ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಂಬೆಹಣ್ಣು ಆರೋಗ್ಯಕ್ಕೆ ಒಳ್ಳೆದು ಎನ್ನುವ ವಿಚಾರ ಸಾಮಾನ್ಯವಾಗಿ ಎಲ್ಲರಿಗು ತಿಳಿದಿದೆ. ಆದ್ರೆ ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ ಒಳ್ಳೆದು ಎಂದು ಹೆಚ್ಚು ನಿಂಬೆರಸ ಸೇವಿಸಿದರೆ ಆರೋಗ್ಯ ಹಾನಿಕರ ಎನ್ನುವ ಬಗ್ಗೆ ಹಲವರಿಗೆ ತಿಳಿದಿಲ್ಲ.
ಹೌದು. ಅನೇಕ ಮನೆಮದ್ದುಗಳಲ್ಲಿ ನಿಂಬೆರಸ ಬಳಸಲಾಗುತ್ತದೆ. ಬೆಳಗ್ಗೆ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ದೇಹದ ಕೊಬ್ಬು ಕರಗುವುದರ ಜೊತೆಗೆ ಕ್ಯಾನ್ಸರ್ ತಡೆಗಟ್ಟಬಹುದೆಂದು ಅಧ್ಯಯನಗಳು ಹೇಳಿವೆ. ಇದರ ಜೊತೆಗೆ ಅತಿಯಾಗಿ ನಿಂಬೆರಸ ಸೇವಿಸಿದರೆ ಎಷ್ಟು ಅಪಾಯಕಾರಿ ಎನ್ನುವುದನ್ನ ಕೂಡ ಅಧ್ಯಯನಗಳೇ ತಿಳಿಸಿವೆ.
ಆರೋಗ್ಯಕರ ಗುಣವಿರುವ ನಿಂಬೆಹಣ್ಣಿನ ರಸವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದು ತಿಳಿಯದಿದ್ದರೆ ಅಪಾಯ ತಪ್ಪಿದ್ದಲ್ಲ. ನಿಂಬೆ ಹಣ್ಣಿನಲ್ಲಿರುವ ಆಮ್ಲೀಯ ಗುಣ ಹೆಚ್ಚಾಗಿ ದೇಹ ಸೇರಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಎಷ್ಟು ಪ್ರಮಾಣದಲ್ಲಿ ನಿಂಬೆರಸ ಸೇವನೆ ಮಾಡಬೇಕು?
ನಿಂಬೆರಸ ಎಷ್ಟು ಸೇವಿಸಬೇಕು ಎಂಬುದು ವ್ಯಕ್ತಿಯ ವಯಸ್ಸು, ಆರೋಗ್ಯ ಮುಂತಾದವುಗಳ ಮೇಲೆ ಅವಲಂಬಿತವಾಗಿರುತ್ತೆ. ನಿಂಬೆರಸವನ್ನು ಇಷ್ಟೇ ಪ್ರಮಾಣದಲ್ಲಿ ಸೇವಿಸಬೇಕು ಎಂದು ನಿರ್ಧರಿಸಲು ಸಾಕಷ್ಟು ವೈಜ್ಞಾನಿಕ ಮಾಹಿತಿಗಳಿಲ್ಲ. ಆದರೆ ವೈದ್ಯರ ಪ್ರಕಾರ, ದಿನಕ್ಕೆ ಒಂದು ಲೋಟ ಅಥವಾ ಎರಡು ಲೋಟ ನಿಂಬೆರಸ (ಸುಮಾರು 120 ಮಿಲಿ) ಸುರಕ್ಷಿತವೆಂದು ಸೂಚಿಸಲಾಗಿದೆ. ಅದಕ್ಕಿಂತ ಹೆಚ್ಚು ನಿಂಬೆರಸ ಸೇವಿಸುವುದು ಒಳ್ಳೆಯದಲ್ಲ ಎನ್ನಲಾಗುತ್ತೆ.
ಹೆಚ್ಚು ನಿಂಬೆರಸ ಸೇವಿಸಿದ್ರೆ ಏನಾಗುತ್ತೆ?
1. ಹಲ್ಲಿನ ಸಮಸ್ಯೆ
ಅತಿಯಾದ ನಿಂಬೆರಸ ಸೇವನೆಯಿಂದ ಅದರಲ್ಲಿರುವ ಆಮ್ಲೀಯ ಗುಣ ಹಲ್ಲಿನ ಮೆರುಗನ್ನು ನಾಶಗೊಳಿಸಬಹುದು. ಇತರೆ ತಂಪು ಪಾನೀಯಗಳಂತೆ ನಿಂಬೆರಸ ಕೂಡ ಹಲ್ಲಿನ ಸಮಸ್ಯಗೆ ಕಾರಣವಾಗಿದೆ. ಆದರೆ ನಿಂಬೆರಸ ಸೇವನೆಯ ಬಳಿಕ ಹಲ್ಲನ್ನು ಉಜ್ಜುವುದರಿಂದ ಹಲ್ಲಿನ ಸವೆತವನ್ನು ತಡೆಗಟ್ಟಬಹುದು.
2. ಮೈಗ್ರೇನ್ ಹೆಚ್ಚಿಸುತ್ತದೆ
ಸಿಟ್ರಸ್ ಹಣ್ಣುಗಳು ಮೈಗ್ರೇನ್ ಅನ್ನು ಹೆಚ್ಚು ಮಾಡುತ್ತದೆ. ಸಿಟ್ರಸ್ ಹಣ್ಣುಗಳನ್ನು ಮಿತಿಮೀರಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕ. ಈ ಹಣ್ಣುಗಳು ಅಲರ್ಜಿ ಉಂಟುಮಾಡುವುದರ ಮೂಲಕ ಮೈಗ್ರೇನ್‍ಗೆ ಕಾರಣವಾಗಬಹುದು. ಸಿಟ್ರಸ್ ಹಣ್ಣುಗಳಲ್ಲಿ ಟೈರಮೈನ್ ಅಂಶ ಇರುತ್ತದೆ. ಇದು ಮೈಗ್ರೇನ್ ಗೆ ಪ್ರಮುಖ ಕಾರಣವಾಗಿದೆ.
3. ಎದೆಯುರಿ ಉಂಟುಮಾಡುತ್ತದೆ
ಕೆಲವು ಸಂಶೋಧನೆಗಳ ಪ್ರಕಾರ, ಸಿಟ್ರಸ್ ಅಂಶ ಒಳಗೊಂಡ ಹಣ್ಣುಗಳು ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್ ಗೆ ಕಾರಣವಾಗಬಹುದು. ನಿಂಬೆರಸ ಎದೆಯುರಿಯನ್ನು ಹೆಚ್ಚಿಸಬಹುದು ಮತ್ತು ಕಡಿಮೆ ಮಾಡಲೂ ಬಹುದು. ಆದರೆ ಅತೀಯಾಗಿ ನಿಂಬೆರಸ ಸೇವಿಸಿದರೆ ಎದೆಯುರಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎದೆಯುರಿ ಸಮಸ್ಯೆ ಇದ್ದರೆ ನಿಂಬೆರಸ ಅಥವಾ ಯಾವುದೇ ಸಿಟ್ರಿಕ್ ಅಂಶದ ಪಾನಿಯ ಕುಡಿಯುವ ಮೊದಲು ವೈದ್ಯರ ಸಲಹೆ ಪಡೆಯೋದು ಸೂಕ್ತ.
4. ಬಾಯಿ ಹುಣ್ಣನ್ನು ಉಲ್ಬಣಗೊಳಿಸಬಹುದು
ಬಾಯಿ ಹುಣ್ಣುಗಳಲ್ಲಿ ಕ್ಯಾಂಕರ್ ಹುಣ್ಣುಗಳು ಒಂದು ರೂಪ. ಇವು ಬಾಯಿಯೊಳಗೆ ಉಂಟಾಗುವ ಹುಣ್ಣುಗಲಾಗಿದ್ದು, ಹೆಚ್ಚು ನೋವಿನಿಂದ ಕೂಡಿರುತ್ತವೆ. ಸಿಟ್ರಿಕ್ ಆಮ್ಲವು ಬಾಯಿಯ ಹುಣ್ಣುಗಳನ್ನು ಇನ್ನಷ್ಟು ಹೆಚ್ಚು ಮಾಡುವುದರಿಂದ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕ ಹೈ ಕೋರ್ಟ್‌ನ ಸಿವಿಲ್ ನ್ಯಾಯಾಧೀಶೆಯಾಗಿ ಬಂಗಾರಪೇಟೆಯ ಎನ್.ಗಾಯಿತ್ರಿ ರವರು ಆಯ್ಕೆಯಾಗಿ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 2021ರಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ಗಾಯತ್ರಿರವರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಮತ್ತು ಸರಿಯಾದ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಕರ್ನಾಟಕ ಸಿವಿಲ್ ಕೋರ್ಟ್‌ನ ನ್ಯಾಯಾಧೀಶರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯವು ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು ಗಾಯತ್ರಿ ಅವರು ಆಯ್ಕೆಯಾಗಿದ್ದಾರೆ….
ಸಿಹಿ ಬೂಂದಿ ಮಾಡಲು ಬೇಕಾದ ಪದಾರ್ಥಗಳು : ಕಡ್ಲೆ ಹಿಟ್ಟು 2 ಕಪ್, ಅಡುಗೆ ಸೋಡ 1/4 ಚಮಚ, ಉಪ್ಪು ಚಿಟಿಕೆ, ದ್ರಾಕ್ಷಿ 2 ಚಮಚ, ಗೋಡಂಬಿ 2 ಚಮಚ, ತುಪ್ಪ 2 ಚಮಚ, ಸಕ್ಕರೆ 1/2ಕಪ್, ಏಲಕ್ಕಿ ಪುಡಿ 1/2 ಚಮಚ, ಅಡುಗೆ ಎಣ್ಣೆ 2 ಕಪ್. ಮಾಡುವ ವಿಧಾನ : ಕಡ್ಲೆಹಿಟ್ಟು , ಉಪ್ಪುಚಿಟಿಕೆ , ಅಡುಗೆ ಸೋಡ ಚೆನ್ನಾಗಿ ಮಿಶ್ರ ಮಾಡಿ. ಸ್ವಲ್ಪ ಸ್ವಲ್ಪ ನೀರು ಚಿಮುಕಿಸಿ ,ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ…
ದಟ್ಟವಾದ, ಕಪ್ಪನೆಯ ಕೂದಲು ಮಹಿಳೆಯರ ಕನಸು. ಸುಂದರ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಮಾರುಕಟ್ಟೆಯಲ್ಲಿ ಕೂದಲು ಬೆಳವಣಿಗೆಗೆ ಸಿಗುವ ಎಲ್ಲ ಉತ್ಪನ್ನಗಳನ್ನು ಕೊಂಡು ತಂದು ಪ್ರಯೋಗ ಮಾಡ್ತಾರೆ. ಆದ್ರೆ ಇದರಿಂದ ಕೂದಲು ಬೆಳೆಯುವ ಬದಲು ಮತ್ತಷ್ಟು ಕೂದಲು ಉದುರಲು ಕಾರಣವಾಗುತ್ತದೆ. ಮನೆಯಲ್ಲಿ ಸುಲಭವಾಗಿ ಸಿಗುವ ದಾಸವಾಳದ ಹೂ ನಿಮ್ಮ ಕೂದಲಿಗೆ ಹೇಳಿ ಮಾಡಿಸಿದ ಔಷಧ. ಕೂದಲು ಉದುರುವುದನ್ನು ತಡೆಯುವ ಜೊತೆಗೆ ಗಟ್ಟಿಯಾದ ಸುಂದರ ಕಪ್ಪು ಕೂದಲು ಬೆಳೆಯಲು ನೆರವಾಗುತ್ತದೆ.ದಾಸವಾಳದ ಜೊತೆ ಬೇರೆ ಬೇರೆ ಉತ್ಪನ್ನಗಳನ್ನು ಬೆರೆಸಿ…
ಹಾರ್ಟ್ ಅಟ್ಯಾಕ್ ಇದು ಮನುಷ್ಯನಿಗೆ ದೊಡ್ಡ ಸವಾಲಾಗಿರುವ ಕಾಯಿಲೆ.ಯಾಕೆಂದ್ರೆ ಇದು ಬರುವ ಮುನ್ಸೂಚನೆ ಯಾರಿಗೂ ಗೊತ್ತಾಗೊದಿಲ್ಲಾ. ಹಾರ್ಟ್ ಅಟ್ಯಾಕ್ ಯಾವಾಗ ಇಲ್ಲಿ ಆಗುತ್ತೆ ಅಂತ ಹೇಳೋದಕ್ಕೆ ಬರೋದಿಲ್ಲ. ಆದ್ರೆ ಈ ಹಾರ್ಟ್ ಅಟ್ಯಾಕ್ ಬರೋ ಮುನ್ಸೂಚನೆ ಮೊದ್ಲೇ ನಮ್ಗೆ ಗೊತ್ತಾದ್ರೆ ಹೇಗಿರುತ್ತೆ ಗೊತ್ತಾ?
ನಿಮಗೆ ಗೊತ್ತಿರುವ ಹಾಗೆ, ಒಂದು ಒಳ್ಳೆ ಕೆಲಸ ಇದ್ರುನು, ಒಂದು ಮದುವೆ ಆಗಿ, ಒಬ್ಬ ಹೆಂಡತಿಯನ್ನು ಸಾಕುವುದೇ ತುಂಬಾ ಕಷ್ಟ,ಒಬ್ಬ ಹೆಂಡತಿಯ ಬೇಕು ಬೇಡಗಳನ್ನೇ ಇಡೇರಿಸುವುದು ಕಷ್ಟವಾಗಿರುವ ಈ ಕಾಲದಲ್ಲಿ, ಇಲ್ಲೊಬ್ಬ ಮಹಾನುಭಾವ, ಅದರಲ್ಲಿ ಅಂಗವೈಕಲ್ಯತೆ ಹೊಂದಿರುವ ಭಿಕ್ಷುಕನೊಬ್ಬ,
ಬೆಳ್ಳಂಬೆಳಗ್ಗೆ ಮೆಡಿಸಿನ್ ತಯಾರಿಕಾ ಘಟಕದ ರಿಯಾಕ್ಟರ್ ಸ್ಫೋಟಗೊಂಡು ಹೊತ್ತಿ ಉರಿದ ಘಟನೆ ತುಮಕೂರಿನ ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿದ್ದ ಬೇಳೂರು ಬಾಯರ್ ಮೆಡಿಸಿನ್ ತಯಾರಿಕಾ ಘಟಕದ ಬಾಯ್ಲರ್ ನ ರಿಯಾಕ್ಟರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇಂದು ಬೆಳಗ್ಗೆ 8:30ರ ಸುಮಾರಿಗೆ ಸೋರಿಕೆಯಾಗಿ ಸ್ಫೋಟಗೊಂಡಿದೆ. ಬೆಳ್ಳಂಬೆಳಗ್ಗೆ ಗ್ರಾಮದ ಮೆಡಿಸಿನ್ ಫ್ಯಾಕ್ಟರಿಯ ಬಾಯ್ಲರ್‍ನ ತಾಪಮಾನದಲ್ಲಿ ಏರುಪೇರಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ ಫ್ಯಾಕ್ಟರಿಯ ಛಾವಣಿ ಕಿತ್ತು ಹೋಗಿದ್ದು, ಅವಶೇಷಗಳು ಗ್ರಾಮದ ಸುತ್ತಮುತ್ತಲ ಮನೆಗಳ…