ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ, ಅಂಬರೀಷ್ ಅಭಿಮಾನಿಯೊಬ್ಬರು ಧಾರವಾಡದಿಂದ ಬರೋಬ್ಬರಿ 500 ಕೆಜಿ ಪೇಡಾವನ್ನು ಮಂಡ್ಯಕ್ಕೆ ಕಳುಹಿಸುತ್ತಿದ್ದಾರೆ.ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಅಲ್ಲಿ ನಡೆದ ಜಿದ್ದಾಜಿದ್ದಿಯಲ್ಲಿ ಸುಮಲತಾ ಗೆಲುವು ಸಾಧಿಸಿದ್ದರು.

ಮಂಡ್ಯದಲ್ಲಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಸ್ವಾಭಿಮಾನ ಸಮಾವೇಶವನ್ನು ಹಮ್ಮಿಕೊಂಡಿದ್ದು, ಈ ಸಮಾವೇಶಕ್ಕೆ ಧಾರವಾಡದಿಂದ ಮಂಡ್ಯ ಜನತೆಗೆ ಪೇಡಾ ಬಂದಿದೆ.

ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಹಿನ್ನೆಲೆಯಲ್ಲಿ ಆಯೋಜನೆಗೊಂಡಿರುವ ಸ್ವಾಭಿಮಾನ ಸಮಾವೇಶ ಹಾಗೂ ಅಂಬರೀಶ್ ಜನ್ಮದಿನದ ಅಂಗವಾಗಿ ಐದು ಕ್ವಿಂಟಾಲ್ ಧಾರವಾಡ ಪೇಡಾವನ್ನು ಉದ್ಯಮಿ ನಾರಾಯಣ ಕಲಾಲ್ ರವಾನಿಸಿದ್ದಾರೆ. ಇದಕ್ಕಾಗಿ ಅವರು 2.10 ಲಕ್ಷ ರು ಹಣ ವ್ಯಯಿಸಿದ್ದಾರೆ.ಬಾಬುಸಿಂಗ್ ಠಾಕೂರ್ ಪೇಡಾ ಫ್ಯಾಕ್ಟರಿಯಲ್ಲಿ ತಯಾರಾಗಿರುವ ಪೇಡಾವನ್ನು ವಿಶೇಷ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿದ್ದು, ಈಗಾಗಲೇ ಮಂಡ್ಯ ತಲುಪಿವೆ.

ಈ ಹಿಂದೆ ಅಂಬರೀಶ್ ಅವರು ಯಶ್, ರಾಧಿಕಾ ದಂಪತಿಯ ಮಗುವಿಗೆ ಕಲಘಟಗಿ ತೊಟ್ಟಿಲು ನೀಡುವ ಸಂಬಂಧ ನಾರಾಯಣ ಕಲಾಲ್ ಅವರಿಗೆ ಫೋನ್ ಮಾಡಿದ್ದರು. ತನ್ನ ಬೇಡಿಕೆಗೆ ಅನುಗುಣವಾಗಿ ತೊಟ್ಟಿಲು ತಯಾರಿಸಿ ಕೊಡುವಂತೆ ಅಂಬಿ ಕಲಾಲ್ ಅವರಲ್ಲಿ ಕೇಳಿಕೊಂಡಿದ್ದರು. ಬಳಿಕ ನಾರಾಯಣ್ ಕಲಾಲ್ ಅವರು ಕಲಘಟಗಿಯ ಮೂಲದ ಶ್ರೀಧರ್ ಸಾವುಕಾರ್ ಅವರಲ್ಲಿ ತೊಟ್ಟಿಲಿಗೆ ಆರ್ಡರ್ ಮಾಡಿಸಿಕೊಟ್ಟಿದ್ದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಗ್ ಬಾಸ್ ಸೀಸನ್-6 ಕೊನೆಯಾಗುವುದಕ್ಕೆ ಕೆಲವು ದಿನಗಳು ಮಾತ್ರ ಬಾಕಿ ಇದೆ. ಕಳೆದ ವಾರ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬದವರು ಭೇಟಿ ನೀಡಿದ್ದರು. ಆದರೆ ಈಗ ಹಳೆಯ ಸೀಸನ್ ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ನೀಡಿದ್ದಾರೆ. ಆದರೆ ಅವರಿಗಾಗಿ ಇಲ್ಲಿ ವಿಶೇಷ ಮನೆಯನ್ನು ನಿರ್ಮಿಸಲಾಗಿದೆ. ಬಿಗ್ ಬಾಸ್ ಸೀಸನ್-4 ಸ್ಪರ್ಧಿ ವಿನ್ನರ್, ಒಳ್ಳೆ ಹುಡುಗ ಪ್ರಥಮ್, ರನ್ನರಪ್ ಕಿರಿಕ್ ಕೀರ್ತಿ ಹಾಗೂ ಸಂಜನಾ ಚಿದಾನಂದ್ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಬಿಗ್ ಬಾಸ್ ಸೀಸನ್…
ಹೋದ ವರ್ಷ ಆರಂಭವಾಗಿದ್ದ ರಿಲಾಯನ್ಸ್ ಜಿಯೋ ಸೇವೆ, ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಅಲ್ಲೋಲಕಲ್ಲೋಲವನ್ನೇ ಸೃಷ್ಟಿ ಮಾಡಿತ್ತು. ಜಿಯೋ ತನ್ನ ಸೇವೆ ಆರಂಭಿಸಿದ ನಂತರ, ನಡುಗಿಹೋದ ಇತರೆ ಅನೇಕ ಟೆಲಿಕಾಂ ಕಂಪನಿಗಳು ಜಿಯೋಗೆ ಸೆಡ್ಡು ಹೊಡೆಯಲು ಅವುಗಳು ಕೂಡ ನಾ ಮುಂದು ತಾ ಮುಂದು ಎಂಬಂತೆ ವಿವಿಧ ರೀತಿಯಾದ ಆಫರ್’ಗಳನ್ನು ನೀಡಲಾರಂಭಿಸಿದವು. ಜಿಯೋ ಒಡೆತನದ ಮುಕೇಶ್ ಅಂಬಾನಿ ಜಿಯೋ ಪ್ರೈಮ್ ಮೆಂಬರ್’ಶಿಪ್ ಆಫರ್’ನ್ನು ಹೋದ ವರ್ಷ ಪ್ರಾರಂಭಿಸಿದ್ದು, 99 ರು.ಗಳಿಗೆ ಮಾರ್ಚ್ 31ರ ವರೆಗೆ ಒಂದು ವರ್ಷ…
ಇಂದಿನ ದಿನಗಳಲ್ಲಿ ಆರೋಗ್ಯಕ್ಕೆ ಹಸಿರು ಟೀ ಅಥವಾ ಗ್ರೀನ್ ಟೀ ಅತ್ಯುತ್ತಮ ಎಂದು ಈಗ ಎಲ್ಲರಿಗೂ ಗೊತ್ತಾಗಿದೆ. ಈ ಟೀ ಸೇವನೆಯ ಮೂಲಕ ದೇಹಕ್ಕೆ ಹಲವು ವಿಧದ ಪೋಷಕಾಂಶಗಳು ಲಭ್ಯವಾಗುತ್ತದೆ, ಇವು ದೇಹವನ್ನು ಹಲವಾರು ರೋಗಗಳಿಂದ ರಕ್ಷಿಸುತ್ತದೆ. ಒಂದು ದಿನಕ್ಕೆ ಮೂರು ಕಪ್ ನಷ್ಟು ಹಸಿರು ಟೀ ಕುಡಿದರೆ ಹಲವಾರು ಕಾಯಿಲೆಗಳು ಬರುವುದರಿಂದ ತಪ್ಪಿಸಿಕೊಳ್ಳಬಹುದು. ಬೆಳಗಿನ ಉಪಹಾರದ ಜೊತೆ, ಒಂದು ಕಪ್ ‘ಗ್ರೀನ್ ಟೀ’ ಸೇವಿಸಿ… ಮಧುಮೇಹಿಗಳಿಗೂ ಹಸಿರು ಟೀ ಉತ್ತಮ ಆಯ್ಕೆಯಾಗಿದ್ದು ಇದರ ಸೇವನೆಯಿಂದ ರಕ್ತದಲ್ಲಿರುವ…
ಹಾವುಗಳನ್ನು ಕಂಡ್ರೆ ಎಂತಹವರಿಗೂ ಎದೆ ಜಲ್ ಅನ್ನುವ ಅನುಭವ ಆಗ್ತದೆ. ಆಗಂತ ಹಾವಿಗೆ ಭಯ ಇಲ್ದೆ ಇರಲ್ಲ. ಆದ್ರೆ ಹಾವನ್ನು ಸಾಯಿಸಬೇಕಾದ್ರೆ ಅರ್ಧ ಪ್ರಾಣ ಹೋಗಿ ಅರ್ಧ ಪ್ರಾಣ ಉಳಿಯುವಂತೆ ಸಾಯಿಸಬೇಡಿ ಅಂತ ಹೇಳುವುದು ವಾಡಿಕೆ. ಯಾಕಂದ್ರೆ ಅಂತಹವರನ್ನು ಏಟು ತಿಂದ ಹಾವುಗಳು ಸುಮ್ಮನ್ನೇ ಬಿಡೋದಿಲ್ಲ ಅಂತ ಹೇಳ್ತಾರೆ.
ನಮ್ಮ ದೇಶದಲ್ಲಿ ಮಳೆ ಬರುವಂತೆ ಪ್ರಾರ್ಥಿಸಿ ಕತ್ತೆ, ಕಪ್ಪೆ ಹಾಗೂ ಇತರ ಪ್ರಾಣಿಗಳ ಜೊತೆ ಮಾಡುವೆ ಮಾಡುವುದು ಸಾಮಾನ್ಯವಾಗಿದೆ. ಈ ಪ್ರಾಣಿಗಳ ಜೊತೆ ಮದುವೆ ಮಾಡಿಕೊಂಡು ಮೆರೆವಣಿಗೆ ಮಾಡೋದು ಎಲ್ಲರಿಗು ಗೊತ್ತಿರುವ ವಿಚಾರ.ಹೀಗೆ ವಿದೇಶಗಳಲ್ಲಿ ಇಂತಹ ಸಂಪ್ರದಾಯಗಳು ಚಾಲ್ತಿಯಲ್ಲಿವೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಎಂದೇ ಖ್ಯಾತಿ ಪಡೆದಿರುವ ದೀಪಿಕಾ ಇತ್ತೀಚೆಗಷ್ಟೆ ‘ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ನಟಿ ದೀಪಿಕಾ ಅವರು ಈ ಬಗ್ಗೆ ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ತಾವು ವಿನ್ನರ್ ಆದ ತಕ್ಷಣದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಮತ್ತು ತಮ್ಮ ಗೆಳೆಯನಿಗೆ ಧನ್ಯವಾದ ತಿಳಿಸಿದ್ದಾರೆ. “ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅದರಲ್ಲೂ ನಾನು ‘ಮಿಸ್ ಸೌತ್ ಇಂಡಿಯಾ…