ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಳೆದ ವರ್ಷ ನಿಷೇಧಗೊಂಡಿರುವ 500 ಮತ್ತು 1 ಸಾವಿರ ರೂ. ನೋಟುಗಳು ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಳಕೆಯಾಗಲಿದೆ.

ಹೌದು. 2019ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ವೇಳೆ ಇಲ್ಲಿಯ ಪ್ರಚಾರ ಕಾರ್ಯಗಳಲ್ಲಿ ಹಾರ್ಡ್ ಬೋರ್ಡ್ ಗಳನ್ನು ಬಳಸಲಾಗುತ್ತದೆ. ಈ ಹಾರ್ಡ್ ಬೋರ್ಡ್ ಗಳನ್ನು ಭಾರತದಲ್ಲಿ ನಿಷೇಧಗೊಂಡಿರುವ ನೋಟುಗಳನ್ನು ತಯಾರಿಸಿ ನಿರ್ಮಾಣ ಮಾಡಲಾಗುತ್ತಿದೆ.
ದಕ್ಷಿಣ ಆಫ್ರಿಕಾಗೆ ಹೇಗೆ ಹೋಗುತ್ತೆ?
ನಿಷೇಧಗೊಂಡಿರುವ ನೋಟುಗಳನ್ನು ಸುಟ್ಟರೆ ಪರಿಸರ ಮಾಲಿನ್ಯವಾಗುವ ಕಾರಣ ಆರ್‍ಬಿಐ ಕೇರಳದ ಕಣ್ಣೂರಿನಲ್ಲಿರವ ವೆಸ್ಟರ್ನ್ ಇಂಡಿಯಾ ಪ್ಲೈವುಡ್(ಡಬ್ಲ್ಯೂಐಪಿ) ಕಂಪೆನಿಯನ್ನು ಸಂಪರ್ಕಿಸಿತ್ತು. ಬಳಿಕ ಕಂಪೆನಿ ಹಳೆಯ ನೋಟುಗಳನ್ನು ಬಳಸಿ ಈಗ ಪ್ಲೈವುಡ್ ಹಾರ್ಡ್ ಬೋರ್ಡ್ ಗಳನ್ನು ತಯಾರಿಸಿದೆ.

ಕಂಪನಿಯ ಪ್ರಧಾನ ವ್ಯವಸ್ಥಾಪಕ ಟಿಐ ಬಾವ ಪ್ರತಿಕ್ರಿಯಿಸಿ, ನೋಟ್ ನಿಷೇಧಗೊಂಡ ಬಳಿಕ ತಿರುವನಂತಪುರಂನಲ್ಲಿರುವ ಆರ್‍ಬಿಐ ಕಚೇರಿ ನಮ್ಮನ್ನು ಸಂಪರ್ಕಿಸಿತು. ಬಳಿಕ ನಾವು ನೋಟಿನ ಸ್ಯಾಂಪಲ್ ನೀಡುವಂತೆ ಕೇಳಿದ್ವಿ. ನಮ್ಮ ರಿಸರ್ಚ್ ತಂಡ ನೋಟುಗಳನ್ನು ಬಳಸಿ ಪ್ಲೈವುಡ್ ತಯಾರಿಸುವುದು ಹೇಗೆ ಎನ್ನುವುದನ್ನು ಕಂಡುಹಿಡಿದರು. ಬಳಿಕ ಈ ನೋಟುಗಳನ್ನು ಬಳಸಿ ಪ್ಲೈವುಡ್ ತಯಾರಿಸಲಾಗಿದ್ದು, ಇವುಗಳು 2019ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಳಕೆಯಾಗಲಿದೆ ಎಂದು ಹೇಳಿದರು.

ಹೇಗೆ ಹಾರ್ಡ್ ಬೋರ್ಡ್ ತಯಾರಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ಹೆಚ್ಚಿನ ಶಾಖದಲ್ಲಿ ನೋಟಿನ ಚೂರುಗಳನ್ನು ಕುದಿಸಿ ಹಿಟ್ಟು ಮಾಡಲಾಗುತ್ತದೆ. ಈ ಹಿಟ್ಟಿನ ಜೊತೆ ಮರದ ಹಿಟ್ಟನ್ನು ಮಿಶ್ರಣ ಮಾಡಿ ಪ್ಲೈವುಡ್ ಬೋರ್ಡ್ ತಯಾರಿಸಲಾಗಿದೆ. ಇಂತಹ ಬೋರ್ಡ್ ಗಳಿಗೆ ಆಫ್ರಿಕಾ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಬೇಡಿಕೆಯಿದೆ ಎಂದು ಬಾವ ಉತ್ತರಿಸಿದರು.

ಪ್ರಸ್ತುತ ಭಾರತದಲ್ಲಿ ನೋಟನ್ನು ಸಂಸ್ಕರಿಸಿ ಅದನ್ನು ಪ್ಲೈವುಡ್ ಮಾಡುವ ತಂತ್ರಜ್ಞಾನ ಡಬ್ಲ್ಯೂಐಪಿ ಕಂಪೆನಿ ಬಳಿ ಮಾತ್ರ ಇದೆ. ಇದೂವರೆಗೆ 750 ಟನ್ ಹಳೆಯ ನೋಟುಗಳನ್ನು ನಾವು ಸ್ವೀಕರಿಸಿದ್ದೇವೆ. ಒಂದು ಟನ್ ನೋಟಿಗೆ 128 ರೂ. ನೀಡಿದ್ದೇವೆ. ಈ ಎಲ್ಲ ಪ್ರಕ್ರಿಯೆ ಕಣ್ಣೂರಿನ ವಾಲಪಟ್ಟನಂಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದಿದೆ ಎಂದು ಅವರು ವಿವರಿಸಿದರು.
ನಾವು ತಯಾರಿಸಿದ ಹಾರ್ಡ್ ಬೋರ್ಡ್ ಗಳು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಈ ಬೋರ್ಡ್ ನೋಟ್ ನಿಂದ ತಯಾರಿಸಲಾಗಿದೆ. ಹೀಗಾಗಿ ಇದಕ್ಕೆ ಬೆಲೆ ಜಾಸ್ತಿ ಎಂದು ಹೇಳಿ ಮಾರಾಟ ಮಾಡುತ್ತಿದ್ದಾರೆ. ಆದರೆ ನಾವು ಆ ರೀತಿ ಮಾಡದೇ ಒಂದೇ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು..
ಆರ್‍ಬಿಐಗೆ ಎಷ್ಟು ನೋಟು ಬಂದಿದೆ?

ರದ್ದಾಗಿರುವ 500 ಮತ್ತು 1 ಸಾವಿರ ರೂ. ಮುಖಬೆಲೆಯ 15.44 ಲಕ್ಷ ರೂ. ಮೌಲ್ಯದ ನೋಟುಗಳ ಪೈಕಿ 15.28 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಆರ್‍ಬಿಐಗೆ ವಾಪಸ್ ಬಂದಿದೆ. 16 ಸಾವಿರ ಕೋಟಿ ರೂ. ಮೌಲ್ಯದ ನೋಟುಗಳು ಅಥವಾ ಶೇ.1.4 ರಷ್ಟು ನೋಟುಗಳು ವಾಪಸ್ ಬಂದಿಲ್ಲ. ಶೇ.98.6ರಷ್ಟು ನೋಟುಗಳು ವಾಪಸ್ ಬಂದಿದೆ ಎಂದು ಆರ್‍ಬಿಐ ಆಗಸ್ಟ್ 30ರಂದು ಮಾಹಿತಿ ನೀಡಿತ್ತು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸೀತಾಫಲ ಭಾರತೀಯರಿಗೆ ಚಿರಪರಿಚಿತ, ಆದರೆ ಎಷ್ಟೋ ಜನರಿಗೆ ಇದರ ನಿಜವಾದ ಪೌಷ್ಟಿಕತೆಯ ಬಗ್ಗೆ ತಿಳಿದಿಲ್ಲ. ನಿಜವಾಗಿ ಹೇಳಬೇಕೆಂದರೆ ಸೀತಾಫಲ ನಮ್ಮ ದೇಹಕ್ಕೆ ಬರುವ ಎಲ್ಲ ರೋಗಗಳಿಗೂ ಫುಲ್ ಸ್ಟಾಪ್ ಇಡುವ ಅದ್ಬುತ ಶಕ್ತಿ ಹೊಂದಿದೆ. ದಿನಾಲೂ ಒಂದು ಸೀತಾಫಲದ ಸೇವನೆ ದೇಹಕ್ಕೆ ಬಲಶಾಲಿ ಮದ್ದು. ಕಸ್ಟರ್ಡ್ ಆಪಲ್, ಶುಗರ್ ಆಪಲ್, ಚೆರಿಮೋಯಾ ಮೊದಲಾದ ಇತರ ಹೆಸರುಗಳಿಂದಲೂ ಕರೆಯಲ್ಪಡುವ ಈ ಸೀತಾಫಲವನ್ನು ಬೆಲೆಯ ತಕ್ಕಡಿಯಲ್ಲಿ ತೂಗದೇ ಪೋಷಕಾಂಶಗಳ ತಕ್ಕಡಿಯಲ್ಲಿ ತೂಗಿದರೆ ಇದು ಭಾರೀ ಬೆಲೆಯುಳ್ಳ ಫಲವಾಗಿದೆ. ತೂಕ ಹೆಚ್ಚಿಸಬೇಕಾದವರಿಗೆ…
ದೇಹದಲ್ಲಿ ಬಿಸಿಯಾಗಲು ಮತ್ತು ಶರೀರ ತಾಪಮಾನ ಏರಿಕೆಗೆ ಹಲವು ಕಾರಣಗಳಿವೆ. ನಿಮ್ಮ ಸುತ್ತಲಿನ ಪರಿಸರದ ಕಾರಣದಿಂದಾಗಿ ನಿಮ್ಮ ದೇಹದಲ್ಲಿನ ಶಾಖಕ್ಕೆ ಕಾರಣ.
ಇದನ್ನು ಜನಪ್ರೀಯವಾಗಿ ಶ್ರೀಕೃಷ್ಣನ ಸಾಮ್ರಾಜ್ಯ ಎಂತಲೆ ಕರೆಯಲಾಗುತ್ತದೆ. ಮೂಲತಃ ಇದೊಂದು ಅದ್ಭುತ ದ್ವೀಪ ಪ್ರದೇಶ ಅಥವಾ ನಡುಗಡ್ಡೆ. ಭಾರತದ ಮುಖ್ಯ ಭೂಮಿಯಿಂದ ಸಮುದ್ರದ ಮೂಲಕ ಮೂರು ಕಿ.ಮೀ ದೂರದಲ್ಲಿರುವ ಜನಪ್ರೀಯಗೊಳ್ಳುತ್ತಿರುವ ಪ್ರವಾಸಿ ತಾಣ. ವಿಶೇಷವೆಂದರೆ ದ್ವಾರಕೆಯಿಂದ ಕೇವಲ ಮೂವತ್ತೇ ಕಿ.ಮೀ ಗಳಷ್ಟು ದೂರದಲ್ಲಿದೆ. ಇದನ್ನು ದ್ವಾರಕಾ ಎಂತಲೂ ಕರೆಯುತ್ತಾರೆ ಹಾಗೂ ಇದು ಗುಜರಾತ್ ರಾಜ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಗುಜರಾತ್ ರಾಜ್ಯದ ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಎಂಬ ಕರಾವಳಿ ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿ ಬೇಟ್ ದ್ವಾರಕಾ…
ವಿದ್ಯುತ್ ಉತ್ಪಾದನೆಗೆ ಹಲವು ಆಯ್ಕೆಗಳಿವೆ. ನೀರು, ಗಾಳಿ, ಬೆಳಕು ಹೀಗೆ ವಿವಿಧ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ ವಿದ್ಯುತ್ ಗಳಿಸಲು ಜನರು ವಿವಿಧ ಆಯ್ಕೆಗಳನ್ನು ಸಂಶೋಧಿಸುತ್ತಿದ್ದಾರೆ.
ನಮ್ಮ ಮೆಟ್ರೋ ಬೆಂಗಳೂರಿಗೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ. ಮೆಟ್ರೋ ಪಿಲ್ಲರ್ ಗಳು ಡಬಲ್ ಡೆಕ್ಕರ್ ಆಗಿ ಸಂಚಾರ ಸೇವೆ ನೀಡಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೈಟೆಕ್ ಟಚ್ ಹೆಚ್ಚಾಗಲಿದೆ. ಜಯದೇವ ಆಸ್ಪತ್ರೆ ಮುಂಭಾಗ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಡಬಲ್ ಡೆಕ್ಕರ್ ಮೆಟ್ರೋ ಬರಲಿದೆ. ಅಂದ್ರೆ ಒಂದೇ ಮಾರ್ಗದಲ್ಲಿ ಒಂದೇ ಪಿಲ್ಲರ್ ಮೇಲೆ ಮೆಟ್ರೋ ಹಾಗೂ ಕಾರು, ಬೈಕ್ ಗಳು ಸಂಚರಿಸುವ ಡಬಲ್ ಟ್ರ್ಯಾಕ್ ಬರಲಿದೆ. ನಾಗಪುರದಲ್ಲಿ ಡಬಲ್ ಟ್ರ್ಯಾಕ್ ಮೆಟ್ರೋ ಕಂ ರೋಡ್ ಲೈನ್ ಮಾಡಲಾಗಿದೆ. ಈಗ…
ಸೌಭಾಗ್ಯಲಕ್ಷ್ಮಿ, ಉಷಾ, ಸಾವಿರ ಸುಳ್ಳು, ದಿಗ್ವಿಜಯ ಸಿನಿಮಾಗಳಲ್ಲಿ ನಟಿಸಿರುವ ಸುಂದರ ಮೊಗದ ನಟಿ ರಾಧಾ ಕನ್ನಡ ಚಿತ್ರಪ್ರೇಮಿಗಳಿಗೆ ಚೆನ್ನಾಗಿ ಪರಿಚಯ. ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆ ಸಿನಿಮಾಗಳಲ್ಲಾದರೂ ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಅಭಿನಯಿಸಿದ ಸೌಭಾಗ್ಯಲಕ್ಷ್ಮಿ ಸಿನಿಮಾ.ರಾಧಾ ಮೊದಲ ಹೆಸರು ಉದಯಚಂದ್ರಿಕ. ಮೂಲತ: ಮಲಯಾಳಂ ಕುಟುಂಬಕ್ಕೆ ಸೇರಿದವರು. ಕನ್ನಡದಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸದಿದ್ದರೂ ತಮಿಳು, ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಸರು ಮಾಡಿದವರು ರಾಧಾ. 1991 ರಲ್ಲಿ ರಾಧಾ ಉದ್ಯಮಿ ರಾಜಶೇಖರನ್ ನಾಯರ್ ಅವರನ್ನು ವಿವಾಹವಾದರು.ಈ ದಂಪತಿಗೆ…