ಸುದ್ದಿ

ಹುಷಾರ್…..!ಸ್ಮಾರ್ಟ್‌ ಟೀವಿಯನ್ನು ಹ್ಯಾಕ್‌ ಮಾಡಿ, ದಂಪತಿಯ ಲೈಂಗಿಕ ಕ್ರಿಯೆ ದೃಶ್ಯ ಸೆರೆ…!

156

ಕಂಪ್ಯೂಟರ್‌ಗಳು, ಕಂಪನಿಯ ಸರ್ವರ್‌ಗಳನ್ನು ಹ್ಯಾಕ್‌ ಮಾಡುವುದನ್ನು ಕೇಳಿದ್ದೇವೆ. ಆದರೆ ಸೂರತ್‌ನಲ್ಲಿ ಕಂಡುಕೇಳರಿಯದ ಪ್ರಕರಣವೊಂದು ವರದಿಯಾಗಿದೆ. ಮನೆಯೊಂದರ ಬೆಡ್‌ರೂಂನಲ್ಲಿ ಅಳವಡಿಸಲಾಗಿದ್ದ ಸ್ಮಾರ್ಟ್‌ ಟೀವಿಯನ್ನು ಹ್ಯಾಕ್‌ ಮಾಡಿ, ದಂಪತಿಯ ಲೈಂಗಿಕ ಕ್ರಿಯೆ ದೃಶ್ಯಗಳನ್ನು ಸೆರೆ ಹಿಡಿದು, ಅಶ್ಲೀಲ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಲಾಗಿರುವ ಘಟನೆ ನಡೆದಿದೆ. ತನ್ನದೇ ವಿಡಿಯೋ ಆನ್‌ಲೈನ್‌ ಅಶ್ಲೀಲ ಜಾಲತಾಣದಲ್ಲಿರುವುದನ್ನು ಪತಿ ನೋಡಿದ ಬಳಿಕ ಈ ಅಕ್ರಮ ಬಯಲಾಗಿದೆ. ಇದು ಸ್ಮಾರ್ಟ್‌ ಟೀವಿ ಬಳಕೆದಾರರಿಗೆ ಎಚ್ಚರಿಕೆ ಗಂಟೆಯಾಗಿದೆ.

ಪೊಲೀಸರಿಗೆ ದೂರು ನೀಡಿದರೆ ಮುಜುಗರಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಈ ದಂಪತಿ, ಖಾಸಗಿ ಸೈಬರ್‌ ತಜ್ಞರ ಸಹಾಯದಿಂದ ಅಶ್ಲೀಲ ವೆಬ್‌ ತಾಣದಿಂದ ವಿಡಿಯೋವನ್ನು ಅಳಿಸಿ ಹಾಕುವಲ್ಲಿ ಸಫಲವಾಗಿದೆ.ಸೂರತ್‌ನಲ್ಲಿರುವ, ಹೆಚ್ಚಾಗಿ ಸಿರಿವಂತರು ವಾಸಿಸುವ ಬಡಾವಣೆಯ ನಿವಾಸಿಯಾಗಿರುವ ರಾಜೇಶ್‌ (ಹೆಸರು ಬದಲಿಸಲಾಗಿದೆ) ಎಂಬುವರಿಗೆ ಸ್ಮಾರ್ಟ್‌ ಟೀವಿ ಮೂಲಕ ಅಶ್ಲೀಲ ವೆಬ್‌ಸೈಟ್‌ಗಳನ್ನು ಸಂದರ್ಶಿಸಿ, ವಿಡಿಯೋ ನೋಡುವ ಅಭ್ಯಾಸವಿದೆ. ಒಂದು ದಿನ ಇದೇ ರೀತಿಯ ವಿಡಿಯೋ ನೋಡುತ್ತಿರುವಾಗ,

ರಾಜೇಶ್‌ ಅವರು ತಮ್ಮ ಪತ್ನಿ ಜತೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ವೆಬ್‌ಸೈಟ್‌ನಲ್ಲಿ ಗೋಚರವಾಗಿದೆ. ಇದನ್ನು ನೋಡಿ ದಂಗಾದ ಅವರು ಪೊಲೀಸರಿಗೆ ದೂರು ನೀಡಲು ಮುಜುಗರವಾಗಿದೆ. ಹೀಗಾಗಿ ಖಾಸಗಿ ಸೈಬರ್‌ ತಜ್ಞರ ಮೊರೆ ಹೋಗಿದ್ದಾರೆ.ಆ ತಜ್ಞರು ರಾಜೇಶ್‌ ಮಲಗುವ ಕೋಣೆಯಲ್ಲೆಲ್ಲಾ ಜಾಲಾಡಿದ್ದಾರೆ. ಯಾವುದೇ ಕ್ಯಾಮೆರಾ ಸಿಕ್ಕಿಲ್ಲ. ವಿಡಿಯೋ ಯಾವ ರೀತಿ ಸೆರೆಯಾಯಿತು ಹಾಗೂ ಅಪ್‌ಲೋಡ್‌ ಆಯಿತು ಎಂಬ ವಿಚಾರಕ್ಕಾಗಿ ಸಾಕಷ್ಟುತಲೆಕೆಡಿಸಿಕೊಂಡಿದ್ದಾರೆ. ಕೊನೆಗೆ ಕೋಣೆಯಲ್ಲಿದ್ದ ಟೀವಿ ಮೇಲೆ ಅನುಮಾನ ಬಂದಿದೆ.

ರಾಜೇಶ್‌ ಅವರು ಅಶ್ಲೀಲ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಿದ್ದರು. ಆ ಸಂದರ್ಭದಲ್ಲಿ ಹ್ಯಾಕರ್‌ ಟೀವಿಯನ್ನು ಕಂಪ್ಯೂಟರ್‌ ರೀತಿ ಹ್ಯಾಕ್‌ ಮಾಡಿದ್ದಾನೆ. ಅದರಲ್ಲಿದ್ದ ಕೆಮೆರಾವನ್ನು ನಿಯಂತ್ರಿಸಿ, ತನಗೆ ಬೇಕಾದಾಗ ವಿಡಿಯೋ ಸೆರೆ ಹಿಡಿದಿದ್ದಾನೆ. ಆ ಟೀವಿ ವೈಫೈ ಜತೆ ಸಂಪರ್ಕ ಹೊಂದಿದ್ದ ಕಾರಣ ದೃಶ್ಯಗಳು ನೇರವಾಗಿ ಆತನಿಗೆ ಸಿಕ್ಕಿವೆ. ಬಳಿಕ ಆತ ವಿಡಿಯೋವನ್ನು ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡಿದ್ದಾನೆ ಎಂಬ ಸಂಗತಿ ಬೆಳಕಿಗೆ ಬಂದಿದೆ.ರಾಜೇಶ್‌ ಅವರು ಸೈಬರ್‌ ತಜ್ಞರ ಸಹಾಯದಿಂದ ಆ ವಿಡಿಯೋವನ್ನು ಅಳಿಸಿ ಹಾಕುವಲ್ಲಿ ಸಫಲರಾಗಿದ್ದಾರೆ.

ಟೀವಿ ತಯಾರಿಕಾ ಕಂಪನಿಗಳು ಹಲವು ಭದ್ರತಾ ಅಂಶಗಳನ್ನು ಅಳವಡಿಸಿರುವುದಾಗಿ ಹೇಳಿದರೂ, ಆನ್‌ಲೈನ್‌ ಭದ್ರತೆಯ ಖಾತ್ರಿ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ‘ಉಪ್ಪಿನ ಕಾಯಿ’ ಪ್ರಿಯರೇ ಜಾಸ್ತಿ ಉಪ್ಪಿನ ಕಾಯಿ ತಿಂದ್ರೆ, ಏನಾಗುತ್ತೆ ಗೊತ್ತಾ..?

    ಉಪ್ಪಿನ ಕಾಯಿ ಎಂದರೆ ಸಾಕು ಬಾಯಲ್ಲಿ ನೀರೂರಿ ಬಿಡುತ್ತೆ ,ಅದರಲ್ಲೂ ಉಟಕ್ಕೆ ಉಪ್ಪಿನ ಕಾಯಿ ಬೇಕೆ ಬೇಕು , ಊಟಕ್ಕೆ ತಕ್ಕ ಉಪ್ಪಿನಕಾಯಿ ಇದ್ದರೆ ಊಟ ರುಚಿಕರವಾಗಿರುತ್ತದೆ. ಯಾವುದೇ ಸಮಾರಂಭ ಔತಣಕೂಟದ ಎಲೆಯಲ್ಲಿ ಊಟಕ್ಕೆ ಉಪ್ಪಿನ ಕಾಯಿ ಇಲ್ಲ ಅಂದ್ರೆ ಅ ಭೋಜನ ಅಸಂಪೂರ್ಣ ಎನ್ನಿಸುತ್ತದೆ.

  • ಸುದ್ದಿ

    7 ತಲೆಯ ಹಾವಿನ ಪೊರೆ ಪತ್ತೆ..!ನೋಡಿದರೆ ಅದೃಷ್ಟ ಎಂದು ಇಲ್ಲಿನ ಜನ ಮಾಡುತ್ತಿರುವುದೇನು ಗೊತ್ತಾ..?

    ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಸಮೀಪ 7 ಹೆಡೆ ಸರ್ಪದ ಅಸ್ತಿತ್ವ ಕಂಡುಬಂದಿದೆ. 7 ತಲೆಯ ಹೊಂದಿರುವ ಹಾವಿನ ಪೂರೆ ಕಾಣಿಸಿಕೊಂಡಿದ್ದು, ಇದು ದೈವ ಸ್ವರೂಪ ಎಂದು ಗ್ರಾಮಸ್ಥರು ಹೂವು, ಹಣ್ಣು, ಅರಿಶಿನ ಕುಂಕುಮ ಹಾಕಿ ಪೂಜೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದೆ. ಕೋಡಿಹಳ್ಳಿ ಸಮೀಪದ ಮರಿಗೌಡನ ದೊಡ್ಡಿ ಬಳಿ ನಿರ್ಜನ ಪ್ರದೇಶದಲ್ಲಿ ಹಾವಿನ ಪೊರೆ ಕಾಣಿಸಿಕೊಂಡಿದೆ. ಸಮೀಪದಲ್ಲಿ ದೊಡ್ಡ ಹುತ್ತ ಕೂಡ ಇದೆ. ಸುಮಾರು 6 ತಿಂಗಳ ಹಿಂದೆ ಕೋಟೆಕೊಪ್ಪ ಗ್ರಾಮದ…

  • ಸುದ್ದಿ

    ಮೆಟ್ರೋ ಪ್ರಯಾಣಿಕರಿಗೊಂದು ಸಿಹಿ ಸುದ್ದಿ,.!ಇಲ್ಲಿದೆ ನೋಡಿ ಮುಖ್ಯ ಮಾಹಿತಿ,.!!

    ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ. ಮೆಟ್ರೋದಲ್ಲಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಇದರಿಂದ ಸರದಿಯಲ್ಲಿ ನಿಲ್ಲುವ ಬಾದೆ ತಪ್ಪಲಿದ್ದು ಆನ್ ಲೈನ್ ಮೂಲಕ ಟಿಕೆಟ್ ಖರೀದಿಸಬಹುದು. ಪ್ರಯಾಣಿಕರು ಬಿಎಂಆರ್ ಸಿಎಲ್ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಂಡು ಅಗತ್ಯ ಮೊತ್ತದ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಮೊಬೈಲ್ ಆಪ್ ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಲ್ಲಿ ಪ್ಲಾಟ್ ಫಾರಂ ಪ್ರವೇಶಿಸುವ ದ್ವಾರ ಓಪನ್ ಆಗಲಿದೆ. ಇಳಿಯುವ ನಿಲ್ದಾಣದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಪ್ರಯಾಣಿಕರಿಗೆ ಹಣ ಕಡಿತವಾಗಲಿದೆ. ಇನ್ನು…

  • ಆರೋಗ್ಯ, ಉಪಯುಕ್ತ ಮಾಹಿತಿ

    ಪೈಲ್ಸ್ ಅಥವಾ ಮೂಲವ್ಯಾಧಿ (ಮೊಳಕೆ ರೋಗ)ದ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ಪರಿಹಾರಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಪೈಲ್ಸ್ ಅಥವಾ ಮೂಲವ್ಯಾಧಿ ವಿಪರೀತ ನೋವು ನೀಡುವ ರೋಗ. ಬೇರೆಯವರಿಗೆ ಹೇಳಿಕೊಳ್ಳಲೂ ಆಗದ ಅನುಭವಿಸಲೂ ಆಗದೆ ಒಳಗೊಳಗೆ ಚಿತ್ರ ಹಿಂಸೆ ನೀಡುತ್ತದೆ. ಈ ಕಾಯಿಲೆಗೆ ಕಾರಣಗಳು:- ಬಹಳ ಹೊತ್ತು ಕೂತು ಕೆಲಸ ಮಾಡುವವರಿಗೆ, ಅತಿ ಖಾರ, ಮಸಾಲೆ ಪದಾರ್ಥಗಳ ಸೇವನೆ,ದೀರ್ಘಕಾಲದ ಮಲಬದ್ಧತೆ,ತಂಬಾಕು, ಮದ್ಯಪಾನ ಇತ್ಯಾದಿ ಚಟಗಳು, ಹಾಗೂ ದಿನವೂ ಹೆಚ್ಚು ಪ್ರಯಾಣ ಮಾಡುವವರಿಗೆ ಸಾಮಾನ್ಯವಾಗಿ ಕಾಡುವ ತೊಂದರೆ ಮೂಲವ್ಯಾಧಿ (ಮೊಳಕೆ ರೋಗ). ಇದಕ್ಕೆ ಸಾಕಷ್ಟು ಔಷಧಿ ಮಾತ್ರೆಗಳಿವೆ. ಅತ್ಯಾಧುನಿಕ ಶಸ್ತ್ರಚಿಕಿತ್ಸೆಯೂ ಲಭ್ಯ. ಆದರೂ, ಇದಕ್ಕೊಂದು ಶಾಶ್ವತ ಪರಿಹಾರ…

  • ಸುದ್ದಿ

    ತಂದೆಯಾದ ಕುಶಿಯಲ್ಲಿ ಲೂಸ್ ಮಾದ ಯೋಗಿ…….

    ಲೂಸ್ ಮಾದ ಎಂದೇ ಖ್ಯಾತಿಯಾಗಿರುವ ನಟ ಯೋಗಿ ಪತ್ನಿ ಸಾಹಿತ್ಯ ಅವರು ಇಂದು ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮದರ್ ವುಡ್ ಆಸ್ಪತ್ರೆಯಲ್ಲಿ ಸಾಹಿತ್ಯ ಅವರಿಗೆ ಹೆಣ್ಣು ಮಗು ಜನಿಸಿದೆ. ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ನಟ ಯೋಗೀಶ್ ಕುಟುಂಬದವರು ತಮ್ಮ ಮನೆಗೆ ಯುವರಾಣಿ ಬಂದಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನೂ ತಂದೆಯಾದ ಯೋಗಿ ತಮ್ಮ ಮುದ್ದು ಮಗಳನ್ನು ತಮ್ಮ…

  • ಸುದ್ದಿ

    ಅತಿ ಶೀಘ್ರವೇ ಬಿಡುಗಡೆಯಾಗಲಿದೆ ಜಿಯೋ ಗಿಗಾ ಫೈಬರ್: ಏನೆಲ್ಲ ಸೇವೆ ಉಚಿತ ಸಿಗುತ್ತೆ? ಇಲ್ಲಿದೆ ನೋಡಿ ಪೂರ್ಣ ಮಾಹಿತಿ..!

    ನವದೆಹಲಿ: ಉಚಿತವಾಗಿ ಮೊಬೈಲ್ ಡೇಟಾ ನೀಡಿ ದೇಶದಲ್ಲಿ ಡೇಟಾ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಈಗ ಬ್ರಾಡ್‍ಬ್ಯಾಂಡ್ ಕ್ಷೇತ್ರಕ್ಕೆ ಎಂಟ್ರಿ ನೀಡಲು ಮುಂದಾಗಿದೆ. ಬ್ರಾಡ್‍ಬ್ಯಾಂಡ್, ಲ್ಯಾಂಡ್‍ಲೈನ್ ಮತ್ತು ಟಿವಿ ಕಾಂಬೋ ಮೂರು ಸೇವೆಗಳನ್ನು ತಿಂಗಳಿಗೆ 600 ರೂ.ಗೆ ನೀಡಲು ಜಿಯೋ ಮುಂದಾಗಿದೆ.ಜಿಯೋ ಗಿಗಾಫೈಬರ್ ಕಳೆದ ವರ್ಷದಿಂದ ಮುಂಬೈ ಮತ್ತು ದೆಹಲಿಯಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ. 100 ಜಿಬಿ ಡೇಟಾವನ್ನು 100 ಮೆಗಾಬೈಟ್ಸ್ ಪರ್ ಸೆಕೆಂಡ್(ಎಂಬಿಪಿಎಸ್) ವೇಗದಲ್ಲಿ ಜಿಯೋ ಗ್ರಾಹಕರಿಗೆ ನೀಡುತ್ತಿದೆ. ಮುಂದಿನ 2 ತಿಂಗಳ ಒಳಗಡೆ ಅಧಿಕೃತವಾಗಿ…