಗಿದೆ. ಜೊತೆಗೆ ಮಧ್ಯಪ್ರದೇಶ ಮತ್ತು ಒಡಿಸ್ಸಾ ರಾಜ್ಯದಲ್ಲಿಯೂ ಕೂಡ ಅತ್ಯಧಿಕ ಮಂದಿ ಅರಣ್ಯವಾಸಿಗಳಿದ್ದಾರೆ. ಸರ್ವೋಚ್ಛ ನ್ಯಾಯಾಲಯವು ವಿಚಾರಣೆಯ ಸಂದರ್ಭದಲ್ಲಿ ಇಂತಹ ಸೂಕ್ಷ್ಮವಾದ ವಿಷಯಗಳನ್ನು ಎಲ್ಲಾ ಆಯಾಮಗಳಿಂದಲೂ ಹಾಗೂ ಆದಿವಾಸಿಗಳ ಇತಿಹಾಸವನ್ನು, ಅವರ ವರ್ತಮಾನದ ಬದುಕನ್ನು ಮತ್ತು ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ತನ್ನ ತೀರ್ಪನ್ನು ನೀಡಬೇಕಿದೆ.
ಈ ಹೊಸ ಕಾಯ್ದೆಯನ್ನು ರೂಪಿಸುವಾಗಪ್ರಜ್ಞಾಪೂರ್ವಕವಾಗಿ ಕೇಂದ್ರ ಬುಡಕಟ್ಟು ಸಚಿವಾಲಯದ ಅಧಿಕಾರಿಗಳನ್ನು ಮತ್ತು ಪರಿಸರವಾದಿಗಳು ಮತ್ತು ಮಾನವ ಹಕ್ಕು ಆಯೋಗದ ಸದಸ್ಯರನ್ನು ದೂರ ಇಟ್ಟು ಕೇವಲ ಅರಣ್ಯಾಧಿಕಾರಿಗಳು ಮಾತ್ರ ಇದರಲ್ಲಿ ಭಾಗಿಯಾಗಿದ್ದಾರೆ. ಇದು ಆಡಳಿತ ಶಾಹಿಯ ಹುನ್ನಾರದಂತೆ ಕಾಣುತ್ತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟ ಚಿರು ಸರ್ಜಾ ಹಾಗೂ ಧ್ರುವ ಸರ್ಜಾ ರಾಮ ಲಕ್ಷ್ಮಣರಂತೆ ಇದ್ದರು. ಆದರೆ ಚಿರು ಅಣ್ಣನ ಹಠಾತ್ ನಿಧನದಿಂದ ನೊಂದಿರುವ ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಅಣ್ಣನನ್ನು ನೆನೆದು ಭಾವುಕರಾಗಿದ್ದಾರೆ. ಇದೀಗ ತನ್ನ ಪ್ರೀತಿಯ ಅಣ್ಣನಿಗಾಗಿ ಮಂಟಪವನ್ನು ಕಟ್ಟಿಸಿದ್ದಾರೆ. ರಾಮನಗರ ಬಳಿ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಅವರನ್ನು ಮಣ್ಣು ಮಾಡಲಾಗಿದೆ. ಈ ಫಾರ್ಮ್ ಹೌಸ್ ಧ್ರುವ ಸರ್ಜಾ ಅವರದ್ದು ಆದರೆ ಚೀರುಸರ್ಜಾ ಗೆ ಈ ಫಾರ್ಮ್ ಹೌಸ್ ತುಂಬಾ ಇಷ್ಟವಾಗಿತ್ತಂತೆ. ದ್ರುವ ಸರ್ಜಾ…
ಕನ್ನಡ ಚಿತ್ರರಂಗ ಕಂಡ ಅನೇಕ ದಿಗ್ಗಜರಲ್ಲಿ, ಈಗಲೂ ಕೂಡ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ
ಭಾರತವು ಚೀನಾದ ಒಪ್ಪೋ, ಷಿಯಾಮಿ, ಜಿಯೋನಿ, ಕಂಪನಿಗಳಿಗೆ ನೋಟಿಸ್ ನೀಡಿದೆ. ಮತ್ತು ಕೇಂದ್ರ ಸರ್ಕಾರವು , ಹ್ಯಾಕಿಂಗ್ ಭದ್ರತಾ ಫೀಚರ್`ಗಳ ಬಗ್ಗೆ ಕಂಪನಿಗಳಲ್ಲಿ ವಿವರಣೆ ಕೇಳಿದೆ.
ಅಂಜೂರ ಮನುಷ್ಯನ ದೇಹಕ್ಕೆ ತುಂಬಾನೇ ಸಹಕಾರಿಯಾಗಿದೆ. ಇದರ ಸೇವನೆಯನ್ನು ಮಾಡೋದ್ರಿಂದ ಸಿಗುವ ಆರೋಗ್ಯಕಾರಿ ಲಾಭಗಳು ಯಾವುವು ಅನ್ನೋದು ಮುಂದೆ ನೋಡಿ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್-7ರಲ್ಲಿ ಶೈನ್ ಶೆಟ್ಟಿ ಅವರು ಸ್ಪರ್ಧಿ ಚಂದನಾ ಅವರ ಜೊತೆ ಜಗಳವಾಡಿ ಅವಾಜ್ ಹಾಕಿದ್ದಾರೆ. ಶೈನ್ ವರ್ತನೆ ನೋಡಿ ಚಂದನಾ ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಚಂದನಾ ಮತ್ತು ಶೈನ್ ಶೆಟ್ಟಿ, ವಾಸುಕಿ ವೈಭವ್ ಮೂವರು ಗೆಳೆಯರು. ಚಂದನಾ ವಿರುದ್ಧವಾಗಿ ಶೈನ್ ಶೆಟ್ಟಿ ಮತ್ತು ವಾಸುಕಿ ಇಲ್ಲಿಯವರೆಗೂ ಮಾತನಾಡಿಲ್ಲ. ಆದರೆ ಈಗ ಶೈನ್ ಶೆಟ್ಟಿ ಮಾತನಾಡಿದ ಬಗೆ ನೋಡಿ ಚಂದನಾ ಕಣ್ಣೀರು ಹಾಕಿದ್ದಾರೆ. ಚಂದನಾ ಅವರು ಟಾಸ್ಕ್ ಮಾಡಿ ಮೈ…
ಮಂಗಳವಾರ, 24/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಅನಿರೀಕ್ಷಿತ ಸಂಚಾರ. ಹೂವು ವ್ಯಾಪಾರಿಗಳಿಗೆ ಲಾಭ.ನಿರುದ್ಯೋಗಿಗಳಿಗೆ ಶುಭವಾರ್ತೆ. ಬಂದುಗಳ ಆಗಮನ. ಜೀವನದಲ್ಲಿ ಹೆಚ್ಚು ಧನಾತ್ಮಕ ಬದಲಾವಣೆಗಳನ್ನು ಪಡೆಯುತ್ತೀರಿ. ವೃಷಭ:- ಮನೆಯಲ್ಲಿ ದೇವತಾಕಾರ್ಯಗಳು ನಡೆಯಲಿವೆ. ಮನೆಯವರ ಹಾಗೂ ಸ್ನೇಹಿತರ ಸಹಕಾರ ಇರಲಿದೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ.ನಿಮ್ಮ ಹಣದ ಖರ್ಚಿನ ಬಗ್ಗೆ ಜಾಗ್ರತೆ ಇರಲಿ. ದೀರ್ಘ ಪ್ರಯಾಣ ಅನುಕೂಲಕರವಾಗಿರುತ್ತದೆ.ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಮಿಥುನ:– ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಆದಾಯ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.ವೃತ್ತಿರಂಗದಲ್ಲಿ…