ಸುದ್ದಿ

ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಬೇಕೇ; ಹಾಗಾದರೆ ಅಮಾವಾಸ್ಯೆಯಂದು ಹೀಗೆ ಮಾಡಿದರೆ ಸಾಕು,..

87

ಹಿಂದಿನ ಕಾಲದಲ್ಲಿ ಹಿಂದೂ ಸಮಾಜದಲ್ಲಿ ಅಮಾವಾಸ್ಯೆಯಂದು ತಿಂಗಳ ರಜೆಯನ್ನಾಗಿ ನೀಡಲಾಗುತ್ತಿತ್ತು. ಪ್ರತಿತಿಂಗಳೂ ಅವಮಾಸ್ಯೆಯಂದು ರಜೆ ಇತ್ತು. ಅಮಾವಾಸ್ಯೆಯು ಶುಭವಲ್ಲವೆಂದು ಯಾರೂ ಕೆಲಸ ಮಾಡುತ್ತಿರಲಿಲ್ಲ. ಪ್ರಯಾಣವನ್ನೂ ಕೂಡಾ ಅಮವಾಸ್ಯೆಯಂದು ಮಾಡುತ್ತಿರಲಿಲ್ಲ.ಚಂದ್ರನ ಚಕ್ರವು ಜಲಮೂಲಗಳ ಮೇಲೆಯೂಪ್ರಭಾವ ಬೀರುತ್ತದೆ ಇದರಿಂದಾಗಿ ಸಮುದ್ರದಲ್ಲೂ ಉಬ್ಬರವಿಳಿತಗಳೂ ಕಂಡು ಬರುತ್ತದೆ. ಮನುಷ್ಯನನಡವಳಿಕೆಯ ಮೇಲೂ ಚಂದ್ರನು ಪ್ರಭಾವಬೀರುವುದರಿಂದ ವ್ಯಕ್ತಿಯು ಪ್ರಕ್ಷುಬ್ಧನಾಗಬಹುದು, ಇತರರಿಗೆ ಕಿರಿಕಿರಿಯುಂಟು ಮಾಡಬಹುದುಅಥವಾ ಇತರರಿಗೆ ಕೆಟ್ಟವನಾಗಬಹುದು. ಆದ್ದರಿಂದ ಅಮಾವಾಸ್ಯೆ ಹಾಗೂ ಹುಣ್ಣಿಯ ಕುರಿತುಹಲವಾರು ಆಚರಣೆಗಳು, ನಂಬಿಕೆಗಳು ಇವೆ.

ಅಮಾವಾಸ್ಯೆ ಒಳ್ಳೆಯದೇ? : ಅನೇಕರಲ್ಲಿ ಅಮಾವಾಸ್ಯೆಯ ದಿನ ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ಅಮಾವಾಸ್ಯೆಯ ದಿನ ದುಷ್ಟ ಶಕ್ತಿಗಳು ಶಕ್ತಿ ಪಡೆಯುತ್ತದೆ ಹಾಗೂ ಸ್ವತಂತ್ರವಾಗಿ ಓಡಾಡುತ್ತದೆ ಎನ್ನುತ್ತಾರೆ. ಮಾಟ ಮಂತ್ರಗಳನ್ನು ಮಾಡುವವರಿಗೆ ಅಮಾವಾಸ್ಯೆ ಸೂಕ್ತ ದಿನ ಎನ್ನಲಾಗುತ್ತದೆ. ದೀಪಾವಳಿಯಂದು ಬರುವ ಅಮಾವಾಸ್ಯೆಯನ್ನೂ ಅತ್ಯಂತ ದೋಷ ಪೂರಿತ ಅಮವಾಸ್ಯೆ ಎಂದು ಕರೆಯುತ್ತಾರೆ. ಹಾಗಾಗಿ  ದೀಪಾವಳಿಯಂದು ದೇವರನ್ನು ಪೂಜಿಸಿ, ದುಷ್ಟಶಕ್ತಿಗಳು ಬರದಂತೆ ದೀಪಗಳನ್ನು ಹಚ್ಚುತ್ತಾರೆ. ದೇಶದ ಕೆಲವೊಂದು ಭಾಗಗಳಲ್ಲಿ ಮಹಾಕಾಳಿಯು ದುಷ್ಟಶಕ್ತಿಗಳನ್ನು ನಾಶ ಮಾಡುವುದರಿಂದ ಅಮಾವಾಸ್ಯೆಯಂದು ಮಹಾಕಾಳಿಯನ್ನು ಆರಾಧಿಸುತ್ತಾರೆ.

ಹುಣ್ಣಿಮೆ : ಹುಣ್ಣಿಮೆ ಅಥವಾ ಪೌರ್ಣಮಿಯು ಸಮೃದ್ಧಿ ಹಾಗೂ ದೈವತ್ವಕ್ಕೆ ಸಂಬಂಧಿಸಿದೆ. ಅಮವಾಸ್ಯೆಯಂದು ಯಾವುದೇ ಶುಭಕಾರ್ಯಗಳನ್ನು ಮಾಡದಿದ್ದರೂ, ಹುಣ್ಣಿಮೆಯಂದು ಮಾಡುವ ಶುಭಕಾರ್ಯಗಳು ಅಥವಾ ಕೆಲಸಗಳು ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಅಮವಾಸ್ಯೆಯು ಶುಭವಲ್ಲವೆಂದೂ, ಬುಧವಾರ ಅಮಾವಾಸ್ಯೆ ಬಿದ್ದರೆ ಕಾಲಸರ್ಪದೋಷ ಪೂಜೆಯನ್ನು ಮಾಡಲಾಗುತ್ತದೆ. ಈ ಪೂಜೆಯನ್ನು ಯಾರಾದರೂ ಕಾಳಸರ್ಪದೋಷದಿಂದ ಬಳಲುತ್ತಿದ್ದರೆ ಈ ದೋಷವನ್ನು ಪರಿಹರಿಸಲು ಅಮವಾಸ್ಯೆಯಂದು ಪೂಜೆ ಮಾಡುತ್ತಾರೆ. ಈ ಪೂಜೆಯು ರಾಹುವನ್ನು ನಿಯಂತ್ರಿಸುತ್ತದೆ ಹಾಗೂ ಕಾಲಸರ್ಪದ ದೋಷವನ್ನು ಶೇಕಡಾ ಎಪ್ಪತ್ತರಷ್ಟು ಕಡಿಮೆಗೊಳಿಸುತ್ತದೆ

ಹುಣ್ಣಿಮೆಯಂದು ಉಪವಾಸ :  ಹುಣ್ಣಿಮೆ ಅಂದರೆ ಪೂರ್ಣ ಚಂದಿರನ ದಿನವನ್ನು ಹಿಂದೂಗಳು ಮಹತ್ತರವಾದ ದಿನವೆಂದು ನಂಬುತ್ತಾರೆ. ಹಾಗಾಗಿ ಹುಣ್ಣಿಮೆಯಂದು ಉಪವಾಸ ಮಾಡಿ ಶ್ರೀ ವಿಷ್ಣುವನ್ನು ಆರಾಧಿಸುತ್ತಾರೆ. ಇಡೀ ದಿನ ಉಪವಾಸವಿದ್ದು ಪ್ರಾರ್ಥನೆ ಮಾಡಿ ನಂತರ ನದಿಯಲ್ಲಿ ಮಿಂದ ನಂತರವೇ ಮುಸ್ಸಂಜೆಯ ವೇಳೆ ಲಘು ಆಹಾರವನ್ನು ಸೇವಿಸುತ್ತಾರೆ. ಹುಣ್ಣಿಮೆ ಹಾಗೂ ಅಮಾವಾಸ್ಯೆಯಂದು ಉಪವಾಸ ಅಥವಾ ಲಘು ಆಹಾರ ಸೇವನೆ ಒಳ್ಳೆಯದು ಎನ್ನುತ್ತಾರೆ ಯಾಕೆಂದರೆ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿನ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಹಾಗೂ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ಇದು ದೇಹ ಮತ್ತು ಮನಸ್ಸಿನ ಸಮತೋಲನವನ್ನು ಪುನಃಸ್ಥಾಪಿಸುತ್ತದೆ..

ಅಮಾವಾಸ್ಯೆಯಂದು ಹೀಗೆ ಮಾಡಿ, : ಅಮಾವಾಸ್ಯೆಯಂದು ಉಪವಾಸ ಮಾಡುವುದರಿಂದ ಎಲ್ಲಾ ಋಣಾತ್ಮಕ ಶಕ್ತಿಗಳನ್ನು ದೂರವಿರಿಸಬಹುದು. ಇದು ದುಷ್ಟ ಶಕ್ತಿಗಳ ದೃಷ್ಟಿ ನಿಮ್ಮ ಮೇಲೆ ಬೀಳದಂತೆ ಹಾಗೂ ಋಣಾತ್ಮಕ ಶಕ್ತಿ ಹತ್ತಿರ ಸುಳಿಯದಂತೆ ಮಾಡುತ್ತದೆ. ಅಮಾವಾಸ್ಯೆಯಂದು ಮಾಡುವ ವೃತದಿಂದ ದುಷ್ಟಶಕ್ತಿಗಳನ್ನು ನಿಗ್ರಹಿಸುವ ದೇವತಾ ಶಕ್ತಿಗಳ ಆಶೀರ್ವಾದವು ದುಷ್ಟಶಕ್ತಿಗಳ ನೆರಳೂ ನಿಮ್ಮ ಮೇಲೆ ಬೀಳದಂತೆ ತಡೆಯುತ್ತದೆ ಹಾಗೂ ನಿಮಗೆ ಅದೃಷ್ಟವನ್ನು ದಯಪಾಲಿಸುತ್ತದೆ. ನಂಬಿಕೆಯ ಪ್ರಕಾರ ಅಮಾವಾಸ್ಯೆಯಂದು ಉಪವಾಸ ಮಾಡಿದರೆ ನಿಮ್ಮ ಆಸೆ, ಆಕಾಂಕ್ಷೆಗಳೆಲ್ಲವೂ ಈಡೇರುತ್ತದೆ ಎನ್ನಲಾಗುತ್ತದೆ. ಪೂರ್ವಜರಿಗಾಗಿ ಉಪವಾಸ ಮಾಡಿದರೆ ನೀವು ಯಾವ ಅದೃಷ್ಟವನ್ನು ಬಯಸುತ್ತೀರೋ ಅದು ನಿಮ್ಮೆಡೆಗೆ ಬರುತ್ತದೆ.

ಅಮಾವಾಸ್ಯೆಯಂದು, ನಿಂಬೆ ಹಣ್ಣನ್ನು ನಾಲ್ಕು ಭಾಗಗಳಾಗ ಕತ್ತರಿಸಿ, ನಿಮ್ಮ ನಾಲ್ಕು ದಿಕ್ಕು ಅಂದರೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಿಗೆ ಎಸೆಯಿರಿ, ನಿಮಗೆ ನಿರುದ್ಯೋಗ ಸಮಸ್ಯೆಯಿದ್ದರೆ ಈ ಪರಿಹಾರವನ್ನು ಅನುಸರಿಸಿ. ಈ ವಿಧಾನವನ್ನು ಅನುಸರಿಸುವಾಗ ನಾಲ್ಕು ದಿಕ್ಕುಗಳಿಗೂ ಅಡ್ಡವಾಗಿ ನಿಂತಿರುವುದನ್ನು ಹಾಗೂ ನಿಮ್ಮನ್ನು ಯಾರೂ ನೋಡುತ್ತಿಲ್ಲವೆಂದೂ ಖಚಿತಪಡಿಸಿಕೊಳ್ಳಿ. ಈ ವಿಧಾನವನ್ನು ಯಾರಿಗೂ ಗೊತ್ತಾಗದಂತೆ ಮಾಡಿ. ಅಮಾವಾಸ್ಯೆಯಂದು ವೃತವನ್ನು ಮಾಡುವುದರಿಂದ ಆರೋಗ್ಯ ಸಂಬಂಧಿತ ಎಲ್ಲಾ ಸಮಸ್ಯೆಗಳೂ ನಿವಾರಣೆಯಾಗುವುದು. ಹಾಗೂ ದೈಹಿಕವಾಗಿ, ಮಾನಸಿಕವಾಗಿ ಸಾಮರ್ಥ್ಯವನ್ನು ವೃದ್ಧಿಸಬಹುದು. ಜೊತೆಗೆ ಅನಾರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳು ಎಂದಿಗೂ ಎದುರಾಗದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಚಿತ್ರ ಆದರೂ ಸತ್ಯ

    ಜುರಾಸಿಕ್ ಅವಧಿಯ ಡೈನೋಸರ್ ಮೊಟ್ಟೆಗಳು ಪತ್ತೆ..!ತಿಳಿಯಲು ಈ ಲೇಖನ ಓದಿ…

    ಚೀನದ ಜಿಯಾಂಗ್ಸಿ ಪ್ರಾಂತ್ಯದಲ್ಲಿನ ಗ್ವಾಂಗ್ಝೋ ನಗರ ಡೈನೋಸಾರ್ಗಳ ತವರು ಎಂದೇ ಖ್ಯಾತವಾಗಿದ್ದು ಈಚೆಗೆ ಇಲ್ಲಿ ಈಚೆಗೆ ಡೈನೋಸಾರ್ಗಳ ಪಳೆಯುಳಿಕೆ ರೂಪದಲ್ಲಿರುವ ಸುಮಾರು 30 ಮೊಟ್ಟೆಗಳು ಪತ್ತೆಯಾಗಿವೆ. ಪರಿಣತರು ಈ ಮೊಟ್ಟೆಗಳು ಸುಮಾರು 130 ದಶಲಕ್ಷ ವರ್ಷಗಳಷ್ಟು ಹಿಂದಿನವು ಎಂದು ಅಂದಾಜಿಸಿದ್ದಾರೆ.

  • ಸುದ್ದಿ

    ನಿಶ್ಚಿತಾರ್ಥ ಮಾಡಿಕೊಂಡ ಕಾಮಿಡಿ ಕಿಲಾಡಿ ಜೋಡಿಗಳು…

    ಬೆಂಗಳೂರು ಮುದ್ದಿನಪಾಳ್ಯ ದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಇಂದು ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಸ್ಪರ್ಧಿಗಳಾದ ಗೋವಿಂದೇಗೌಡ ಮತ್ತು ದಿವ್ಯಾ ಅವರ ನಿಶ್ಚಿತಾರ್ಥ ನೆರವೇರಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನ ಕ್ಯೂಟ್ ಕಪಲ್ ಗೋವಿಂದೇ ಗೌಡ ಹಾಗೂ ದಿವ್ಯಾಶ್ರೀ ಭಾನುವಾರ ಒಬ್ಬರನೊಬ್ಬರು ತಮ್ಮ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಸರಳವಾಗಿ ನಡೆದಿದ್ದು, ಕುಟುಂಬಸ್ಥರು ಹಾಗೂ ಆಪ್ತ ಸಂಬಂಧಿಕರು ಮಾತ್ರ ಆಗಮಿಸಿದ್ದರು. ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಸ್ಪರ್ಧಿಗಳಾಗಿದ್ದ ಗೋವಿಂದೇಗೌಡ ಮತ್ತು ದಿವ್ಯಾ ಸ್ನೇಹಿತರಾಗಿದ್ದರು….

  • ಉಪಯುಕ್ತ ಮಾಹಿತಿ

    ನಿಮಗೆ ಗೊತ್ತಿರುವ ಮೆಕ್ಕೆಜೋಳದ ರೇಷ್ಮೆಯ ಉಪಯೋಗಗಳು..!ತಿಳಿಯಲು ಈ ಲೇಖನ ಓದಿ…

    ನಾವು ಮೆಕ್ಕೆಜೋಳದ ರೇಷ್ಮೆಯನ್ನು ಹಾಗೇ ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ದ್ರಾವಣ ರೂಪದಲ್ಲಿ ಕುಡಿಯಬಹುದು ಅಥವಾ ನಿಂಬೇ ಪಾನೀಯವಾಗಿ ಸೇವಿಸಬಹುದು ನೀವು ಮೆಕ್ಕೆಜೋಳದ ರೇಷ್ಮೆಯನ್ನು ಒಂದು ದಿನ ನೀರಿನಲ್ಲಿ ನೆನೆಸಿ ಸೂರ್ಯನ ಬಿಸಿಲಿನಲ್ಲಿ ಇಟ್ಟು ಅಂದೇ ರಾತ್ರಿ ಜೇನುತುಪ್ಪದೊಂದಿಗೆ ಸೇರಿಸಿ ಬೇಕಾದಾಗ ಕುಡಿಯಬಹುದು.

  • ಸಿನಿಮಾ

    ರೆಬೆಲ್ ಸ್ಟಾರ್ ಅಂಬಿ ಅಂತ್ಯಕ್ರಿಯೆಗೆ, ರಮ್ಯ ಬಾರದೆ ಇರಲು ಕಾರಣವೇ ಇದು!

    ಶನಿವಾರದಂದು ವಿಧಿವಶರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಅಂಬರೀಶ್ ಅವರ ಅಂತ್ಯಕ್ರಿಯೆ, ಸೋಮವಾರದಂದು ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ.ಅಂಬರೀಶ್ ನಿಧನದ ಸಂದರ್ಭದಲ್ಲಿ ಸಂತಾಪ ಕೋರಿ ಟ್ವೀಟ್ ಮಾಡಿದ್ದ ನಟಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ರಮ್ಯಾ, ಅಂತ್ಯಕ್ರಿಯೆಗೆ ಬಾರದಿರುವುದು ಅಂಬರೀಶ್ ಅಭಿಮಾನಿಗಳನ್ನು ಕೆರಳಿಸಿತ್ತು. ಅಂಬರೀಶ್ ಸಾವಿಗೀಡಾದ ಸುದ್ದಿ ತಿಳಿದಾಗಿನಿಂದಲೂ ಇಡೀ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೆ ಹಲವು ಭಾಷೆಗಳ ಚಿತ್ರರಂಗದ ಖ್ಯಾತನಾಮರು, ಅಂತಿಮ ದರ್ಶನದಿಂದ ಅಂತ್ಯಸಂಸ್ಕಾರದವರೆಗೆ ಹಾಜರಾಗಿದ್ದರೂ ರಮ್ಯಾ…

  • ಸುದ್ದಿ

    ಇನ್ಮುಂದೆ ಎಟಿಎಂ ನಿಂದ ಕ್ಯಾಶ್ ವಿತ್ ಡ್ರಾ ಮಾಡಲು ಈ ನಿಯಮವನ್ನು ತಪ್ಪದೆ ಪಾಲಿಸಬೇಕು…!

    ಬ್ಯಾಂಕ್ ನಿಂದ  ಗ್ರಾಹಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ ಮಾಡಲಾಗಿದ್ದು, ಇನ್ನು ಮುಂದೆ 10 ಸಾವಿರ ರೂಪಾಯಿಗೂ ಅಧಿಕ ಹಣವನ್ನು ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿಯನ್ನು ಕಡ್ಡಾಯ ಎಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ . ನವದೆಹಲಿ ,ಗ್ರಾಹಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ ಮಾಡಲಾಗಿದ್ದು, ಇನ್ನು ಮುಂದೆ 10 ಸಾವಿರ ರೂಪಾಯಿಗೂ ಅಧಿಕ ಹಣವನ್ನು ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿಯನ್ನು ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ. ಹೌದು.. ಖ್ಯಾತ…

  • ಸುದ್ದಿ

    ಬಸ್ ಪ್ರಯಾಣಿಕರಿಗೊಂದು ‘ಗುಡ್ ನ್ಯೂಸ್’…!

    ಸಾರಿಗೆ ಸಚಿವರಾಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರಿಗೆ ಸಲಹೆ ನೀಡಿದ್ದಾರೆ.ಪ್ರಯಾಣಿಕರೊಂದಿಗೆ ಪದ ಬಳಕೆಯ ಬದಲಿಸಿಕೊಳ್ಳಿ. ಸರ್, ಮೇಡಂ, ಅಣ್ಣ ಅಕ್ಕ ಎಂದು ಹೇಳುವುದು ಸೂಕ್ತ ಎಂದು ತಿಳಿಸಿದ್ದಾರೆ. ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರಿಗೆ ಸಲಹೆ ನೀಡಿರುವ ಡಿಸಿಎಂ ಲಕ್ಷ್ಮಣ ಸವದಿ, ಸ್ವಂತ ವಾಹನವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸಾರಿಗೆ ಸಂಸ್ಥೆಗಳ ಮೇಲೆಯು ಅದೇ ಭಾವನೆ ಹೊಂದಬೇಕೆಂದು ತಿಳಿಸಿದ್ದಾರೆ. ಬಸ್ ಚಾಲಕ, ನಿರ್ವಾಹಕರೊಬ್ಬರು ಮಾಡುವ ಕೆಲಸದಿಂದ…