ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ಚಿತ್ರ ನಟ ಸೂಪರ್ಸ್ಟಾರ್ ಉಪೇಂದ್ರರವರು ಇತ್ತೀಚೆಗಷ್ಟೇ ಪ್ರಜಾಕೀಯ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದರು. ಹಾಗಾಗಿ ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಹಾಗೂ ಸ್ವತಃ ಉಪೇಂದ್ರರವರ ಅಭಿಮಾನಿಯಾಗಿರುವರೊಬ್ಬರು, ಉಪೇಂದ್ರರವರ ರಾಜಕೀಯ ಮತ್ತು ಅವರ ಹೊಸ ಪಕ್ಷದ ಕುರಿತು ಪತ್ರವೊಂದನ್ನು ಬರೆದಿದ್ದಾರೆ.
ಆ ಪತ್ರದಲ್ಲಿ ಏನಿತ್ತು ಗೊತ್ತಾ? ಮುಂದೆ ಓದಿ…
ಗೌರವಾನ್ವಿತ ಉಪೇಂದ್ರರವರಿಗೆ,
ನಾನೊಬ್ಬ ಆಟೋ ಚಾಲಕ. ಬಸವನಗುಡಿಯಲ್ಲಿಯೇ ನಾನು ಆಟೋ ಚಾಲಕನಾಗಿರುವವನು. ನಿಮ್ಮ ಮನೆ ನನ್ನ ಆಟೋ ನಿಲ್ದಾಣಕ್ಕೆ ತೀರಾ ದೂರವಿಲ್ಲ. ನಾನೊಬ್ಬ ಕನ್ನಡದ ಅಭಿಮಾನಿ! ಶಂಕರ್ ನಾಗ್ ಹಾಗೂ ನಿಮ್ಮ ಚಿತ್ರವನ್ನು ಆಟೋದ ಹಿಂದೆ ಮುಂದೆ ಹಾಕಿಕೊಂಡಿದ್ದೇನೆ! ಕಾರಣ ನಿಮ್ಮ ಮೇಲಿನ ಅಭಿಮಾನದಿಂದಷ್ಟೇ.
ಒಟ್ಟಾರೆಯಾಗಿ ಹೇಳಬೇಕೆಂದರೆ ನಾನೊಬ್ಬ ನಿಮ್ಮ ಅಪ್ಪಟ ಅಭಿಮಾನಿ! ನಿಮ್ಮ ಸಿನಿಮಾಗಳನ್ನು ಅದೆಷ್ಟೋ ಸಲ ನೋಡಿದ್ದೇನೆ, ಒಂದೇ ಸಲಕ್ಕೆ ಅರ್ಥವಾಗದಿದ್ದರೂ ಎರಡು ಮೂರನೇ ಸಲ ನೋಡಿ ಅರ್ಥ ಮಾಡಿಕೊಂಡಿದ್ದೇನೆ! ಪೂರ್ತಿಯಾಗಿ ಅರ್ಥಾಗದೇ ಹೋದರೂ ಅದೇನೋ ಖುಷಿಯೊಂದು ನನ್ನಲ್ಲಿರುತ್ತದೆ.
ನೀವು ರಾಜಕೀಯವನ್ನು ‘ಪ್ರಜಾಕೀಯ’ ಮಾಡಲು ಹೊರಟಿದ್ದು ಬಹಳ ಸಂತೋಷವಾಗಿತ್ತು! ಒಬ್ಬ ನಾಯಕ ನಟನಾದ ನೀವು ಹೆಮ್ಮೆಯ ಪ್ರಧಾನಿ ಮೋದಿಯನ್ನು ಬೆಂಬಲಿಸಿದ್ದು ನೋಡಿ ನಮ್ಮ ಕರ್ನಾಟಕಕ್ಕೂ ಒಂದೊಳ್ಳೆಯ ನಾಯಕ ಸಿಗಬಹುದೆಂದು ಅಂದುಕೊಂಡಿದ್ದೆ! ನಿಮ್ಮ ಸುದ್ದಿಗೋಷ್ಠಿ ನೋಡಿದ ಮೇಲೆ ಕೇಳಲೇಬೇಕು ಎಂದೆನಿಸಿದ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ.
2. ನೀವೇ ಹೇಳಿದಂತೆ, ಒಬ್ಬ ಪ್ರಜಾಕಾರಣಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕಾರ್ಮಿಕನ ಹಾಗೆ ಕೆಲಸ ಮಾಡಬೇಕು ಎಂದಿರಿ. ಹಾಗಿದ್ದರೆ, ನರೇಂದ್ರ ಮೋದಿಯವರು ಬೆಳಗ್ಗಿನ ಜಾವ 4ರಿಂದ ರಾತ್ರಿ 12ರವರೆಗೂ ಬರೋಬ್ಬರಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ನಿಮ್ಮ ದೃಷ್ಟಿಯಲ್ಲಿ ಅವರು ಈ ಯಾವ ‘ಪ್ರಜಾಕಾರಣ’ದ ವರ್ಗಕ್ಕೆ ಸೇರುತ್ತಾರೆ?
3. ನೀವೇ ಹೇಳಿದಂತೆ, ಚುನಾವಣೆಯ ಪ್ರಚಾರಕ್ಕೆ ಫ್ಲೆಕ್ಸು, ಬ್ಯಾನರ್‌ಗಳನ್ನು ಹಾಕಿದರೆ ಸ್ವಚ್ಛ ಭಾರತದ ಕನಸು ಕನಸಾಗುಳಿದುಬಿಡುತ್ತೆ ಎಂದಿರಿ. ಆದರೆ ನಿಮ್ಮ ಯಾವುದೇ ಸಿನಿಮಾಗಳ ಬಿಡುಗಡೆ ನೋಡಿದರೂ ಪಟಾಕಿ, ಬ್ಯಾನರ್, ಪ್ಲೆಕ್ಸುಗಳಿಲ್ಲದೇ ನಡೆಯುವುದೇ ಇಲ್ಲ! ಆಗೆಲ್ಲಿತ್ತು, ಈ ಸ್ವಚ್ಛ ಭಾರತದ ಪರಿಕಲ್ಪನೆ?
ಹೂವಿನ ಹಾರ ಹಾಕುವುದು ತಪ್ಪು ಎನ್ನುವುದು ನಿಮ್ಮ ಸಿದ್ಧಾಂತವಾದರೆ, ನಿಮ್ಮ ಸಿನಿಮಾ ಬಿಡುಗಡೆಗಳಲ್ಲೇ ನಿಮ್ಮ ಅದೆಷ್ಟೋ ಉದ್ದದ ಪ್ರತಿಕೃತಿಗೆ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿದ್ದನ್ನು ಸ್ವತಃ ನೋಡಿದ್ದೇನೆ. ಸ್ವತಃ ನಿಮಗೂ ಅಭಿಮಾನಿಗಳು ಹಾರ ಹಾಕಿದ್ದಾರೆ! ಆಗ್ಯಾಕೆ, ನೀವು ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಲಿಲ್ಲ? ಅದೇ ದುಡ್ಡನ್ನು ಇನ್ನೊಬ್ಬರಿಗೆ ದಾನ ಮಾಡಿ ಎಂದು ಘೋಷಿಸಲಿಲ್ಲ?
4. ಒಬ್ಬ ‘ಖಾಕಿ’ ಹಾಕಿಬಿಟ್ಟರೆ ಆತ ಕಾರ್ಮಿಕ ಹೇಗಾಗುತ್ತಾನೆ ಸ್ವಾಮಿ? ನೀವು ಖಾಕಿಗೆ ಬೆಲೆ ಕೊಡುವವರಾಗಿದ್ದಾರೆ ನಿಮ್ಮ ರೆಸಾರ್ಟಿನಲ್ಲಿ ನೀವು ಪ್ರೆಸ್ ಮೀಟ್ ಮಾಡುತ್ತಿರಲಿಲ್ಲ ಅಲ್ಲವೇ? ಕಾರ್ಮಿಕರಿರುವ ಸಾರ್ವಜನಿಕ ಸ್ಥಳಗಳಲ್ಲಿಯೇ ನಡೆಸುತ್ತಿದ್ದೀರಿ ಅಲ್ಲವೇ?
5. ನೀವೇ ಕೆಲವು ವರ್ಷಗಳ ಹಿಂದೆ ಹೇಳಿದಂತೆ, ನೀವು ರಾಜಕೀಯಕ್ಕೆ ಇಳಿಯುವ ಮುನ್ನ ಮೊದಲು ಕುಟುಂಬವನ್ನು ಆರ್ಥಿಕವಾಗಿ ರಕ್ಷಿಸಿರಬೇಕು, ನ್ಯಾಯ ಒದಗಿಸಿರಬೇಕು ಎಂದಿದ್ದಿರಿ. ಹಲವು ವರ್ಷಗಳ ಹಿಂದೆಯೇ ನೀವು ಮೂರು ಕೋಟಿಯ ಮನೆ ಕಟ್ಟಿಸಿ, ಬೇಕಾದಷ್ಟು ಆಸ್ತಿ ಮಾಡಿ ನಿಮ್ಮ ಕುಟುಂಬವನ್ನು ತುಂಬಾ ಚೆನ್ನಾಗಿಯೇ ನೋಡಿಕೊಂಡಿರಿ ಮತ್ತು ನ್ಯಾಯ ಒದಗಿಸಿದಿರಿ. ಹಾಗಾದರೆ, ಬರುವ ಪ್ರತಿಯೊಬ್ಬ ಕಾರ್ಯಕರ್ತನೂ (ಅಥವಾ ಪ್ರಜಾಕೀಯದ ಪ್ರಾಯಕರ್ತನೋ?) ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಿ ಪ್ರಾಯ ಮುಗಿದ ನಂತರವೇ ನಿಮ್ಮ ಪಕ್ಷ ಸೇರಿದ್ದಲ್ಲಿ ನಿಮಗೆ ಅಭ್ಯಂತರವಿದೆಯೇ?
6. ಇಷ್ಟು ದಿನವೂ ಸುಮ್ಮನಿದ್ದ ನೀವು ಅಮಿತ್ ಷಾ ಬರುವ ದಿನವೇ ನಿಮ್ಮ ಪ್ರಜಾಕೀಯದ ಪಾದಾರ್ಪಣೆಯನ್ನು ಘೋಷಿಸಿದಿರಿ. ಪರಿಣಾಮ ಅತ್ಯಂತ ಅಗತ್ಯವಾಗಿದ್ದ ಅವರ ಪ್ರವಾಸ ಕಾರ್ಯಕ್ರಮವೊಂದು ಅಂದುಕೊಂಡಷ್ಟು ಯಶಸ್ವಿಯಾಗಲೇ ಇಲ್ಲ. ಈ ಲಾಜಿಕ್ಕುಗಳ ಹಿಂದೆ ನೀವೇ ಇದ್ದದ್ದೋ ಅಥವಾ ಕಾಣದ ಕೈಗಳ ‘ಕೈ’ ಅಡಗಿದೆಯೋ?
7. ಅಚ್ಚರಿಯೆನ್ನಿಸಿದ್ದು ನಿಮ್ಮ ಹಣವಿಲ್ಲದ ಪ್ರಜಾಕೀಯ! ಒಂದು ರುಪಾಯಿ ಹಾಕೊಲ್ಲ, ತೆಗೆಯೊಲ್ಲ ಅಂದಿರಿ. ಆದರೆ, ಚುನಾವಣೆಗೆ ಅದರದೇ ಆದ ಖರ್ಚುಗಳಿದ್ದೇ ಇರುತ್ತದೆ. ಪ್ರಚಾರಕ್ಕೆ, ಪತ್ರಕ್ಕೆ ಇತ್ಯಾದಿ. ಪ್ರಚಾರಕ್ಕೆ ಹಣವೇ ನಾ ನೀಡೋದಿಲ್ಲ ಎಂದಿರಿ. ಮುಂದೆ ಇದಕ್ಕೆ ನೀಡುವ ಹಣ ನಿಮ್ಮ ಕುಟುಂಬದ ಸದೃಢತೆಯದೋ ಅಥವಾ ಯಾರಾದರಿಂದಲೂ ತೆಗೆದುಕೊಳ್ಳುವಿರೋ?
8. ಈ ಹಿಂದೆಯೂ ಕೂಡ ತೆಲುಗಿನ ನಟ ಚಿರಂಜೀವಿ ‘ಪ್ರಜಾರಾಜ್ಯಂ’ ಎಂಬ ಪಕ್ಷ ಸ್ಥಾಪಿಸಿ ನಿಮ್ಮಂತೆಯೇ ತತ್ತ್ವ ಸಿದ್ಧಾಂತಗಳನ್ನು ಮಂಡಿಸಿ, ಎಷ್ಟೋ ಜನರ ತಲೆಕೆಡಿಸಿ, ನಂತರ ತನಗೆ ಸ್ಥಾನ ಸಿಕ್ಕ ನಂತರ ಪರ ಪಕ್ಷಕ್ಕೆ ಹಾರಿ, ಕಾರ್ಯಕರ್ತರನ್ನೆಲ್ಲ ನಡು ನೀರಿನಲ್ಲಿ ಕೈ ಬಿಟ್ಟರು. ನೀವು ಚಿರಂಜೀವಿ, ಕೇಜ್ರಿವಾಲ್ ತರಹ ಮುಂದೆ ಹೀಗೆ ವರ್ತಿಸುವುದಿಲ್ಲವೆಂಬ ಯಾವ ಗ್ಯಾರಂಟಿ?
9. ಪ್ರಜಾಕೀಯ ಕೇವಲ ಪದಗಳ ಆಟವಲ್ಲವಷ್ಟೇ? ರಾಜಕೀಯವನ್ನು ಪ್ರಜಾಕೀಯ ಅಂದ ತಕ್ಷಣ ಚುನಾವಣಾ ವ್ಯವಸ್ಥೆ ಬದಲಾಗದು. ಲೋಕಸಭಾ ಚುನಾವಣೆಯಿಂದ ಗ್ರಾಮಪಂಚಾಯತ್ ವರೆಗೆ ವ್ಯವಸ್ಥೆ ಹಾಗೆಯೇ ಮುಂದುವರಿಯುತ್ತದೆ. ಇದನ್ನು ನೀವು ಹೇಗೆ ಬದಲಾಯಿಸುವಿರಿ?
ನಾನೊಬ್ಬ ಸಾಮಾನ್ಯ ಕಾರ್ಮಿಕ! ನನಗೆ ಈ ಪ್ರಜಾಕೀಯವೆನ್ನುವುದೆಲ್ಲ ತೀರಾ ತಿಳಿಯದ ವಿಷಯಗಳಾದರೂ ಒಂದಷ್ಟು ಸಾಮಾನ್ಯ ಜ್ಞಾನವಂತೂ ಇರುವುದರಿಂದ ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಇದಕ್ಕೆ ನಿಮ್ಮಿಂದ ಉತ್ತರವನ್ನೂ ನಿರೀಕ್ಷಿಸುತ್ತಿದ್ದೇನೆ.
ನಿಮ್ಮ ಉತ್ತರಗಳು ಸಮರ್ಪಕವಾಗಿದ್ದರೆ ನಾನು ನನ್ನೆಲ್ಲ ಕೆಲಸ ಕಾರ್ಯಗಳನ್ನೂ ಬಿಟ್ಟು ನಿಮ್ಮ ‘ಸ್ವಚ್ಛ’ ಪ್ರಜಾಕೀಯದ ಪ್ರಚಾರಕ್ಕೆ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತೇನೆ. ನಿಮ್ಮ ಉತ್ತರಗಳು ನಿಮ್ಮ ಸಿನಿಮಾ ನೋಡಿ ಸಿಕ್ಕಿದ ಖುಷಿಯ ಅರ್ಧವಾದರೂ ಇರಲಿ ಎಂಬ ನಂಬಿಕೆ ಅಷ್ಟೇ. ನಿಮಗೆ ಮೇಲ್ ಕೂಡ ಮಾಡಿದ್ದೇನೆ. ಉತ್ತರ ಮೇಲ್‌ನಲ್ಲಿ ಕೊಟ್ಟರೂ ಸರಿಯೇ.
ಕೃಪೆ: ಶಂಕರ ಕಾಳೇಗೌಡ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಫೇಸ್ ಬುಕ್ ಮೆಸೆಂಜರ್ನಲ್ಲಿ ಕಳುಯಿಸುವ ವಾಯ್ಸ್ ಸಂದೇಶಗಳು ಮೂರನೇ ವ್ಯಕ್ತಿ ಕೇಳಿಸಿಕೊಳ್ಳುತ್ತಾನೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ .ಇದು ಸಾಕಷ್ಟು ವಿರೋದಕ್ಕೆ ಕಾರಣವಾಗಿದೆ . ಫೇಸ್ಬುಕ್, ವಾಟ್ಸ್ಆ್ಯಪ್ ಸೇರಿಸಾಕಷ್ಟುಮೆಸೆಂಜರ್ಗಳಲ್ಲಿನಾವುಕಳುಹಿಸುವಸಂದೇಶಎಷ್ಟುಸುರಕ್ಷಿತಎನ್ನುವಪ್ರಶ್ನೆಆಗಾಗಕೇಳಿಬರುತ್ತಲೇಇರುತ್ತದೆ. ಈಮೊದಲುಫೇಸ್ಬುಕ್ಸಂಸ್ಥೆಗ್ರಾಹಕರಮಾಹಿತಿಯನ್ನುಮಾರಾಟಮಾಡಿದೆಎನ್ನುವಗಂಭೀರಆರೋಪಕೇಳಿಬಂದಿತ್ತು. ಈಗಮೆಸೆಂಜರ್ನಲ್ಲಿಕಳುಹಿಸುವಆಡಿಯೋಹಾಗೂವಾಯ್ಸ್ ಮೆಸೇಜ್ಗಳುಎಷ್ಟುಖಾಸಗಿಯಾಗಿಉಳಿಯುತ್ತವೆಎನ್ನುವಪ್ರಶ್ನೆಮೂಡಿದೆ ಆಡಿಯೋಕಳುಹಿಸಿದರೆಅದನ್ನುಅಕ್ಷರರೂಪದಲ್ಲಿಸಿದ್ಧಪಡಿಸಿಕೊಡುವಆಯ್ಕೆಫೇಸ್ಬುಕ್ ಮೆಸೆಂಜರ್ನಲ್ಲಿಲಭ್ಯವಿದೆ. ಆದರೆಇದರಲ್ಲಿಕೆಲಸಮಸ್ಯೆಗಳುಇರುವುದಾಗಿಬಳಕೆದಾರರುದೂರುನೀಡಿದ್ದರು. ಹೀಗಾಗಿಫೇಸ್ಬುಕ್ ಮೆಸೆಂಜರ್ನಲ್ಲಿಕಳುಹಿಸುವ ವಾಯ್ಸ್ ಸಂದೇಶಸರಿಯಾಗಿಅಕ್ಷರರೂಪಕ್ಕೆಬಂದಿದೆಯೇಎಂಬುದನ್ನುಪರೀಕ್ಷಿಸಲುಫೇಸ್ಬುಕ್ ಸಿಬ್ಬಂದಿಯನ್ನುಆಯ್ಕೆಮಾಡಿಕೊಂಡಿತ್ತುಎನ್ನುವವಿಚಾರಬೆಳಕಿಗೆಬಂದಿದೆ. ಬಳಕೆದಾರರುಮೆಸೆಂಜರ್ನಲ್ಲಿಕಳುಹಿಸುವವಾಯ್ಸ್ ಮೆಸೇಜ್ ಹಾಗೂಅಕ್ಷರರೂಪಕ್ಕೆತರಲಾದಮೆಸೇಜ್ ಸಂಗ್ರಹಿಸಿದ್ದಫೇಸ್ಬುಕ್ ಎರಡನ್ನೂಪರಿಶೀಲನೆನಡೆಸಿತ್ತು. ಈಬಗ್ಗೆಅನೇಕರುಅಪಸ್ವರಎತ್ತಿದ್ದಾರೆ. ಈಹಿನ್ನೆಲೆಯಲ್ಲಿಈಪ್ರಯತ್ನವನ್ನುಸಂಸ್ಥೆಕೈಬಿಟ್ಟಿದೆ. ಅಲ್ಲದೆ, ನಾವುವಾಯ್ಸ್ ಮೆಸೇಜ್ಅನ್ನುಸುರಕ್ಷಿತವಾಗಿಟ್ಟಿದ್ದೇವೆ, ಖಾಸಗಿತನಕ್ಕೆಧಕ್ಕೆಬಂದಿಲ್ಲಎಂದುಹೇಳಿದೆ.
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(5 ಏಪ್ರಿಲ್, 2019) ಅನಾವಶ್ಯಕ ಉದ್ವೇಗ ಮತ್ತು ಚಿಂತೆ ನಿಮ್ಮ ಜೀವನದ ರಸ ಹೀರಬಹುದು ಮತ್ತು ನಿಮ್ಮನ್ನು…
ಉಪ್ಪಿನ ಕಾಯಿ ಎಂದರೆ ಸಾಕು ಬಾಯಲ್ಲಿ ನೀರೂರಿ ಬಿಡುತ್ತೆ ,ಅದರಲ್ಲೂ ಉಟಕ್ಕೆ ಉಪ್ಪಿನ ಕಾಯಿ ಬೇಕೆ ಬೇಕು , ಊಟಕ್ಕೆ ತಕ್ಕ ಉಪ್ಪಿನಕಾಯಿ ಇದ್ದರೆ ಊಟ ರುಚಿಕರವಾಗಿರುತ್ತದೆ. ಯಾವುದೇ ಸಮಾರಂಭ ಔತಣಕೂಟದ ಎಲೆಯಲ್ಲಿ ಊಟಕ್ಕೆ ಉಪ್ಪಿನ ಕಾಯಿ ಇಲ್ಲ ಅಂದ್ರೆ ಅ ಭೋಜನ ಅಸಂಪೂರ್ಣ ಎನ್ನಿಸುತ್ತದೆ.
ವರ ಬೋಳುಮಂಡೆಯವನೆಂದು ಗೊತ್ತಾಗಿ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ವರ ರವಿ ಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ತಾನು ಭೇಟಿಯೇ ಆಗದ ಯುವತಿಯೊಂದಿಗೆ ಮದುವೆಯಾಗಲು ದೆಹಲಿಯಿಂದ 1 ಸಾವಿರ ಕಿ.ಮೀ ದೂರದಲ್ಲಿರುವ ಬಿಹಾರದ ಸುಗೌಲಿ ಗ್ರಾಮಕ್ಕೆ ಬಂದಿದ್ದರು.
ನೀವು ಹೊಟೇಲುಗಳಲ್ಲಿ ಹೆಸರಿಗೆ ತೋರಿಸಿಕೊಳ್ಳಲು ಬಟ್ಟೆ ಧರಿಸಿದವರನ್ನು ನೀವು ನೋಡಿರಬಹುದು. ಆದರೆ ಜರ್ಮನಿಯಲ್ಲಿ ಟ್ರಾವೆಲ್ ಏಜೆನ್ಸಿಯೊಂದು ಜಗತ್ತಿನ ಮೊದಲ ನ್ಯೂಡ್ ಏರ್ಲೈನ್ಸನ್ನು ಲಾಂಚ್ ಮಾಡಿದೆ. ಇದರಲ್ಲಿ ನೀವು ಬಟ್ಟೆಹಾಕಿಕೊಂಡು ಪ್ರಯಾಣಿಸುವಂತಿಲ್ಲ. ಇದರಲ್ಲಿ ಪ್ರಯಾಣಿಸುವವರು 30 ಸಾವಿರ ಅಡಿ ಎತ್ತರಕ್ಕೆ ಹಾರಿದ ಮೇಲೆ ಬಟ್ಟೆ ತೆಗೆಯುತ್ತಾರೆ.
ಬಯಲು ಸೀಮೆ ಕೋಲಾರದಲ್ಲಿ ಸಾವಿರಾರು ಅಡಿ ಭೂಗರ್ಭವನ್ನು ಕೊರೆದರು ನೀರು ಸಿಗುವುದು ಕಷ್ಟ ಸಿಕ್ಕರೂ ಫ್ಲೋರೈಡ್ ಅಂಶ, ಜಿಲ್ಲೆಯಲ್ಲಿ ನದಿಯ ಮೂಲವಿಲ್ಲ ಕೆರೆ ಕುಂಟೆ ಬಾವಿ ನಾಲೆಗಳು ಕಾಲಿ ಕಾಲಿ! ಕೃಷಿಗೆ ನೀರಿಲ್ಲ. ಕೃಷಿಗಿರಲಿ ಕುಡಿಯಲು ಮತ್ತು ದಿನ ಬಳಕೆಗೆ ಹಾಹಾಕಾರ.. ಮಳೆಗೆ ಕಾದು ಕಾದು ಸುಸ್ತಾಗಿರುವ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ಜಿಲ್ಲೆ ತರಕಾರಿ, ಹೂ,ಮಾವು ಮತ್ತು ಹೈನುಗಾರಿಕೆಯಲ್ಲಿ ಮುಂದಿದೆ… ಎಷ್ಟೋ ರಾಜಕಾರಣಿಗಳು ಜಿಲ್ಲೆಗೆ ನೀರು ತರಲು ಅವಿರತ ಶ್ರಮಿಸಿ ಸೋತಿದ್ದಾರೆ.. ಸೋತು ದಾರಿ ಕಾಣದೆ…