ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ತಂಡದವರಿಂದ ಹಳ್ಳಿಯ ಪ್ರತಿಯೊಬ್ಬನಿಗೂ ಮನಮುಟ್ಟುವಾಗೆ ಕನ್ನಡಲ್ಲಿ ಕ್ರಿಕೆಟ್ ರಸದೌತಣವನ್ನು ಸವಿಯಲು ಸಿದ್ದರಾಗಿ ….
ಸಾಧಾರಣ ಮೊತ್ತ ಬೆನ್ನತ್ತಿದರೂ ಆತಂಕದ ಕ್ಷಣಗಳನ್ನು ಎದುರಿಸಿದ ಪಾಕಿಸ್ತಾನ ಒತ್ತಡ ಮೆಟ್ಟಿ ನಿಂತು ಜಯ ತನ್ನದಾಗಿಸಿಕೊಂಡಿತು. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಹಂತ ಪ್ರವೇಶಿಸಿತು.
237 ರನ್‌ಗಳ ಜಯದ ಗುರಿ ಬೆನ್ನತ್ತಿದ ಪಾಕಿಸ್ತಾನ ಉತ್ತಮ ಆರಂಭ ಕಂಡರೂ ನಂತರ ಆತಂಕಕ್ಕೆ ಒಳ ಗಾಯಿತು. ಅಜರ್ ಅಲಿ ಮತ್ತು ಫಕ್ರ್ ಜಮಾನ್ ಮೊದಲ ವಿಕೆಟ್‌ಗೆ 68 ಎಸೆತಗಳಲ್ಲಿ 74 ರನ್ ಸೇರಿಸಿ ಇನಿಂಗ್ಸ್‌ಗೆ ಉತ್ತಮ ಅಡಿಪಾಯ ಹಾಕಿದರು.
ಮಾಲಿಂಗ ಹಾಕಿದ ಮೊದಲ ಓವರ್‌ನಲ್ಲೇ ಗುಣತಿಲಕ ಅವರಿಂದ ಜೀವದಾನ ಪಡೆದ ಅಜರ್ ಅಲಿ ತಾಳ್ಮೆಯಿಂದ ಆಡಿ 50 ಎಸೆತಗಳಲ್ಲಿ 34 ರನ್ ಗಳಿಸಿದರು. ಆದರೆ ಜಮಾನ್ ಸ್ಫೋಟಿಸಿದರು. 36 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಎಂಟು ಬೌಂಡರಿ ಒಳ ಗೊಂಡ 50 ರನ್ ಗಳಿಸಿದರು. ಇವರ ಜೊತೆಯಾಟ ಮುರಿದು ಬಿದ್ದ ನಂತರ ತಂಡ ನಿರಂತರವಾಗಿ ವಿಕೆಟ್ ಕಳೆದು ಕೊಂಡಿತು. 137 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡ ತಂಡಕ್ಕೆ ನಾಯಕ ಸರ್ಫರಾಜ್ ಅಹಮ್ಮದ್ ಮತ್ತು ಫಾಹಿಮ್ ಅಶ್ರಫ್ ಜೀವ ತುಂಬಿದರು.
ಎಂಟನೇ ವಿಕೆಟ್‌ಗೆ ಇವರಿಬ್ಬರು 25 ರನ್ ಸೇರಿಸಿದರು. ಫಾಹಿಮ್ ರನೌಔಟ್ ಆದಾಗ ಶ್ರೀಲಂಕಾ ಪಾಳಯದಲ್ಲಿ ಸಂಭ್ರಮ ಅಲೆದಾಡಿತು. ಈ ಸಂತಸಕ್ಕೆ ಸರ್ಫರಾಜ್ (ಔಟಾಗದೆ 61; 79 ಎ, 5 ಬೌಂ) ಮತ್ತು ಮಹಮ್ಮದ್ ಅಮೀರ್ ತಣ್ಣೀರೆರಚಿದರು. ಎಂಟನೇ ವಿಕೆಟ್‌ಗೆ 90 ಎಸೆತಗಳಲ್ಲಿ 75 ರನ್ ಸೇರಿಸಿದ ಇವರು ಜಯ ಕಸಿದುಕೊಂಡರು. ಇವರ ಜೊತೆಯಾಟದ ನಿರ್ಣಾಯಕ ಹಂತದಲ್ಲಿ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ ಶ್ರೀಲಂಕಾ ಇದಕ್ಕೆ ತಕ್ಕ ಫಲ ಉಂಡಿತು.
ಬೌಲರ್–ಬ್ಯಾಟ್ಸ್‌ಮನ್ ಸಮಬಲದ ಹೋರಾಟ: ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ದುಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್ ನಿರೋಷನ್ ಡಿಕ್ವೆಲಾ ಅವರ ಅರ್ಧಶತಕ ಮತ್ತು ನಾಯಕ ಏಂಜಲೊ ಮ್ಯಾಥ್ಯೂಸ್ ಅವರ ತಾಳ್ಮೆಯ 39 ರನ್ ಶ್ರೀಲಂಕಾ ಇನಿಂಗ್ಸ್‌ಗೆ ಬಲ ತುಂಬಿತು. ಮಹಮ್ಮದ್ ಅಮೀರ್, ಜುನೈದ್ ಖಾನ್, ಫಾಹಿಮ್ ಅಶ್ರಫ್ ಮತ್ತು ಹಸನ್ ಅಲಿ ಪಾಕಿಸ್ತಾನ ಬೌಲಿಂಗ್‌ಗೆ ಮೊನಚು ನೀಡಿದರು.
ನಿರೋಷನ್ ಮತ್ತು ಧನುಷ್ಕಾ ಆರಂಭದಲ್ಲೇ ವೇಗವಾಗಿ ರನ್ ಗಳಿಸಲು ಪ್ರಯತ್ನಿಸಿದರು. ಆದರೆ ಆರನೇ ಓವರ್‌ನಲ್ಲಿ ಎಡಗೈ ವೇಗಿ ಜುನೈದ್ ಖಾನ್ 13 ರನ್ ಗಳಿಸಿದ್ದ ಗುಣತಿಲಕ ಅವರನ್ನು ವಾಪಸ್ ಕಳುಹಿಸಿದರು. ಡಿಕ್ವೆಲಾ ಜೊತೆಗೂಡಿದ ಕುಶಾಲ್ ಮೆಂಡಿಸ್ ನಿಧಾನವಾಗಿ ಇನಿಂಗ್ಸ್ ಕಟ್ಟಿ ದರು. ಹತ್ತು ಓವರ್‌ಗಳ ಮುಕ್ತಾಯದ ವೇಳೆಗೆ ಇವರಿಬ್ಬರು ತಂಡದ ಮೊತ್ತವನ್ನು 50ಕ್ಕೆ ಏರಿಸಿದರು.
50 ರನ್‌ಗಳ ಜೊತೆಯಾಟದ ನಂತರ ಮೆಂಡಿಸ್ ಔಟಾದರು. ಎರಡು ಎಸೆತಗಳ ಅಂತರದಲ್ಲಿ ದಿನೇಶ್ ಚಾಂಡಿ ಮಲ್ ಕೂಡ ಔಟಾದರು. ಈ ಸಂದರ್ಭ ದಲ್ಲಿ ಜೊತೆಗೂಡಿದ ಡಿಕ್ವೆಲಾ ಮತ್ತು ನಾಯಕ ಏಂಜೆಲೊ ಮ್ಯಾಥ್ಯೂಸ್ ಉತ್ತಮ ಆಟವಾಡಿ ನಾಲ್ಕನೇ ವಿಕೆಟ್‌ಗೆ 78 ರನ್ ಸೇರಿಸಿದರು. ಇದರ ಪರಿ ಣಾಮ ತಂಡದ ಮೊತ್ತ 150ರ ಗಡಿ ದಾಟಿತು. 39 ರನ್ ಗಳಿಸಿದ ಮ್ಯಾಥ್ಯೂಸ್ ಔಟಾದ ನಂತರವೂ ಡಿಕ್ವೆಲಾ ರನ್ ಗಳಿಸುತ್ತ ಸಾಗಿದರು. ಅಷ್ಟರಲ್ಲಿ ಪಾಕಿ ಸ್ತಾನ ಬೌಲರ್‌ಗಳು ಮೇಲುಗೈ ಸಾಧಿಸಿ ದರು. ಒಂಬತ್ತು ರನ್‌ಗಳ ಅಂತರದಲ್ಲಿ ಡಿಕ್ವೆಲಾ (73; 86 ಎ, 4 ಬೌಂ) ಒಳ ಗೊಂಡಂತೆ ಮೂರು ವಿಕೆಟ್ ಕಬಳಿಸಿ ದರು. ಅಸೇಲಾ ಗುಣರತ್ನೆ ಮತ್ತು ಸುರಂಗ ಲಕ್ಮಲ್ ಎಂಟನೇ ವಿಕೆಟ್‌ಗೆ 46 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್:
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾರು, ಸಾಂಬಾರಿಗೆ ಮಾತ್ರವಲ್ಲ, ಕೊತ್ತಂಬರಿ ಸೊಪ್ಪನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಚರ್ಮದ ಕಾಂತಿಗೆ ಕೊತ್ತಂಬರಿ ಸೊಪ್ಪನ್ನು ಹೇಗೆ ಬಳಸಬೇಕು. ನೀವೇ ಓದಿ.
ಬೆಂಗಳೂರು: ಸಿಲಿಕಾನ್ ಸಿಟಿ ಉದ್ಯೋಗಿಗಳಿಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್. ಏಷ್ಯಾದಲ್ಲೇ ಅತೀ ದೊಡ್ಡ ಕೈಗಾರಿಕಾ ಪ್ರದೇಶ ಎಂದು ಪ್ರಸಿದ್ಧಿ ಪಡೆದಿದ್ದ ಪೀಣ್ಯ ಕೈಗಾರಿಕಾ ಪ್ರದೇಶದ 10 ಸಾವಿರ ಕೈಗಾರಿಕೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದ್ದು, 15 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬೀಳುವ ಸಾಧ್ಯತೆಯಿದೆ. ಮಾಹಿತಿ ತಂತ್ರಜ್ಞಾನ ಆಗಮಿಸದ 80,90ರ ದಶಕದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲದೆ, ದೇಶದ ವಿವಿಧ ಭಾಗಗಳಿಂದ ಉದ್ಯೋಗ ಆರಿಸಿ ಬೆಂಗಳೂರಿಗೆ ಬರುತ್ತಿದ್ದರು. ಅವರೆಲ್ಲರಿಗೂ ಪೀಣ್ಯ ಕೈಗಾರಿಕಾ ಪ್ರದೇಶ ಆಸರೆಯಾಗಿತ್ತು. ಆರ್ಥಿಕ ಹಿಂಜರಿತದ ಎಫೆಕ್ಟ್…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ದ್ರೌಪದಿ ಬಗ್ಗೆ ಎಲ್ಲರೂ ಕೇಳೆ ಇರುತ್ತೀರಾ.ಅದರಲ್ಲೂ ಮಹಾಭಾರತದಲ್ಲಿ ದ್ರೌಪದಿಯು ಪಂಚ ಪಾಂಡವವರನ್ನು ಮದುವೆಯಾದ ಬಗ್ಗೆ ನಾವು ಪುರಾಣಗಳಲ್ಲಿ ಓದಿರುತ್ತೇವೆ ಮತ್ತು ಹಲುವು ಚಿತ್ರಗಳ ಮುಖಾಂತರ ನೋಡಿರುತ್ತೇವೆ. ಅಂತಹ ಘಟನೆ ಈ ಕಲಿಯುಗದಲ್ಲಿ ನಡೆಯುವುದು ಅಸಾಧ್ಯ ಆಲ್ವಾ! ಆದರೆ ಅಂತಹ ಘಟನೆ ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಐದು ಮಂದಿಯನ್ನು ಮದುವೆಯಾಗುವುದು ಅಸಾಧ್ಯವೆನಿಸಿದರೂ ನಡೆದಿದೆ. ಆದರೆ ಇಲ್ಲೊಬ್ಬಳು ಮಹಿಳೆ ಈ ಅಸಂಭವವನ್ನು ಸಂಭವವಾಗಿಸಿದ್ದಾಳೆ. ರಾಜೋ ಎಂಬ ಮಹಿಳೆ ಐದು ಮಂದಿ…
ನಾವು ದಿನನಿತ್ಯ ಹಾಲನ್ನು ಕುಡಿಯುತ್ತೇವೆ. ಹಾಗೆಯೇ ಬೆಳ್ಳುಳ್ಳಿಯನ್ನು ಸಹ ಊಟದ ಮುಖಾಂತರ ಸೇವಿಸುತ್ತೇವೆ. ಆದ್ರೆ ಅದೇ ಬೆಳ್ಳುಳ್ಳಿಯನ್ನು ಜಜ್ಜಿ ಹಾಲಿನ ಮುಖಾಂತರ ಸೇವಿಸಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?
ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಟಿಆರ್ ಪಿಯಲ್ಲಿ ನಂ 1 ಸ್ಥಾನದಲ್ಲಿದೆ. ಇದೇಮೊದಲ ಬಾರಿಗೆ ಸ್ಯಾಂಡಲ್ ವುಡ್ ನಿಂದ ಕಿರುತೆರೆಗೆ ಬಂದಿರುವ ಅನಿರುದ್ಧ್ ಗೆ ಈ ಧಾರಾವಾಹಿ ಹೊಸ ಇನ್ನಿಂಗ್ಸ್ ನೀಡಿದೆ. ಅವರಿಗೆ ಹೆಸರನ್ನು ತಂದು ಕೊಟ್ಟಿದೆ. ನವಿರಾದ ಪ್ರೇಮ ಕಥೆ, ಮಧ್ಯಮ ವರ್ಗ ಕುಟುಂಬದಲ್ಲಿ ನಡೆಯುವಸಾಂಸಾರಿಕ ತಾಪತ್ರಯಗಳು, ಹೊಸ ರೀತಿಯ ನಿರೂಪಣೆ, ಕತೆ ಇವೆಲ್ಲವೂ. ಹೊಸ ಕಥೆಯೊಂದಿಗೆ ಜನರ ಮನಸ್ಸು ಗೆದ್ದಿರುವ ಜೊತೆ ಜೊತೆಯಲಿ ಧಾರಾವಾಹಿ ನಿಜವಾಗಿ ಸ್ವಮೇಕ್ ಕಥೆ ಅಲ್ಲ…
ದೇಶದಲ್ಲಿ ಹೊಸ ಸರ್ಕಾರ ರಚನೆಗೂ ಮುನ್ನ ಯೋಗ ಗುರು ಬಾಬಾ ರಾಮ್ ದೇವ್ ದೇಶದ ಜನಸಂಖ್ಯೆ ನಿಯಂತ್ರಣದ ಬಗ್ಗೆ ಸಲಹೆಯೊಂದನ್ನು ನೀಡಿದ್ದಾರೆ. ದೇಶದ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿಗೆ ಬರಬೇಕೆಂದಿರುವ ಬಾಬಾ ರಾಮ್ ದೇವ್, ಎರಡು ಮಕ್ಕಳ ನಂತ್ರ ಮೂರನೇ ಮಗುವಿಗೆ ಮತದಾನದ ಹಕ್ಕು ನೀಡಬಾರದು. ಜೊತೆಗೆ ಯಾವುದೇ ಸರ್ಕಾರಿ ಸೌಲಭ್ಯವನ್ನು ನೀಡಬಾರದು ಎಂದು ಹೇಳಿದ್ದಾರೆ. ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಭಾರತ ಸಿದ್ಧವಿಲ್ಲ. ಭಾರತದಲ್ಲಿ 150 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರಬಾರದು ಎಂದು ಯೋಗ ಗುರು ಹೇಳಿದ್ದಾರೆ. ಈ…